Subscribe to Gizbot

ಟೆಲಿಕಾಂ ದರ ಸಮರದಲ್ಲಿ ಹೊಸ ಪ್ರಯತ್ನ: ಉಲ್ಟಾ ಆಫರ್ ಕೊಟ್ಟ ವೊಡಾಫೋನ್...!

Written By:

ಟೆಲಿಕಾಂ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ದರ ಸಮರಕ್ಕೆ ವೊಡಾಫೋನ್ ತನ್ನ ಕೊಡುಗೆಯನ್ನು ನೀಡಲು ಮುಂದಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ದಿನಕ್ಕೆ ಒಂದು GB ಗಿಂತಲೂ ಅಧಿಕ ಡೇಟಾವನ್ನು ನೀಡುವ ಪ್ಲಾನ್‌ಗಳು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ವೊಡಾಫೋನ್ ಟೆಲಿಕಾಂ ಹೊಸ ಮಾದರಿಯ ಆಫರ್ ನೀಡಲು ಮುಂದಾಗಿದೆ.

ಟೆಲಿಕಾಂ ದರ ಸಮರದಲ್ಲಿ ಹೊಸ ಪ್ರಯತ್ನ: ಉಲ್ಟಾ ಆಫರ್ ಕೊಟ್ಟ ವೊಡಾಫೋನ್...!

ಆದರೆ ಈಗಾಗಲೇ ಮಾರುಕಟ್ಟೆಯಲ್ಲಿ 4G ಹಾವಳಿ ಅಧಿಕವಾಗಿದ್ದು, 3G ವೇಗವನ್ನು ಕೇಳುವರಿಲ್ಲದಾಗಿದೆ. ಆದರೆ ಇಂತಹ ಸಂದರ್ಭದಲ್ಲಿ ವೊಡಾಫೋನ್ 2G ಆಫರ್ ನೀಡಲು ಮುಂದಾಗಿದೆ. ಆದರೆ ಹೆಚ್ಚಿನ ಡೇಟಾ ಅಗತ್ಯವಿಲ್ಲದೆ, ಕೇವಲ ವಾಯ್ಸ್ ಕರೆಗಳು ಹೆಚ್ಚು ಬಳಕೆ ಮಾಡಿಕೊಳ್ಳುವವರಿಗೆ ವೊಡಾಫೋನ್ ನೀಡಿರುವ ಆಫರ್ ಉತ್ತಮವಾಗಿದೆ ಎನ್ನಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.299 ಪ್ಯಾಕ್:

ರೂ.299 ಪ್ಯಾಕ್:

ಜಿಯೋ ಸೇರಿದಂತೆ ಎಲ್ಲಾ ಟೆಲಿಕಾಂ ಕಂಪನಿಗಳು ದುಬಾರಿ ಬೆಲೆಯ ಆಫರ್ ಗಳನ್ನು ಲಾಂಚ್ ಮಾಡುತ್ತಿರುವ ಸಂದರ್ಭದಲ್ಲಿ ವೊಡಾಫೋನ್ ರೂ.299 ಪ್ಲಾನ್ ಘೋಷಣೆ ಮಾಡಿದ್ದು, ಈ ಮೂಲಕ ಬಳಕೆದಾರರಿಗೆ ಕಡಿಮೆ ಮೊತ್ತಕ್ಕೆ ಹೆಚ್ಚಿನ ಆಯ್ಕೆಗಳನ್ನು ನೀಡಲು ಮುಂದಾಗಿದೆ.

2G ಡೇಟಾ:

2G ಡೇಟಾ:

ಆದರೆ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಪ್ರತಿ ನಿತ್ಯ ವೊಡಾಫೋನ್ 1GB 2G ಡೇಟಾವನ್ನು ಮಾತ್ರವೇ ನೀಡಲಿದೆ ಎನ್ನಲಾಗಿದೆ. ವೇಗದ ಡೇಟಾ ಬೇಕು ಎನ್ನುವವರಿಗೆ ಈ ಪ್ಲಾನ್ ಸೂಕ್ತವಲ್ಲ. ಡೇಟಾ ಹೆಚ್ಚಿನ ಅವಶ್ಯಕತೆ ಇಲ್ಲ ಎನ್ನುವವರಿಗೆ ಬೆಸ್ಟ್ ಆಫರ್.

56 ದಿನ ವ್ಯಾಲಿಡಿಟಿ:

56 ದಿನ ವ್ಯಾಲಿಡಿಟಿ:

ರೂ.299 ಪ್ಲಾನ್‌ನಲ್ಲಿ ಬಳಕೆದಾರರಿಗೆ ವೊಡಾಫೋನ್ 56 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

Bike-Car ಜಾತಕ ಹೇಳುವ ಆಪ್..!
ಉಚಿತ ವಾಯ್ಸ್ ಕರೆಗಳು:

ಉಚಿತ ವಾಯ್ಸ್ ಕರೆಗಳು:

ಇದಲ್ಲದೇ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ವೊಡಾಫೋನ್ ಉಚಿತ ಕರೆ ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ನಿತ್ಯ 250 ನಿಮಿಷಗಳು ಹಾಗೆ ಒಟ್ಟಾಗಿ ವಾರಕ್ಕೆ 1000 ನಿಮಿಷಗಳಷ್ಟು ಬಳಕೆ ಮಾಡಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Vodafone's 299 Prepaid Pack Offers 1GB 2G Data Per Day, Unlimited Calls for 56 Days. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot