Subscribe to Gizbot

ಶಿಯೋಮಿ ಸ್ಮಾರ್ಟ್TVಗೆ ಸೆಡ್ಡು ಹೊಡೆಯಲಿದೆ ವಿಯೂ ಆಂಡ್ರಾಯ್ಡ್ ಟೆಲಿವಿಷನ್..! ಬೆಲೆಯಲ್ಲಿ ಭಾರಿ ಕಡಿಮೆ..!

Written By:

ದೇಶಿಯ ಟಿವಿ ಮಾರುಕಟ್ಟೆಯಲ್ಲಿ ಹೆಚ್ಚಿನ ಸದ್ದು ಮಾಡುತ್ತಿರುವ ಶಿಯೋಮಿ, ಬಜೆಟ್ ಬೆಲೆಯಲ್ಲಿ Mi TV 4A ಸ್ಮಾರ್ಟ್‌ ಟಿವಿ ಬಿಡುಗಡೆ ಮಾಡುವ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿ ಹಾಕಿತ್ತು. ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಸೃಷ್ಠಿಸಿದ ದಾಖಲೆಯನ್ನೇ ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿಯೂ ಮಾಡಿತ್ತು. ಆದರೆ ಶಿಯೋಮಿಗೆ ಸ್ಪರ್ಧೆ ನೀಡುವ ಸಲುವಾಗಿ ವಿಯೂ ಟೆಲಿವಿಷನ್ ಹೊಸ ಸ್ಮಾರ್ಟ್ ಟಿವಿ ಬಿಡುಗಡೆ ಮಾಡುತ್ತಿದೆ.

 ಶಿಯೋಮಿ ಸ್ಮಾರ್ಟ್TVಗೆ ಸೆಡ್ಡು ಹೊಡೆಯಲಿದೆ ವಿಯೂ ಆಂಡ್ರಾಯ್ಡ್ ಟೆಲಿವಿಷನ್..!

ವಿಯೂ ಟೆಲಿವಿಷನ್ ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಟಿವಿಗಳನ್ನು ಲಾಂಚ್ ಮಾಡಿದ್ದು, ಅದುವೇ ಬಜೆಟ್ ಬೆಲೆಯಲ್ಲಿ ದೊರೆಯುತ್ತಿದೆ. ಇದೇ ಮಾದರಿಯಲ್ಲಿ ಮೊದಲ ಸ್ಮಾರ್ಟ್‌ ಆಂಡ್ರಾಯ್ಡ್ ಟಿವಿಯನ್ನು ಮಾರುಕಟ್ಟೆಗೆ ಪರಿಚಯ ಮಾಡಲು ಮುಂದಾಗಿದೆ. ಇದೇ ಮಾರ್ಚ್ 13 ರಂದು ವಿಯೂ ಟೆಲಿವಿಷನ್ ಮೊದಲ ಆಂಡ್ರಾಯ್ಡ್ ಟಿವಿಯನ್ನು ಲಾಂಚ್ ಮಾಡಲಿದ್ದು, ಶಿಯೋಮಿಗೆ ಟಕ್ಕರ್ ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಾರ್ಚ್ 13ಕ್ಕೆ ಲಾಂಚ್:

ಮಾರ್ಚ್ 13ಕ್ಕೆ ಲಾಂಚ್:

ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟು ಹಾಕಲಿರುವ ವಿಯೂ ಟೆಲಿವಿಷನ್, ಮೊದಲ ಆಂಡ್ರಾಯ್ಡ್ ಟಿವಿಯನ್ನು ಮಾರ್ಚ್ 13ಕ್ಕೆ ಲಾಂಚ್ ಮಾಡಲಿದೆ. ಅಲ್ಲದೇ ಇದು ಫ್ಲಿಪ್‌ಕಾರ್ಟ್‌ನಲ್ಲಿ ಎಕ್ಸ್ ಕ್ಲೂಸಿವ್ ಆಗಿ ಮಾರಾಟವಾಗಲಿದೆ.

ಬೆಲೆಯೂ ಕಡಿಮೆ:

ಬೆಲೆಯೂ ಕಡಿಮೆ:

ಇದಲ್ಲದೇ ವಿಯೂ ಟೆಲಿವಿಷನ್ ಮಾರುಕಟ್ಟೆಯಲ್ಲಿ ಈಗಾಗಲೇ ಟಿವಿಯನ್ನು ಅತೀ ಕಡಿಮೆ ಬೆಲೆಗೆ ನೀಡುತ್ತಿದೆ. ಇದೇ ಮಾದರಿಯಲ್ಲಿ ಈ ಹೊಸ ಸ್ಮಾರ್ಟ್ ಟಿವಿಯನ್ನು ವಿವಿಧ ಆವೃತ್ತಿಯಲ್ಲಿ ನೀಡಲಿದ್ದು, ಬಜೆಟ್ ಬೆಲೆಯಲ್ಲಿಯೂ ನೀಡಲಿದೆ ಎನ್ನಲಾಗಿದೆ.

How to view all photos, pages, comments and posts you liked on Facebook (KANNADA)
ಹೊಸ ತಂತ್ರಜ್ಞಾನ:

ಹೊಸ ತಂತ್ರಜ್ಞಾನ:

ವಿಯೂ ಟೆಲಿವಿಷನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಜನರನ್ನು ತಲುಪುವ ಸಲುವಾಗಿ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಿದೆ ಎನ್ನಲಾಗಿದೆ. .ಇದರಿಂದಾಗಿ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯೂ ನಿರ್ಮಾಣವಾಗುವ ಸಾಧ್ಯತೆ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Vu to launch new Android TV series on March 13 in India. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot