Home
ಸುದ್ದಿಜಾಲ

ಜಿಯೋ ರೂ.509 ರ ಪ್ಲಾನ್ ನಂತೆ ವಡಾಫೋನ್ ರೂ.509 ರ ಪ್ಲಾನ್ ಬದಲಾವಣೆ

By Gizbot Bureau

ಡಾಟಾ ಮತ್ತು ಬೆಲೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಟೆಲಿಕಾಂ ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ತಮ್ಮ ಚಂದಾದಾರರು ಖುಷಿಯಾಗಿರಬೇಕು ಎಂಬ ಉದ್ದೇಶದಿಂದ ಎಲ್ಲಾ ಟೆಲಿಕಾಂ ಸಂಸ್ಥೆಗಳು ಕೂಡ ಆಗಾಗ ತಮ್ಮಲ್ಲಿರುವ ಪ್ಲಾನ್ ಗಳಲ್ಲಿ ಬದಲಾವಣೆ ಮಾಡುತ್ತಲೇ ಇರುತ್ತಾರೆ. ಇದೀಗ ದೇಶದ ಪ್ರಮುಖ ಟೆಲಿಕಾಂ ಸಂಸ್ಥೆ ವಡಾಫೋನ್ ತನ್ನ ಬಳಕೆದಾರರಿಗಾಗಿ ತನ್ನಲ್ಲಿರುವ ಪ್ರೀಪೇಯ್ಡ್ ಪ್ಲಾನ್ ವೊಂದರಲ್ಲಿ ಬದಲಾವಣೆ ಮಾಡಿದೆ. ಈ ಸರ್ವೀಸ್ ಪ್ರೊವೈಡರ್ ತನ್ನ 509 ರುಪಾಯಿ ಪ್ಲಾನ್ ನ್ನು ಬದಲಾಯಿಸಿದ್ದು ಈ ಪ್ಲಾನಿನ ಅಡಿಯಲ್ಲಿ ಇದೀಗ ಹೆಚ್ಚು ಡಾಟಾವನ್ನು ನೀಡಲು ಮುಂದಾಗಿದೆ.

ಬದಲಾವಣೆಯ ನಂತರದ ಬೆನಿಫಿಟ್ ಗಳು:

ಬದಲಾವಣೆಯ ನಂತರದ ಬೆನಿಫಿಟ್ ಗಳು:

ಬದಲಾವಣೆಯ ನಂತರ ವಡಾಫೋನ್ ಪ್ರಿಪೇಯ್ಡ್ ಬಳಕೆದಾರರು 1.5ಜಿಬಿ ಡಾಟಾವನ್ನು ರೂ.509ರ ಪ್ಲಾನಿನ ಭಾಗವಾಗಿ ಪಡೆಯಲಿದ್ದಾರೆ. ಯಾರು ವಡಾಫೋನಿನ 509 ರೂಪಿಯಿ ಪ್ಲಾನ್ ನ್ನು ಪಡೆಯುತ್ತಾರೋ ಅವರಿಗೆ ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳು ಜೊತೆಗೆ 100ಎಸ್ಎಂಎಸ್ ಮತ್ತು 1.5 ಜಿಬಿ ಡಾಟಾ ಪ್ರತಿದಿನ ಉಚಿತವಾಗಿ ಸಿಗುತ್ತದೆ. ಈ ಪ್ಲಾನ್ 90 ದಿನಗಳ ಅವಧಿಯನ್ನು ಹೊಂದಿದೆ. ಇದರ ಜೊತೆಗೆ ವಡಾಫೋನ್ ಪ್ಲೇ ಗೆ ಉಚಿತ ಚಂದಾದಾರಿಕೆ ಸಿಗುತ್ತದೆ.ಈ ಮೊದಲು ಈ ಪ್ಲಾನಿನ ಅಡಿಯಲ್ಲಿ ಬಳಕೆದಾರರಿಗೆ 1.4 ಜಿಬಿ ಡಾಟಾ ಸಿಗುತ್ತಿತ್ತು.

