11 ಶತಕೋಟಿ ಮೈಲು ಕ್ರಮಿಸಿ ಸೌರವ್ಯೂಹ ದಾಟಿತು 'ವಾಯೆಜರ್-2'!

|

ನಾಲ್ಕು ದಶಕಗಳ ಹಿಂದೆ ಅಮೆರಿಕದ ಗಗನಯಾನ ಸಂಸ್ಥೆ ನಾಸಾ ಉಡಾವಣೆ ಮಾಡಿದ್ದ ಗಗನನೌಕೆ ''ವಾಯೆಜರ್-2''ನಮ್ಮ ಸೌರವ್ಯೂಹದ ಮಿತಿಗಳನ್ನು ಮೀರಿ ಬಹು ದೂರಕ್ಕೆ ಹಾರಿದೆ.! ಬಾಹ್ಯಾಕಾಶ ಅಧ್ಯಯನ ಹಾಗೂ ಅನ್ವೇಷಣೆಗಾಗಿ ಉಡಾವಣೆಯಾಗಿದ್ದ ವಾಯೆಜರ್-2 ಈಗ ಸೌರವ್ಯೂಹವನ್ನು ದಾಟಿದೆ ಎಂದು ಅಮೆರಿಕದ ಅಯೋವಾ ವಿಶ್ವವಿದ್ಯಾಲಯದ ಸಂಶೋಧಕರು ಮಂಗಳವಾರ ಬಹಿರಂಗಪಡಿಸಿದ್ದಾರೆ. 'ಈ ಗಗನನೌಕೆ ತಾರೆಗಳ ನಡುವಿನ ವ್ಯೋಮಪ್ರದೇಶವನ್ನು ಪ್ರವೇಶಿಸಿದೆ' ಎಂದು ಸಂಶೋಧಕರು ಹೇಳಿದ್ದಾರೆ.

ಸೌರವ್ಯೂಹ

2012ರಲ್ಲಿ ಸೌರವ್ಯೂಹದಿಂದ ನಿರ್ಗಮಿಸಿದ್ದ ವಾಯೆಜರ್-1 ನಂತರ ಸೌರವ್ಯೂಹವನ್ನು ದಾಟಿದ ಎರಡನೇ ಗಗನನೌಕೆ ಎಂಬ ಹೆಗ್ಗಳಿಕೆ ಈ ವಾಯೆಜರ್ 2 ಪಾಲಾಗಿದೆ. ನಮ್ಮ ಸೌರವ್ಯೂಹದ ಮಿತಿಗಳನ್ನು ಮೀರಿ ಎರಡನೇ ಬಾಹ್ಯಾಕಾಶ ನೌಕೆ ವಾಯೇಜರ್ 2. ಅದೃಷ್ಟವಶಾತ್, ವಾಯೇಜರ್ 2 ರ ಉಪಕರಣಗಳು ವಾಯೇಜರ್ 1 ಗಿಂತ ಸ್ವಲ್ಪ ಉತ್ತಮ ಆಕಾರದಲ್ಲಿವೆ, ಆದ್ದರಿಂದ ವಿಜ್ಞಾನಿಗಳು ಸೂರ್ಯನ ಪ್ರಾಬಲ್ಯವಿರುವ ಹೆಲಿಯೋಸ್ಪಿಯರ್‌ನಿಂದ ಪರಿವರ್ತನೆಯನ್ನು ಗಮನಿಸಲು ಸಾಧ್ಯವಾಯಿತು ಎಂದು ಸಂಶೋಧಕರು ತಿಳಿಸಿದ್ದಾರೆ.

