ಒಂದೇ ಪ್ಲಾನ್, ಎರಡು ವ್ಯಾಲಿಡಿಟಿ: ಜಿಯೋಗೆ ಸೆಡ್ಡು ಹೊಡೆದ ವೊಡಾಫೋನ್..!
ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಆಫರ್‌ಗಳ ಸುರಿಮಳೆಯನ್ನು ಸುರಿಸುತ್ತಿದೆ ವೊಡಾಫೋನ್, ಈಗಾಗಲೇ ಬಳಕೆದಾರರಿಗೆ ಹೆಚ್ಚಿನ ಪ್ರಮಾದ ಡೇಟಾವನ್ನು ಬಳಕೆ ನೀಡುವ ಆಫರ್‌ಗಳನ್ನು ಲಾಂಚ್ ಮಾಡಿರುವ ವೊಡಾಫೋನ್, ಈ ಬಾರಿ ಡೇಟಾ ಬೇಡದೆ ಇರುವ ಬಳಕೆದಾರರಿಗೆ ದೊಡ್ಡ ಮಟ್ಟದ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಕೇವಲ ಕರೆ ಮಾತ್ರವಲ್ಲದೇ ಹೆಚ್ಚಿನ ಪ್ರಮಾದ ವ್ಯಾಲಿಡಿಟಿಯನ್ನು ನೀಡುತ್ತಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ಹೆಚ್ಚಿನ ಪ್ರಮಾಣದ ಡೇಟಾವನ್ನು ಮಾತ್ರವೇ ನೀಡುತ್ತಿವೆ. ಆದರೆ ಎಲ್ಲಿಯೂ ಕರೆ ಮಾಡುವ ಅವಕಾಶವನ್ನು ಹೆಚ್ಚಾಗಿ ನೀಡುವ ಆಫರ್‌ಗಳು ಕಾಣಿಸಿಕೊಂಡಿಲ್ಲ. ಈ ಹಿನ್ನಲೆಯಲ್ಲಿ ವೊಡಾಫೋನ್ ಭಿನ್ನವಾಗಿ ಆಫರ್ ನೀಡುವ ಮೂಲಕ ಒಂದು ವರ್ಗದ ಜನರನ್ನು ಓಲೈಕೆ ಮಾಡುತ್ತಿದೆ. ಇದು ಯಶಸ್ವಿಯಾದರೆ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಆಫರ್‌ಗಳು ಶುರುವಾಗಲಿದೆ.

ರೂ.597 ಪ್ಲಾನ್:
ಏರ್‌ಟೆಲ್ ಸಹ ಇದೇ ಮಾದರಿಯ ಪ್ಲಾನ್ ವೊಂದನ್ನು ಪರಿಚಯಿಸಿದೆ. ಆದರೆ ವೊಡಾಫೋನ್ ಅನ್ನು ಮೀರಿಸುವಂತೆ ಆಫರ್ ನೀಡಿದ್ದು ರೂ.597 ಕ್ಕೆ ರಿಚಾರ್ಜ್ ಮಾಡಿಸಿಕೊಂಡ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಬೇರೆ ಮಾದರಿಯ ಆಫರ್ ಮತ್ತು ಫೀಚರ್ ಫೋನ್ ಬಳಕೆದಾರರಿಗೆ ಬೇರೆ ಮಾದರಿಯ ಆಫರ್ ಅನ್ನು ಲಾಂಚ್ ಮಾಡುತ್ತಿದೆ.

ಸ್ಮಾರ್ಟ್‌ಫೋನ್ ಬಳಕೆದಾರರಿಗೆ:
ಸ್ಮಾರ್ಟ್‌ಫೋನ್ ಬಳಕೆದಾರರು ರೂ.597ಕ್ಕೆ ರಿಚಾರ್ಜ್ ಮಾಡಿಸಿಕೊಂಡ ಸಂದರ್ಭದಲ್ಲಿ 10 GB ಡೇಟಾವನ್ನು ಬಳಕೆಗೆ ನೀಡಲಿದ್ದು, ಇದು 112 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲಿದೆ. ಅಲ್ಲದೇ ಇದರಲ್ಲಿ ನಿತ್ಯ 250 ನಿಮಿಷಗಳಷ್ಟು ಉಚಿತ ಕರೆ ಮಾಡಬಹುದಾಗಿದೆ. ಅಲ್ಲದೇ 100 SMSಗಳನ್ನು ಉಚಿತವಾಗಿ ಕಳುಹಿಸಬಹುದಾಗಿದೆ.

ಫೀಚರ್ ಫೋನ್ ಬಳಕೆದಾರರಿಗೆ:
ಫೀಚರ್ ಫೋನ್ ಬಳಕೆದಾರರು ರೂ.597ಕ್ಕೆ ರಿಚಾರ್ಜ್ ಮಾಡಿಸಿಕೊಂಡ ಸಂದರ್ಭದಲ್ಲಿ 168 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಇದರಲ್ಲಿ ಯಾವುದೇ ಡೇಟಾ ಆಯ್ಕೆಯೂ ಇರುವುದಿಲ್ಲ. ಇದರಲ್ಲಿ ನಿತ್ಯ 250 ನಿಮಿಷಗಳಷ್ಟು ಉಚಿತ ಕರೆ ಮಾಡಬಹುದಾಗಿದೆ. ಅಲ್ಲದೇ 100 SMSಗಳನ್ನು ಉಚಿತವಾಗಿ ಕಳುಹಿಸಬಹುದಾಗಿದೆ.

ಆಫರ್ ಎಲ್ಲಿ:
ವೊಡಾಫೋನ್ ಬಳಕೆದಾರರು ಈ ಆಫರ್ ಅನ್ನು ಪಡೆದುಕೊಳ್ಳುವ ಸಲುವಾಗಿ ವೊಡಾಫೋನ್ ವೆಬ್‌ಸೈಟ್ ಇಲ್ಲವೇ ವೊಡಾಫೋನ್ ಆಪ್ ಮೂಲಕ ರಿಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ.

ಡೇಟಾ ಬೇಡ ಎನ್ನುವವರಿಗೆ:
ಹೆಚ್ಚಿನ ಪ್ರಮಾಣದ ಡೇಟಾ ಅವಶ್ಯಕತೆ ಇಲ್ಲ ಎನ್ನುವವರಿಗೆ ಈ ಪ್ಲಾನ್ ಬೆಸ್ಟ್ ಎನ್ನಲಾಗಿದೆ. ಕಾರಣ ಡೇಟಾ ಇಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ಕರೆ ಮಾಡುವ ಮತ್ತು ವ್ಯಾಲಿಡಿಟಿಯನ್ನು ಪಡೆದುಕೊಳ್ಳುವ ಅವಕಾಶವು ರೂ597 ರಿಚಾರ್ಜ್ ಮಾಡಿಸಿಕೊಂಡ ಸಂದರ್ಭದಲ್ಲಿ ಲಾಭವಾಗಲಿದೆ


Click it and Unblock the Notifications








