ತಲ್ಲಣಿಸಿದ ಟೆಲಿಕಾಂ: ರೂ.47ಕ್ಕೆ 28 ದಿನದ ಡೇಟಾ-ಕರೆಯ ಕಾಂಬೋ ಆಫರ್ ಕೊಟ್ಟ ವೋಡಾಫೋನ್...!
ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ದರ ಸಮರಕ್ಕೆ ಮತ್ತೆ ಕಾವು ಸಿಕ್ಕಿದೆ. ಇಷ್ಟು ದಿನ ಬೇರೆ ಆಫರ್ ಗಳನ್ನು ಕಾಪಿ ಮಾಡುತ್ತಿದ್ದ ವೊಡಾಫೋನ್ ಇದೇ ಮೊದಲ ಬಾರಿಗೆ ಜಿಯೋಗಿಂತಲೂ ಅತೀ ಕಡಿಮೆ ಬೆಲೆಗೆ ಪ್ರೀಪೆಯ್ಡ್ ಪ್ಲಾನ್ ವೊಂದನ್ನು ಲಾಂಚ್ ಮಾಡಿದೆ. ಈ ಮೂಲಕ ಹೊಸದೊಂದು ಸಾಧ್ಯತೆಯನ್ನು ತೋರಿಸಿಕೊಟ್ಟಿದೆ.

ರೂ.47ಕ್ಕೆ ಒಂದು ತಿಂಗಳು ಕರೆ ಮಾಡುವ ಅವಕಾಶವನ್ನು ಕಲ್ಪಿಸಿದ್ದು, ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಆಫರ್ ಗಳನ್ನು ನೀಡಲು ಮುಂದಾಗದೆ. ಜಿಯೋ ತನ್ನ ಜಿಯೋ ಫೋನ್ ಬಳಕೆದಾರರಿಗೆ ಮಾತ್ರವೇ ರೂ.49 ಪ್ಲಾನ್ ಅನ್ನು ಲಾಂಚ್ ಮಾಡಿತ್ತು. ಇದೇ ಮಾದರಿಯಲ್ಲಿ ವೊಡಾಫೋನ್ ತನ್ನ ಬಳಕೆದಾರರಿಗೆ ಜಿಯೋವನ್ನು ಮೀರಿಸುವ ಪ್ಲಾನ್ ಅನ್ನು ನೀಡುತ್ತಿದೆ.

ಬೇರೆ ಎಲ್ಲಿಯೂ ಇಲ್ಲ:
ವೊಡಾಫೋನ್ ಹೊಸದಾಗಿ ನೀಡಿರುವ ಪ್ಲಾನ್ ಬೆಲೆ ಜಿಯೋಗಿಂತಲೂ ಕಡಿಮೆ ಬೆಲೆಗೆ ದೊರೆಯುತ್ತಿದೆ ಎನ್ನಲಾಗಿದೆ. ಇಷ್ಟು ಕಡಿಮೆ ಬೆಲೆಗೆ ಬೇರೆ ಯಾವುದೇ ಟೆಲಿಕಾಂ ಕಂಪನಿಗಳು ಸೇವೆಯನ್ನು ನೀಡುತ್ತಿಲ್ಲ. ಆದರೆ ಮುಂದೆ ಈ ಪ್ಲಾನ್ ಅನ್ನು ಕಾಪಿ ಮಾಡಿ ನೀಡಿದರೂ ಆಶ್ಚರ್ಯ ಪಡಬೇಕಾಗಿಲ್ಲ.

