ಕನ್ನಡದಲ್ಲಿ ಸೌರವ್ಯೂಹವನ್ನು '3D'ಯಲ್ಲಿ ತೋರಿಸುತ್ತದೆ ಕನ್ನಡಿಗನ ಈ ವೆಬ್‌ಸೈಟ್‌!

|

ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಬದುಕು ಕಟ್ಟಿಕೊಂಡಿರುವ ಕನ್ನಡಿಗ ಶ್ರೀಹರ್ಷ ಸಾಲಿಮಠ ಎಂಬುವವರು ಆಟಿಕೆ ವೆಬ್‌ಸೈಟ್‌ ಒಂದನ್ನು ಮಕ್ಕಳಿಗಾಗಿ ಉಚಿತವಾಗಿ ರೂಪಿಸಿದ್ದಾರೆ. ಈಗ ಮೊಬೈಲ್‌\ಸ್ಮಾರ್ಟ್‌ಫೋನ್‌ಗಳಲ್ಲಿಯೇ ಮಕ್ಕಳು ಹೆಚ್ಚು ಸಮಯವನ್ನು ಕಳೆಯುವುದರಿಂದ ಸಾಧ್ಯವಾದಷ್ಟು ಅಲ್ಲಿಯೇ ಕಲಿಕೆಗೆ ಅನುಕೂಲವಾದಂತಹ ವಾತಾವರಣವನ್ನು ಕಲ್ಪಿಸುವುದು ಈ ಆಟಿಕೆ ವೆಬ್‌ಸೈಟ್‌ನ ಉದ್ದೇಶ. ನೀವು ಈ ವೆಬ್‌ಸೈಟ್‌ ತೆರೆದು ಮಕ್ಕಳಿಗೆ 3Dಯಲ್ಲಿ ಸೌರವ್ಯೂಹವನ್ನು ತೋರಿಸಬಹುದು.

ಕನ್ನಡದಲ್ಲಿ ಸೌರವ್ಯೂಹವನ್ನು '3D'ಯಲ್ಲಿ ತೋರಿಸುತ್ತದೆ ಕನ್ನಡಿಗನ ಈ ವೆಬ್‌ಸೈಟ್‌!

ಹೌದು, ಮಕ್ಕಳಿಗೆ ಮನರಂಜನೆಯ ಜೊತೆ ಕಲಿಕೆಗೆ ಅನುಕೂಲವಾಗುವಂತಹ ತಾಣವನ್ನು ರೂಪಿಸುವ ಸಲುವಾಗಿ ಶ್ರೀಹರ್ಷ ಸಾಲಿಮಠ ಅವರು http://atike.nadoja.com/ ಎಂಬ ವೆಬ್‌ಸೈಟ್ ತೆರೆದಿದ್ದಾರೆ. ಇದರ ಲಿಂಕ್ ಕ್ಲಿಕ್ ಮಾಡಿದರೆ ಗಡಿಯಾರ ಮತ್ತು ಸೌರಮಂಡಲ ಎಂಬ ಎರಡು ವಿಷಯಗಳು ಕಾಣಿಸಿಕೊಳ್ಳುತ್ತವೆ. ಇದರಲ್ಲಿ ಸೌರಮಂಡಲ ಎಂಬ ಲಿಂಕ್ ಕ್ಲಿಕ್ ಮಾಡಿದರೆ ಸಾಕು 3D ಮತ್ತು 2D ಮಾದರಿಗಳಲ್ಲಿ ಸೌರವ್ಯೂಹವನ್ನು ನೋಡಬಹುದಾದ ಆಯ್ಕೆಗಳು ಕಾಣುತ್ತವೆ.

ಅದೇ ರೀತಿ ಸೌರಮಂಡಲ ಕ್ಲಿಕ್ಕಿಸಿದರೆ ಸೂರ್ಯ ಮತ್ತು ಎಂಟು ಗ್ರಹಗಳ ಚಲನೆಯ ವೇಗ, ದೂರ ಮತ್ತು ಅಳತೆಯನ್ನು ಸುಲಭವಾಗಿ ವಿವರಿಸಿರುವುದನ್ನು ನಾವಿಲ್ಲಿ ಕಾಣಬಹುದು. 2ಡಿ ಮತ್ತು 3ಡಿ ಯಲ್ಲಿ ಸೌರಮಂಡಲದ ಚಟುವಟಿಕೆಯನ್ನು ವೀಕ್ಷಿಸುವ ಅವಕಾಶವೂ ಇಲ್ಲಿದೆ. ಇದರಿಂದ ಸೌರವ್ಯೂಹ ಹೇಗಿರಲಿದೆ ಎಂಬ ಕಲ್ಪನೆಯು ಮಕ್ಕಳಿಗೆ ಸುಲಭವಾಗಿ ಅರ್ಥವಾಗುತ್ತದೆ. ಒಮ್ಮೆ ಮಕ್ಕಳಿಗೆ ಈ ರೀತಿಯಾಗಿ ಸೌರಮಂಡಲದ ಪಾಠ ಮಾಡಿದರೆ ಅವರು ಅದನ್ನು ಬಹುಬೇಗ ಮರೆಯಲು ಸಹ ಸಾಧ್ಯವಿಲ್ಲ.

