ಈಗ ಆಪ್‌ನಲ್ಲಿ ಔಷಧ ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯಬಹುದು!!

|

ವಿಶ್ವದಲ್ಲಿ ಬಳಕೆ ಯಾಗುತ್ತಿರುವ ಒಟ್ಟು ಔಷಧದಲ್ಲಿ ಶೇ.25 ನಕಲಿ ಹಾಗೂ ಕಳಪೆ ಗುಣ ಮಟ್ಟದ್ದಾಗಿದೆ. ಆನ್‌ಲೈನಿನಲ್ಲೂ ಸಿಗುವ ಔಷದಿಗಳ ಗುಣಮಟ್ಟ ಕೂಡ ನಂಬಿಕೆಗೆ ಅರ್ಹವಲ್ಲ ಎಂದು ವರದಿಗಳು ಹೇಳುತ್ತಿವೆ. ಆದರೆ, ಇನ್ಮುಂದೆ ಚಿಂತಿಸಬೇಡಿ. ನಾವು ಸೇವಿಸುತ್ತಿರುವ ಔಷಧ ಅಸಲಿಯೋ ಅಥವಾ ನಕಲಿಯೋ ಎಂದು ಖಚಿತಪಡಿಸಿಕೊಳ್ಳುವ ಕಾಲ ಇದೀಗ ಹತ್ತಿರವಾಗುತ್ತಿದೆ.

ಹೌದು, ನಾವು ಸೇವಿಸುತ್ತಿರುವ ಔಷಧ ಅಸಲಿಯೋ ಅಥವಾ ನಕಲಿಯೋ ಎಂದು ಖಚಿತಪಡಿಸಿಕೊಂಡು ಸೇವಿಸುವ ಕಾಲ ಹತ್ತಿರವಾಗಿದ್ದು, ಸಿಂಗಾಪುರ ಮೂಲದ ಜೋರಿಯಮ್ ಕಂಪನಿ 'ಅಸಲಿ ಮೆಡಿಸಿನ್' ಹೆಸರಿನಲ್ಲಿ ಮೊಬೈಲ್ ಆಪ್ ಅಭಿವೃದ್ಧಿಪಡಿಸಿದೆ. ಜೋರಿಯಮ್ ಅಭಿವೃದ್ಧಿಪಡಿಸಲಿರುವ ಈ ಪ್ರತ್ಯೇಕ ಮೊಬೈಲ್ ಆಪ್ ಔಷಧ ಖರೀದಿಸುವ ವ್ಯಕ್ತಿಗೆ ನೆರವಾಗಲಿದೆ.

ಈಗ ಆಪ್‌ನಲ್ಲಿ ಔಷಧ ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯಬಹುದು!!

ಔಷಧ ಖರೀದಿಸುವ ವ್ಯಕ್ತಿಗೆ ನೆರವಾಗಲು ಜೋರಿಯಮ್ ಕಂಪನಿಯ ಪ್ರತ್ಯೇಕ ಆಪ್ ಒಂದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಬಂದಿದ್ದು, ಆ ಆಪ್ ಇನ್​ಸ್ಟಾಲ್ ಮಾಡಿಕೊಂಡು ಔಷಧದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಲ್ಲಿ ಆ ಔಷಧ ನಕಲಿಯೋ, ಅಸಲಿಯೋ ಎನ್ನುವುದು ತಿಳಿಯುತ್ತದೆ. ಇದರಿಂದ ಬಳಕೆದಾರರಿಗೆ ತಾವು ಸೇವಿಸುತ್ತಿರುವ ಔಷಧ ಅಸಲಿ ಎಂಬ ಬಗ್ಗೆ ಖಚಿತತೆ ಸಿಗಲಿದೆ.

ಇನ್ನು ಈ ಆಪ್‌ ಅಭಿವೃದ್ಧಿಗೆ ಬ್ಲಾಕ್​ಚೈನ್ ತಂತ್ರಜ್ಞಾನ ಬಳಸಿಕೊಳ್ಳಲಾಗಿದ್ದು, ಬಳಕೆದಾರರಿಗೆ ಔಷಧ ಅಸಲಿಯೋ ಅಥವಾ ನಕಲಿಯೋ ಬಗ್ಗೆ ಖಚಿತತೆ ಮಾತ್ರವಲ್ಲದೆ, ಖರೀದಿಸಿರುವ ಔಷಧಕ್ಕೆ ಏನೆಲ್ಲ ಉತ್ಪನ್ನಗಳನ್ನು ಬಳಕೆ ಮಾಡಿದ್ದಾರೆ ಎನ್ನುವ ಮಾಹಿತಿಯೂ ದೊರೆಯಲಿದೆ. ಈ ಮಾಹಿತಿಯನ್ನು ಡೌನ್​ಲೋಡ್ ಸಹ ಮಾಡಿಕೊಳ್ಳಬಹುದಾಗಿದೆ ಎಂದು ಕಂಪನಿಯು ಹೇಳಿಕೊಂಡಿದೆ.

ಈಗ ಆಪ್‌ನಲ್ಲಿ ಔಷಧ ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯಬಹುದು!!

ವಿಷಯುಕ್ತ ಆಹಾರ ಸೇವೆಯಿಂದ ಆರೋಗ್ಯ ಇನ್ನಷ್ಟು ಹದಗೆಡುತ್ತದೆ. ಅನಾರೋಗ್ಯಕ್ಕೆ ತುತ್ತಾದವರ ಪಾಲಿಗೆ ಸಂಜೀವಿನಿಯಾಗಬೇಕಾಗದ ಔಷಧದಲ್ಲೂ ನಕಲಿ ಹಾವಳಿ ಹೆಚ್ಚುತ್ತಿರುವುದು ಈಗ ವಿಪರ್ಯಾಸ. ಹಾಗಾಗಿ, ಲಾಭದ ಆಸೆಗೆ ಕಳಪೆ ದರ್ಜೆಯ ಔಷಧಗಳನ್ನು ಮಾರುಕಟ್ಟೆಗೆ ಪೂರೈಕೆ ಮಾಡುತ್ತಿರುವವರ ಮತ್ತು ಔಷಧ ಪತ್ತೆಗೆ ಆಪ್ ಅಭಿವೃದ್ಧಿಪಡಿಸಿರುವುದು ಶ್ಲಾಘನೀಯ.

Best Mobiles in India

English summary
Want to Order Your Medicine Online? There’s an App for That. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X