Home
ಸುದ್ದಿಜಾಲ

Vu ಮಾಸ್ಟರ್‌ಪೀಸ್ QLED ಟಿವಿ ಸರಣಿ ಬಿಡುಗಡೆ! ಭಾರತದಲ್ಲಿ ಬೆಲೆ ಎಷ್ಟು?

ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ Vu ಕಂಪೆನಿಯ ಡಿವೈಸ್‌ಗಳಿಗೆ ಭಾರಿ ಡಿಮ್ಯಾಂಡ್‌ ಇದೆ. ಇದಕ್ಕೆ ಅನುಗುಣವಾಗಿ Vu ಕಂಪೆನಿ ಕೂಡ ಅನೇಕ ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಇದೀಗ ತನ್ನ ಹೊಸ Vu ಮಾಸ್ಟರ್‌ಪೀಸ್‌ ಸ್ಮಾರ್ಟ್‌ಟಿವಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 98-ಇಂಚಿನ ಮತ್ತು 85-ಇಂಚಿನ QLED ಟಿವಿಗಳನ್ನು ಪರಿಚಯಿಸಲಾಗಿದೆ.

ಹೌದು, Vu ಮಾಸ್ಟರ್‌ಪೀಸ್ 98 ಇಂಚಿನ ಮತ್ತು 85 ಇಂಚಿನ QLED ಸ್ಮಾರ್ಟ್‌ಟಿವಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟಿವಿಗಳು ಪ್ರೊಜೆಕ್ಟರ್ ಆಧಾರಿತ ಹೋಮ್ ಥಿಯೇಟರ್ ಸೆಟಪ್‌ಗಳಿಗೆ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಅಲ್ಟ್ರಾ-ಹೆಚ್‌ಡಿ, ಹೈ ಡೈನಾಮಿಕ್ ರೇಂಜ್ ಟೆಲಿವಿಷನ್‌ಗಳು ಹೆಚ್ಚುವರಿಯಾಗಿ 204W ಸ್ಪೀಕರ್ ಸಿಸ್ಟಮ್‌ ಅನ್ನು ಒಳಗೊಂಡಿವೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ಟಿವಿಗಳು ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Vu ಮಾಸ್ಟರ್‌ಪೀಸ್ QLED ಟಿವಿ ಸರಣಿ ಬಿಡುಗಡೆ! ಭಾರತದಲ್ಲಿ ಬೆಲೆ ಎಷ್ಟು?

Vu ಮಾಸ್ಟರ್‌ಪೀಸ್ QLED ಟಿವಿ ಸರಣಿ ವಿಶೇಷತೆ ಏನು?
Vu ಮಾಸ್ಟರ್‌ಪೀಸ್ QLED TV ಸರಣಿಯು 98 ಇಂಚಿನ ಮತ್ತು 85 ಇಂಚಿನ ಡಿಸ್‌ಪ್ಲೇ ಗಾತ್ರದ ಆಯ್ಕೆಯಲ್ಲಿ ಬರಲಿದೆ. ಈ ಎರಡೂ ಸ್ಮಾರ್ಟ್‌ಟಿವಿಗಳು 3840x2160 QLED ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಮಡಿದೆ. ಇನ್ನು ಡಿಸ್‌ಪ್ಲೇ 1,000 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ರೇಟಿಂಗ್ ಮತ್ತು 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಹೆಚ್ಚುವರಿಯಾಗಿ ಈ ಸ್ಮಾರ್ಟ್‌ಟಿವಿ ಆಂಟಿ-ಗ್ಲೇರ್ ಸ್ಕ್ರೀನ್‌ ಅನ್ನು ಹೊಂದಿದೆ. ಇದು ಆಂಬಿಯೆಂಟ್‌ ಲೈಟ್‌ ಪ್ರತಿಫಲನಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಜೊತೆಗೆ ಸ್ಮಾರ್ಟ್‌ಟಿವಿ ಡಿಸ್‌ಪ್ಲೇ HLG, HDR10+ ಮತ್ತು Dolby Vision ಹೈ ಡೈನಾಮಿಕ್ ರೇಂಜ್ ಫಾರ್ಮ್ಯಾಟ್‌ಗಳಿಗೆ ಬೆಂಬಲಿಸಲಿದೆ. ಇದಲ್ಲದೆ ಸ್ಮಾರ್ಟ್‌ಟಿವಿಗಳು 204W, 4.1-ಚಾನೆಲ್ ಸ್ಪೀಕರ್ ವ್ಯವಸ್ಥೆಯನ್ನು ಹೊಂದಿವೆ. ಇನ್ನು ಡಾಲ್ಬಿ ಅಟ್ಮೋಸ್‌ ಆಡಿಯೊಗೆ ಬೆಂಬಲವನ್ನು ನೀಡಲಿದ್ದು, ಟಿವಿಗಳು ಆಂಡ್ರಾಯ್ಡ್‌ ಟಿವಿ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಗೂಗಲ್‌ ಟಿವಿ ಯೂಸರ್‌ ಇಂಟರ್‌ಫೇಸ್‌ನೊಂದಿಗೆ ಕಾರ್ಯನಿರ್ವಹಿಸಲಿವೆ. ಇದರಿಂದಾಗಿ ಸ್ಮಾರ್ಟ್‌ಟಿವಿಗಳಲ್ಲಿ ಗೂಗಲ್‌ ಪ್ಲೇ ಸ್ಟೋರ್‌ ಮೂಲಕ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡಬಹುದಾಗಿದೆ.

