ವಿಯು ಸಂಸ್ಥೆಯಿಂದ 32 ಮತ್ತು 43 ಇಂಚಿನ ಸಿನೆಮಾ ಸ್ಮಾರ್ಟ್‌ಟಿವಿ ಬಿಡುಗಡೆ!

|

ಇತ್ತೀಚಿನ ದಿನಗಳಲ್ಲಿ ಟಿವಿ ವಲಯವೂ ಸಾಕಷ್ಟು ಬದಲಾಗಿದೆ. ಟೆಕ್ನಾಲಜಿ ಮುಂದುವರೆದಂತೆ ಸಾಕಷ್ಟು ಭಿನ್ನ ವಿಭಿನ್ನ ಮಾದರಿಯ ಸ್ಮಾರ್ಟ್ ಟಿವಿಗಳು ಮಾರುಕಟ್ಟೆಗೆ ಲಗ್ಗೆ ಹಾಕಿವೆ. ಈಗಾಗಲೇ ಹಲವು ಕಂಪೆನಿಗಳು ತಮ್ಮ ವೈವಿಧ್ಯಮಯ ಸ್ಮಾರ್ಟ್‌ಟಿವಿಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿವೆ. ಇವುಗಳಲ್ಲಿ ವಿಯು ಕಂಪೆನಿ ಕೂಡ ಒಂದಾಗಿದ್ದು, ತನ್ನ ವಿಯು ಸಿನೆಮಾ ಸ್ಮಾರ್ಟ್‌ಟಿವಿಗಳ ಮೂಲಕ ಗುರುತಿಸಿಕೊಂಡಿದೆ. ಸದ್ಯ ಇದೇ ಕಂಪೆನಿ ಇದೀಗ ತನ್ನ ಹೊಸ ಮಾದರಿಯ ಸ್ಮಾರ್ಟ್‌ಟಿವಿಗಳನ್ನ ಬಿಡುಗಡೆ ಮಾಡಿದೆ.

ವಿಯು ಸಿನೆಮಾ ಸ್ಮಾರ್ಟ್ ಟಿವಿ

ಹೌದು, ವಿಯು ಸಿನೆಮಾ ಸ್ಮಾರ್ಟ್ ಟಿವಿ ಸರಣಿಯ ಎರಡು ಹೊಸ ರೂಪಾಂತರ ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡಿದೆ. ಇನ್ನು ಈ ಹೊಸ ಸ್ಮಾರ್ಟ್‌ಟಿವಿಗಳಲ್ಲಿ 32 ಇಂಚಿನ ಎಚ್‌ಡಿ-ರೆಸಲ್ಯೂಶನ್ ಆಯ್ಕೆ ಮತ್ತು 43 ಇಂಚಿನ ಪೂರ್ಣ-ಎಚ್‌ಡಿ ಆಯ್ಕೆಯ ಸ್ಮಾರ್ಟ್‌ಟಿವಿಗಳನ್ನ ಪರಿಚಯಿಸಿದೆ. ಸದ್ಯ ಭಾರತೀಯ ಟೆಲಿವಿಷನ್ ತಯಾರಕ ವಿಯು ಅವರ ಸಿನೆಮಾ ಟಿವಿ ಶ್ರೇಣಿಯನ್ನು ಈ ವರ್ಷದ ಆರಂಭದಲ್ಲಿ ಅಲ್ಟ್ರಾ-ಎಚ್ಡಿ ರೆಸಲ್ಯೂಶನ್‌ನಲ್ಲಿ ಮೂರು ಗಾತ್ರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಇದೀಗ ವಿಯು ತನ್ನ ಸಿನೆಮಾ ಶ್ರೇಣಿಯ ಸ್ಮಾರ್ಟ್‌ಟಿವಿಗಳಲ್ಲಿ ಹೊಸ ಮಾದರಿಯ ಫೀಚರ್ಸ್‌ ಹಾಗೂ ಸಣ್ಣ ಮತ್ತು ಹೆಚ್ಚು ಕೈಗೆಟುಕುವ ಗಾತ್ರಗಳಲ್ಲಿ ಪರಿಚಯಿಸುತ್ತಿದೆ. ಇನ್ನು ಈ ಹೊಸ ಸ್ಮಾರ್ಟ್‌ಟಿವಿ ಜೂನ್ 23 ರಂದು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿವೆ.

