ವಿಆರ್ ಹೆಡ್ ಸೆಟ್ ಬಳಸಿ ಹಾಲು ಉತ್ಪಾದನೆ ಹೆಚ್ಚಿಸಿಕೊಂಡ ಮಾಸ್ಕೋ ರೈತರು!

By Gizbot Bureau
|

ಕೃಷ್ಣನ ಕೊಳಲಿನ ನಿನಾದಕ್ಕೆ ಹಸುಗಳು ಹಾಲು ಸುರಿಸುತ್ತಿದ್ದವು ಎಂದು ನಾವು ಪುರಾಣ ಪುಣ್ಯ ಕಥೆಗಳಲ್ಲಿ ಕೇಳಿದ್ದೇವಲ್ಲವೇ? ಗತಕಾಲದ ಈ ಸ್ಟೋರಿಗೆ ಈಗಿನ ಕಾಲದ ಸಂಶೋಧನೆಗಳು ಪುಷ್ಟಿ ನೀಡುತ್ತಿದೆ. ಹೌದು ಮ್ಯೂಸಿಕಲ್ ಪ್ರಯೋಗವೊಂದನ್ನು ಮಾಸ್ಕೋ ರೈತರು ತಮ್ಮ ದನಕರುಗಳ ಮೇಲೆ ಮಾಡಿದ್ದಾರೆ. ಆ ಮೂಲಕ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ರಷ್ಯಾದಲ್ಲಿ ನಡೆದ ಪ್ರಯೋಗ:

ರಷ್ಯಾದಲ್ಲಿ ನಡೆದ ಪ್ರಯೋಗ:

ಮನುಷ್ಯರ ಮೇಲೆ ವರ್ಚುವಲ್ ರಿಯಾಲಿಟಿಯಿಂದ ಸಾಕಷ್ಟು ಲಾಭಗಳಾಗಿರುವ ಬಗ್ಗೆ ನೀವು ಕೇಳಿದ್ದೀರಿ ಮತ್ತು ತಿಳಿದುಕೊಂಡಿದ್ದೀರಿ. ಆದರೆ ಇದೀಗ ವಿಆರ್ ನ ಅಭಿಮಾನಿಗಳು ಆಶ್ಚರ್ಯ ಪಡುವಂತ ಮತ್ತೊಂದು ಆಶ್ಚರ್ಯಕರ ಸುದ್ದಿಯನ್ನು ನಾವಿಲ್ಲಿ ನಿಮಗೆ ಹೇಳುತ್ತಿದ್ದೇವೆ.

ಇದು ರಷ್ಯಾದಲ್ಲಿ ನಡೆದ ಘಟನೆ. ಇಲ್ಲಿನ ಮಾಸ್ಕೋ ಸಮೀಪದ ರೈತರು ವಿಆರ್ ಹೆಡ್ ಸೆಟ್ ಗಳನ್ನು ತಮ್ಮ ಹಸುಗಳಿಗೆ ಹಾಕಿದ್ದಾರೆ ಮತ್ತು ಹಾಡುಗಳನ್ನು ಹಸುಗಳಿಗೆ ಕೇಳಿಸಿದ್ದಾರೆ. ಆ ಮೂಲಕ ದನಗಳ ಮೂಡ್ ಬದಲಾವಣೆಗೆ ಪ್ರಯತ್ನಿಸಿದ್ದಾರೆ. ಈ ರೀತಿಯ ವಿಧಾನದಿಂದಾಗಿ ದನಗಳು ನೀಡುವ ಹಾಲಿನ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗಿದೆ.

