ಸ್ಮಾರ್ಟ್ ಫೋನ್ ಚಾರ್ಜ್ ಮಾಡಲು ಬಂದಿದೆ ಸೋಲರ್ ಚಾರ್ಜರ್
ಪವರ್ ಕಟ್ ಪವರ್ ಕಟ್. ಸರ್ಕಾರದಿಂದ ಈ ಹೇಳಿಕೆ ಹೊರ ಬಂದ್ರೆ ಸಾಕು ನಮ್ಮ ಎಲ್ಲಾ ಕೆಲಸಗಳು ನಿಂತು ಹೋಗುತ್ತವೆ. ಮನೆಯ ಟಿವಿ. ಫ್ರಿಜ್, ಮಿಕ್ಸಿ .ಕೆಲಸ ಮಾಡುವುದೇ ಇಲ್ಲ.ಆದ್ರೂ ನಾವು ಈ ಯಂತ್ರವನ್ನೇ ನೆಚ್ಚಿಕೊಂಡು ಇರುವುದಿಲ್ಲ. ಬೇರೆ ಏನಾದ್ರೂ ಮಾಡಿ ನಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತೇವೆ. ಆದರೆ ಸ್ಮಾರ್ಟ್ ಫೋನ್ ಚಾರ್ಜ್, ಲ್ಯಾಪ್ ಟಾಪ್ ವಿಷ್ಯಕ್ಕೆ ಬಂದಾಗ ಏನು ಮಾಡುವುದು ಎಂಬ ಆಲೋಚನೆ ಬರುತ್ತದೆ ಅಲ್ಲವೇ. ಆದರೆ ಇನ್ನು ಈ ಚಿಂತೆ ಬೇಡ ನಿಮ್ಮ ಸ್ಮಾರ್ಟ್ ಫೋನ್ ಲ್ಯಾಪ್ ಟಾಪ್ ಚಾರ್ಜ್ ಮಾಡಲು ಒಂದು ಹೊಸ ಉಪಕರಣ ಬಂದಿದೆ. ಅದೇ ವಕವಕ ಸೋಲರ್ ಚಾರ್ಜರ್.

ನೆದರ್‌ಲ್ಯಾಂಡ್‌ನ ವಕವಕ ಸಂಸ್ಥೆ ಹೊಸ ಚಾರ್ಜರ್ ಸಾಧನವನ್ನು ಕಂಡುಹಿಡಿದಿದೆ. ಈ ಸಾಧನವನ್ನು ನೀವು ಖರೀದಿಸಿದ್ರೆ ನಿಮ್ಮ ಸ್ಮಾರ್ಟ್ ಫೋನ್ 8 ಗಂಟೆಗಳ ಕಾರ್ಯನಿರ್ವಹಿಸುತ್ತದೆ . ವಿದೇಶದಲ್ಲಿ ಇದು ಈಗಾಗ್ಲೇ ಜನಪ್ರಿಯಯವಾಗಿದ್ದು 50 ದೇಶಗಳಲ್ಲಿ ಈ ಸಾಧನವನ್ನು ಜನ ಬಳಸುತ್ತಿದ್ದಾರೆ. ಹೇಗೆ ಈಗ ನೀವು ಉಪಯೋಗಿಸುತ್ತಿರುವ ಸೋಲರ್ ಪ್ಯಾನಲ್ ಇದೆಯೋ ಅದೇ ರೀತಿಯಲ್ಲಿ ಈ ಸಾಧನದಲ್ಲಿ ಸಣ್ಣ ಸಣ್ಣ ಕೋಶಗಳಿವೆ. ಈ ಕೋಶದಲ್ಲಿ ಸಂಗ್ರಹವಾದ ವಿದ್ಯುತ್ ಸಣ್ಣ ಬ್ಯಾಟರಿಯಲ್ಲಿ ಸಂಗ್ರಹವಾಗುತ್ತದೆ. ಇದನ್ನು ನೀವು ನಿಮ್ಮ ಸ್ಮಾರ್ಟ್ ಫೋನ್‌ಗೆ ಚಾರ್ಜರ್ ಮೂಲಕ ಕನೆಕ್ಟ್ ಮಾಡಿದ್ರೆ ನಿಮ್ಮ ಮೊಬೈಲ್ ಚಾರ್ಜ್ ಆಗುತ್ತದೆ.
ಈ ಚಾರ್ಜರ್ ಈಗ ವಿಶ್ವದಲ್ಲೇ ಅತ್ಯುತ್ತಮ ಚಾರ್ಜರ್ ಎಂದೇ ಪ್ರಖ್ಯಾತಿ ಗಳಿಸಿದೆ. ಆದರೆ ಈ ವಕವಕ ಚಾರ್ಜರ್ ಭಾರತದ ಮಾರುಕಟ್ಟೆಗೆ ಯಾವಾಗ ಬರುತ್ತದೆ ಎಂಬುದನ್ನು ಕಂಪೆನಿ ಇನ್ನೂ ಸ್ಪಷ್ಟಪಡಿಸಿಲ್ಲ. ಒಟ್ಟಿನಲ್ಲೂ ಈ ಚಾರ್ಜರ್ ಬಂದರೆ ಪ್ರವಾಸ, ಟ್ರಕ್ಕಿಂಗ್ ಮಾಡುವ ಹವ್ಯಾಸವುಳ್ಳವರಿಗೆ ಒಂದು ವರದಾನವಾಗಲಿದೆ.


Click it and Unblock the Notifications