ಇನ್ನು ಈ ಸ್ಮಾರ್ಟ್‌ಟಿವಿಗಳು ಗೂಗಲ್ ಅಸಿಸ್ಟೆಂಟ್ ಮತ್ತು ಗೂಗಲ್ ಕ್ರೋಮ್‌ಕಾಸ್ಟ್ ಇನ್‌ಬಿಲ್ಟ್‌ ಅನ್ನು ಹೊಂದಿದೆ. ಇದರಿಂದ ಸ್ಮಾರ್ಟ್‌ಟಿವಿಗಳನ್ನು ಮೊಬೈಲ್‌ನೊಂದಿಗೆ ಸುಲಭವಾಗಿ ಕನೆಕ್ಟ್‌ ಮಾಡಬಹುದಗಿದೆ. ಇನ್ನು ಸ್ಮಾರ್ಟ್‌ಟಿವಿಗಳು ಗಾತ್ರದ ಆಯ್ಕೆಗಳಿಗಿಂತ ಗಣನೀಯವಾಗಿ ಭಾರವಾಗಿರುತ್ತದೆ. ಗಾತ್ರ ಮತ್ತು ತೂಕದ ಕಾರಣ, ಟಿವಿಯನ್ನು ಟಿವಿ ಟೇಬಲ್‌ನಲ್ಲಿ ಅದರ ಸ್ಟ್ಯಾಂಡ್‌ಗಳೊಂದಿಗೆ ಆದರ್ಶವಾಗಿ ಬಳಸಬೇಕಾಗುತ್ತದೆ. ಇದರಿಂದ ಈ ಸ್ಮಾರ್ಟ್‌ಟಿವಿಯನ್ನು ನಿಮ್ಮ ಮನೆಗೆ ಒಂದು ರೀತಿಯ 'ಶೋಪೀಸ್' ಆಗಿ ಬಳಸಬಹುದಾಗಿದೆ.

ಈ ಸ್ಮಾರ್ಟ್‌ಟಿವಿಗಳು ಗಾತ್ರದಲ್ಲಿ ದೊಡ್ಡದಾಗಿರುವುದರಿಂದ ಇವುಗಳು ಒಂದು ರೀತಿಯಲ್ಲಿ ಹೋಮ್‌ ಥಿಯೇಟರ್‌ ಮಾದರಿಯಲ್ಲಿ ಕಾಣಲಿದೆ. ಇದು ಪ್ರೊಜೆಕ್ಟರ್ ಆಧಾರಿತ ಹೋಮ್ ಥಿಯೇಟರ್ ಸೆಟಪ್‌ಗಳಿಗೆ ಇದನ್ನು ಪರ್ಯಾಯವಾಗಿ ರೂಪಿಸಲಾಗಿದೆ. ಅಂದರೆ ಇದು ದೊಡ್ಡ ವೀಕ್ಷಣಾ ಸ್ಥಳಗಳಲ್ಲಿ ಗೃಹ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ವಿಯು ಕಂಪೆನಿ ಹೇಳಿಕೊಂಡಿದೆ.

Vu ಮಾಸ್ಟರ್‌ಪೀಸ್ QLED ಟಿವಿ ಸರಣಿ ಬಿಡುಗಡೆ! ಭಾರತದಲ್ಲಿ ಬೆಲೆ ಎಷ್ಟು?

ಭಾರತದಲ್ಲಿ Vu ಮಾಸ್ಟರ್‌ಪೀಸ್ QLED ಟಿವಿ ಬೆಲೆ ಮತ್ತು ಲಭ್ಯತೆ
Vu ಮಾಸ್ಟರ್‌ಪೀಸ್ QLED ಟೆಲಿವಿಷನ್ ಶ್ರೇಣಿಯ 98-ಇಂಚಿನ ಆಯ್ಕೆಯ ಬೆಲೆ 6,00,000ರೂ ಹೊಂದಿದೆ. ಆದರೆ ಇದರ 85 ಇಂಚಿನ ಆಯ್ಕೆಯ ಬೆಲೆ 3,00,000ರೂ.ಆಗಿದೆ. ಇನ್ನು ಸ್ಮಾರ್ಟ್‌ಟಿವಿಗಳು Vu ವೆಬ್‌ಸೈಟ್ ಮತ್ತು ಆನ್‌ಲೈನ್ ಸ್ಟೋರ್‌ ಮೂಲಕ ಖರೀದಿಸಬಹುದಾಗಿದೆ. ಇವುಗಳನ್ನು ಆನ್‌ಲೈನ್ ರಿಟೇಲ್‌ ಮತ್ತು ಲಾಜಿಸ್ಟಿಕ್ಸ್‌ಗಾಗಿ ಕಂಪನಿಯ ಪ್ರಮುಖ ಪಾಲುದಾರರಾಗಿರುವ ಅಮೆಜಾನ್‌ ಇಂಡಿಯಾ ಮೂಲಕ ಖರೀದಿಸುವುದಕ್ಕೆ ಸಾಧ್ಯವಾಗಲಿದೆ.

Best Mobiles in India

English summary
Vu Masterpiece QLED Series Televisions Launched in India: Price and Specifications details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+