ಯುವಕನೋರ್ವನ ಜೇಬಿನಲ್ಲೇ ಮೊಬೈಲ್ ಸ್ಪೋಟ!..ಸಿಸಿಟಿವಿಯಲ್ಲಿ ಸೆರೆ!

|

ಇತ್ತೀಚೆಗೆ ಮೊಬೈಲ್ ಸ್ಫೋಟಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು, ಯುವಕನೋರ್ವನ ಪ್ಯಾಂಟ್‌ನಲ್ಲಿದ್ದ ಮೊಬೈಲ್ ಫೋನ್ ಒಂದು ಸ್ಪೋಟಗೊಂಡು ಯುವಕನಿಗೆ ಗಾಯವಾಗಿರುವ ಘಟನೆ ಇದೀಗ ಮುಂಬೈನಲ್ಲಿ ನಡೆದಿದೆ. ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಸ್ಮಾರ್ಟ್‌ಫೋನ್‌ ಆತನ ಜೇಬಿನಲ್ಲೇ ಸ್ಫೋಟಗೊಂಡಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.

ಫೆಬ್ರವರಿ 28 ರಂದು ಮೊಬೈಲ್ ಸ್ಫೋಟಗೊಂಡಿರುವ ಈ ದೃಶ್ಯ ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ಸೆರೆಯಾದ ನಂತರ ಇದೀಗ ವೈರಲ್ ಆಗಿದ್ದು, ಸ್ಪೋಟಗೊಂಡಿರುವುದು ಮೊಟೊರೊಲಾ ಮೊಬೈಲ್ ಎಂದು ಹೇಳಲಾಗದೆ. ಮುಂಬೈನ 'ಸಾಕಿನಕ'ಪ್ರದೇಶದಲ್ಲಿರುವ ಕಾರ್ಖಾನೆಯೊಳಗೆ ಕಾರ್ಮಿಕನೋರ್ವನ ಮೊಬೈಲ್ ಇದ್ದಕ್ಕಿದ್ದಂತೆ ಸ್ಪೋಟಗೊಂಡಿರುವುದನ್ನು ನೋಡಬಹುದಾಗಿದೆ.

ಯುವಕನೋರ್ವನ ಜೇಬಿನಲ್ಲೇ ಮೊಬೈಲ್ ಸ್ಪೋಟ!..ಸಿಸಿಟಿವಿಯಲ್ಲಿ ಸೆರೆ!

ಸಿಸಿಟಿವಿಯಲ್ಲಿ ದಾಖಲಾಗಿರುವಂತೆ, ಸಣ್ಣ ಕಾರ್ಖಾನೆಯೊಳಗೆ ಕಾರ್ಮಿಕರ ಜತೆ ಮಾತನಾಡುವ ವೇಳೆ ವ್ಯಕ್ತಿಯೋರ್ವನ ಪ್ಯಾಂಟ್‌ನಿಂದ ಇದ್ದಕ್ಕಿದ್ದಂತೆ ಹೊಗೆ ಬರಲು ಆರಂಭಿಸುತ್ತದೆ. ಕೂಡಲೇ ಆ ವ್ಯಕ್ತಿ ತನ್ನ ಫೋನಿನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಅದನ್ನು ಜೇಬಿನಿಂದ ತೆಗೆದು ನೆಲಕ್ಕೆ ಎಸೆಯುತ್ತಾನೆ. ಆದರೆ, ಆ ವೇಳೆಗಾಗಲೇ ಫೋನ್‌ ಸ್ಫೋಟಗೊಂಡಿದೆ.

ಕಾರ್ಖಾನೆಯಲ್ಲಿ ನಡೆದ ಆ ಮೊಬೈಲ್ ಸ್ಫೋಟದ ತೀರ್ವತೆ ಹೆಚ್ಚಾಗಿಲ್ಲದಿದ್ದರೂ ಮೊಬೈಲ್ ಮಾಲಿಕನಿಗೆ ಸುಟ್ಟ ಗಾಯಗಳಾಗಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಪ್ರತಿ ಫೋನ್ ಕಂಪೆನಿಯು ಒಂದು ಫೋನ್ ಅನ್ನು ಮಾರುಕಟ್ಟೆಗೆ ಬಿಡುವ ಮುನ್ನ ಎಲ್ಲಾ ರೀತಿಯ ಟೆಸ್ಟ್ಗಳನ್ನು ಕೂಡ ಮಾಡಿರಬೇಕು ಎಂದು ಹೇಳಲಾಗಿದ್ದರೂ ಇಂತಹ ಘಟನೆಗಳು ನಡೆಯುತ್ತಿವೆ.

ಜ್ಞರು ಹೇಳುವ ಪ್ರಕಾರ ಸ್ಪೋಟಕ್ಕೆ ಹಲವು ಕಾರಣಗಳಿದೆ. ಕೇವಲ ಓವರ್ ಚಾರ್ಜಿಂಗ್ ನ ಕಾರಣದಿಂದಾಗಿ ಮಾತ್ರವೇ ಸ್ಪೋಟ ಸಂಭವಿಸುವುದಿಲ್ಲ. ಫೋನ್ ಗಳು ಒಮ್ಮೆ ಚಾರ್ಜ್ ಫುಲ್ ಆದ ಕೂಡಲೇ ಚಾರ್ಜ್ ಆಗುವುದನ್ನು ಅಂದರೆ ಕರೆಂಟ್ ಸಪ್ಲೈ ಆಗುವುದನ್ನು ಸ್ವಯಂಚಾಲಿತವಾಗಿ ನಿಲ್ಲಿಸುತ್ತವೆ ಎಂದು ಟೆಕ್ ಎಕ್ಸ್ ಪರ್ಟ್ ತಿಳಿಸುತ್ತಾರೆ.

Best Mobiles in India

English summary
A factory worker's phone caught fire in a factory in Sakinaka on Thursday. In the CCTV footage, the worker can be seen running as the mobile phone in his pocket bursts up in flames. No one got injured in the incident02 Mar 2019, 10:40PM IST| Source : Mirror Online. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X