Subscribe to Gizbot

ನೀರಿನ ಹನಿಯಿಂದ ಮಾಡಿ ಫೋನ್ ಚಾರ್ಜಿಂಗ್

Written By:

ಗಾಳಿಯಲ್ಲಿರುವ ಆರ್ದ್ರತೆಯನ್ನು ನಿಮ್ಮ ಫೋನ್ ಅಥವಾ ಐಪ್ಯಾಡ್‌ಗಳನ್ನು ಚಾರ್ಜ್ ಮಾಡಲು ಬಳಸಬಹುದೇ? ಹೊಸ ಸಂಶೋಧನೆಯ ಪ್ರಕಾರ, ನೀರಿನ ಹನಿಗಳು ಸಣ್ಣ ಮಟ್ಟದ ವಿದ್ಯುತ್ತನ್ನು ಉತ್ಪಾದಿಸಬಹುದಾಗಿದ್ದು ಮುಂದಿನ ದಿನಗಳಲ್ಲಿ ಇದು ಸಾಧ್ಯವಾಗಲಿದೆ.

ಮೆಸ್ಯೂಚುಸೆಟ್ಸ್ ತಂತ್ರಜ್ಞಾನ ವಿದ್ಯಾಲಯ (MIT) ಹೊಸದಾದ ಸಂಶೋಧನೆಯೊಂದನ್ನು ಕೈಗೊಂಡಿದ್ದು ಸಾಂದ್ರೀಕರಣ ಸಮಯದಲ್ಲಿ ನೀರಿನ ಹನಿಗಳು ಸ್ವಯಂಪ್ರೇರಿತವಾಗಿ ಸೂಪರ್‌ಹೈಡ್ರೋಫೋಬಿಕ್ ವಲಯದಿಂದ ಜಿಗಿದಾಗ ಈ ಪ್ರಕ್ರಿಯೆಯಲ್ಲಿ ಅವುಗಳು ವಿದ್ಯುದಾವೇಶವನ್ನು ಪಡೆದುಕೊಳ್ಳುತ್ತವೆಯಂತೆ. ಇದು ಇಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಚಾರ್ಜ್ ಮಾಡುವುದರ ಜೊತೆಗೆ ಶುದ್ಧವಾದ ನೀರನ್ನು ಉತ್ಪಾದಿಸುತ್ತದೆಯಂತೆ.

ನೀರಿನ ಹನಿಯಿಂದ ನಿಮ್ಮ ಫೋನ್‌ಗೆ ಚಾರ್ಜಿಂಗ್

ಅಗ್ಗದ ಅಲ್ಯುಮಿನಿಯಮ್‌ನಿಂದ ತಯಾರಿಸಬಹುದಾದ ಚಪ್ಪಟೆ ಲೋಹದ ತಟ್ಟೆಗಳ ಶ್ರೇಣಿಯನ್ನು ಈ ಸಾಧನ ಹೊಂದಿರುತ್ತದೆ.

ನೀರಿನ ಹನಿಗಳು ಹಾರಿದಂತೆ, ಇವುಗಳು ಒಂದು ತಟ್ಟೆಯಿಂದ ಇನ್ನೊಂದು ತಟ್ಟೆಗೆ ಚಾರ್ಜ್ ಅನ್ನು ಸಾಗಿಸುತ್ತವೆ; ಬಾಹ್ಯ ಸರ್ಕ್ಯೂಟ್ ಮೂಲಕ ಎರಡು ತಟ್ಟೆಗಳು ಸಂಪರ್ಕಗೊಂಡಿದ್ದರೆ, ಈ ಚಾರ್ಜ್ ವ್ಯತ್ಯಾಸವನ್ನು ವಿದ್ಯುತ್ ಒದಗಿಸಲು ಬಳಸಿಕೊಳ್ಳಬಹುದಾಗಿದೆ.

ಸೂಪರ್‌ಹೈಡ್ರೋಫೋಬಿಕ್ ಮೇಲ್ಮೈಯಲ್ಲಿನ ಹನಿಗಳನ್ನು ಸರ್ಫೇಸ್ ಶಕ್ತಿಯಿಂದ ಚಲನ ಶಕ್ತಿಗೆ ಬದಲಾಯಿಸಿ ದೊಡ್ಡ ಹನಿಗಳನ್ನು ರಚಿಸಲು ಅವುಗಳನ್ನು ವಿಲೀನಗೊಳಿಸುವಂತಹ ಈ ಹಿಂದಿನ ಸಂಶೋಧನೆಗಳನ್ನು ಆಧರಿಸಿ ಈ ವ್ಯವಸ್ಥೆಯನ್ನು ರಚಿಸಲಾಗಿದೆ

ಶಾಖ ವರ್ಗಾವಣೆಯನ್ನು ಮೂವತ್ತು ಶೇಕಡಕ್ಕೆ ವರ್ಗಾಯಿಸುವ ಮೂಲಕ, ಇದು ನೀರ ಹನಿಗಳನ್ನು ಸ್ವಯಂಪ್ರೇರಿತವಾಗಿ ಹಾರಲು ಅನುವು ಮಾಡಿಕೊಡುತ್ತದೆ. ಈ ಹಾರುವ ಹನಿಗಳು ನಂತರ ಸಣ್ಣ ವಿದ್ಯುತ್ ಚಾರ್ಜ್ ಅನ್ನು ಪಡೆದುಕೊಳ್ಳುತ್ತವೆ.

ವಾತಾವರಣವು ಅತ್ಯಧಿಕ ಶಕ್ತಿಯನ್ನು ಒಳಗೊಂಡಿದ್ದು ಗಾಳಿ ಮತ್ತು ಡಿವೈಸ್ ನಡುವೆ ಇರುವ ತಾಪಮಾನ ವ್ಯತ್ಯಾಸವನ್ನು ನೀವು ತಿಳಿಯಬೇಕಾಗಿದೆ ಎಂದು ಸಂಶೋಧನಾ ಸಿಬ್ಬಂದಿಗಳು ತಿಳಿಸಿದ್ದಾರೆ.

ತಂಪಾದ ಗಾಜಿನ ಹೊರಗಿನ ಬೆಚ್ಚಗಿನ ಆರ್ದ್ರ ಗಾಳಿಯಿಂದ ನೀರಿನ ಹನಿಗಳಂತೆ ಇದು ಸಾಂದ್ರೀಕರಣವನ್ನು ಉತ್ಪಾದಿಸಲು ಡಿವೈಸ್ ಅನ್ನು ಅನುಮತಿಸುತ್ತದೆ.

Read more about:
English summary
This article tells about that water droplets can soon gain the power to charge your phone and any electric devices.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot