ವಾಲ್‌ಮಾರ್ಟ್ ತೆಕ್ಕೆಗೆ ಪ್ಲಿಪ್‌ಕಾರ್ಟ್: ಎಷ್ಟು ಕೋಟಿ ಡೀಲ್ ಗೊತ್ತಾ..?
ಭಾರೀ ಕುತೂಹಲಕ್ಕೆ ಕಾರಣವಾಗಿದ್ದು, ದೇಶಿಯ ಮೂಲದ ಇ-ಕಾರ್ಮಸ್ ಫ್ಲಿಪ್‌ಕಾರ್ಟ್ ಮಾರಾಟವೂ ಅಂತಿಮ ಹಂತಕ್ಕೆ ತಲುಪಿದ್ದು, ಅಮೆರಿಕಾ ಮೂಲದ ರಿಟೇಲ್ ದೈತ್ಯ ವಾಲ್‌ವಾರ್ಟ್, ಫ್ಲಿಪ್‌ಕಾರ್ಟ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ. ಈ ಮೂಲಕ ಅಮೆಜಾನ್ ಪ್ರಯತ್ನಕ್ಕೆ ಪೆಟ್ಟು ನೀಡಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಶೇ.51ಕ್ಕೂ ಹೆಚ್ಚು ಶೇರ್ ಗಳನ್ನು ಕೊಳ್ಳುವ ಮೂಲಕ ವಾಲ್‌ಮಾರ್ಟ್ ಅಧಿಕೃತವಾಗಿ ಫ್ಲಿಪ್‌ಕಾರ್ಟ್ ಮೇಲೆ ಹಿಡಿತವನ್ನು ಸಾಧಿಸಲಿದೆ. ಅಲ್ಲದೇ ಈ ಮೂಲಕ ಭಾರತೀಯ ಇ-ಕಾರ್ಮಸ್ ಮಾರುಕಟ್ಟೆಯೂ ಎರಡು ಅಮೆರಿಕಾದ ದೈತ್ಯ ಕಂಪನಿಗಳ ಪಾಲಾಗಲಿದ್ದು, ವಿದೇಶಿ ಕಂಪನಿಗಳೇ ಸ್ವಾಮ್ಯತೆಯನ್ನು ಹೊಂದಿದಾಂತಾಗುವುದು. ಅಲ್ಲದೇ ಹೆಚ್ಚಿನ ಲಾಭಂಶವು ವಿದೇಶಗಳಿಗೆ ಹರಿದು ಹೋಗುವ ಸಾಧ್ಯತೆ ಇದೆ.

ಶೇ.51ಕ್ಕಿಂತಲೂ ಹೆಚ್ಚು ಹೂಡಿಕೆ:
ಅಮೆರಿಕದ ರಿಟೇಲ್ ದೈತ್ಯ ವಾಲ್‌ಮಾರ್ಟ್, ಬೆಂಗಳೂರು ಮೂಲದ ಇ-ಕಾಮರ್ಸ್ ದಿಗ್ಗಜ ಫ್ಲಿಪ್‌ಕಾರ್ಟ್‌ನ ಶೇ.51ಕ್ಕಿಂತ ಹೆಚ್ಚು ರಷ್ಟು ಷೇರುಗಳನ್ನು ಖರೀದಿಸುವ ಸಂಬಂಧ ಮುಂದಿನ ವಾರ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ.

ಫ್ಲಿಪ್‌ಕಾರ್ಟ್‌ಗೆ ಭೇಟಿ
ವಾಲ್‌ಮಾರ್ಟ್ ಕಳೆದ ಹಲವು ತಿಂಗಳಿನಿಂದ ಫ್ಲಿಪ್‌ಕಾರ್ಟ್ ಖರೀದಿಸಲುವಾಗಿ ಮಾತುಕತೆ ನಡೆಸುತ್ತಿದೆ. ಇದಕ್ಕಾಗಿ ವಾಲ್‌ಮಾರ್ಟ್ ನಿಯೋಗವು ಫ್ಲಿಪ್‌ಕಾರ್ಟ್ ಪ್ರಧಾನ ಕಚೇರಿಗೆ ಒಂದು ಸುತ್ತಿನಲ್ಲಿ ಭೇಟಿಯನ್ನು ನೀಡಿತ್ತು ಎನ್ನಲಾಗಿದೆ.


ಅಮೆಜಾನ್ ಡಾಟ್‌ಕಾಮ್‌ಗೆ ಪೈಪೋಟಿ
ಈಗಾಗಲೇ ಅಮೆರಿಕಾರದಲ್ಲಿ ಅಮೆಜಾನ್‌ಗೆ ಪ್ರಬಲ ಪೈಪೋಟಿಯನ್ನು ನೀಡುತ್ತಿರುವ ವಾಲ್‌ಮಾರ್ಟ್, ಇದರೊಂದಿಗೆ ಭಾರತದಲ್ಲಿ ಅಮೆಜಾನ್‌ಗೆ ಪೈಪೋಟಿ ನೀಡಲು ಪ್ಲಿಪ್‌ಕಾರ್ಟ್ ಖರೀದಿಗೆ ಮುಂದಾಗಿದೆ ಎನ್ನಲಾಗಿದೆ. ಮುಂದಿನ ವಾರದಲ್ಲಿ ಖರೀದಿಯ ಪ್ರಕ್ರಿಯೆಗಳು ಮುಗಿಯುವ ಸಾಧ್ಯತೆ ಇದೆ.

12 ಬಿಲಿಯನ್ ಡಾಲರ್:
ಭಾರತದಲ್ಲಿ ಅಮೆಜಾನ್‌ಗೆ ಪ್ರಬಲ ಪೈಪೋಟಿಯನ್ನು ನೀಡುವ ಸಲುವಾಗಿ ವಾಲ್‌ಮಾರ್ಟ್, ಫ್ಲಿಪ್‌ಕಾರ್ಟ್‌ನಲ್ಲಿ ಸುಮಾರು 12 ಬಿಲಿಯನ್ ಅಮೆರಿಕಾನ್ ಡಾಲರ್ ಅನ್ನು ಹೂಡಿಕೆ ಮಾಡುತ್ತಿದೆ ಎನ್ನಲಾಗಿದೆ.

2007ರಲ್ಲಿ ಆರಂಭ:
ಸಚಿನ್ ಮತ್ತು ಬಿನ್ನಿ ಬನ್ಸಾಲ್ ಎನ್ನುವವರು ಬೆಂಗಳೂರಿನಲ್ಲಿ 2007ರಲ್ಲಿ ಫ್ಲಿಪ್‌ಕಾರ್ಟ್ ಅನ್ನು ಸ್ಥಾಪಿಸಿದ್ದರು. ಇದಕ್ಕೂ ಮೊದಲು ಈ ಇಬ್ಬರು ಅಮೆಜಾನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಕೆಲಸ ಬಿಟ್ಟು ಭಾತರದ ಅತೀ ದೊಡ್ಡ ಇಕಾರ್ಮಸ್ ಸೈಟ್ ಅನ್ನು ಹುಟ್ಟಿಹಾಕಿದರು.


Click it and Unblock the Notifications








