Home
ಸುದ್ದಿಜಾಲ

ಬಂಪರ್ ಆಫರ್ ಘೋಷಿಸಿದ ವೊಡಾಫೋನ್!! ಟೆಲಿಕಾಂ ಕ್ಷೇತ್ರದಲ್ಲಿ ಮುಂದುವರೆದ ದರ ಸಮರ!!!

By Avinash

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರ ಮುಂದುವರೆದಿದೆ. ರಿಲಾಯನ್ಸ್‌ ಜಿಯೋ ಟೆಲಿಕಾಂ ಮಾರುಕಟ್ಟೆಗೆ ಕಾಲಿಟ್ಟ ನಂತರ ಟೆಲಿಕಾಂ ಆಪರೇಟರ್‌ಗಳು ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಉತ್ತಮ ಆಫರ್‌ಗಳನ್ನು ನೀಡುತ್ತಾ ಬಂದಿವೆ. ಏರ್‌ಟೆಲ್, ಬಿಎಸ್ಎನ್ಎಲ್, ವೊಡಾಫೋನ್‌ನಂತಹ ಹಲವು ಟೆಲಿಕಾಂ ಆಪರೇಟರ್‌ಗಳು ನಿರೀಕ್ಷೆಗೂ ಮೀರಿ ಡೇಟಾ ದರವನ್ನು ಕಡಿತಗೊಳಿಸಿವೆ.

ಬಂಪರ್ ಆಫರ್ ಘೋಷಿಸಿದ ವೊಡಾಫೋನ್!! ಟೆಲಿಕಾಂ ಕ್ಷೇತ್ರದಲ್ಲಿ ಮುಂದುವರೆದ ದರ ಸಮರ!!!

ಇತ್ತೀಚೆಗೆ ತಾನೇ ಜಿಯೋ ತನ್ನ ಗ್ರಾಹಕರಿಗೆ ಹೆಚ್ಚುವರಿಯಾಗಿ 1.5GB ಡೇಟಾ ಹೊಂದಿದ ಡಬಲ್ ಧಮಾಕಾ ಆಫರ್ ನೀಡಿ, ಟೆಲಿಕಾಂ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಅದರ ಹಿಂದೆಯೇ ಬಿಎಸ್‌ಎನ್‌ಎಲ್ ಫಿಫಾ ವಿಶ್ವಕಪ್ ವೀಕ್ಷಿಸಲು 4GB ಡೇಟಾ ನೀಡಿ ಗಮನ ಸೆಳೆದಿತ್ತು. ಈಗ ಜಿಯೋಗೆ ಪ್ರತಿಸ್ಪರ್ಧೆ ನೀಡಿರುವುದು ವೊಡಾಫೋನ್. ಹೀಗಾಗಲೇ ಐಡಿಯಾ ಸೆಲ್ಯುಲರ್ ನೆಟ್‌ವರ್ಕ್‌ನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಟೆಲಿಕಾಂ ಕ್ಷೇತ್ರದ ಲೆಕ್ಕಾಚಾರ ಬುಡಮೇಲು ಮಾಡಿದ್ದ ವೊಡಾಫೋನ್ ತನ್ನ ಪೋಸ್ಟ್‌ಪೇಡ್‌ ಯೋಜನೆಗಳನ್ನು ಪುನರ್ ಪರಿಶೀಲಿಸಿ ಜಿಯೋಗೆ ಸೆಡ್ಡು ಹೊಡೆದಿದೆ.

ವೊಡಾಫೋನ್ ರೆಡ್ ಆಫರ್

ವೊಡಾಫೋನ್ ರೆಡ್ ಆಫರ್

ವೊಡಾಫೋನ್ ತನ್ನ ಪೋಸ್ಟ್‌ಪೇಡ್ ಗ್ರಾಹಕರಿಗೆ ಅನೇಕ ಪ್ಲಾನ್‌ಗಳನ್ನು ಪುನರ್‌ ಪರಿಶೀಲಿಸಿ, ಹೆಚ್ಚು ಡೇಟಾ ಮೌಲ್ಯದ ಮತ್ತು ಒಟಿಟಿ ಸೇವೆಗಳ ಬಂಡಲ್ ಅನ್ನು ಈ ಪ್ಲಾನ್‌ಗಳಲ್ಲಿ ನೀಡಿದೆ. ಈ ಹೊಸ ಪ್ಲಾನ್‌ಗಳು ಹೀಗಾಗಲೇ ವೊಡಾಫೋನ್ ರೇಡ್ ಪ್ಲಾನ್ ಬಳಸುತ್ತಿರುವ ಗ್ರಾಹಕರಿಗೆ ಅನ್ವಯಿಸಲಿವೆ.

