ಅಲೆಕ್ಸಾ ಬಳಸಿ ಅಮ್ಮನನ್ನು ಮೋಸಗೊಳಿಸಿದ ಮಗು

|

ಲೆಕ್ಕ ಅಂದರೆ ಅದು ಕಬ್ಬಿಣದ ಕಡಲೆ ಅನ್ನೋ ಭಾವನೆ ಹೆಚ್ಚಿನ ಮಕ್ಕಳಲ್ಲಿ ಇರುತ್ತದೆ. ಹಾಗಾಗಿ ಗಣಿತ ವಿಷಯದ ಬಗ್ಗೆ ಮಕ್ಕಳಲ್ಲೊಂದು ತಾತ್ಸಾರ ಮನೋಭಾವ. ಗಣಿತದಲ್ಲಿ ಮಕ್ಕಳ ಅಂಕ ಹೆಚ್ಚು ಬರಬೇಕು ಎಂಬ ಕಾರಣಕ್ಕೆ ಅದೆಷ್ಟೋ ಪೋಷಕರು ಒದ್ದಾಡುತ್ತಾರೆ. ಆದರೆ ಈಗಿನ ಮಕ್ಕಳು ಸ್ಮಾರ್ಟ್ ಆಗುತ್ತಿದ್ದಾರೆ. ಒಂದು ಕಾಲದಲ್ಲಿ ಕ್ಯಾಲ್ಕುಲೇಟರ್ ಹಿಡಿದು ಲೆಕ್ಕ ಸುಲಭವೆನಿಸಿತ್ತು. ಇದೀಗ ಅದಕ್ಕೂ ಮುಂದುವರಿದ ಯುಗದ ಆರಂಭವೊಂದು ಆಗಿರುವಂತಿದೆ. ಯಾಕೆ ಹೀಗೆ ಹೇಳುತ್ತಿದ್ದೇವೆ ಎಂಬುದನ್ನು ತಿಳಿಯಲು ಮುಂದೆ ಓದಿ.

ನ್ಯೂಜೆರ್ಸಿಯಲ್ಲಿ ನಡೆದ ಘಟನೆ:

ನ್ಯೂಜೆರ್ಸಿಯಲ್ಲಿ ನಡೆದ ಘಟನೆ:

ಎಲ್ಲಾ ಕೆಟ್ಟ ಕಾರಣಗಳಿಗಾಗಿ ಸ್ಮಾರ್ಟ್ ಡಿವೈಸ್ ಗಳು ನಮ್ಮ ಮಕ್ಕಳನ್ನು ಸ್ಮಾರ್ಟ್ ಆಗಿಸುತ್ತಿವೆ. ಯುಎಸ್ ನ ನ್ಯೂಜೆರ್ಸಿಯಲ್ಲಿ 6 ವರ್ಷದ ಮಗುವೊಂದು ತನ್ನ ತಾಯಿ ಹೋವರ್ಕ್ ಮಾಡಿಸುವಾಗ ಅಲೆಕ್ಸಾ ಡಿವೈಸ್ ಬಳಸಿ ಗಣಿತದ ಲೆಕ್ಕ ಬಿಡಿಸಲು ಮುಂದಾಗಿದೆ.

ಟ್ವೀಟರ್ ನಲ್ಲಿ ಹಂಚಿಕೊಂಡ ತಾಯಿ:

ಟ್ವೀಟರ್ ನಲ್ಲಿ ಹಂಚಿಕೊಂಡ ತಾಯಿ:

ಟ್ವೀಟರ್ ನಲ್ಲಿ ಇದರ ವೀಡಿಯೋವನ್ನು ಮಗುವಿನ ಯಿ ಎರ್ಲೈನ್ ಕ್ಯೂವಾ ಹಂಚಿಕೊಂಡಿದ್ದು ಆ ಮಗುವು ಅಲೆಕ್ಸಾ ಡಿವೈಸ್ ಬಳಿ " 5 ರಲ್ಲಿ ಮೂರನ್ನು ಕಳೆದರೆ ಎಷ್ಟು?" ಎಂದು ಪ್ರಶ್ನಿಸುತ್ತದೆ ಮತ್ತು ಕೂಡಲೇ ಅಲೆಕ್ಸಾ ಎರಡು ಎಂದು ಉತ್ತರಿಸುತ್ತದೆ. ನಂತರ ಮಗುವು ಅಲೆಕ್ಸಾ ತನಗೆ ಹೋವರ್ಕ್ ಬಿಡಿಸುವುದಕ್ಕೆ ಸಹಾಯ ಮಾಡಿರುವುದಕ್ಕೆ ಧನ್ಯವಾದವನ್ನು ಕೂಡ ತಿಳಿಸುತ್ತದೆ.

