ISRO Vyom Mitra: ಇಸ್ರೋದಿಂದ ಬಾಹ್ಯಾಕಾಶಕ್ಕೆ ಜಿಗಿಯಲಿದೆ ರೋಬೋಟ್‌!

|

ಭಾರತದ ಹೆಮ್ಮೆಯ ಬಾಹ್ಯಕಾಶ ಸಂಸ್ಥೆ ಇಸ್ರೋ 2021ರಲ್ಲಿ ಮಾನವ ಸಹಿತ ಗಗನಯಾನಕ್ಕೆ ಸಿದ್ದತೆ ನಡೆಸ್ತಿರೋದು ಗೊತ್ತೆ ಇದೆ. ಇದರ ಮೊದಲ ಭಾಗವಾಗಿ ಈಗಾಗಲೇ ರಷ್ಯಾದಲ್ಲಿ ಗಗನಯಾನ ಕೈಗೊಳ್ಳುವವರಿಗೆ ತರಬೇತಿ ನೀಡಲಾಗ್ತಿದೆ. ಸದ್ಯ ಗಗನಯಾನಕ್ಕೆ ಸಂಬಂದಿಸಿದ ಪೂರ್ವ ಸಿದ್ದತೆಗಳನ್ನ ಪರಿಶೀಲಿಸ್ತಿರೋ ಇಸ್ರೋ, ಗಗನಯಾನಿಗಳನ್ನ ಬಾಹ್ಯಕಾಶಕ್ಕೆ ಕಳಿಸುವ ಮುನ್ನ ಮಾನವರೂಪದ ರೋಬೋಟ್‌ ಒಂದನ್ನ ಗಗನಯಾನಕ್ಕೆ ಕಳುಹಿಸಲು ಪ್ಲ್ಯಾನ್‌ ರೂಪಿಸಿದೆ.

ಹೌದು

ಹೌದು, ಗಗನಯಾನಕ್ಕೆ ಸಂಬಂದಿಸಿದಂತೆ ಇಸ್ರೋ ಸಂಸ್ಥೆ ನಡೆಸಿದ ಕಾರ್ಯಕ್ರಮದಲ್ಲಿ ಇಸ್ರೋ ಅಧ್ಯಕ್ಷ ಕೆ.ಶಿವನ್‌ ರೋಬೋಟ್‌ ಅನ್ನ ಬಾಹ್ಯಾಕಶಕ್ಕೆ ಕಳುಹಿಸುವ ವಿಚಾರವನ್ನ ತಿಳಿಸಿದ್ದಾರೆ. ಈಗಾಗ್ಲೆ ಗಗನಯಾನಿಗಳು ಗಗನಯಾತ್ರೆ ಕೈಗೊಳ್ಳುವ ಮೊದಲು ಪೂರ್ವತಯಾರಿಗಾಗಿ ಮಹಿಳಾ ರೋಬೋಟ್‌ ಒಂದನ್ನ ಸಿದ್ದಪಡಿಸಿದೆ. ಈ ಮಾನವ ರೂಪದ ಮಹಿಳಾ ರೋಬೋಟ್‌ ಅನ್ನ ಕಾರ್ಯಕ್ರಮದಲ್ಲಿ ಪರಿಚಯಿಸಲಾಗಿದ್ದು, ಈ ರೋಬೋಟ್‌ಗೆ ವ್ಯೋಮ್ ಮಿತ್ರ ಎಂದು ಹೆಸರಿಸಲಾಗಿದೆ.

ವ್ಯೋಮಮಿತ್ರ

ವ್ಯೋಮಮಿತ್ರ

ಬೆಂಗಳೂರಿನಲ್ಲಿ ನಡೆದ ಮಾನವ ಗಗನಯಾನ, ಪರಿಶೋದನೆ ಕಾರ್ಯಕ್ರಮದಲ್ಲಿ ಈ ರೋಬೋಟ್‌ ಅನ್ನ ಪರಿಚಯಿಸಲಾಗಿದ್ದು, ಸ್ವತಃ ರೋಬೋಟ್‌ ತನ್ನನ್ನ ತಾನೇ ಪರಿಚಯಿಸಿಕೊಂಡಿದೆ. ಹಲೋ.. ನಾನು ವ್ಯೋಮಮಿತ್ರ ಮೊದಲ ಮಾನವ ರಹಿತ ಗಗನಯಾತ್ರೆ ಯೋಜನೆಗಾಗಿ ನನ್ನನ್ನು ಸಿದ್ದಪಡಿಸಲಾಗಿದೆ. ಗಗನಯಾನದ ಬಗ್ಗೆ ಮುನ್ನೆಚ್ಚರಿಕೆ ನೀಡುವುದು, ಹಾಗೂ ಜೀವ ರಕ್ಷಣ ಕಾರ್ಯಗಳಲ್ಲಿ ಸಹಕರಿಸುತ್ತೇನೆ. ಸ್ವಿಚ್‌ ಪ್ಯಾನಲ್‌ ಕಾರ್ಯ ಸೇರಿದಂತೆ ಹಲವು ಚಟುವಟಿಕೆಗಳನ್ನು ನಡೆಸಬಲ್ಲೆ, ಅಂತಾ ಹೇಳೊ ಮೂಲಕ ತನ್ನ ಸ್ವವಿವರವನ್ನ ‌ಈ ರೋಬೋಟ್‌ನೀಡಿದೆ.

ವ್ಯೋಮಮಿತ್ರದ ಕಾರ್ಯವೇನು?

ವ್ಯೋಮಮಿತ್ರದ ಕಾರ್ಯವೇನು?

