ಜಿಯೋಗೆ ಮತ್ತೊಂದು ಶಾಕ್..! ವೊಡಾಫೋನ್‌ನಿಂದ ಡಬಲ್ ಡೇಟಾ ಆಫರ್..!
ಭಾರತದ ಟೆಲಿಕಾಂ ಲೋಕಕ್ಕೆ ಜಿಯೋ ಕಾಲಿಟ್ಟ ನಂತರ ಟೆಲಿಕಾಂ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಅದರಂತೆ ದರ ಸಮರ ಮುಂದುವರೆದಿದ್ದು, ಜಿಯೋ ಎದುರು ಏರ್‌ಟೇಲ್, ವೊಡಾಫೋನ್, ಬಿಎಸ್‌ಎನ್‌ಎಲ್ ಕಂಪನಿಗಳು ಸಮರ ಸಾಧಿಸಿವೆ. ಹೊಸ ಹೊಸ ಆಫರ್‌ಗಳಿಂದ ಇತರೆ ಟೆಲಿಕಾಂ ಆಪರೇಟರ್‌ಗಳ ನಿದ್ದೆಗೆಡಿಸಿದ್ದ ಜಿಯೋ ಈಗ ವೊಡಾಫೋನ್ ಘೋಷಿಸಿದ ಹೊಸ ಪ್ಲಾನ್‌ನಿಂದ ಕಂಗೆಟ್ಟಿದೆ.

ಹೌದು, ವೊಡಾಫೋನ್ ಇಷ್ಟು ದಿನ ಪೋಸ್ಟ್‌ಪೇಡ್ ಪ್ಲಾನ್‌ಗಳಲ್ಲಿ ಜಿಯೋ ಜತೆ ಹೋರಾಡಿ ಈಗ ಪ್ರಿಪೇಡ್ ಗ್ರಾಹಕರಿಗೂ ಒಂದಿಷ್ಟು ಕೊಡುಗೆಗಳನ್ನು ನೀಡಲು ಮುಂದಾಗಿದೆ. ತನ್ನ 199 ರೂ. ಪ್ರಿಪೇಡ್ ಪ್ಲಾನ್‌ನ್ನು ಪರಿಷ್ಕರಿಸಿರುವ ವೊಡಾಫೋನ್ ದಿನಕ್ಕೆ 2.8GB ಡೇಟಾವನ್ನು ನೀಡಲು ಮುಂದಾಗಿದೆ. ಇದರಿಂದ ಜಿಯೋ ಪ್ರಭಾವವನ್ನು ತಪ್ಪಿಸಲು ಬಹಳಷ್ಟು ಪ್ರಯತ್ನಗಳನ್ನು ಟೆಲಿಕಾಂ ಆಪರೇಟರ್‌ಗಳು ಮುಂದುವರೆಸಿರುವುದಂತೂ ಸತ್ಯ. ಆಗಿದ್ರೆ 199 ರೂ. ಪ್ಲಾನ್‌ನಲ್ಲಿ ಏನೆಲ್ಲಾ ಇದೆ ಎಂಬುದನ್ನು ಮುಂದೆ ಓದಿ.

ಡೇಟಾ ದ್ವಿಗುಣ
ವೊಡಾಫೋನ್ ಜಿಯೋಗೆ ಎದುರಾಗಿ ಪರಿಷ್ಕರಿಸಿದ ಆಫರ್‌ನಲ್ಲಿ ದಿನಕ್ಕೆ 2.8GB ಡೇಟಾ ಗ್ರಾಹಕರಿಗೆ ದೊರೆಯುತ್ತಿದೆ. ವೊಡಾಫೋನ್ ಇದೇ 199 ರೂ. ಪ್ಲಾನ್‌ನಲ್ಲಿ ಮೊದಲು 1.4GB ಡೇಟಾವನ್ನು ಪ್ರತಿದಿನ ನೀಡುತ್ತಿತ್ತು. ಆದರೆ, ಈಗ ಡೇಟಾ ಪ್ರಮಾಣವನ್ನು ಒಂದೇ ಬಾರಿಗೆ ದ್ವಿಗುಣಗೊಳಿಸಿರುವುದು ಜಿಯೋಗೆ ನುಂಗಲಾರದ ತುತ್ತಾಗಿದ್ದು, ಗ್ರಾಹಕರಿಗಂತೂ ಎಲ್ಲಾ ಕಂಪನಿಗಳಿಂದ ಮುಂದುವರೆದ ದರಸಮರದಿಂದ ಅನುಕೂಲವೇ ಆಗುತ್ತಿದೆ.

ಜಿಯೋ ಆಫರ್‌ಗೆ ಟಾಂಗ್
ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಡೇಟಾ ಇಷ್ಟು ಕನಿಷ್ಠ ಬೆಲೆಯಲ್ಲಿ ದೊರೆಯುತ್ತಿರುವುದಕ್ಕೆ ಪ್ರಮುಖ ಕಾರಣವಾಗಿರುವ ಜಿಯೋ ತನ್ನ ಗ್ರಾಹಕರಿಗೆ 198 ರೂ. ಪ್ಲಾನ್‌ನಲ್ಲಿ ಪ್ರತಿದಿನ 2GB ಡೇಟಾವನ್ನು ನೀಡುತ್ತಿತ್ತು. ಈ ಪ್ಲಾನ್‌ಗೆ ವಿರುದ್ಧವಾಗಿಯೇ ವೊಡಾಫೋನ್ ತನ್ನ 199 ರೂ. ಪ್ಲಾನ್‌ನ್ನು ಪರಿಷ್ಕರಿಸಿದೆ.