ಜಿಯೋದೊಂದಿಗೆ ಸ್ಪರ್ಧೆ:

ಜಿಯೋದೊಂದಿಗೆ ಸ್ಪರ್ಧೆ:

ವಡಾಫೋನಿನ ಈ 509 ರೂಪಾಯಿ ಪ್ಲಾನ್ ಜಿಯೋಫೋನಿನ 509 ರೂಪಾಯಿ ಪ್ಲಾನಿನೊಂದಿಗೆ ಸ್ಪರ್ಧೆಯೊಡ್ಡುತ್ತದೆ. ಮುಖೇಶ್ ಅಂಬಾನಿ ಮಾಲೀಕತ್ವದ ಟೆಲಿಕಾಂ ಆಪರೇಟರ್ ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳ ಜೊತೆಗೆ 100ಎಸ್ಎಂಎಸ್ ಪ್ರತಿದಿನ ಉಚಿತವಾಗಿ ಅವರ ಪ್ಲಾನಿನ ಅಡಿಯಲ್ಲಿ ನೀಡುತ್ತಾರೆ. ರಿಲಯನ್ಸ್ ಜಿಯೋ 509 ರುಪಾಯಿ ಪ್ಲಾನ್ ಕೇವಲ 28 ದಿನಗಳ ಅವಧಿಯನ್ನು ಹೊಂದಿದೆ.ಈ ಪ್ಲಾನ್ ಜಿಯೋ ಸ್ಯೂಟ್ ಆಪ್ ಗೆ ಕಾಂಪ್ಲಿಮೆಂಟರಿ ಆಕ್ಸಿಸ್ ನ್ನು ನೀಡುತ್ತದೆ ಅದರಲ್ಲಿ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಇತ್ಯಾದಿಗಳು ಸೇರಿವೆ.

ರೆಡ್ ಐಫೋನ್ ಫಾರ್ ಎವರ್ ಪ್ಲಾನ್ :

ರೆಡ್ ಐಫೋನ್ ಫಾರ್ ಎವರ್ ಪ್ಲಾನ್ :

ಇತ್ತೀಚೆಗೆ ವಡಾಫೋನ್ ರೆಡ್ ಐಫೋನ್ ಫಾರ್ ಎವರ್ ಪ್ಲಾನ್ ನ್ನು ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಪರಿಚಯಿಸಿದೆ.ಈ ಹೊಸ ಪ್ಲಾನ್ ನಲ್ಲಿ ಟೆಲಿಕಾಂ ಆಪರೇಟರ್ ಡಾಟಾ ಮತ್ತು ಕರೆಗಳ ಬೆನಿಫಿಟ್ ಜೊತೆಗೆ ರಿಪ್ಲೇಸ್ ಮೆಂಟ್ ಮತ್ತು ಐಫೋನ್ ಅಪ್ ಗ್ರೇಡ್ ನ ಬೆನಿಫಿಟ್ ಗಳನ್ನು ಆಫರ್ ಮಾಡುತ್ತದೆ. ಆದರೆ ಈ ಪ್ಲಾನ್ ಕೇವಲ ವಡಾಫೋನ್ ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಮಾತ್ರವೇ ಲಭ್ಯವಿದೆ.

ರುಪಾಯಿ 649 ರ ವಡಾಫೋನ್ ರೆಡ್ ಐಫೋನ್ ಫಾರ್ ಎವರ್ ಪ್ಲಾನ್ ನಲ್ಲಿ ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳ ಜೊತೆಗೆ 90ಜಿಬಿ ಡಾಟಾ ಪ್ರತಿ ತಿಂಗಳಿಗೆ ಲಭ್ಯವಿದೆ. ಡಾಟಾ ರೋಲ್ ಓವರ್ ಫೆಸಿಲಿಟಿ ಕೂಡ ಇದೆ. ಇದರರ್ಧ ಬಳಕೆ ಮಾಡದೇ ಡಾಟಾವನ್ನು ನೀವು ಮುಂದಿನ ತಿಂಗಳಿಗೆ ಬಳಸಿಕೊಳ್ಳುವುದಕ್ಕೆ ಅವಕಾಶವಿರುತ್ತದೆ.

Best Mobiles in India

English summary
Vodafone revise Rs 509 data plan, how it compares to Reliance Jio's Rs 509 plan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+