ಕನ್ನಡದಲ್ಲಿ ಸೌರವ್ಯೂಹವನ್ನು '3D'ಯಲ್ಲಿ ತೋರಿಸುತ್ತದೆ ಕನ್ನಡಿಗನ ಈ ವೆಬ್‌ಸೈಟ್‌!

ಇನ್ನು ಗಡಿಯಾರ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯಲು ಗಡಿಯಾರ ಲಿಂಕ್ ಕ್ಲಿಕ್ ಮಾಡಿದರೆ ಸಾಕು. ಹೊತ್ತು ನೋಡುವುದನ್ನು ಕಲ ಎಂಬ ಪುಟದಲ್ಲಿ ಇಂದಿನ ದಿನಾಂಕ ಮತ್ತು ಗಡಿಯಾರ ಕಾಣಿಸುತ್ತದೆ. ಅಲ್ಲಿ ವೇಳೆಯ ಮಾದರಿ ಕ್ಲಿಕ್ಕಿಸಿದರೆ 12 ತಾಸು ಅಥವಾ 24 ತಾಸುಗಳನ್ನು ಆಯ್ಕೆ ಮಾಡಬಹುದು. ನನ್ನ ಮೆಚ್ಚಿನ ಬಣ್ಣ ಮೆನು ಕ್ಲಿಕ್ಕಿಸಿ ಗಡಿಯಾರದ ಬಣ್ಣವನ್ನು ಬದಲಿಸಬಹುದು. ಇದು ಮಾತ್ರವಲ್ಲದೇ, ಗಡಿಯಾರದ ಮುಳ್ಳುಗಳನ್ನು ಚಲಿಸುವ ಮೂಲಕ ಮಕ್ಕಳಿಗೆ ಪಾಠ ಮಾಡಬಹುದು.

'ಗ್ಯಾಲಕ್ಸಿ ಎಂ 30ಎಸ್' ರಿಲೀಸ್ ಡೇಟ್ ಫಿಕ್ಸ್!..6,000mAh ಬ್ಯಾಟರಿ ಖಚಿತ!'ಗ್ಯಾಲಕ್ಸಿ ಎಂ 30ಎಸ್' ರಿಲೀಸ್ ಡೇಟ್ ಫಿಕ್ಸ್!..6,000mAh ಬ್ಯಾಟರಿ ಖಚಿತ!

ನಿಮಗೆ ತಿಳಿದಿರಲಿ,ಈ ರೀತಿಯ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಸಹಾಯಕವಾಗಲಿವೆ. ಕನ್ನಡದ ಮಕ್ಕಳು ಯಾವುದೇ ತಾಂತ್ರಿಕ ವ್ಯವಸ್ಥೆಯಿಂದ ವಂಚಿತರಾಗಬಾರದು ಎಂದು ಶ್ರೀಹರ್ಷ ಅವರು ಅಪ್ಪಟ ಕನ್ನಡ ಹೆಸರಿನ ಕಲಿಕೆಯ ಆಟಗಳ ಬ್ರಾಂಡ್ ಹುಟ್ಟು ಹಾಕಿದ್ದಾರೆ. ಸದ್ಯ, ಆಟಿಕೆ ರೂಪಿಸಿದ್ದು ನಾನೊಬ್ಬನೆ. ಮುಂದೆ ಇದಕ್ಕಾಗಿ ತಂಡವೊಂದನ್ನು ಕಟ್ಟುವ ಆಲೋಚನೆಯಿದೆ. ಆಸಕ್ತರು ನಮ್ಮ ಜೊತೆ ಕೈಜೋಡಿಸಬಹುದು' ಎನ್ನುತ್ತಾರೆ ಶ್ರೀಹರ್ಷ (ಇಮೇಲ್: [email protected])

Best Mobiles in India

English summary
Watch Solar System In 3D From A Website Designed By Kannadiga. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X