ಫೇಸ್‌ಬುಕ್ ಡಿಲೀಟ್‌ಮಾಡಿ : ಫೋನ್ ಬಾಳಿಕೆ ಹೆಚ್ಚಿಸಿ
ಸ್ಮಾರ್ಟ್‌ಫೋನ್ ಬ್ಯಾಟರಿ ಪವರ್ ದೀರ್ಘಕಾಲ ಉಳಿಯುವಂತೆ ನೋಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಹಲವಾರು ಮಾಹಿತಿಯನ್ನು ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ನೀವು ಓದಿರಬಹುದು. ಅವುಗಳ ಜೊತೆಗೆ ಇಂದು ಸ್ಮಾರ್ಟ್‌ಫೋನ್ ಮತ್ತು ಐಫೋನ್ ಬಳಕೆದಾರರು ತಮ್ಮ ಫೋನ್ ಬ್ಯಾಟರಿ ಪವರ್‌ನ ದೀರ್ಘ ಬಾಳಿಕೆಗಾಗಿ ಪ್ರಮುಖ ಮಾಹಿತಿಯೊಂದನ್ನು ತಿಳಿಯಲೇಬೇಕಿದೆ.
ಗಿಜ್‌ಬಾಟ್ ಇಂದಿನ ಲೇಖನದಲ್ಲಿ ನೀಡುವ ನಿಯಮ ಪಾಲಿಸಿದರೆ ಸ್ಮಾರ್ಟ್‌ಫೋನ್ ಮತ್ತು ಐಫೋನ್ ಬಳಕೆದಾರರು ತಮ್ಮ ಫೋನ್‌ಗಳ ಬ್ಯಾಟರಿ ದೀರ್ಘಬಾಳಿಕೆಯಲ್ಲಿ ಶೇಕಡ 20 ರಷ್ಟು ಬ್ಯಾಟರಿ ಪವರ್ ಅನ್ನು ಹೆಚ್ಚಿಸಬಹುದುದಾಗಿದೆ.

ಫೇಸ್‌ಬುಕ್ ಆಪ್
ಸ್ಮಾರ್ಟ್‌ಫೋನ್‌ಗಳಲ್ಲಿ ಶೇಕಡ 20 ರಷ್ಟು ಬ್ಯಾಟರಿ ಪವರ್ ಅನ್ನು ಫೇಸ್‌ಬುಕ್ ಆಪ್ ಕ್ಷೀಣಿಸುತ್ತಿದೆ. ಇದನ್ನು ಆಂಡ್ರಾಯ್ಡ್ ಕೇಂದ್ರ ಕಛೇರಿ ಪರೀಕ್ಷೆ ನಡೆಸಿ ಸಾಭೀತು ಪಡಿಸಿದೆ.

ಐಫೋನ್ 6S
ಗಾರ್ಡಿಯನ್ ಸ್ಯಾಮ್ಯುಯೆಲ್ ಗಿಬ್ಸ್ ಎಂಬುವವರು ಐಫೋನ್‌ನಲ್ಲಿ ಫೇಸ್‌ಬುಕ್ ಆಪ್ಲಿಕೇಶನ್ ತೆಗೆದುಹಾಕಿ 1 ವಾರಗಳ ಕಾಲ ಐಫೋನ್ ಬಳಕೆಮಾಡಿದ್ದಾರೆ. ಇದರಿಂದ ಬ್ಯಾಟರಿ ಬಾಳಿಕೆಯಲ್ಲಿ ಶೇಕಡ 15 ರಷ್ಟು ಉಳಿತಾಯವಾಗಿರುವುದು ಕಂಡುಬಂದಿದೆ.

