Home
ಸುದ್ದಿಜಾಲ

ಜಿಯೋ-ಏರ್ಟೆಲ್ ಗೆ ಸೆಡ್ಡು ಹೊಡೆಯಲಿದೆ ವೊಡಾಪೋನ್ ಹೊಸ ಪ್ಲಾನ್..!

By Srinidhi

ಸದ್ಯ ಟೆಲಿಕಾಂ ಮಾರುಕಟ್ಟೆಯಲ್ಲಿ ಪ್ರೀಪೇಯ್ಡ್ ಪ್ಲಾನ್ ಗಳೊಂದಿಗೆ ಪೋಸ್ಟ್ ಪೇಯ್ಡ್ ಪ್ಲಾನ್ ಗಳ ಸಂಖ್ಯೆಯೂ ಅಧಿಕವಾಗಿದ್ದು, ಇದೇ ಮಾದರಿಯಲ್ಲಿ ವೊಡಾಪೋನ್ ಪೋಸ್ಟ್ ಪ್ಲಾನ್ ವೊಂದನ್ನು ಲಾಂಚ್ ಮಾಡಿದೆ. ಜಿಯೋ ಸದ್ಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿರುವ ಪೋಸ್ಟ್ ಪೇಯ್ಡ್ ಗೆ ಸೆಡ್ಡು ಹೊಡೆಯುವ ಸಲುವಾಗಿ ಈ ಪ್ಲಾನ್ ಅನ್ನು ಲಾಂಚ್ ಮಾಡಿದ್ದು, ವೊಡಾಫೋನ್ ಪ್ಲಾನ್ ನಲ್ಲಿ ಹೆಚ್ಚಿನ ಡೇಟಾವನ್ನು ನೀಡಲಿದೆ ಎನ್ನಲಾಗಿದೆ.

ಜಿಯೋ-ಏರ್ಟೆಲ್ ಗೆ ಸೆಡ್ಡು ಹೊಡೆಯಲಿದೆ ವೊಡಾಪೋನ್ ಹೊಸ ಪ್ಲಾನ್..!

ವೊಡಾಫೋನ್ ರೆಡ್ ಪೋಸ್ಟ್ ಪೇಯ್ಡ್ ಪ್ಲಾನ್ ನಲ್ಲಿ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ಹೆಚ್ಚಿನ ಡೇಟಾ ಮತ್ತು ಹೆಚ್ಚಿನ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಕಡಿಮೆ ಬೆಲೆಗೆ ಜಿಯೋ ನೀಡುತ್ತಿರುವ ಪ್ಲಾನ್ ಗೆ ಸೆಡ್ಡು ಹೊಡೆಯಲೇ ಈ ಪ್ಲಾನ್ ಅನ್ನು ಲಾಂಚ್ ಮಾಡಿದೆ. ಇದರಲ್ಲಿ ಏರ್ ಟೆಲ್ ಗೂ ಸೆಡ್ಡು ಹೊಡೆಯುವ ಆಯ್ಕೆಯನ್ನು ನೀಡಿದೆ.

ರೂ.399 ಪ್ಲಾನ್

ರೂ.399 ಪ್ಲಾನ್

ವೊಡಾಫೋನ್ ರೂ.399 ಪ್ಲಾನ್ ಬಳಕೆದಾರರಿಗೆ 40 GB ಡೇಟಾವನ್ನು ನೀಡುವ ಜೊತೆಯಲ್ಲಿ 200 GB ಡೇಟಾ ರೋಲ್ ಓವರ್ ಆಫರ್ ಅನ್ನು ನೀಡಿದ್ದು, ಇದರಲ್ಲಿ ಉವಿತವಾಗಿ ಕರೆ ಮಾಡುವ ಅವಕಾಶವನ್ನು ಬಳಕೆದಾರರಿಗೆ ನೀಡಿದೆ. ಇದಲ್ಲದೇ ಈ ಕೆಳಗಿನ ಆಫರ್ ಗಳನ್ನು ಪಡೆದುಕೊಳ್ಳಬಹುದಾಗಿದೆ.