ವಿಯು

ಸದ್ಯ ವಿಯು ಬಿಡುಗಡೆ ಮಾಡಿರುವ 32 ಇಂಚಿನ ವಿಯು ಸಿನೆಮಾ ಟಿವಿಯು 1366x768- ಪಿಕ್ಸೆಲ್ ರೆಸಲ್ಯೂಶನ್‌ ಸಾಮರ್ಥ್ಯದ ಎಚ್‌ಡಿ ಎಲ್ಇಡಿ ಸ್ಕ್ರೀನ್‌ ಅನ್ನು ಒಳಗೊಂಡಿದೆ. ಇದಲ್ಲದೆ 43 ಇಂಚಿನ ಸ್ಮಾರ್ಟ್‌ಟಿವಿಯು 1920x1080-ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ ಫುಲ್‌-ಎಚ್‌ಡಿ ಸ್ಕ್ರೀನ್‌ ಅನ್ನು ಹೊಂದಿದೆ ಎನ್ನಲಾಗ್ತಿದೆ. ಇನ್ನು ಈ ಎರಡೂ ಟಿವಿಗಳು ಅಂತರ್ನಿರ್ಮಿತ ಕ್ರೋಮ್‌ಕಾಸ್ಟ್ ಮತ್ತು ಆಪಲ್ ಏರ್‌ಪ್ಲೇಗೆ ಬೆಂಬಲವನ್ನು ನೀಡುತ್ತವೆ ಎಂದು ಕಂಪೆನಿ ಹೇಳಿಕೊಂಡಿದ.

ವಿಯು

ಇನ್ನು ವಿಯು ಸಿನೆಮಾ ಸರಣಿಯ ಹೊಸ ಸ್ಮಾರ್ಟ್‌ಟಿವಿಗಳು 40W ಸೌಂಡ್‌ಬಾರ್-ಶೈಲಿಯ ಸ್ಪೀಕರ್ ಸಿಸ್ಟಮ್‌ಗಾಗಿ ಡಾಲ್ಬಿ ಆಡಿಯೊ ಟ್ಯೂನಿಂಗ್ ಅನ್ನು ಹೊಂದಿದ್ದು, ವಾಯ್ಸ್‌ ರಿಮೋಟ್ ಮೂಲಕ ಗೂಗಲ್ ಅಸಿಸ್ಟೆಂಟ್‌ಗೆ ಪ್ರವೇಶ ಹೊಂದಿರುವ ಟಿವಿ ಇದಾಗಿದೆ. ಅಲ್ಲದೆ ಈ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್ ಟಿವಿ 9 ಪೈ ಅನ್ನು ಹೊಂದಿದೆ. ಇನ್ನು ವಿಯು ತನ್ನ ದುಬಾರಿ 4K ಸಿನೆಮಾ ಟಿವಿ ಶ್ರೇಣಿಯಿಂದ ಕೆಲವು ಹೊಸ ಫೀಚರ್ಸ್‌ಗಳನ್ನ ಬಜೆಟ್‌ಬೆಲೆಯ ಸ್ಮಾರ್ಟ್‌ಟಿವಿಗಳಲ್ಲೂ ಪರಿಚಯಿಸಲು ಮುಂದಾಗಿದೆ.

ವಿಯು

ಇದಲ್ಲದೆ ವಿಯು ಸಿನೆಮಾ ಪರಿಚಯಿಸಿರುವ 32 ಇಂಚಿನ ಸ್ಮಾರ್ಟ್‌ಟಿವಿ ಬೆಲೆ ರೂ. 12,999 ಹೊಂದಿದೆ. ಹಾಗೇಯೇ 43-ಇಂಚಿನ ಸ್ಮಾರ್ಟ್‌ಟಿವಿಗೆ 21,999,ರೂ ಬೆಲೆಯನ್ನ ನಿಗಧಿಪಡಿಸಲಾಗಿದೆ.ಇನ್ನು ವಿಯು ಸಿನೆಮಾ ಟಿವಿ 50-ಇಂಚಿನ 4K ರೂಪಾಂತರದಲ್ಲಿಯೂ ಉತ್ತಮ ಗುಣಮಟ್ಟದ ಧ್ವನಿಯನ್ನ ನಾವು ಕೇಳಬಹುದಾಗಿದೆ. ಸದ್ಯ ಜುಲೈ ತಿಂಗಳಿನಲ್ಲಿ ಈ ಸ್ಮಾರ್ಟ್‌ಟಿವಿಗಳು ಲಭ್ಯವಾಗುವ ಸಾಧ್ಯತೆ ಇದ್ದು, ಭಾರತದಲ್ಲಿ ಇನ್ನು ಹೊಸ ಮಾದರಿಯ ಕೈಗೆಟುಕುವ ಟಿವಿಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

Best Mobiles in India

English summary
Vu has launched two new variants of the Vu Cinema Smart TV series, with a 32-inch HD-resolution option and 43-inch full-HD variant added to the range.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X