ಫೋನ್‌ಪೇ ಮೂಲಕ ಮೊಬೈಲ್‌ ರೀಚಾರ್ಜ್‌ ಮಾಡುವ ಮುನ್ನ ಈ ಸ್ಟೋರಿ ಓದಿರಿ!

|

ಜನಪ್ರಿಯ ನಗದು ಪಾವತಿ ಅಪ್ಲಿಕೇಶನ್‌ ಫೋನ್‌ಪೇ ತನ್ನ ಬಳಕೆದಾರರಿಗೆ ಶಾಕ್‌ ನೀಡಿದೆ. ಇನ್ಮುಂದೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೊಬೈಲ್‌ ರೀಚರ್ಜ್‌ ಮಾಡುವವರಿಗೆ ಶುಲ್ಕ ವಿಧಿಸಲು ಮುಂದಾಗಿದೆ. ಮೊಬೈಲ್‌ ರೀಚಾರ್ಜ್‌ ಮಾಡುವವರಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ. ಅದರಲ್ಲೂ 50ರೂ.ಗಳಿಗಿಂತ ಹೆಚ್ಚಿನ ಮೊತ್ತದ ರೀಚಾರ್ಜ್‌ ಮಾಡಿದರೆ ಒಂದು ರೂ. ಚಾರ್ಜ್‌ ಶುಲ್ಕವನ್ನು ವಿಧಿಸಲಿದೆ ಎಂದು ಹೇಳಲಾಗಿದೆ.

ರೀಚಾರ್ಜ್‌

ಹೌದು, ನಗದು ಪಾವತಿ ಅಪ್ಲಿಕೇಶನ್‌ಗಳ ಮೂಲಕ ಮೊಬೈಲ್‌ ರೀಚಾರ್ಜ್‌ ಮಾಡುವವರು ಈ ಸ್ಟೋರಿಯನ್ನ ಗಮನಿಸಬೇಕು. ಈಗಾಗಲೇ ಕೆಲವು ನಗದು ಪಾವತಿ ಅಪ್ಲಿಕೇಶನ್‌ಗಳು ಮೊಬೈಲ್‌ ಬಿಲ್‌ ಪಾವತಿ ಮಾಡೋರಿಗೆ ಚಾರ್ಜ್‌ ಶುಲ್ಕವನ್ನು ವಿಧಿಸುತ್ತಿವೆ. ಇದೇ ಹಾದಿಯಲ್ಲಿ ಫೋನ್‌ಪೇ ಕೂಡ ಹೆಜ್ಜೆ ಹಾಕಿದೆ. ಇಷ್ಟು ದಿನ ಮೊಬೈಲ್‌ ರೀಚಾರ್ಜ್‌ ಮೊತ್ತ ಮಾತ್ರ ಭರಿಸುತ್ತಿದ್ದ ಮಂದಿ ಇನ್ಮುಂದೆ ರೀಚಾರ್ಜ್‌ ಶುಲ್ಕವನ್ನು ಕೂಡ ಭರಿಸಬೇಕಾಗುತ್ತದೆ. ಹಾಗಾದ್ರೆ ಫೋನ್‌ಪೇ ಮೂಲಕ ರೀಚಾರ್ಜ್‌ ಮಾಡಿದ್ರೆ ಎಷ್ಟು ಚಾರ್ಜ್‌ ಮಾಡಲಾಗುತ್ತದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೋನ್‌ಪೇ

ಫೋನ್‌ಪೇ ಮೂಲಕ ಇನ್ಮುಂದೆ ಮೊಬೈಲ್‌ ರೀಚಾರ್ಜ್‌ ಮಾಡಿದ್ರೆ ರೀಚಾರ್ಜ್‌ ಶುಲ್ಕ ಕಟ್ಟಬೇಕಾಗುತ್ತದೆ. ರೀಚಾರ್ಜ್‌ ಶುಲ್ಕವನ್ನು ಪ್ರಸ್ತುತ ಮೊಬೈಲ್ ರೀಚಾರ್ಜ್‌ಗಳಲ್ಲಿ ಮಾತ್ರ ವಿಧಿಸಲಾಗುತ್ತದೆ ಎನ್ನಲಾಗಿದೆ. ಜೊತೆಗೆ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿರುವುದರಿಂದ ಸದ್ಯ ಎಲ್ಲಾ ಫೋನ್‌ಪೇ ಬಳಕೆದಾರರಿಗೆ ಅನ್ವಯಿಸುವುದಿಲ್ಲ. ಆದರೆ ಸಂಸ್ಕರಣಾ ಶುಲ್ಕವು ಸದ್ಯಕ್ಕೆ ಮೊಬೈಲ್ ರೀಚಾರ್ಜ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಇನ್ನು ಈ ಶುಲ್ಕ 50ರೂ. ಗಿಂತ ಹೆಚ್ಚಿನ ರೀಚಾರ್ಜ್‌ಗಳಿಗೆ ಮಾತ್ರ ಅನ್ವಯಿಸುತ್ತದೆ.

