Home
ಸುದ್ದಿಜಾಲ

ಜಿಯೋ 149 ಪ್ಲಾನ್ ಗೆ ಸ್ಪರ್ಧೆ- ವಡಾಫೋನ್ ನಿಂದ 129 ರುಪಾಯಿ ಪ್ಲಾನ್ ಬಿಡುಗಡೆ

By Gizbot Bureau

ಟೆಲಿಕಾಂ ಸಂಸ್ಥೆಗಳ ನಡುವಿನ ಸ್ಪರ್ಧೆಯಿಂದಾಗಿ ಕೈಗೆಟುಕುವ ಬೆಲೆಯ ಆಕರ್ಷಕ ಪ್ಲಾನ್ ಗಳು ಬಿಡುಗಡೆಗೊಳ್ಳುತ್ತಲೇ ಇವೆ. ಸಾಕಷ್ಟು ಡಾಟಾ ಆಫರ್ ಮಾಡುವ ಪ್ಲಾನ್ ಗಳು ಪದೇ ಪದೇ ಬೇರೆಬೇರೆ ಟೆಲಿಕಾಂ ಸಂಸ್ಥೆಗಳಿಂದ ಬಿಡುಗಡೆಗೊಳ್ಳುತ್ತಿದ್ದು, ಒಂದು ಸಂಸ್ಥೆಯ ಪ್ಲಾನ್ ಮತ್ತೊಂದು ಸಂಸ್ಥೆಯ ಪ್ಲಾನಿನೊಂದಿಗೆ ಜಿದ್ದಾಜಿದ್ದಿ ನಡೆಸುತ್ತಿವೆ.

ಜಿಯೋ 149 ಪ್ಲಾನ್ ಗೆ ಸ್ಪರ್ಧೆ- ವಡಾಫೋನ್ ನಿಂದ 129 ರುಪಾಯಿ ಪ್ಲಾನ್ ಬಿಡುಗಡೆ

ಆದರೆ ಗ್ರಾಹಕ ಯಾವುದಕ್ಕೆ ಮೊರೆ ಹೋಗುತ್ತಾನೆ ಎಂಬುದು ಪ್ರಶ್ನೆಯಾಗಿರುತ್ತದೆ. ಇತ್ತೀಚೆಗೆ ವಡಾಫೋನ್ 119 ರುಪಾಯಿಯ ಕರೆಗಳ ಮತ್ತು ಡಾಟಾ ಬೆನಿಫಿಟ್ ನೀಡುವ ಪ್ಲಾನ್ ನ್ನು ತಮ್ಮ ಚಂದಾದಾರರಿಗಾಗಿ ಬಿಡುಗಡೆಗೊಳಿಸಿದೆ. ಇದೀಗ ಮತ್ತೊಂದು ಪ್ಲಾನ್ ನ್ನು ಬಿಡುಗಡೆಗೊಳಿಸಿರುವ ವಡಾಫೋನ್ 129 ರುಪಾಯಿಯ ರೀಚಾರ್ಜ್ ಮಾಡಿಸಿಕೊಳ್ಳುವುದಕ್ಕೆ ಗ್ರಾಹಕರಿಗೆ ಅವಕಾಶ ನೀಡುತ್ತಿದೆ.

129 ಪ್ಲಾನ್ ನ ಬೆನಿಫಿಟ್ ಗಳು:

129 ಪ್ಲಾನ್ ನ ಬೆನಿಫಿಟ್ ಗಳು:

ಈ 129 ಪ್ಲಾನ್ ನ ಅಡಿಯಲ್ಲಿ ವಡಾಫೋನ್ ಅನಿಯಮಿತ ಕರೆಗಳ ಬೆನಿಫಿಟ್ ಜೊತೆಗೆ ಪ್ರತಿ ದಿನ 100ಎಸ್ಎಂಎಸ್ ಗಳನ್ನು ಉಚಿತವಾಗಿ ಕಳುಹಿಸುವುದಕ್ಕೆ ಅವಕಾಶ ನೀಡುತ್ತದೆ. ಯಾವುದೇ ರೀತಿಯ ಕರೆಗಳ ಎಫ್ ಯುಪಿ ಲಿಮಿಟ್ ಇದರಲ್ಲಿ ಇರುವುದಿಲ್ಲ. 250 ನಿಮಿಷದ ಪ್ರತಿದಿನದ ಕರೆಗಳ ಲಿಮಿಟ್ ಬಗ್ಗೆ ಈ ಬಾರಿ ಗ್ರಾಹಕರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲಯ 1.5ಜಿಬಿ ಡಾಟಾವನ್ನು ಕೂಡ ಪ್ರತಿದಿನ ನೀಡಲಿರುವ ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ತನ್ನದೇ ಕಂಪೆನಿಯ 119 ಪ್ಲಾನ್ ನೊಂದಿಗೆ ಸ್ಪರ್ಧೆ:

