'ವಿಯು' ಕಂಪೆನಿಯಿಂದ ಮೂರು ಹೊಸ ಸ್ಮಾರ್ಟ್‌ಟಿವಿ ಬಿಡುಗಡೆ!

|

ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಮಾರ್ಟ್‌ಟಿವಿ ತಯಾರಕನಾಗಿ ಗುರ್ತಿಸಿಕೊಂಡಿರೋ 'ವಿಯು' ಕಂಪೆನಿ ಸ್ಟಾಕ್‌ ಆಂಡ್ರಾಯ್ಡ್ 4K ಮಾದರಿಯ ಮೂರು ಹೊಸ ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡಿದೆ. 4k ರೆಸಲ್ಯೂಶನ್, ಡಾಲ್ಬಿ ವಿಷನ್ ಎಚ್‌ಡಿಆರ್ ಮತ್ತು ಆಂಡ್ರಾಯ್ಡ್ ಟಿವಿ 9ಪೈ ಬೆಂಬಲದ ಸ್ಮಾರ್ಟ್‌ಟಿವಿ ಇದಾಗಿದ್ದು, 43 ಇಂಚು, 50 ಇಂಚು ಮತ್ತು 55 ಇಂಚಿನ ಮೂರು ಗಾತ್ರದ ವೇರಿಯೆಂಟ್‌ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಈ ಮೂಲಕ 4K ಕ್ವಾಲಿಟಿಯ ಸ್ಮಾರ್ಟ್‌ಟಿವಿ ವಲಯದಲ್ಲಿ ಭಾರೀ ಬದಲಾವಣೆ ತರಲು ಮುಂದಾಗಿದ್ದು, ಗ್ರಾಹಕರಿಗೆ ಖುಷಿ ನೀಡಿದೆ.

ಹೌದು

ಹೌದು, ವಿಯು ಟೆಲಿವಿಷನ್‌ ಸಂಸ್ಥೆಯು ವಿವಿಧ ಗ್ರಾತ್ರಗಳ ಒಟ್ಟು ಮೂರು 4K ಮಾದರಿಯ ಸ್ಮಾರ್ಟ್‌ಟಿವಿಗಳನ್ನು ರಿಲೀಸ್ ಮಾಡಿದ್ದು, 43, 50, 55 ಮತ್ತು ಇಂಚಿನ ಆಯ್ಕೆಗಳಲ್ಲಿ ದೊರೆಯಲಿವೆ. ಈ ಸ್ಮಾರ್ಟ್‌ಟಿವಿಗಳಲ್ಲಿ ಆಂಡ್ರಾಯ್ಡ್‌ 9 ಫೈ ಅಪರೇಟಿಂಗ್ ಸಿಸ್ಟಮ್ ಕಾರ್ಯನಿರ್ವಹಿಸಲಿದ್ದು, ಜೊತೆಗೆ ಡಾಲ್ಬಿ ವಿಷನ್‌ ಹಾಗೂ ಆಕ್ಟಿವೈಯಸ್‌ ರಿಮೋಟ್‌, ಎಚ್‌ಡಿಆರ್ ಅನ್ನು ಒಳಗೊಂಡಿವೆ.

ಈಗಾಗಲೇ

ಈಗಾಗಲೇ ಭಾರತೀಯ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಒನ್‌ ಫ್ಲಸ್‌, ಶಿಯೋಮಿ, ಸ್ಯಾಮ್‌ಸಂಗ್‌, ಎಲ್‌ಜಿ ಕಂಪೆನಿಗಳ ಸ್ಮಾರ್ಟ್‌ಟಿವಿಗಳ ಭರಾಎ ಜೋರಾಗಿಯೇ ನಡೆಯುತ್ತಿದೆ. ಈ ನಡುವೆ ಅಗ್ಗದ ಬೆಲೆಯಲ್ಲಿ ಸ್ಮಾರ್ಟ್‌ಟಿವಿಗಳನ್ನ ಬಿಡುಗಡೆ ಮಾಡಿದ ಖ್ಯಾತಿ ಪಡೆದಿರೋ 'ವಿಯು' ಕೂಡ ಇತರೆ ಕಂಪೆನಿಗಳ ಜೊತೆ ಪೈಪೋಟಿ ನಡೆಸುತ್ತಿದೆ. ಈ ಪೈಪೋಟಿಯನ್ನ ಇನ್ನಷ್ಟು ಸ್ಪರ್ಧಾತ್ಮಕ ಗೊಳಿಸಲು ಹೊಸ ಮಾದರಿಯ 4k ರೆಸಲ್ಯೂಶನ್‌ ಹೊಂದಿರುವ ಸ್ಮಾರ್ಟ್‌ಟಿವಿಗಳನ್ನ ಬಿಡುಗಡೆ ಮಾಡಲಿದೆ ಎಂದೇ ಹೇಳಲಾಗ್ತಿದೆ.

