ದೇಶಿ ಮಾರುಕಟ್ಟೆಗೆ ಲಗ್ಗೆ ಇಟ್ಟ 'ವಿಯು ಮಾಸ್ಟರ್‌ಪೀಸ್‌' ಸ್ಮಾರ್ಟ್‌ಟಿವಿ!

|

ಇತ್ತೀಚಿನ ದಿನಗಳಲ್ಲಿ ಟಿವಿ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಭಾರತದ ಟಿವಿ ವಲಯದಲ್ಲೂ ಸಾಕಷ್ಟು ಹೊಸ ಮಾದರಿಯ ಸ್ಮಾರ್ಟ್‌ಟಿವಿಗಳು ಎಂಟ್ರಿ ನೀಡಿವೆ. ಈಗಾಗಲೇ ಹಲವು ಸಂಸ್ಥೆಗಳು ಬಿನ್ನ ಮಾದರಿಯ ಸ್ಮಾರ್ಟ್‌ಟಿವಿಗಳನ್ನ ಪರಿಚಯಿಸಿವೆ. ಇನ್ನು ವಿಯು ಕಂಪೆನಿ ತನ್ನ ವೈವಿಧ್ಯಮಯ ಸ್ಮಾರ್ಟ್‌ಟಿವಿಗಳಿಗೆ ಹೆಸರುವಾಗಿದೆ. ಸದ್ಯ ಇದೀಗ ತನ್ನ ಹೊಸ ಮಾದರಿಯ ವಿಯು ಮಾಸ್ಟರ್‌ ಪೀಸ್‌ ಸ್ಮಾರ್ಟ್‌ಟಿವಿಯನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟಿವಿ 85 ಇಂಚಿನ ಗಾತ್ರದ ಡಿಸ್‌ಪ್ಲೇಯನ್ನು ಒಳಗೊಂಡಿದೆ.

ವಿಯು

ಹೌದು, ವಿಯು ಸಂಸ್ಥೆ ತನ್ನ ವಿಯು ಮಾಸ್ಟರ್‌ಪೀಸ್ ಟಿವಿಯನ್ನು ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಇದು 85-ಇಂಚಿನ ಗಾತ್ರದ ಆಯ್ಕೆಯಲ್ಲಿ ಲಭ್ಯವಿದ್ದು, 4K HDR QLED ಸ್ಕ್ರೀನ್‌ ಅನ್ನು ಹೊಂದಿದೆ. ಡಾಲ್ಬಿ ವಿಷನ್ ಎಚ್‌ಡಿಆರ್ ಸ್ಟ್ಯಾಂಡರ್ಡ್ ಮತ್ತು 50W ಇಂಟರ್‌ಬಿಲ್ಟ್‌ ಸೌಂಡ್‌ಬಾರ್‌ಗೆ ಬೆಂಬಲವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ 3,50,000. ರೂ ಬೆಲೆಯನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ಯಾವೆಲ್ಲಾ ಫೀಚರ್ಸ್‌ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಿಯು ಮಾಸ್ಟರ್‌ ಪೀಸ್‌ ಟೆಲಿವಿಷನ್

ವಿಯು ಮಾಸ್ಟರ್‌ ಪೀಸ್‌ ಟೆಲಿವಿಷನ್ 85 ಇಂಚಿನ ಅಲ್ಟ್ರಾ-ಎಚ್ಡಿ QLED ಸ್ಕ್ರೀನ್‌ನ್ನು ಒಳಗೊಂಡಿದೆ. ಇದು ಎಚ್‌ಡಿಆರ್ ಅನ್ನು ಡಾಲ್ಬಿ ವಿಷನ್ ಸ್ವರೂಪಕ್ಕೆ ಬೆಂಬಲಿಸುತ್ತದೆ. ಅಲ್ಲದೆ ಈ ಟಿವಿ ಗರಿಷ್ಠ ರಿಫ್ರೆಶ್ ರೇಟ್‌ 120Hz ಹೊಂದಿದೆ ಮತ್ತು 1,000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಶ್‌ ಅನ್ನು ಸಹ ಹೊಂದಿದೆ. ಇನ್ನು ವಿಯು ಮಾಸ್ಟರ್‌ಪೀಸ್ ಟಿವಿಯಲ್ಲಿ local dimming ಇದೆ. ಇದನ್ನು ಎಲ್‌ಇಡಿ ಬ್ಯಾಕ್‌ಲೈಟ್‌ನಲ್ಲಿ 256 ವಲಯಗಳನ್ನು ನಿರ್ಮಿಸಲಾಗಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿ ಇಂಟರ್‌ಬಿಲ್ಟ್‌ ವಿಂಡೋಸ್ 10 ಪಿಸಿಯನ್ನು ಆಪ್ಸನಲ್‌ ಅಪ್‌ಗ್ರೇಡ್ ಆಗಿದೆ.

