Home
ಸುದ್ದಿಜಾಲ

ಭಾರತದಲ್ಲಿ ಲಾಂಚ್‌ ಆಯ್ತು 'ವಿಯು' ಪ್ರೀಮಿಯಂ 4K TV!..ಬೆಲೆ 24,999ರೂ.ಗಳು.!!

ಇತ್ತೀಚಿನ ದಿನಗಳಲ್ಲಿ ಟಿವಿ ಜಗತ್ತು ಬಹಳ ವಿಸ್ತಾರವಾಗಿದೆ. ಸಿಕ್ಕಾಪಟ್ಟೆ ಕಲರ್‌ಫುಲ್‌ ಆಗಿರುವ ಟಿವಿ ಜಗತ್ತಿನಲ್ಲಿ ಹಲವಾರು ಕಂಪೆನಿಗಳು ವೈವಿಧ್ಯಮಯ ಟಿವಿಗಳನ್ನ ಪರಿಚಯಿಸಿವೆ. ಇವುಗಳಲ್ಲಿ ವಿಯು ಕಂಪೆನಿ ಕೂಡ ಒಂದಾಗಿದ್ದು, ತನ್ನ ಭಿನ್ನ ವಿಭಿನ್ನ ಆಕರ್ಷಕ ಮಾದರಿಯ ಸ್ಮಾರ್ಟ್‌ಟಿವಿಗಳನ್ನ ಪರಿಚಯಿಸಿದೆ. ಸದ್ಯ ಮಾರುಕಟ್ಟೆಯಲ್ಲಿ 'ವಿಯು'(VU) ಕಂಪೆನಿಯ ಟಿವಿ ಸರಣಿಗಳಿಗೆ ಉತ್ತಮ ಜನಪ್ರಿಯತೆ ಇದ್ದು, ಇದೀಗ ಹೊಸ ಸ್ಮಾರ್ಟ್‌ ಟಿವಿಯನ್ನ ವಿಯು ಮಾರುಕಟ್ಟೆಗೆ ಪರಿಚಯಿಸಿದೆ.

ಭಾರತದಲ್ಲಿ ಲಾಂಚ್‌ ಆಯ್ತು 'ವಿಯು' ಪ್ರೀಮಿಯಂ 4K TV!..ಬೆಲೆ 24,999ರೂ.ಗಳು.!!

ಹೌದು, ಜನಪ್ರಿಯ ಸ್ಮಾರ್ಟ್‌ಟಿವಿ ತಯಾರಕ ವಿಯು(VU) ಸಂಸ್ಥೆ ತನ್ನ ಹೊಸ ಮಾದರಿಯ ಪ್ರೀಮಿಯಂ 4K ಆಂಡ್ರಾಯ್ಡ್‌ ಟಿವಿಯನ್ನ ಭಾರತದಲ್ಲಿ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್‌ ಟಿವಿ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್‌ಟಿವಿ 43 ಇಂಚು, 50 ಇಂಚು ಮತ್ತು 55 ಇಂಚಿನ ಮೂರು ಮಾದರಿಯ ಗಾತ್ರಗಳಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಟಿವಿಗಳನ್ನ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿಯ ವಿಶೇಷತೆಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ವಿಯು ಪ್ರೀಮಿಯಂ 4K ಟಿವಿ ಉತ್ತಮ ವಿನ್ಯಾಸವನ್ನ ಹೊಂದಿದ್ದು, ಇದು ಆಂಡ್ರಾಯ್ಡ್‌ಟಿವಿ 9ಪೈ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಸದ್ಯ ಲಭ್ಯವಿರುವ ಎಲ್ಲಾ ಪ್ರಮುಖ ಅಪ್ಲಿಕೇಶನ್‌ಗಳು ಮತ್ತು ಸ್ಟ್ರೀಮಿಂಗ್ ಸೇವೆಗಳಾದ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಹಾಟ್‌ಸ್ಟಾರ್ ಮತ್ತು ಯೂಟ್ಯೂಬ್‌ಗಳಿಗೆ ಬೆಂಬಲವನ್ನು ನೀಡುತ್ತದೆ. ಇನ್ನು ಈ ಸ್ಮಾರ್ಟ್‌ಟಿವಿಯ ಮೂರು ಮಾದರಿಗಳು ಕೂಡ 4k ಎಲ್‌ಇಡಿ ಟಿವಿಗಳೇ ಆಗಿವೆ.

ಭಾರತದಲ್ಲಿ ಲಾಂಚ್‌ ಆಯ್ತು 'ವಿಯು' ಪ್ರೀಮಿಯಂ 4K TV!..ಬೆಲೆ 24,999ರೂ.ಗಳು.!!