ಸೌರವ್ಯೂಹ

ಸೌರವ್ಯೂಹ ಅಂತ್ಯಗೊಳ್ಳುವ ಪ್ರದೇಶದಲ್ಲಿ ಗುಳ್ಳೆಯಾಕಾರದ ಆಕಾಶಕಾಯವಿದ್ದು, ಇದರಿಂದ ಹೊರಹೊಮ್ಮುವ ಗಾಳಿಗೆ ಸೌರಮಾರುತ ಎಂದು ಕರೆಯಲಾಗುತ್ತದೆ. ಒಂದು ರೀತಿಯಬೃಹತ್‌ ತೊರೆಯ ರೀತಿಯಲ್ಲಿ ಪರಿಭ್ರಮಿಸುವ ಸೌರಮಾರುತಗಳಿಂದ ಕೂಡಿದ ಪ್ರದೇಶವನ್ನು ಅಂತರತಾರಾ ಮಾಧ್ಯಮ ಎನ್ನಲಾಗುತ್ತದೆ. ಇದು ಸೌರವ್ಯೂಹ ಹಾಗೂ ಇತರ ತಾರಾಮಂಡಲದ ನಡುವೆ ಸಂಪರ್ಕ ಕಲ್ಪಿಸುವ ಮಾಧ್ಯಮವಾಗಿದ್ದು, ಈ ವ್ಯೋಮಪ್ರದೇಶವನ್ನೇ ಈಗ ವಾಯೆಜರ್-2 ಪ್ರವೇಶಿಸಿದೆ ಎಂದು ಸುಲಭವಾಗಿ ವಿಜ್ಞಾನಿಗಳು ತಿಳಿಸಿದ್ದಾರೆ. .

ಸೌರಮಂಡಲದ

ನಮ್ಮ ಸೌರಮಂಡಲದ ಅಂಚನ್ನು ಹೆಲಿಯೋಪಾಸ್ ಎಂದು ಕರೆಯಲಾಗುತ್ತದೆ. ವಾಯೇಜರ್ 2 ಈ ಹೆಲಿಯೊಪಾಸ್ ಅನ್ನು ಸಹ ದಾಟಿದೆ ಎಂದು ಸಾಬೀತುಪಡಿಸುವ ಡೇಟಾವನ್ನು ಹಿಂದಕ್ಕೆ ಕಳುಹಿಸಿದೆ. ಇನ್ನು ಅಲ್ಲಿ ಸಂಪೂರ್ಣ ಕ್ರಿಯಾತ್ಮಕ ಪ್ಲಾಸ್ಮಾ ಸ್ಪೆಕ್ಟ್ರೋಮೀಟರ್ ಅನ್ನು ಹೊಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಪರಿವರ್ತನೆಯು ಸುಮಾರು ಒಂದು ವರ್ಷದ ಹಿಂದೆ ನವೆಂಬರ್ 2018 ರಲ್ಲಿ ಸಂಭವಿಸಿದ್ದು, ವಾಯೇಜರ್ 1ರ ಮಾಹಿತಿಯನ್ನು ಆಧರಿಸಿ ವಿಜ್ಞಾನಿಗಳು ನಿರೀಕ್ಷಿಸಿದ ಬದಲಾವಣೆಗೆ ಸರಿಸುಮಾರು ಅನುಗುಣವಾಗಿದೆ ಎಂದು ಹೇಳಲಾಗಿದೆ.

11 ಶತಕೋಟಿ

ವಾಯೆಜರ್-2 ವ್ಯೋಮನೌಕೆ ಭೂಮಿಯಿಂದ 119.7 ಖಗೋಳ ಮಾನ (ಎಯು) ದೂರ ಚಲಿಸಿದೆ. ಅಂದರೆ, 11 ಶತಕೋಟಿ ಮೈಲುಗಳಿಗಿಂತ ಹೆಚ್ಚು ದೂರ ಕ್ರಮಿಸಿರುವ ಈ ಗಗನನೌಕೆಯ ಪ್ರಯಾಣ ಹಲವಾರು ವೈಜ್ಞಾನಿಕ ತಿಳಿವಳಿಕೆಗೆ ಕಾರಣವಾಗಿದೆ. ಸೂರ್ಯನ ಪ್ರಭಾವದಿಂದ ದೂರ ಹೋದಂತೆಲ್ಲಾ ಸೌರಮಾರುತ ಕ್ಷೀಣಿಸುತ್ತದೆ ಎಂದು ನಂಬಲಾಗಿತ್ತು. ವಾಯೆಜರ್‌-2ರ ಈ ಪರ್ಯಟನದಿಂದ ಇದು ಸುಳ್ಳು ಎಂಬುದು ಸಾಬೀತಾದಂತಾಗಿದೆ' ಎಂದು ವಿ.ವಿಯ ಪ್ರಾಧ್ಯಾಪಕ ಡಾನ್ ಗರ್ನೆಟ್ ಅವರು ಅಭಿಪ್ರಾಯಪಟ್ಟಿದ್ದಾರೆ.

Best Mobiles in India

English summary
Voyager 2 has just sent back data proving that it has also crossed the heliopause, and it had a fully functional plasma spectrometer.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X