ಏನೆಲ್ಲಾ ಇದೆ..?
ವೊಡಾಫೋನ್ ಪರಿಷ್ಕರಿಸಿರುವ ಹೊಸ ಪ್ಲಾನ್‌ನಲ್ಲಿ ಮೊದಲಿದ್ದಂತೆ ಎಲ್ಲಾ ಸೇವೆಗಳನ್ನು ಗ್ರಾಹಕರಿಗೆ ಮುಂದುವರೆಯಲ್ಲ. ಉಚಿತ ಎಸ್‌ಎಂಎಸ್ ಸೇವೆ ಇಲ್ಲ. ಹಾಗೂ ಗ್ರಾಹಕರು ಅನಿಯಮಿತ ಕರೆ ಬದಲಾಗಿ ದಿನಕ್ಕೆ 250 ನಿಮಿಷ ಕರೆ ಹಾಗೂ ವಾರಕ್ಕೆ 1000 ನಿಮಿಷದವರೆಗೂ ಕರೆ ಮಾಡಬಹುದಾಗಿದೆ. ಒಟ್ಟು 28 ದಿನಕ್ಕೆ 78.4GB ಡೇಟಾವನ್ನು ವೊಡಾಫೋನ್ ತನ್ನ ಗ್ರಾಹಕರಿಗೆ ನೀಡಲಿದೆ.ಮೊದಲು 39.2GB ಡೇಟಾವನ್ನು ನೀಡುತ್ತಿತ್ತು.

ಸಿಮೀತ ಗ್ರಾಹಕರಿಗೆ ಮಾತ್ರ..!
ವೊಡಾಫೋನ್ ತನ್ನ ಪ್ಲಾನ್ ಪರಿಷ್ಕರಿಸಿದ್ದರು ಸಹ ಎಲ್ಲಾ ಗ್ರಾಹಕರಿಗೂ ಈ ಪ್ಲಾನ್ ಮುಕ್ತವಾಗಿ ಲಭ್ಯವಿಲ್ಲ. ವೊಡಾಫೋನ್ 4G ಸೇವೆ ಇಲ್ಲಸ ಸರ್ಕಲ್‌ಗಳಲ್ಲಿ ಈ ಪ್ಲಾನ್ ಲಭ್ಯವಿಲ್ಲ. ತೆಲಂಗಾಣ, ಆಂಧ್ರಪ್ರದೇಶ, ಮಧ್ಯಪ್ರದೇಶ, ಮತ್ತು ಛತ್ತಿಸ್‌ಗಡ ಸರ್ಕಲ್‌ಗಳಲ್ಲಿ ಮೊದಲಿದ್ದ ಆಫರ್ ಮುಂದುವರೆಯಲಿದೆ. ಅಂದರೆ, ಪ್ರತಿದಿನ ಗ್ರಾಹಕರು 1.4GB ಡೇಟಾ ಪಡೆಯಲಿದ್ದು, ಅನಿಯಮಿತ ವಾಯ್ಸ್ ಕರೆ ಹಾಗೂ ಉಚಿತ 100 ಎಸ್‌ಎಂಎಸ್ ಪಡೆಯಲಿದ್ದಾರೆ. ಕರ್ನಾಟಕದಲ್ಲಿಯೂ ಈ ಪ್ಲಾನ್ ಲಭ್ಯವಿದೆ.

ಏರ್‌ಟೆಲ್‌ಗೂ ಸಂಕಷ್ಟ
ವೊಡಾಫೋನ್ ತನ್ನ 199 ರೂ. ಪ್ಲಾನ್ ಪರಿಷ್ಕರಿಸಿರುವುದರಿಂದ ಏರ್‌ಟೆಲ್‌ಗೂ ಸಂಕಷ್ಟ ಶುರುವಾಗಿದೆ. ಏರ್‌ಟೆಲ್ ಸಹ 198 ರೂ.ಗೆ ಪ್ರತಿದಿನ 1.4GB ಡೇಟಾ, ಅನಿಯಮಿತ ಕರೆ ಸೌಲಭ್ಯ ಹಾಗೂ ದಿನಕ್ಕೆ 100 ಉಚಿತ ಎಸ್‌ಎಂಎಸ್ ಸೇವೆಯನ್ನು ನೀಡುತ್ತಿತ್ತು. ಈಗ ವೊಡಾಫೋನ್ ಪ್ಲಾನ್ ಪರಿಷ್ಕರಣೆಯಿಂದ ಏರ್‌ಟೆಲ್ ಗ್ರಾಹಕರು ವೊಡಾಫೋನ್‌ನತ್ತ ಮುಖ ಮಾಡುವ ಸಾಧ್ಯತೆಯಿದೆ.


Click it and Unblock the Notifications