ಸ್ಮಾರ್ಟ್‌ಟಿವಿ

ಇನ್ನು ಈ ಸ್ಮಾರ್ಟ್‌ಟಿವಿ ಇಂಟೆಲ್ ಕೋರ್ ಐ 5 ಪ್ರೊಸೆಸರ್ ಹೊಂದಿದ್ದು,ಇದು ಆಂಡ್ರಾಯ್ಡ್ ಟಿವಿ 9 ಪೈ-ಚಾಲಿತ ಸ್ಮಾರ್ಟ್ ಟೆಲಿವಿಷನ್ ಆಗಿದೆ. ಕ್ಯಾಮೆರಾ, ಇಂಟರ್‌ಬಿಲ್ಟ್‌ ಟ್ರ್ಯಾಕ್‌ಪ್ಯಾಡ್‌ನೊಂದಿಗೆ ವಾಯರ್‌ಲೆಸ್ ಕೀಬೋರ್ಡ್ ಮತ್ತು ವಾಯರ್‌ಲೆಸ್ ಮೈಕ್ರೊಫೋನ್ ಸಹ ಟಿವಿಯನ್ನು ಉತ್ಪಾದಕತೆ ಮತ್ತು ಕೆಲಸ-ಸಂಬಂಧಿತ ಕಾರ್ಯಗಳಿಗೆ ಸೂಕ್ತವಾಗಿಸುತ್ತದೆ. ಆಂಡ್ರಾಯ್ಡ್ ಟಿವಿ ಕಾರ್ಯವು ಪ್ರತ್ಯೇಕ ಕ್ವಾಡ್-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಅಪ್ಲಿಕೇಶನ್‌ಗಳು ಮತ್ತು ಅಪ್ಲಿಕೇಶನ್ ಡೇಟಾಗಾಗಿ 2GB RAM ಮತ್ತು 16GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ.

ಸ್ಮಾರ್ಟ್‌ಟಿವಿ

ಈ ಸ್ಮಾರ್ಟ್‌ಟಿವಿಯ ಮುಂಭಾಗದಲ್ಲಿ ನಿರ್ಮಿಸಲಾದ ಸೌಂಡ್‌ಬಾರ್ ಸ್ಪೀಕರ್ ಆಗಿದೆ. ಆರು-ಸ್ಪೀಕರ್ ವ್ಯವಸ್ಥೆಯು 50W ನ ರೇಟ್ ಮಾಡಲಾದ ಧ್ವನಿ ಉತ್ಪಾದನೆಯನ್ನು ಹೊಂದಿದೆ. ಅಲ್ಲದೆ ಡಾಲ್ಬಿ MS12 ಮತ್ತು DTS: X ಸ್ವರೂಪಗಳಿಗೆ ಬೆಂಬಲ ನೀಡುತ್ತದೆ. ಆಂಡ್ರಾಯ್ಡ್ ಟಿವಿ 9 ಪೈನಲ್ಲಿ ವಿಯು ಮಾಸ್ಟರ್‌ಪೀಸ್ ಟಿವಿ ಚಾಲನೆಯಲ್ಲಿರುವಾಗ, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಹಾಟ್‌ಸ್ಟಾರ್ ಸೇರಿದಂತೆ ಎಲ್ಲಾ ಪ್ರಮುಖ ಅಪ್ಲಿಕೇಶನ್‌ಗಳು ಮತ್ತು ಸ್ಟ್ರೀಮಿಂಗ್ ಸೇವೆಗಳಿಗೆ ಬೆಂಬಲಿಸಲಿದೆ.ಇನ್ನು ಈ ಸ್ಮಾರ್ಟ್‌ಟಿವಿ ಕಪ್ಪು ಮತ್ತು ‘ಅರ್ಮಾನಿ ಗೋಲ್ಡ್' ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ.

Best Mobiles in India

Read more about:
English summary
Vu Masterpiece TV, the latest flagship television from the Indian company, has been launched at Rs. 3,50,000.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X