ರೂ.47 ಪ್ಲಾನ್:
ಮಾರುಕಟ್ಟೆಯಲ್ಲಿ ದರ ಸಮರದಲ್ಲಿ ಬಳಕೆದಾರರನ್ನು ಕಳೆದುಕೊಂಡಿದ್ದ ವೊಡಾಫೋನ್, ಹೆಚ್ಚಿನ ಪ್ರಮಾಣದಲ್ಲಿ ಮತ್ತೆ ಬಳಕೆದಾರರನ್ನು ಸೆಳೆಯುವ ಸಲುವಾಗಿಯೇ ರೂ.47 ಪ್ರೀಪೆಯ್ಡ್ ಪ್ಲಾನ್ ಅನ್ನು ಘೋಷಣೆ ಮಾಡಿದೆ ಎನ್ನಲಾಗಿದೆ. ಇದರಲ್ಲಿ ಬಳಕೆದಾರರಿಗೆ ಕಾಂಬೋ ದೊರೆಯಲಿದೆ. ಡೇಟಾ, ಕರೆ ಸೇರಿದಂತೆ ಉಚಿತ SMS ಅನ್ನು ಕಳುಹಿಸುವ ಅವಕಾಶವನ್ನು ನೀಡಿದೆ.

ಡೇಟಾ-ಕರೆ:
ರೂ.47 ಪ್ರೀಪೆಯ್ಡ್ ಪ್ಲಾನ್‌ನಲ್ಲಿ ಬಳಕೆದಾರರಿಗೆ ವೊಡಾಫೋನ್ ಹೊಸ ಮಾದರಿಯ ಅವಕಾಶವನ್ನು ನೀಡಿದೆ. ಇದರಲ್ಲಿ 7500 ಸೆಕೆಂಡ್ ಕರೆ ಉಚಿತವಾಗಿ ಕರೆ ಮಾಡುವ ಅವಕಾಶದ ಜೊತೆಗೆ 500 MB ಡೇಟಾವನ್ನು ಬಳಕೆಗೆ ನೀಡಿದೆ. ಜೊತೆಗೆ 50 SMSಗಳನ್ನು ಉಚಿತವಾಗಿ ಕಳುಹಿಸಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ದೊಡ್ಡ ಪ್ರಮಾಣದ ಲಾಭವಾಗಲಿದೆ.

ಜಿಯೋಗೆ ಸೆಡ್ಡು:
ರೂ.49ಕ್ಕೆ ಜಿಯೋ ಕೇವಲ ತನ್ನ ಜಿಯೋ ಬಳಕೆದಾರರಿಗೆ ಮಾತ್ರವೇ ಬಳಕೆ ಮಾಡಿಕೊಳ್ಳಲು ಪ್ಲಾನ್ ವೊಂದನ್ನು ನೀಡಿದೆ. ಇದು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಲಭ್ಯವಿರಲಿಲ್ಲ. ಆದರೆ ವೊಡಾಫೋನ್ ಜಿಯೋಗೆ ಸೆಡ್ಡು ಹೊಡೆದು ಅದಕ್ಕಿಂತಲೂ ಕಡಿಮೆ ಬೆಲೆಗೆ ತನ್ನ ಬಳಕೆದಾರರಿಗೆ ಪ್ಲಾನ್ ವೊಂದನ್ನು ಬಳಕೆಗೆ ನೀಡಿದೆ.

ಟೆಲಿಕಾಂ ಅಲೆ:
ವೊಡಾಫೋನ್ ಲಾಂಚ್ ಮಾಡಿರುವ ಈ ಹೊಸ ಪ್ಲಾನ್ ನಿಂದಾಗಿ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಅಲೆಯೂ ಸೃಷ್ಟಿಯಾಗಲಿದ್ದು, ಇದೇ ಮಾದರಿಯಲ್ಲಿ ಇತರೆ ಟೆಲಿಕಾಂ ಕಂಪನಿಗಳು ತಮ್ಮ ಪ್ಲಾನ್ ಗಳನ್ನು ಲಾಂಚ್ ಮಾಡುವ ಸಾಧ್ಯತೆಯೂ ದೊಡ್ಡದಾಗಿದೆ. ಒಟ್ಟಿನಲ್ಲಿ ಬಳಕೆದಾರರಿಗೆ ಇದು ಹೊಸ ಅವಕಾಶವಾಗಿದೆ.


Click it and Unblock the Notifications