4 ಪ್ಲಾನ್ ರೀವೈಸ್

4 ಪ್ಲಾನ್ ರೀವೈಸ್

ವೊಡಾಫೋನ್ ರೆಡ್‌ನಲ್ಲಿ ಬರುತ್ತಿದ್ದ 4 ಪ್ಲಾನ್‌ಗಳನ್ನು ರೀವೈಸ್ ಮಾಡಿದ್ದು, 399 ರೂ., 499 ರೂ., 1299 ರೂ., 1999 ರೂ. ಪೋಸ್ಟ್‌ಪೇಡ್ ಪ್ಲಾನ್‌ಗಳನ್ನು ರೀವೈಸ್ ಮಾಡಿದ್ದು, ಪೋಸ್ಟ್‌ಫೇಡ್ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ.

ಅಮೆಜಾನ್ ಪ್ರೈಮ್ ಸಬ್‌ಸ್ಕ್ರೀಪ್ಷನ್

ಅಮೆಜಾನ್ ಪ್ರೈಮ್ ಸಬ್‌ಸ್ಕ್ರೀಪ್ಷನ್

ವೊಡಾಫೋನ್ ಘೋಷಿಸಿರುವ ಎಲ್ಲಾ ಪ್ಲಾನ್‌ಗಳಲ್ಲೂ ತನ್ನ ಗ್ರಾಹಕರಿಗೆ ಒಂದು ವರ್ಷದ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಉಚಿತವಾಗಿ ನೀಡುತ್ತಿದೆ. ಇದರ ಜೊತೆ ವೊಡಾಫೋನ್ ಪ್ಲೇ ಚಂದಾದಾರತ್ವವನ್ನು ವರ್ಷದ ಅವಧಿಗೆ ಉಚಿತವಾಗಿ ನೀಡುತ್ತಿದ್ದು, ಗ್ರಾಹಕರಿಗೆ ಮನರಂಜನೆಯೋ ಮನರಂಜನೆ.

ನೆಟ್‌ಫ್ಲಿಕ್ಸ್ ಚಂದಾದಾರಿಕೆ

ನೆಟ್‌ಫ್ಲಿಕ್ಸ್ ಚಂದಾದಾರಿಕೆ

ವೊಡಾಫೋನ್ ತನ್ನ ಪೋಸ್ಟ್‌ಪೇಡ್ ಗ್ರಾಹಕರಿಗೆ ಅಮೇಜಾನ್ ಪ್ರೈಮ್, ವೊಡಾಪೋನ್ ಪ್ಲೇ ಜೊತೆ ನೆಟ್‌ಫ್ಲಿಕ್ಸ್‌ ಚಂದಾದಾರತ್ವವನ್ನು ನೀಡುತ್ತಿದೆ. ಆಯ್ದ ಪ್ಲಾನ್‌ಗಳಲ್ಲಿ ನೆಟ್‌ಫ್ಲಿಕ್ಸ್‌ ಅನ್ನು ಕೆಲವು ತಿಂಗಳು ಉಚಿತವಾಗಿ ನೀಡಲು ವೊಡಾಫೋನ್ ನಿರ್ಧರಿಸಿದೆ.