ಫೇಸ್‌ಬುಕ್ ಬಳಕೆ ಹೇಗೆ ?
ಫೇಸ್‌ಬುಕ್ ಆಪ್ ಅನ್ನು ಪೋನ್‌ನಲ್ಲಿ ಹೊಂದುವುದರ ಬದಲು ಗಿಬ್ಬಾಸ್‌ರವರು ಯಾವುದೇ ಸಾಮಾಜಿಕ ಜಾಲತಾಣಗಳನ್ನು ಬಳಸಲು ವೆಬ್ ಬ್ರೌಸರ್ ಮೂಲಕ ಬಳಕೆಮಾಡಿದ್ದಾರೆ. ಉದಾಹರಣೆಗೆ ಗೂಗಲ್ ಸರ್ಚ್ ಇಂಜಿನ್ ಮೂಲಕ ಫೇಸ್‌ಬುಕ್ ಬಳಕೆ ಮಾಡುವುದು.

ಸ್ಟೋರೇಜ್ ಉಳಿತಾಯ
ಐಫೋನ್‌ನಲ್ಲಿ ಅಥವಾ ಸ್ಮಾರ್ಟ್‌ಫೋನ್‌ಗಳಲ್ಲಿ ಫೇಸ್‌ಬುಕ್‌ನಂತ ಸಾಮಾಜಿಕ ಜಾಲತಾಣ ಆಪ್‌ಗಳನ್ನು ಡಿಲೀಟ್ ಮಾಡುವುದರಿಂದ ಫೋನ್‌ನ ಸ್ಟೋರೇಜ್ ಉಳಿತಾಯವಾಗುತ್ತದೆ. ಇದರಿಂದ ಫೋನ್ ಕಾರ್ಯಚಟುವಟಿಕೆ ವೇಗವಾಗುತ್ತದೆ.

500MB ಸ್ಟೋರೇಜ್ ಉಳಿತಾಯ
ನಿಮ್ಮ ಫೋನ್‌ನಲ್ಲಿನ ಫೇಸ್‌ಬುಕ್ ಆಪ್ 111MB ಸ್ಟೋರೇಜ್ ಆವರಿಸುತ್ತದೆ. ಅಲ್ಲದೇ ಅದನ್ನು ಹೆಚ್ಚು ಬಳಸಿದಂತೆಲ್ಲಾ ಕ್ಯಾಚಿ ಡೇಟಾ ಹೆಚ್ಚಾಗುತ್ತಾ ಫೋನ್ ವೇಗ ಕಡಿಮೆಯಾಗುತ್ತದೆ ಮತ್ತು ಬ್ಯಾಟರಿ ಬಾಳಿಕೆ ಕಡಿಮೆಯಾಗುತ್ತದೆ.

ಮೊಬೈಲ್ ವೆಬ್‌ಸೈಟ್
ಮೊಬೈಲ್ ವೆಬ್‌ಸೈಟ್‌ನಲ್ಲಿ ಫೇಸ್‌ಬುಕ್ ಬಳಸುವುದರಿಂದ, ಆಪ್‌ಗಿಂತ ಹೆಚ್ಚು ಫೀಚರ್‌ಗಳನ್ನು ಪಡೆಯಬಹುದಾಗಿದೆ.

ಬ್ಯಾಟರಿ ಬಾಳಿಕೆ
ಬ್ಯಾಟರಿ ಬಾಳಿಕೆ ದೀರ್ಘತೆಗಾಗಿ ನೀವು ಫೇಸ್‌ಬುಕ್ ಆಪ್ ಮತ್ತು ಸ್ನ್ಯಾಪ್‌ಚಾಟ್ ಆಪ್ ಅನ್ನು ಸಹ ಡಿಲೀಟ್ ಮಾಡಿದರೆ ನಿಮ್ಮ ಬ್ಯಾಟರಿ ಬಾಳಿಕೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

ಗಿಜ್‌ಬಾಟ್

ಗಿಜ್‌ಬಾಟ್
ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್ ಮಾಡಿ ಫೇಸ್‌ಬುಕ್ ಪೇಜ್ ಮತ್ತು ಓದಿರಿ ವೆಬ್‌ಸೈಟ್ ಗಿಜ್‌ಬಾಟ್.ಕನ್ನಡ.ಕಾಂ


Click it and Unblock the Notifications