ಅಲ್ಲದೆ ವಿಯು ಪ್ರೀಮಿಯಂ 4K ಎಲ್‌ಇಡಿ ಸ್ಮಾರ್ಟ್‌ಟಿವಿ 3840x2160 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್‌ಟಿವಿಯ ಸ್ಕ್ರೀನ್‌ 400 ನಿಟ್‌ ಬ್ರೈಟ್‌ನೆಶ್‌ ರೇಟಿಂಗ್ ಅನ್ನು ಹೊಂದಿದೆ. ಇದಲ್ಲದೆ ಇದು ಡಾಲ್ಬಿ ವಿಷನ್ ಸ್ಟ್ಯಾಂಡರ್ಡ್ ಜೊತೆಗೆ ಎಚ್‌ಡಿಆರ್ ಅನ್ನು ಸಹ ಬೆಂಬಲಿಸುತ್ತದೆ. ಇನ್ನು ಈ ಹೊಸ ಆವೃತ್ತಿಯ ಸ್ಮಾರ್ಟ್‌ಟಿವಿಯು
ಇತ್ತೀಚೆಗೆ ಬಿಡುಗಡೆಯಾದ ವಿಯು ಕಂಪೆನಿಯ ಸಿನೆಮಾ ಟಿವಿ ಆವೃತ್ತಿಯನ್ನೇ ಹೋಲುತ್ತದೆ, ಆದರೆ ಈ ಸ್ಮಾರ್ಟ್‌ಟಿವಿಗಳ ನಡುವಿನ ವಿನ್ಯಾಸ ಹಾಗೂ ಸೌಂಡ್‌ ಔಟ್‌ಪುಟ್‌ನಲ್ಲಿ ಬದಲಾವಣೆ ಕಂಡು ಬರಲಿದೆ.

ಇನ್ನು ಪ್ರೀಮಿಯಂ 4K ಟಿವಿ ಆವೃತ್ತಿಯ ಮೂರು ಗಾತ್ರದ ಟಿವಿಗಳು ಕೂಡ 30W ಸೌಂಡ್‌ ಔಟ್‌ಪುಟ್‌ ಅನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್‌ಟಿವಿಯು ಸಾಮಾನ್ಯ ರಿಮೋಟ್‌ಗಳಿಗಿಂತ ಕಡಿಮೆ ಬಟನ್‌ಗಳನ್ನು ಹೊಂದಿರುವ ಸಣ್ಣ ಗಾತ್ರದ ಹಾಗೂ ತೆಳುವಾದ ರಿಮೋಟ್ ಅನ್ನು ಹೊಂದಿದೆ. ಇದಲ್ಲದೆ ಈ ರಿಮೋಟ್‌ನಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಯೂಟ್ಯೂಬ್ ಮತ್ತು ಹಾಟ್‌ಸ್ಟಾರ್‌ಗಾಗಿ ಹಾಟ್‌ ಕೀಗಳಿವೆ, ಜೊತೆಗೆ ಗೂಗಲ್ ಅಸಿಸ್ಟೆಂಟ್ ಬಟನ್ ಮತ್ತು ನ್ಯಾವಿಗೇಷನ್‌ಗಾಗಿ ಡಿ-ಪ್ಯಾಡ್ ಇದೆ.

ಅಲ್ಲದೆ ಇತರ ಆಂಡ್ರಾಯ್ಡ್ ಟಿವಿ ಡಿವೈಸ್‌ಗಳಂತೆ ವಿಯು ಪ್ರೀಮಿಯಂ 4K ಟಿವಿ ಆವೃತ್ತಿಯಲ್ಲಿ ಗೂಗಲ್ ಬೆಂಬಲಕ್ಕಾಗಿ ಇಂಟರ್‌ಬಿಲ್ಟ್‌ Chromecast ಅನ್ನು ಸಹ ಹೊಂದಿದೆ. ಟಿವಿಯ ಸ್ಪೀಕರ್ ಸಿಸ್ಟಮ್‌ಗಾಗಿ ಡಾಲ್ಬಿ ಆಡಿಯೊ ಟ್ಯೂನಿಂಗ್ ಸಹ ಇದೆ. ಸದ್ಯ ವಿಯು ಪ್ರೀಮಿಯಂ 4K 43 ಇಂಚಿನ ಟಿವಿಯ ಬೆಲೆ 24,999,ರೂ.ಆಗಿದ್ದರೆ, 50 ಇಂಚಿನ ಟಿವಿ 27,999,ರೂ ಮತ್ತು 55 ಇಂಚಿನ ಆಯ್ಕೆಯ ಟಿವಿಯ ಬೆಲೆ 31,999 ರೂ. ಆಗಿದೆ. ಇನ್ನು ವಿಯು ಪ್ರೀಮಿಯಂ 4K ಟಿವಿ ಆವೃತ್ತಿಯನ್ನು ಫ್ಲಿಪ್‌ಕಾರ್ಟ್ ನಲ್ಲಿ ಖರೀದಿಸಬಹುದಾಗಿದೆ.

Best Mobiles in India

English summary
The Premium 4K TV range will be available to buy on Flipkart.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+