ಇನ್ನು ಈ ರೋಬೋಟ್‌ಗೆ ಸಂಸ್ಕೃತದ ವ್ಯೋಮ ಮತ್ತು ಮಿತ್ರ ಪದಗಳನ್ನ ಸೇರಿಸಿ ವ್ಯೋಮಮಿತ್ರ ಎಂದು ಹೆಸರಿಸಿರೋದು ಕೂಡ ಇಂಟರೆಸ್ಟಿಂಗ್‌ ಆಗಿದ್ದು, ವ್ಯೋಮಮಿತ್ರ ಎಂದರೆ ಬಾಹ್ಯಾಕಾಶದ ಗೆಳೆಯ ಎಂದು ಹೇಳಬಹುದಾಗಿದೆ. ಸದ್ಯ ಗಗನಯಾನದ ಬಗ್ಗೆ ಮಾಹಿತಿ ನೀಡಿರುವ ಇಸ್ರೋ ಮುಖ್ಯಸ್ಥ ಕೆ.ಶಿವನ್‌ ಈ ರೋಬೋಟ್‌ ಮಾನವ ಸಹಿತ ಗಗನಯಾನಕ್ಕೂ ಮುನ್ನವೇ ಇದನ್ನ ಬಾಹ್ಯಕಾಶಕ್ಕೆ ಕಳಿಸುವುದರಿಂದ ಬಾಹ್ಯಕಾಶದಲ್ಲಿ ಜೀವ ಪರಿಸರ ವ್ಯವಸ್ಥೆಗೆ ಹೇಗೆ ಹೊಂದಿಕೊಳ್ಳಬೇಕು ಅನ್ನುವುದರ ಬಗ್ಗೆ ಮಾಹಿತಿ ನೀಡಲಿದೆ ಎಂದು ತಿಳಿಸಿದ್ದಾರೆ.

ಬಾಹ್ಯಕಾಶಕ್ಕೆ ಹಾರೋದು ಯಾವಾಗ?

ಬಾಹ್ಯಕಾಶಕ್ಕೆ ಹಾರೋದು ಯಾವಾಗ?

ಅಲ್ಲದೆ ಈಗಾಗಲೇ 2021ರ ಡಿಸೆಂಬರ್‌ ಅಂತ್ಯದಲ್ಲಿ ಗಗನಯಾನವನ್ನ ಕೈ ಗೊಳ್ಳಲು ಉದ್ದೇಶಿಸಿರುವುದರಿಂದ ಇದಕ್ಕೂ ಮೊದಲೇ ಎರಡು ಬಾರಿ ಮಾನವ ರಹಿತ ಗಗನಯಾನವನ್ನ ಪೂರ್ವ ಸಿದ್ದತೆಗಾಗಿ ಮಾಡಲಾಗುತ್ತೆ. ಆ ವೇಳೆಯಲ್ಲಿ ಈ ರೋಬೋಟ್‌ ತುಂಬಾ ಉಪಯುಕ್ತವಾಗಲಿದೆ ಅನ್ನೊ ಮಾಹಿತಿಯನ್ನ ಇಸ್ರೋ ತಿಳಿಸಿದೆ. ಅಷ್ಟೇ ಅಲ್ಲ ಮಾನವರಂತಯೇ ಕಾಣುವ ಈ ರೋಬೋಟ್‌ ಗಗನಯಾತ್ರಿಗಳ ಜೊತೆ ಒಡನಾಡಿಯಂತೆಯೇ ಕಾರ್ಯನಿರ್ವಹಿಸಲಿದ್ದು, ಮನುಷ್ಯನ ಜೊತೆ ಸುಲಭವಾಗಿ ಸಂಭಾಷಣೆ ನಡೆಸಲಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್‌ ಹೇಳಿದ್ದಾರೆ.

ವ್ಯೋಮಮಿತ್ರದ ವಿಶೇಷತೆಯೇನು?

ವ್ಯೋಮಮಿತ್ರದ ವಿಶೇಷತೆಯೇನು?

ಇನ್ನು ಇಸ್ರೋ ಸಿದ್ದಪಡಿಸಿರುವ ಈ ರೋಬೋಟ್‌ ಬಾಹ್ಯಾಕಾಶಕ್ಕೆ ಹಾರಲಿರುವ ಭಾರತದ ಮೊದಲ ಮಹಿಳಾ ರೋಬೋಟ್‌ ಎನಿಸಿಕೊಳ್ಳಲಿದೆ. ಅಷ್ಟೇ ಅಲ್ಲ ಭಾರತೀಯ ಇಸ್ರೋ ಸಂಸ್ಥೆಯಿಂದ ಗಗನಯಾನ ಕೈಗೊಳ್ಳುವ ಮೊದಲ ಮಹಿಳೆ ಅನ್ನೊ ಖ್ಯಾತಿಯನ್ನ ಸಹ ಪಡೆದುಕೊಳ್ಳಲಿದೆ. ಗಗನಯಾತ್ರಿಗಳಿಗೆ ಸೂಕ್ತ ಮಾಹಿತಿ ನೀಡುವ ಮೂಲಕ ಅವರ ಜೀವ ರಕ್ಷಕನಾಗಿ ಕಾರ್ಯನಿರ್ವಹಸಿಲಿದೆ. ಬಾಹ್ಯಾಕಾಶದಲ್ಲಿ ಗಗನಯಾನಿಗಳ ಪಾಲಿಗೆ ಜೀವ ಮಿತ್ರ ಅಂತಾನೇ ಹೇಳಬಹುದು.

Best Mobiles in India

English summary
'Vyom Mitra' or a friend in the sky, is capable of conversing with astronauts, recognising them, and responding to their queries.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X