ತಾಯಿ ಹೇಳಿಕೆ:

ತಾಯಿ ಹೇಳಿಕೆ:

"ಅದು ಸಾಮಾನ್ಯ ದಿನದಲ್ಲಿ ನಡೆಯುವಂತೆಯೇ ನಡೆಯುತ್ತಿದ್ದ ಹೋವರ್ಕ್ ಮಾಡುವ ಕೆಲಸ. ನಾನು ನನ್ನ ಲಿವಿಂಗ್ ರೂಮ್ ನಲ್ಲಿದ್ದೆ ಮತ್ತು ನನ್ನ ಮಗ ಅಲೆಕ್ಸಾ ಬಳಿ ಕೆಲವು ಗಣಿತದ ಸಮಸ್ಯೆಗಳನ್ನು ಕೇಳುತ್ತಿರುವುದನ್ನು ಗಮನಿಸಿದೆ. ನನಗೆ ನಂಬುವುದಕ್ಕೆ ಸಾಧ್ಯವಾಗಲಿಲ್ಲ." ಎಂದು ಹೇಳುತ್ತಾಳೆ ತಾಯಿ ಎರ್ಲೈನ್ ಕ್ಯೂವಾ

ಮಕ್ಕಳ ಓದಿನ ಮೇಲೆ ದುಷ್ಪರಿಣಾಮ:

ಮಕ್ಕಳ ಓದಿನ ಮೇಲೆ ದುಷ್ಪರಿಣಾಮ:

ಖಂಡಿತ ಇದು ಅಲೆಕ್ಸಾ ಮಟ್ಟಿಗೆ ಬಹಳ ಸುಲಭವಾದ ಪ್ರಶ್ನೆಯಾಗಿದ್ದು ತಕ್ಷಣಕ್ಕೆ ಉತ್ತರ ಕೊಡುವ ಸಾಮರ್ಥ್ಯವನ್ನು ಅದು ಹೊಂದಿದೆ. ಆದರೆ ಇದು ಮಕ್ಕಳ ಓದಿನ ಮೇಲೆ ಪರಿಣಾಮ ಬೀರುತ್ತಿರುವುದರಿಂದಾಗಿ ಪೋಷಕರು ತಮ್ಮ ಮನೆಯಲ್ಲಿ ಸ್ಮಾರ್ಟ್ ಡಿವೈಸ್ ಗಳನ್ನು ಬಳಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಖಂಡಿತ ಚಿಂತಿಸಬೇಕಾಗಿರುವ ಅಗತ್ಯತೆ ಈಗ ಕಾಣುತ್ತಿದೆ.

ಎಷ್ಟು ಸರಿ?

ಕೆಲವು ಗಣಿತದ ಕಠಿಣವಾಗಿರುವ ಸಮಸ್ಯೆಗಳನ್ನು ಬಿಡಿಸುವುದಕ್ಕೆ ಅಲೆಕ್ಸಾ ಬಳಕೆ ಮಾಡುವುದು ಮತ್ತು ಅದರಿಂದ ಸರಿಯಾದ ಉತ್ತರವನ್ನು ದೊಡ್ಡವರು ಪಡೆದುಕೊಳ್ಳುವುದು ಸಹಜವೇ. ಆದರೆ ಅದು ಕೇವಲ 6 ವರ್ಷದ ಮಕ್ಕಳ ಮೇಲೆಯೂ ಪರಿಣಾಮ ಬೀರುತ್ತಿರುವುದು ಮುಂದಿನ ಭವಿಷ್ಯದ ಪ್ರಜೆಗಳ ಹಿತದೃಷ್ಟಿಯಲ್ಲಿ ಎಷ್ಟು ಸರಿ ಎಂಬ ಚಿಂತನೆಗೆ ದೂಡುವಂತಿದೆ.

ರೆಕಾರ್ಡಿಂಗ್ ಗಾಗಿ ಯಾವುದೇ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಇದೀಗ ಅಲೆಕ್ಸಾವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು ಮತ್ತು ಇದಕ್ಕಾಗಿ ಅಮೇಜಾನ್ ಇಕೋ ಡಿವೈಸ್ ಗಳ ಅಗತ್ಯತೆ ಇರುವುದಿಲ್ಲ.