ರೀಚಾರ್ಜ್‌

50ರೂ ಗಿಂತ ಕಡಿಮೆ ಮೊತ್ತದ ರೀಚಾರ್ಜ್‌ ಮಾಡಿದ್ರೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎನ್ನಲಾಗಿದೆ. ಯಾವುದೇ ಮೊಬೈಲ್ ರೀಚಾರ್ಜ್ ಪ್ರಕ್ರಿಯೆ ಶುಲ್ಕವನ್ನು ತಪ್ಪಿಸುತ್ತದೆ. ರೀಚಾರ್ಜ್‌ ಶುಲ್ಕದಲ್ಲಿ 50ರೂ. ಮತ್ತು 100ರೂ. ನಡುವಿನ ಮೌಲ್ಯದ ರೀಚಾರ್ಜ್‌ಗಳು ಪ್ರಕ್ರಿಯೆ ಶುಲ್ಕವನ್ನು ಆಕರ್ಷಿಸುತ್ತವೆ ಎನ್ನಲಾಗಿದೆ. 50ರೂ ಬೆಲೆಯ ರೀಚಾರ್ಜ್‌ಗಳಿಗೆ 1ರೂ.ಶುಲ್ಕವನ್ನು ವಿಧಿಸಲಾಗುತ್ತದೆ. 100ರೂ. ಮೇಲಿನ ಎಲ್ಲಾ ಮೊಬೈಲ್ ರೀಚಾರ್ಜ್‌ಗಳು 2ರೂ.ಬೆಲೆಯ ಶುಲ್ಕವನ್ನು ವಿಧಿಸಲಾಗುತ್ತದೆ.

ಫೋನ್‌ ಪೇ

ಫೋನ್‌ ಪೇ ಮೂಲಕ ರೀಚಾರ್ಜ್‌ ಮಾಡುವವರಿಗೆ ಶುಲ್ಕ ವಿಧಿಸಲು ಕೆಲಸು ಸಣ್ಣ ಪ್ರಮಾಣದ ಪ್ರಯೋಗವನ್ನು ನಡೆಸುತ್ತಿದೆ. ಇದರಲ್ಲಿ ಕೆಲವು ಬಳಕೆದಾರರು ಮೊಬೈಲ್ ರೀಚಾರ್ಜ್‌ಗಳಿಗೆ ಚಾರ್ಜಿಂಗ್‌ ಶುಲ್ಕ ಪಾವತಿಸಬೇಕಿದೆ ಎಂದು ಫೋನ್‌ಪೇ ಹೇಳಿಕೊಂಡಿದೆ. ಆದ್ದರಿಂದ, ನಿಮ್ಮ ಖಾತೆಯು ಪ್ರಾಯೋಗಿಕ ಗುಂಪಿನ ಅಡಿಯಲ್ಲಿ ಬರುತ್ತದೆಯೇ ಎಂಬುದನ್ನು ಅವಲಂಬಿಸಿರುತ್ತದೆ. ಮದು ವೇಳೆ ಈ ಪ್ರಯೋಗ ಯಶಸ್ವಿಯಾದರೆ ಶೀಘ್ರದಲ್ಲೇ ಎಲ್ಲರ ಜೇಬಿಗೆ ಕತ್ತರಿ ಬೀಳಲಿದೆ. ಇನ್ನು ಫೋನ್‌ಪೇ ಎಲ್ಲಾ ಇತರ ಪಾವತಿ ಸೇವೆಗಳ ಮಾದರಿಯಲ್ಲಿಯೇ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಮಾಡಿದ ಎಲ್ಲಾ ವಹಿವಾಟುಗಳಿಗೆ ಶುಲ್ಕ ವಿಧಿಸುತ್ತಿದೆ. ಆದರೆ ಇತರೆ ಪಾವತಿ ಸೇವೆಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲ ಎಂದು ಫೋನ್‌ಪೇ ಹೇಳಿದೆ.