ವಿಯು

'ವಿಯು' ಕಂಪೆನಿ ಇದೀಗ ಬಿಡುಗಡೆ ಮಾಡಿರುವ ವಿಯು ಸಿನಿಮಾ ಸ್ಮಾರ್ಟ್‌ಟಿವಿ ಸರಣಿಯಲ್ಲಿ ಎಲ್ಲಾ ಮಾದರಿಗಳು 3840x2160 ಪಿಕ್ಸೆಲ್‌ ಸೆನ್ಸಾರ್‌ ಹೊಂದಿರುವ 4 ಕೆ ರೆಸಲ್ಯೂಶನ್ ಸ್ಕ್ರೀನ್‌ ಅನ್ನು ಒಳಗೊಂಡಿರುತ್ತವೆ. ಜೊತೆಗೆ ಡಾಲ್ಬಿ ವಿಷನ್ ಎಚ್‌ಡಿಆರ್ ಮತ್ತು ಸ್ಟಾಕ್ ಆಂಡ್ರಾಯ್ಡ್ ಟಿವಿ 9ಪೈ ಮೂಲಕ ಕಾರ್ಯನಿರ್ವಹಿಸಲಿವೆ. ಅಲ್ಲದೆ ಬಳಕೆದಾರರ ಜನಪ್ರಿಯ ಆಯ್ಕೆಗಳಾದ ಯೂಟ್ಯೂಬ್, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಹಾಟ್‌ಸ್ಟಾರ್ ಸೇರಿದಂತೆ ಹಲವಾರು ಅಪ್ಲಿಕೇಶನ್‌ಗಳು ಮತ್ತು ಸ್ಟ್ರೀಮಿಂಗ್ ಸೇವೆಗಳನ್ನು ಈ ಸ್ಮಾರ್ಟ್‌ಟಿವಿಗಳು ಬೆಂಬಲಿಸಲಿವೆ.

ಸಿನಿಮಾ

ಇನ್ನು ವಿಯು ಸಿನಿಮಾ ಸ್ಮಾರ್ಟ್‌ಟಿವಿಗಳು 43, 50, 55 ಇಂಚಿನ ಎಲ್‌ಇಡಿ ಡಿಸ್‌ಪ್ಲೇ ಯನ್ನು ಹೊಂದಿದ್ದು, ಪಿಕ್ಸೆಲಿಯಮ್ ಗ್ಲಾಸ್ ಟೆಕ್ನಾಲಜಿಯನ್ನು ಹೊಂದಿವೆ. ಇದು 500 ನಿಟ್‌ಗಳ ಕ್ಲೈಮ್ ಬ್ರೈಟ್‌ನೆಶ್‌ ಅನ್ನು ಹೆಚ್ಚಿಸಲಿದೆ ಎಂದು ಹೇಳಲಾಗಿದೆ. ಅಲ್ಲದೆ ಈ ಶ್ರೇಣಿಯ ಸ್ಮಾರ್ಟ್‌ಟಿವಿಗಳು ಟ್ವೀಟರ್‌ ಮತ್ತು ಫುಲ್‌ ರೇಂಜ್‌ ಸ್ಪೀಕರ್‌ಗಳ ಜೊತೆ ಸಂಯೋಜಿಸ ಬಹುದಾಗಿದೆ. ಅಲ್ಲದೆ ಟಿವಿಯ ಮುಂಭಾಗದಲ್ಲಿ ಫೈರಿಂಗ್ ಸೌಂಡ್‌ಬಾರ್ ತರಹದ ಸ್ಪೀಕರ್ ವ್ಯವಸ್ಥೆಯನ್ನ ನೀಡಲಾಗಿದ್ದು, ಇದು 40W ಸೌಂಡ್‌ ಔಟ್‌ಪುಟ್‌ ಅನ್ನ ನೀಡುತ್ತದೆ.

ಹೊಸ

ವಿಯು ಕಂಪೆನಿಯ ಈ ಹೊಸ ಸ್ಮಾರ್ಟ್‌ಟಿವಿಗಳಲ್ಲಿ 43 ಇಂಚಿನ 'ವಿಯು' ಸಿನೆಮಾ ಟಿವಿಯ ಬೆಲೆ 26,999,ರೂ ಆಗಿದೆ. 50 ಇಂಚಿನ ಆಯ್ಕೆಗೆ ರೂ. 29,999, ಇದ್ದರೆ 55 ಇಂಚಿನ 'ವಿಯು' ಸಿನೆಮಾ ಟಿವಿಯ ಬೆಲೆ 33,999 ರೂ.ಆಗಿದೆ. ಈ ಸ್ಮಾರ್ಟ್‌ ಟಿವಿಗಳ ಸರಣಿಯು ಜನವರಿ 18 ರಂದು ಅಮೆಜಾನ್ ಇಂಡಿಯಾದಲ್ಲಿ ಮಾರಾಟವಾಗುತ್ತಿದೆ, ಮತ್ತು 'ವಿಯು' ವಿತರಕರು ಮತ್ತು ಮಳಿಗೆಗಳ ಮೂಲಕ ಆಫ್‌ಲೈನ್‌ನಲ್ಲಿ ಸಹ ಲಭ್ಯವಿರುತ್ತದೆ.

Most Read Articles
Best Mobiles in India

English summary
Vu has always been a formidable name in the Indian TV market, largely thanks to affordability and features. With a strong hold on the affordable feature-filled segment, Vu has launched its latest product range to go up against manufacturers such as Xiaomi, OnePlus, Samsung, and LG. The Vu Cinema TV range, launched today by the Indian television manufacturer, is priced from Rs. 26,999 onwards, and features 4K resolution, Dolby Vision HDR, and Android TV 9 Pie in three size options - 43-inch, 50-inch, and 55-inch.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more