ಮನುಷ್ಯರು ಮಾತ್ರವಲ್ಲ, ಪಕ್ಷಿಯೂ ಅಲೆಕ್ಸಾ ಬಳಸುತ್ತದೆ:

ಮನುಷ್ಯರು ಮಾತ್ರವಲ್ಲ, ಪಕ್ಷಿಯೂ ಅಲೆಕ್ಸಾ ಬಳಸುತ್ತದೆ:

ಕೇವಲ ಮನುಷ್ಯರು ಮಾತ್ರವೇ ಅಮೇಜಾನ್ ಅಲೆಕ್ಸಾ ಬಳಸುತ್ತಿದ್ದಾರೆ ಎಂದು ಅಂದುಕೊಳ್ಳಬೇಡಿ.ಇತ್ತೀಚೆಗೆ ಒಂದು ಗಿಳಿ ತನ್ನ ಇಷ್ಟದ ಹಣ್ಣನ್ನು ಆರ್ಡರ್ ಮಾಡಲು ಅಮೇಜಾನ್ ಅಲೆಕ್ಸಾವನ್ನು ಬಳಸಿದೆ.

ಶಾಪಿಂಗ್ ಲಿಸ್ಟ್ ತಯಾರಿಸಲು ಅಲೆಕ್ಸಾ ಬಳಸಿದ ಗಿಳಿ:

ಗಿಳಿಗಳನ್ನು ತುಂಬಾ ಬುದ್ಧಿವಂತ ಪಕ್ಷಿಗಳು ಎಂದು ಹೇಳುತ್ತೇವೆ. ಅವುಗಳು ಮನುಷ್ಯರು ಹೇಳಿರುವುದನ್ನೇ ಮತ್ತೆ ಪುನರಾವರ್ತಿಸುತ್ತವೆ. ಆದರೆ ಗಿಳಿಯೊಂದು ತನ್ನ ಇಷ್ಟದ ತರಕಾರಿ ಮತ್ತು ಹಣ್ಣುಗಳನ್ನು ಪಡೆಯುವುದಕ್ಕೆ ಅಲೆಕ್ಸಾ ಬಳಸುತ್ತದೆ ಎಂಬುದು ಬಹಳ ಕುತೂಹಲಕಾರಿಯಾಗಿರುವ ವಿಚಾರ. ಆಫ್ರಿಕಾದ ಗ್ರೇ ಪ್ಯಾರೋಟ್ ರೋಕೋ ತನ್ನ ಶಾಪಿಂಗ್ ಲಿಸ್ಟ್ ನ್ನು ಅಲೆಕ್ಸಾ ಡಿವೈಸ್ ಬಳಸಿ ಪ್ರತಿದಿನ ತಯಾರಿಸುತ್ತದೆ.

ಶಾಪಿಂಗ್ ಪಟ್ಟಿಯಲ್ಲಿ ಏನೇನಿದೆ?

ಅದರ ಅಲೆಕ್ಸಾ ಆಧಾರಿತ ಶಾಪಿಂಗ್ ಲಿಸ್ಟ್ ನಲ್ಲಿ ಬ್ರಕೋಲಿ, ಐಸ್ ಕ್ರೀಮ್ ಗಳು, ಕಲ್ಲಂಗಡಿ ಹಣ್ಣು ಮತ್ತು ಒಣದ್ರಾಕ್ಷಿ ಹಣ್ಣುಗಳು ಸೇರಿರುತ್ತದೆ.ಅಷ್ಟೇ ಅಲ್ಲ ಈ ಗಿಳಿ ಲೈಟ್ ಬಲ್ಬ್ ನ್ನು ಕೂಡ ಶಾಪಿಂಗ್ ಲಿಸ್ಟ್ ನಲ್ಲಿ ಸೇರಿಸಿದೆ. ಅಮೇಜಾನ್ ಅಲೆಕ್ಸಾದ ಮಾಲೀಕ ಇತ್ತೀಚೆಗೆ ಗಿಳಿ ಹೀಗೆ ಅಲೆಕ್ಸಾ ಬಳಸಿ ಶಾಪಿಂಗ್ ಲಿಸ್ಟ್ ತಯಾರಿಸಿ ಆರ್ಡರ್ ಮಾಡುವುದನ್ನು ಕಂಡುಹಿಡಿದಿದ್ದಾರೆ. ಅಷ್ಟೇ ಅಲ್ಲದೆ ಅಲೆಕ್ಸಾ ಬಳಿ ಮ್ಯೂಸಿಕ್ ಪ್ಲೇ ಮಾಡುವಂತೆ ಹೇಳುವುದಕ್ಕೂ ಕೂಡ ಈ ಗಿಳಿಗೆ ತಿಳಿದಿದೆಯಂತೆ.

Best Mobiles in India

Read more about:
English summary
Watch: Alexa, what’s 5 minus 3? Mom catches kid 'cheating' in Maths homework

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X