ಫೋನ್‌ಪೇ ಮೂಲಕ ಮೊಬೈಲ್‌ ರೀಚಾರ್ಜ್ ಮಾಡಲು ಈ ಕ್ರಮ ಅನುಸರಿಸಿ:

ಫೋನ್‌ಪೇ ಮೂಲಕ ಮೊಬೈಲ್‌ ರೀಚಾರ್ಜ್ ಮಾಡಲು ಈ ಕ್ರಮ ಅನುಸರಿಸಿ:

ಹಂತ 1: ನಿಮ್ಮ ಫೋನಿನಲ್ಲಿ ಫೋನ್‌ಪೇ ಆಪ್ ತೆರೆಯಿರಿ. ರೀಚಾರ್ಜ್ ಆಯ್ಕೆಯಲ್ಲಿ ರೀಚಾರ್ಜ್ ಕ್ಲಿಕ್ ಮಾಡಿ ಮತ್ತು ಬಿಲ್ ಪಾವತಿಸಿ.
ಹಂತ 2: ನೀವು ರೀಚಾರ್ಜ್ ಮಾಡಲು ಬಯಸುವ ಸಂಖ್ಯೆಯನ್ನು ಆಯ್ಕೆ ಮಾಡಿ ಅಥವಾ ನಮೂದಿಸಿ.
ಹಂತ 3: ನಿಮ್ಮ ಫೋನ್ ಸಂಖ್ಯೆ, ವಲಯ ಮತ್ತು ಟೆಲಿಕಾಂ ಆಪರೇಟರ್ ವಿವರಗಳನ್ನು ಪರಿಶೀಲಿಸಿ.
ಹಂತ 4: ರೀಚಾರ್ಜ್ ಮೊತ್ತವನ್ನು ನಮೂದಿಸಿ ಅಥವಾ ವೀಕ್ಷಣೆ ಯೋಜನೆಗಳ ವಿಭಾಗದ ಅಡಿಯಲ್ಲಿ ಯೋಜನೆಗಳ ಪಟ್ಟಿಯಿಂದ ಆಯ್ಕೆಮಾಡಿ.
ಹಂತ 5: ಇದಕ್ಕಾಗಿ ಪಾವತಿ ಆಯ್ಕೆಯನ್ನು ಆರಿಸಿ. ಹಂತ 6: ವಹಿವಾಟು ಪೂರ್ಣಗೊಳಿಸಲು ರೀಚಾರ್ಜ್ ಕ್ಲಿಕ್ ಮಾಡಿ.

ಫೋನ್‌ಪೇ ಸೇವೆಗಳು

ಫೋನ್‌ಪೇ ಸೇವೆಗಳು

ಫೋನ್‌ಪೇ ಭಾರತದ ಪ್ರಮುಖ ಡಿಜಿಟಲ್ ಪಾವತಿ ವೇದಿಕೆಯಾಗಿದೆ. ಫೋನ್‌ಪೀ ಬಳಸಿ, ಬಳಕೆದಾರರು ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು, ಮೊಬೈಲ್, ಡಿಟಿಎಚ್, ಡೇಟಾ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಬಹುದು, ಯುಟಿಲಿಟಿ ಪಾವತಿಗಳನ್ನು ಮಾಡಬಹುದು ಮತ್ತು ಚಿನ್ನವನ್ನು ಖರೀದಿಸಬಹುದು. ಮೊಬೈಲ್ ರೀಚಾರ್ಜ್ ಮಾಡಲು ಫೋನ್‌ಪೇ ಅಪ್ಲಿಕೇಶನ್‌ನಲ್ಲಿ ಕೆಲವೇ ಸೆಕೆಂಡುಗಳು ಸಾಕು.

Best Mobiles in India

English summary
PhonePe has now started charging fee for mobile bills. This is still an experimental venture, says PhonePe.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X