ರೂ. 499 ಪ್ಲಾನ್

ರೂ. 499 ಪ್ಲಾನ್

ವೊಡಾಫೋನ್ ರೂ.499 ಪ್ಲಾನ್ ಬಳಕೆದಾರರಿಗೆ 75 GB ಡೇಟಾವನ್ನು ನೀಡುವ ಜೊತೆಯಲ್ಲಿ 200 GB ಡೇಟಾ ರೋಲ್ ಓವರ್ ಆಫರ್ ಅನ್ನು ನೀಡಿದ್ದು, ಇದರಲ್ಲಿ ಉವಿತವಾಗಿ ಕರೆ ಮಾಡುವ ಅವಕಾಶವನ್ನು ಬಳಕೆದಾರರಿಗೆ ನೀಡಿದೆ. ಇದಲ್ಲದೇ ಈ ಕೆಳಗಿನ ಆಫರ್ ಗಳನ್ನು ಪಡೆದುಕೊಳ್ಳಬಹುದಾಗಿದೆ.

ಉಚಿತ ಅಮೆಜಾನ್ ಪ್ರೈಮ್

ಉಚಿತ ಅಮೆಜಾನ್ ಪ್ರೈಮ್

ಏರ್ ಟೆಲ್ ಈಗಾಗಲೇ ತನ್ನ ಪೋಸ್ಟ್ ಪೇಯ್ಡ್ ಪ್ಲಾನ್ ಬಳಕೆದಾರರಿಗೆ ನೀಡಿರುವ ಉಚಿತ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ವೊಡಾಫೋನ್ ಸಹ ನೀಡಿದೆ. ಇದರಿಂದಾಗಿ ರೆಡ್ ಪೋಸ್ಟ್ ಪೇಯ್ಡ್ ಪ್ಲಾನ್ ಗಳನ್ನು ಪಡೆದುಕೊಳ್ಳುವವರು ಅಮೆಜಾನ್ ಪ್ರೈಮ್ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

ನೆಟ್ ಫ್ಲಿಕ್ಸ್

ನೆಟ್ ಫ್ಲಿಕ್ಸ್

ಇದಲ್ಲದೇ ನೆಟ್ ಫ್ಲಿಕ್ಸ್ ಅನ್ನು ಉಚಿತವಾಗಿ ನೋಡುವ ಅವಕಾಶವನ್ನು ಮಾಡಿಕೊಟ್ಟಿದೆ. ಇದು ಎಲ್ಲಾ ಪ್ಲಾನ್ ಗಳಿಗೆ ಲಭ್ಯವಿಲ್ಲ, ಆದರೆ ಟಾಪ್ ಎಂಡ್ ಪ್ಲಾನ್ ಗಳನ್ನು ಹಾಕಿಸಿಕೊಂಡವರಿಗೆ ಮಾತ್ರವೇ ನೆಟ್ ಫ್ಲೈಕ್ಸ್ ಅನ್ನು ಉಚಿತವಾಗಿ ನೋಡಬಹುದಾಗಿದೆ.

ಇನ್ನು ಇದೇ

ಇನ್ನು ಇದೇ

ಇದೇ ಮಾದರಿಯಲ್ಲಿ ವೊಡಾಫೋನ್ ಪ್ಲೇ, ಮೊಬೈಲ್ ಶಿಲ್ಡ್ ಸೇರಿದಂತೆ ರೆಡ್ ಹಾಟ್ ಡೀಲ್ ಗಳನ್ನು ಪಡೆಯುವ ಅವಕಾಶವನ್ನು ವೊಡಾಫೋನ್ ರೆಡ್ ಪ್ಲಾನ್ ಬಳಕೆದಾರರಿಗೆ ದೊರೆಯಲಿದೆ. ಈ ಪ್ಲಾನ್ ಗಳು ರೂ.399 ನಿಂದ ರೂ.2.999ಕ್ಕೆ ವರೆಗೆ ಲಭ್ಯವಿದೆ ಎನ್ನಲಾಗಿದೆ.

Best Mobiles in India

English summary
Vodafone red postpaid plan now offer amazon prime, netfilx. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+