ಕೃಷಿ ಮತ್ತು ಆಹಾರ ಸಚಿವಾಲಯದ ಪ್ರಯೋಗ:

ಕೃಷಿ ಮತ್ತು ಆಹಾರ ಸಚಿವಾಲಯದ ಪ್ರಯೋಗ:

ಮಾಸ್ಕೋ ಪ್ರದೇಶದ ಕೃಷಿ ಮತ್ತು ಆಹಾರ ಸಚಿವಾಲಯದ ಉಪಕ್ರಮದ ಯೋಜನೆಯ ಅಡಿಯಲ್ಲಿ ಈ ಹೊಸ ಅಧ್ಯಯನವನ್ನು ಪ್ರಾಯೋಗಿಕವಾಗಿ ನಡೆಸಲಾಗಿದೆ. ಹೀಗೆ ವಿಆರ್ ಹೆಡ್ ಸೆಟ್ ಗಳನ್ನು ಜಾನುವಾರುಗಳಿಗೆ ಅಳವಡಿಸಿದ ಪರಿಣಾಮವಾಗಿ ಅವುಗಳ ಒತ್ತಡ ಕಡಿಮೆಯಾಗಿ ಹಾಲಿನ ಉತ್ಪಾದನೆ ಅಧಿಕವಾಗಿದೆ. ಬೇಸಿಗೆಯ ಪ್ರಭಾವವನ್ನು ಕಡಿಮೆ ಮಾಡಿ ಜಾನುವಾರಗಳ ಕಣ್ಣುಗಳಿಗೆ ಆಹ್ಲಾದವೆನಿಸುವ ಬಣ್ಣಗಳನ್ನು ಕೂಡ ಹೊಂದಿಸಲಾಗಿದ್ದು ಉತ್ತಮ ಫಲಿತಾಂಶವನ್ನು ರೈತರು ಪಡೆದಿದ್ದಾರೆ.

ಸ್ಟ್ರಕ್ಚರಲ್ ಫೀಚರ್:

ಸ್ಟ್ರಕ್ಚರಲ್ ಫೀಚರ್:

ದನಗಳ ತಲೆಯ ಭಾಗವು ಹೇಗಿದೆ ಎಂಬುದರ ಆಧಾರದಲ್ಲಿ ವಿಆರ್ ಹೆಡ್ ಸೆಟ್ ನ್ನು ಅಡ್ಜೆಸ್ಟ್ ಮಾಡಲಾಗುತ್ತದೆ. ಅದಕ್ಕಾಗಿ ಸ್ಟ್ರಕ್ಚರಲ್ ಫೀಚರ್ ಕೂಡ ಇದರಲ್ಲಿದೆ. ದನಗಳಿಗೆ ಹಿಂಸೆಯಾಗದ ರೀತಿಯಲ್ಲಿ ಇದನ್ನು ಅಳವಡಿಸಬೇಕಾಗುತ್ತದೆ.

ಹಸುವಿನ ಭಾವನಾತ್ಮಕ ಅನುಭವ:

ಹಸುವಿನ ಭಾವನಾತ್ಮಕ ಅನುಭವ:

ಅಲ್ಲಿನ ಸಚಿವಾಲಯವು ತಿಳಿಸಿರುವ ಪ್ರಕಾರ ಈ ಪ್ರಯೋಗವನ್ನು ಮಾಸ್ಕೋದ ರಾಮೆನ್ಸ್ಕಿ ಜಿಲ್ಲೆಯ ರುಸ್ಮೋಲೊಕೋ ಜಮೀನಿನಲ್ಲಿ ನಡೆಸಲಾಗಿದೆ.ಇದು ಹಸುವಿನ ಭಾವನಾತ್ಮಕ ಅನುಭವ ಮತ್ತು ಅದರ ಹಾಲಿನ ಇಳುವರಿಯನ್ನು ಹೆಚ್ಚಿಸಲು ನಡೆಸಬಹುದಾದ ಪ್ರಯತ್ನಗಳ ಬಗ್ಗೆ ನಡೆಸಿದ ಸಂಶೋಧನೆಯ ಭಾಗವಾಗಿದೆ ಎನ್ನಲಾಗಿದೆ.

