Home
ಸುದ್ದಿಜಾಲ

ಪೋರ್ನ್‌ ಸೈಟ್‌ ವೀಕ್ಷಿಸುತ್ತೀದ್ದರೆ ಎಚ್ಚರ..ಎಚ್ಚರ..!

By Gizbot Bureau

ನಿಮಗೆ ಮೊಬೈಲ್‌ ಮತ್ತು ಕಂಪ್ಯೂಟರ್‌ನಲ್ಲಿ ಪೋರ್ನ್‌ ವಿಡಿಯೋಗಳನ್ನು ನೋಡುವ ಅಭ್ಯಾಸವಿದ್ದರೆ ಒಂದಿಷ್ಟು ಯೋಚಿಸಿ. ಅದರಲ್ಲೂ ಯಾರು ನಮ್ಮನ್ನು ಟ್ರಾಕ್‌ ಮಾಡಲ್ಲ ಎಂಬ ಆಲೋಚನೆ ನಿಮ್ಮ ತಲೆಯಲ್ಲಿದ್ದರೆ ತೆಗೆದು ಹಾಕಿ. ಏಕೆಂದರೆ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ, ಮೈಕ್ರೋಸಾಫ್ಟ್ ಮತ್ತು ಕಾರ್ನೆಗಿ ಮೆಲನ್‌ ಸಂಶೋಧನೆಯಂತೆ ಇನ್‌ಕಾಗ್ನಿಟೋ ಮೋಡ್‌ನಲ್ಲಿ ಬ್ರೌಸ್ ಮಾಡಿದ್ರೂ ಎಲ್ಲಾ ಪೋರ್ನ್‌ ವೆಬ್‌ಸೈಟ್‌ಗಳು ಬಳಕೆದಾರರ ಮಾಹಿತಿಯನ್ನು ಸೋರಿಕೆ ಮಾಡುತ್ತವೆಯಂತೆ.

ಪೋರ್ನ್‌ ಸೈಟ್‌ ವೀಕ್ಷಿಸುತ್ತೀದ್ದರೆ ಎಚ್ಚರ.. ಎಚ್ಚರ..!

ಇನ್ನು, ಆಸಕ್ತಿಕರ ವಿಷಯ ಏನೆಂದರೆ, ನೀವು ಯಾವ ರೀತಿಯ ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುತ್ತೀರಿ ಎಂಬುದನ್ನು ಗೂಗಲ್, ಫೇಸ್‌ಬುಕ್ ಮತ್ತು ಒರಾಕಲ್‌ ತಿಳಿದುಕೊಂಡಿವೆ. ಈ ಮಾಹಿತಿಯನ್ನು ಗೂಗಲ್‌, ಫೇಸ್‌ಬುಕ್‌ ಏನು ಮಾಡುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. ಆದರೆ, ಈ ಬಗ್ಗೆ ನೀವು ತಿಳಿದುಕೊಳ್ಳಬೇಕಿರುವುದು ಸಾಕಷ್ಟಿದೆ.

ಮೊಬೈಲ್‌ ಮಾಹಿತಿ ಸಂಗ್ರಹ

ಮೊಬೈಲ್‌ ಮಾಹಿತಿ ಸಂಗ್ರಹ

ಪೋರ್ನ್‌ ವೆಬ್‌ಸೈಟ್‌ಗಳು ಬಳಕೆದಾರರ ಐಪಿ ವಿಳಾಸ ಅಥವಾ ಮೊಬೈಲ್‌ ಗುರುತಿನ ಸಂಖ್ಯೆಯಂತಹ ಮಾಹಿತಿಗಳನ್ನು ಸಂಗ್ರಹಿಸುತ್ತವೆ.

ಕಂಡುಹಿಡಿಯುವುದು ಕಷ್ಟ

ಕಂಡುಹಿಡಿಯುವುದು ಕಷ್ಟ

ನೀವು ನಿರ್ದಿಷ್ಟ ಅಥವಾ ವಿಶೇಷವಾದ ಸಾಫ್ಟ್‌ವೇರ್‌ ಹೊಂದಿರದಿದ್ದರೆ, ಪೋರ್ನ್‌ ಸೈಟ್‌ ನಿಮ್ಮನ್ನು ಟ್ರಾಕ್‌ ಮಾಡುತ್ತಿದೆ ಎಂಬುದನ್ನು ಕಂಡುಹಿಡಿಯುವುದು ಕಷ್ಟಸಾಧ್ಯ.