ವೊಡಾಫೋನ್ ರೆಡ್ ಎಂಟರ್ಟೈನ್‌ಮೆಂಟ್ 399 ರೂ. ಪ್ಲಾನ್

ವೊಡಾಫೋನ್ ರೆಡ್ ಎಂಟರ್ಟೈನ್‌ಮೆಂಟ್ 399 ರೂ. ಪ್ಲಾನ್

ವೊಡಾಫೋನ್ 399 ರೂ.ಗೆ 40GB ಡೇಟಾವನ್ನು ನೀಡಲಿದೆ. ಈ ಮೊದಲು 20GB ಡೇಟಾ ನೀಡುತ್ತಿತ್ತು. ಇದರ ಜೊತೆಗೆ ಅಮೆಜಾನ್ ಪ್ರೈಮ್, ವೊಡಾಫೋನ್ ಪ್ಲೇ ಮತ್ತು ಕಂಪನಿಯ ರೆಡ್ ಹಾಟ್ ಡೀಲ್ಸ್‌ ನೀಡುತ್ತಿದ್ದು, 200GB ಡೇಟಾ ಉಪಯೋಗಿಸುವಷ್ಟು ಆಫರ್ ನೀಡಿದೆ. ಇದರ ಜೊತೆಗೆ ಅನಿಯಮಿತ ಸ್ಥಳೀಯ ಮತ್ತು STD ಕರೆಗಳು, ಹಾಗೂ ಅನಿಯಮಿತ ರಾಷ್ಟ್ರೀಯ ರೋಮಿಂಗ್ ನೀಡಲಾಗಿದೆ.

ವೊಡಾಫೋನ್ ರೆಡ್ ಎಂಟರ್ಟೈನ್‌ಮೆಂಟ್ + 499 ರೂ. ಪ್ಲಾನ್

ವೊಡಾಫೋನ್ ರೆಡ್ ಎಂಟರ್ಟೈನ್‌ಮೆಂಟ್ + 499 ರೂ. ಪ್ಲಾನ್

ವೊಡಾಫೋನ್ ಈ ಪ್ಲಾನ್‌ನಲ್ಲಿ ಮಾಸಿಕ 75GB ಡೇಟಾ ಆಫರ್ ನೀಡಿದೆ. ಇದರ ಜೊತೆಗೆ ಅನಿಯಮಿತ ಸ್ಥಳೀಯ ಮತ್ತು STD ಕರೆಗಳು, ಹಾಗೂ ಅನಿಯಮಿತ ರಾಷ್ಟ್ರೀಯ ರೋಮಿಂಗ್ ನೀಡಲಾಗಿದೆ. ವೊಡಾಫೋನ್ ಈ ಪ್ಲಾನ್ 4498 ರೂ. ಮೌಲ್ಯದ ಸೌಲಭ್ಯ ನೀಡಲಿದೆ ಎಂದು ಹೇಳಿದೆ. ಅಮೆಜಾನ್ ಪ್ರೈಮ್ (12 ತಿಂಗಳಿಗೆ 999 ರೂ.), ವೊಡಾಫೋನ್ ಪ್ಲೇ(12 ತಿಂಗಳಿಗೆ 499 ರೂ.) ಮತ್ತು ಡಿವೈಸ್ ಪ್ರೋಟೆಕ್ಷನ್ (3,000 ರೂ.) ಹಾಗೂ ಪ್ರತಿ ತಿಂಗಳು 499 ರೂ. ಕೂಪನ್ ಪಡೆಯುವ ಅವಕಾಶ ನೀಡಿದೆ. ಈ ಮೊದಲು ಈ ಪ್ಲಾನ್‌ನಲ್ಲಿ 40GB ಡೇಟಾ ಆಫರ್ ನೀಡಿತ್ತು.