ಮೊದಲ ಪ್ರಯೋಗದಲ್ಲಿ ಹಸುಗಳು ಹೆಡ್ ಸೆಟ್ ಬಳಸಿ ಮ್ಯೂಸಿಕ್ ಕೇಳಿರುವುದರಿಂದಾಗಿ ಒತ್ತಡದಿಂದ ಅಥವಾ ಆತಂಕದಿಂದ ಮುಕ್ತವಾಗಿರುವುದು ತಿಳಿದುಬಂದಿದೆ.ಆದರೆ ಹಾಲಿನ ಉತ್ಪಾದನೆಯ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ನಡೆಸುತ್ತಿರುವ ಸಂಶೋಧನೆಯಲ್ಲಿ ಇನ್ನಷ್ಟು ಖಚಿತತೆಯ ಅಗತ್ಯವಿದೆ.

ಪ್ರಶ್ನೆಗಳು:

ಪ್ರಶ್ನೆಗಳು:

ಆದರೆ ಇನ್ನಷ್ಟು ಪ್ರಶ್ನೆಗಳು ಕೂಡ ಈ ಸಂಶೋಧನೆಯಲ್ಲಿ ಹುಟ್ಟಿಕೊಂಡಿವೆ. ವಿಆರ್ ಸಿಮುಲೇಷನ್ ಮಾಡುವ ಬದಲಾಗಿ ತೆರೆದ ಮೈದಾನದಲ್ಲಿ ಯಾಕೆ ಹಸುಗಳನ್ನು ಬಿಡಬಾರದು ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ. ಹಸುಗಳು ಹೆಡ್ ಸೆಟ್ ಗಳನ್ನು ತೆಗೆದು ಹಾಕಿಕೊಂಡಾಗ ಅವುಗಳಿಗೆ ಮಾನಸಿಕ ತೊಂದರೆಗಳನ್ನು ಉಂಟು ಮಾಡುವ ಸಾಧ್ಯತೆಗಳಿಲ್ಲವೇ? ರೈತರು ಹೆಡ್ ಸೆಟ್ಟಿನ ಬ್ಯಾಟರಿ ಅವಧಿಯನ್ನು ಹೇಗೆ ನಿಯಂತ್ರಿಸುತ್ತಾರೆ ಮತ್ತು ವಿಆರ್ ಹೆಡ್ ಸೆಟ್ ಗಳನ್ನು ಜಾನುವಾರುಗಳ ಕಿವಿಗಳಲ್ಲಿ ಎಷ್ಟು ಹೊತ್ತ ಇಡಬೇಕು ಅಥವಾ ಇಡುತ್ತಾರೆ ಇತ್ಯಾದಿ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

ಒಂದು ವೇಳೆ ಹೀಗೆ ಹುಟ್ಟುತ್ತಿರುವ ಎಲ್ಲಾ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಕ್ಕರೆ ಹುಟ್ಟಿಕೊಂಡಿರುವ ಕೆಲವು ಸಮಸ್ಯೆಗಳಿಗೂ ಕೂಡ ಸಂಭಾವ್ಯ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಹೊಲಗಳಲ್ಲಿ ಸಂಗೀತದ ಆಲಾಪ ಇಲ್ಲದೇ ಇದ್ದಲ್ಲಿ ಗೋವಿನ ಆರೋಗ್ಯ ಹೆಚ್ಚಿಸಲು ಮತ್ತು ಹಾಲಿನ ಉತ್ಪಾದನೆಯನ್ನು ಅಧಿಕಗೊಳಿಸಲು ವಿಆರ್ ಹೆಡ್ ಸೆಟ್ ಗಳು ಅನುಕೂಲವಾಗಬಹುದು ಎಂದು ಸದ್ಯ ನಂಬಲಾಗುತ್ತಿದೆ.

Best Mobiles in India

Read more about:
English summary
VR Headsets Might Help Cows To Produce More Milk

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X