webXray

webXray

ಪೋರ್ನ್‌ ಸೈಟ್‌ಗಳು ಹೇಗೆ ಮಾಹಿತಿಯನ್ನು ಸೋರಿಕೆ ಮಾಡುತ್ತವೆ ಎಂಬುದನ್ನು ಕಂಡುಹಿಡಿಯಲು ಸಂಶೋಧಕರು webXray ಎಂಬ ಟೂಲ್‌ ಬಳಸಿದ್ದಾರೆ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ, ಮೈಕ್ರೋಸಾಫ್ಟ್ ಮತ್ತು ಕಾರ್ನೆಗಿ ಮೆಲನ್‌ ಸಂಶೋಧಕರು 22,484 ಪೋರ್ನ್‌ ವೆಬ್‌ಸೈಟ್‌ಗಳನ್ನು ಟ್ರಾಕ್‌ ಮಾಡಿ, ವಿಶ್ಲೇಷಿಸಿದ್ದಾರೆ.

ಶೇ.93ರಷ್ಟು ಸೈಟ್‌ಗಳಿಂದ ಮಾಹಿತಿ ಸೋರಿಕೆ

ಶೇ.93ರಷ್ಟು ಸೈಟ್‌ಗಳಿಂದ ಮಾಹಿತಿ ಸೋರಿಕೆ

ಸಂಶೋಧನೆಯ ಪ್ರಕಾರ ಶೇ.93ರಷ್ಟು ಪೋರ್ನ್‌ ಸೈಟ್‌ಗಳು ಗೂಗಲ್‌, ಫೇಸ್‌ಬುಕ್‌ ಸೇರಿದಂತೆ ಥರ್ಡ್‌ ಪಾರ್ಟಿಗಳಿಗೆ ಮಾಹಿತಿಯನ್ನು ಸೋರಿಕೆ ಮಾಡುತ್ತವೆ.

ಗೂಗಲ್‌ನಿಂದ ಹೆಚ್ಚು ಟ್ರಾಕ್‌

ಗೂಗಲ್‌ನಿಂದ ಹೆಚ್ಚು ಟ್ರಾಕ್‌

ಗೂಗಲ್‌ ಮತ್ತು ಅದರ ಅಂಗಸಂಸ್ಥೆಗಳಿಂದಲೇ ಪೋರ್ನ್‌ ವೆಬ್‌ಸೈಟ್‌ಗಳಲ್ಲಿ ಹೆಚ್ಚಿನ ಟ್ರಾಕಿಂಗ್‌ ಆಗುತ್ತದೆ.

ಮಾರ್ಕೆಟಿಂಗ್‌ ಪ್ರೊಫೈಲ್‌

ಮಾರ್ಕೆಟಿಂಗ್‌ ಪ್ರೊಫೈಲ್‌

ಈ ಮಾಹಿತಿಯನ್ನು ವ್ಯಕ್ತಿತ್ವ ಪ್ರಕಾರಗಳನ್ನು ಗುರುತಿಸಲು ಮತ್ತು ಮಾರ್ಕೆಟಿಂಗ್‌ ಪ್ರೊಫೈಲ್‌ ಸೃಷ್ಟಿಸಲು ಬಳಸಲಾಗುತ್ತದೆ.

ಜಾಹೀರಾತಿಗಾಗಿ ಬಳಕೆ

ಜಾಹೀರಾತಿಗಾಗಿ ಬಳಕೆ

ಗೂಗಲ್‌ ಮತ್ತು ಫೇಸ್‌ಬುಕ್‌ ಎರಡು ಸಂಸ್ಥೆಗಳು ಪೋರ್ನ್‌ ವೆಬ್‌ಸೈಟ್‌ಗಳ ಮಾಹಿತಿಯನ್ನು ಜಾಹೀರಾತಿಗಾಗಿ ಬಳಸುತ್ತವೆ.

ಹ್ಯಾಕಿಂಗ್‌ಗೆ ಅವಕಾಶ

ಹ್ಯಾಕಿಂಗ್‌ಗೆ ಅವಕಾಶ

ಸಂಶೋಧನೆ ಮತ್ತೊಂದು ಅಂಶದ ಮೇಲೆ ಬೆಳಕು ಚೆಲ್ಲಿದ್ದು, ಪೋರ್ನ್‌ ವೆಬ್‌ಸೈಟ್‌ಗಳಲ್ಲಿ ಹೆಚ್ಚಿನವು ಎನ್‌ಕ್ರಿಪ್ಟೆಡ್‌ ಅಲ್ಲ. ಇದರಿಂದ ಹ್ಯಾಕಿಂಗ್‌ಗೆ ಪೋರ್ನ್‌ ಸೈಟ್‌ಗಳಿಂದ ಹೆಚ್ಚಿನ ಅವಕಾಶ ಸಿಕ್ಕಂತೆ ಆಗುತ್ತದೆ.

Best Mobiles in India

English summary
Watching Porn On Incognito Mode? Google Might Still Know About It
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+