ವೊಡಾಫೋನ್ ರೆಡ್ ಎಂಟರ್ಟೈನ್‌ಮೆಂಟ್ ಆರ್ 1,299 ರೂ. ಪ್ಲಾನ್

ವೊಡಾಫೋನ್ ರೆಡ್ ಎಂಟರ್ಟೈನ್‌ಮೆಂಟ್ ಆರ್ 1,299 ರೂ. ಪ್ಲಾನ್

ಪ್ರೀಮಿಯರ್ ಗ್ರಾಹಕರನ್ನು ಗುರಿಯಾಗಿಸಿಕೊಂಡಿರುವ ವೊಡಾಫೋನ್ ಈ ಪ್ಲಾನ್‌ನಲ್ಲಿ ಮಾಸಿಕ 100 GB ಡೇಟಾ ಆಫರ್ ನೀಡಿದೆ. ಜೊತೆಗೆ 500 GB ಡೇಟಾ ರೋಲ್‌ಒವರ್ ಬೆಂಬಲ ನೀಡಿದೆ. ಅನಿಯಮಿತ ಸ್ಥಳೀಯ ಮತ್ತು STD ಕರೆಗಳು, ಹಾಗೂ ಅನಿಯಮಿತ ರಾಷ್ಟ್ರೀಯ ರೋಮಿಂಗ್ ನೀಡಲಾಗಿದೆ. ಇದಲ್ಲದೇ 100 ISD ನಿಮಿಷಗಳನ್ನು ಉಚಿತವಾಗಿ ನೀಡಿದೆ. ವೊಡಾಫೋನ್ ಈ ಪ್ಲಾನ್ 5,498 ರೂ. ಮೌಲ್ಯದ ಸೌಲಭ್ಯ ನೀಡಲಿದೆ ಎಂದು ಹೇಳಿದೆ. ಅಮೆಜಾನ್ ಪ್ರೈಮ್ (12 ತಿಂಗಳಿಗೆ 999 ರೂ.), ವೊಡಾಫೋನ್ ಪ್ಲೇ(12 ತಿಂಗಳಿಗೆ 499 ರೂ.), ನೆಟ್‌ಫ್ಲಿಕ್ಸ್ (2 ತಿಂಗಳಿಗೆ 1000 ರೂ.) ಮತ್ತು ಡಿವೈಸ್ ಪ್ರೋಟೆಕ್ಷನ್ (3,000 ರೂ.) ಹಾಗೂ ಪ್ರತಿ ತಿಂಗಳು 1,299 ರೂ. ಕೂಪನ್ ಪಡೆಯುವ ಅವಕಾಶ ನೀಡಿದೆ.

ವೊಡಾಫೋನ್ ರೆಡ್ ಎಂಟರ್ಟೈನ್‌ಮೆಂಟ್ ಎಲ್ 1,999 ರೂ. ಪ್ಲಾನ್

ವೊಡಾಫೋನ್ ರೆಡ್ ಎಂಟರ್ಟೈನ್‌ಮೆಂಟ್ ಎಲ್ 1,999 ರೂ. ಪ್ಲಾನ್

ವೊಡಾಫೋನ್ ಈ ಪ್ಲಾನ್‌ನಲ್ಲಿ ಮಾಸಿಕ 200 GB ಡೇಟಾ ಆಫರ್ ನೀಡಿದೆ. ಜೊತೆಗೆ 500 GB ಡೇಟಾ ರೋಲ್‌ಒವರ್ ಬೆಂಬಲ ನೀಡಿದೆ. ಅನಿಯಮಿತ ಸ್ಥಳೀಯ ಮತ್ತು STD ಕರೆಗಳು, ಹಾಗೂ ಅನಿಯಮಿತ ರಾಷ್ಟ್ರೀಯ ರೋಮಿಂಗ್ ನೀಡಲಾಗಿದೆ.

ಇದಲ್ಲದೇ 200 ISD ನಿಮಿಷಗಳನ್ನು ಉಚಿತವಾಗಿ ನೀಡಿದೆ. ವೊಡಾಫೋನ್ ಈ ಪ್ಲಾನ್ 5,998 ರೂ. ಮೌಲ್ಯದ ಸೌಲಭ್ಯ ನೀಡಲಿದೆ ಎಂದು ಹೇಳಿದೆ. ಅಮೆಜಾನ್ ಪ್ರೈಮ್ (12 ತಿಂಗಳಿಗೆ 999 ರೂ.), ವೊಡಾಫೋನ್ ಪ್ಲೇ(12 ತಿಂಗಳಿಗೆ 499 ರೂ.), ನೆಟ್‌ಫ್ಲಿಕ್ಸ್ (2 ತಿಂಗಳಿಗೆ 1,500 ರೂ.) ಮತ್ತು ಡಿವೈಸ್ ಪ್ರೋಟೆಕ್ಷನ್ (3,000 ರೂ.) ಹಾಗೂ ಪ್ರತಿ ತಿಂಗಳು 1,999 ರೂ. ಕೂಪನ್ ಪಡೆಯುವ ಅವಕಾಶ ನೀಡಿದೆ.

Best Mobiles in India

English summary
Vodafone’s revised RED plans: Get 40GB data with free Amazon Prime for Rs 399. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+