ತನ್ನದೇ ಕಂಪೆನಿಯ 119 ಪ್ಲಾನ್ ನೊಂದಿಗೆ ಸ್ಪರ್ಧೆ:

ವಡಾಫೋನಿನ ಈ ಹೊಸ ಪ್ಲಾನ್ ತನ್ನದೇ ಕಂಪೆನಿಯ 119 ರುಪಾಯಿ ಪ್ಲಾನ್ ನೊಂದಿಗೂ ಸ್ಪರ್ಧಿಸುತ್ತದೆ. 119 ಪ್ಲಾನ್ ನ ಅಡಿಯಲ್ಲಿ ಗ್ರಾಹಕರು ಅನಿಯಮಿತ ಕರೆಗಳ ಬೆನಿಫಿಟ್ ಮತ್ತು ಎಸ್ಎಂಎಸ್ ಸೌಲಭ್ಯವನ್ನು ಪಡೆಯುತ್ತಾರೆ. ಜೊತೆಗೆ ಅವರಿಗೆ ಪ್ರತಿದಿನ 1.5ಜಿಬಿ ಡಾಟಾ ಕೂಡ ಉಚಿತವಾಗಿ ಸಿಗುತ್ತದೆ. ಈ ಪ್ಲಾನ್ ಕೂಡ 28 ದಿನಗಳ ಅವಧಿಯನ್ನು ಹೊಂದಿರುತ್ತದೆ. ಹಾಗಾಗಿ ಇದೀಗ ಪ್ರಶ್ನೆಯಾಗಿರುವುದು ಕೇವಲ 500ಎಂಬಿ ಡಾಟಾ ಹೆಚ್ಚು ಪಡೆಯುವುದಕ್ಕಾಗಿ ಗ್ರಾಹಕರು 10 ರುಪಾಯಿ ಹೆಚ್ಚು ಪಾವತಿಸುತ್ತಾರೆಯೇ ಅಥವಾ 119 ಪ್ಲಾನ್ ಗೆ ಮೊರೆ ಹೋಗುತ್ತಾರೆಯೇ ಎಂಬುದಾಗಿದೆ.

ಜಿಯೋ 149 ಪ್ಲಾನ್ ಜೊತೆಗೆ ಸ್ಪರ್ಧೆ

ಜಿಯೋ 149 ಪ್ಲಾನ್ ಜೊತೆಗೆ ಸ್ಪರ್ಧೆ

ಈ ಹೊಸ 129 ರುಪಾಯಿಯ ವಡಾಫೋನ್ ಪ್ಲಾನ್ ರಿಲಯನ್ಸ್ ಜಿಯೋ ಸಂಸ್ಥೆಯ 149 ರುಪಾಯಿ ಪ್ಲಾನ್ ನೊಂದಿಗೆ ಕೂಡ ಸ್ಪರ್ಧೆ ನಡೆಸುತ್ತದೆ, ಮುಖೇಶ್ ಅಂಬಾನಿ ಮಾಲೀಕತ್ವದ ಟೆಲಿಕಾಂ ಆಪರೇಟರ್ ಅನಿಯಮಿತ ಕರೆಗಳು ಮತ್ತು ಡಾಟಾ ಬೆನಿಫಿಟ್ ಜೊತೆಗೆ 100ಎಸ್ಎಂಎಸ್ ಪ್ರತಿದಿನ ಉಚಿತವಾಗಿ ಈ ಪ್ಲಾನಿನ ಅಡಿಯಲ್ಲಿ ನೀಡುತ್ತಿದ್ದಾರೆ. ಜಿಯೋ ಪ್ಲಾನ್ ಕೂಡ 28 ದಿನಗಳ ಅವಧಿಯನ್ನು ಹೊಂದಿರುತ್ತದೆ ಮತ್ತು ಪ್ರತಿದಿನ 1.5ಜಿಬಿ ಡಾಟಾ ಸಿಗುತ್ತದೆ. ಇದೆಲ್ಲದರ ಜೊತೆಗೆ ಜಿಯೋ ಸ್ಯೂಟ್ ಆಪ್ ಗಳಿಗೆ ಅಂದರೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಇತರೆ ಆಪ್ ಗಳಿಗೆ ಉಚಿತ ಆಕ್ಸಿಸ್ ಈ ಪ್ಲಾನ್ ನ ಅಡಿಯಲ್ಲಿ ಲಭ್ಯವಾಗುತ್ತದೆ.

Best Mobiles in India

English summary
Vodafone rolls out Rs 129 plan, what it offers vs Reliance Jio’s Rs 149 plan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+