Just In
- 50 min ago
ChatGPT ಬಳಕೆಯಿಂದ ಏನೆಲ್ಲಾ ಲಾಭ? ಏನೆಲ್ಲಾ ನಷ್ಟ?
- 1 hr ago
ಏರ್ಟೆಲ್ನ ಈ ಹೊಸ ರೀಚಾರ್ಜ್ ಪ್ಲ್ಯಾನ್ನಲ್ಲಿ ದಿನವಿಡೀ ಇಂಟರ್ನೆಟ್ ಬಳಸಿದ್ರೂ ಡೇಟಾ ಖಾಲಿಯಾಗಲ್ಲ!
- 2 hrs ago
ಒನ್ಪ್ಲಸ್ ನಾರ್ಡ್ ಸ್ಮಾರ್ಟ್ವಾಚ್ ಬೆಲೆ ಇಳಿಕೆ; ಅಗ್ಗದ ದರದಲ್ಲಿ ನಿಮ್ಮ 'ಕೈ'ಗೆ!
- 3 hrs ago
Airtel, Jio and Vi: 200ರೂ. ಒಳಗೆ ಲಭ್ಯವಾಗುವ ಪ್ರಿಪೇಯ್ಡ್ ಪ್ಲಾನ್ಗಳು!
Don't Miss
- News
ನನ್ನ ಯೋಗ್ಯತೆಗೆ ಮಿರಿದ ದೊಡ್ಡ ಗೌರವ ಕೇಂದ್ರ ಸರ್ಕಾರ ನೀಡಿದೆ: ಎಸ್.ಎಂ.ಕೃಷ್ಣ
- Automobiles
ಡೀಸೆಲ್ ಎಂಜಿನ್ನೊಂದಿಗೆ ಮರಳಿ ಬಂದ ಜನಪ್ರಿಯ ಟೊಯೊಟಾ ಇನೋವಾ ಕ್ರಿಸ್ಟಾ : ಬುಕ್ಕಿಂಗ್ ಪ್ರಾರಂಭ
- Sports
ಈ ಹಿಂದಿನಂತೆ ಈ ತಂಡ ಈಗ ಬಲಿಷ್ಠ ತಂಡವಲ್ಲ: ಆಕಾಶ್ ಚೋಪ್ರ ಹೇಳಿದ ಆ ತಂಡ ಯಾವುದು?
- Movies
'ಪಠಾಣ್' ಸಿನಿಮಾಕ್ಕೆ ಬೇರೊಂದು ಹೆಸರು ಸೂಚಿಸಿದ ಕಂಗನಾ! ಏಕೆ?
- Lifestyle
Shani Asta 2023 : ಶನಿ ಅಸ್ತ 2023: ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಹಾಗೂ ಪರಿಹಾರ
- Finance
ಹಿಂಡೆನ್ಬರ್ಗ್ ವರದಿ ಎಫೆಕ್ಟ್: ಅದಾನಿ ಸ್ಟಾಕ್ ಶೇ.20ರಷ್ಟು ಕುಸಿತ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬ್ರೇಕಿಂಗ್: ಭೂಮಿಯಂತಹುದೇ ಜೀವಿಗಳು ಇರಬಹುದಾದ ಮತ್ತೊಂದು ಗ್ರಹ ಪತ್ತೆ!
ಭೂಮಿಯಂತಹ ತಾಪಮಾನವನ್ನು ಮತ್ತು ದ್ರವರೂಪದಲ್ಲಿ ನೀರನ್ನು ಹೊಂದಿರುವ ನೂತನ ಗ್ರಹವೊಂದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಸೌರಮಂಡಲದ ಹೊರಗೆ ನಕ್ಷತ್ರವನ್ನು ಸುತ್ತುವ ''ಕೆ 2-18 ಬಿ (K2-18b)'' ಗ್ರಹದ ವಾತಾವರಣದಲ್ಲಿ ಇದೇ ಮೊದಲ ಬಾರಿಗೆ ದ್ರವರೂಪದಲ್ಲಿ ನೀರು ಇರುವುದು ಪತ್ತೆಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಭೂಮಿಯ ಮೇಲಿರುವಂತೆಯೇ ಅಲ್ಲಿ ಕೂಡ ಉಷ್ಣಾಂಶವಿದ್ದು ಅದು ಜೀವಿಗಳಿಗೆ ಬದುಕಲು ಸಹಾಯವಾಗುವ ರೀತಿಯಲ್ಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಹೌದು, ಭೂಮಿಯ ದ್ರವ್ಯರಾಶಿಯ ಎಂಟು ಪಟ್ಟು ದೊಡ್ಡದಾಗಿದ್ದು, ಕೆ 2-18 ಬಿ ಗ್ರಹ ತನ್ನ ನಕ್ಷತ್ರದ "ವಾಸಯೋಗ್ಯ ವಲಯ" ದಲ್ಲಿ ಕಾಣಿಸಿಕೊಂಡಿದೆ. ಇಲ್ಲಿ ನೀರು ದ್ರವರೂಪದಲ್ಲಿದೆ ಎಂದು ವಿಜ್ಞಾನಿಗಳು ಹೇಳಿರುವುದಾಗಿ ನೇಚರ್ ಅಸ್ಟ್ರೊನೊಮಿ ವರದಿ ಮಾಡಿದೆ. ಆ ನಕ್ಷತ್ರದಿಂದ ಹೆಚ್ಚು ದೂರವೂ ಅಲ್ಲದೆ ಮತ್ತು ಹೆಚ್ಚು ಹತ್ತಿರವೂ ಅಲ್ಲದೆ ಪರಿಭ್ರಮಿಸುತ್ತಿದೆ. ಇದನ್ನು ಸೌರಮಂಡಲದ ಹೊರಗೆ ಇರುವ ಉತ್ತಮ ಗ್ರಹ ಎಂದು ವಿಜ್ಞಾನಿಗಳು ಬಣ್ಣಿಸಿದ್ದು ಇಲ್ಲಿ ಜೀವಿಗಳು ವಾಸಿಸುತ್ತಿದ್ದಾರೆಯೇ ಎಂಬ ಹುಡುಕಾಟದಲ್ಲಿ ವಿಜ್ಞಾನಿಗಳು ತೊಡಗಿದ್ದಾರೆ.

ಲಿಯೋ ನಕ್ಷತ್ರಪುಂಜದಲ್ಲಿ ಭೂಮಿಯಿಂದ ಸುಮಾರು 110 ಬೆಳಕಿನ ವರ್ಷಗಳ ದೂರದಲ್ಲಿರುವ ತಂಪಾದ ಕುಬ್ಜ ನಕ್ಷತ್ರ ಕೆ 2-18 ಅನ್ನು ಈ ಗ್ರಹವು ಪರಿಭ್ರಮಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಗ್ರಹದ ಮೇಲ್ಮೈಯಲ್ಲಿ ಸಾಗರ ಇರಬಹುದು ಎಂದು ಭಾವಿಸಲು ಸಾಧ್ಯವಿಲ್ಲ, ಆದರೆ ಸಾಧ್ಯತೆಯಿದೆ. ಇಂದಿನವರೆಗೆ ಪತ್ತೆಹಚ್ಚಿರುವ 4 ಸಾವಿರಕ್ಕೂ ಅಧಿಕ ಸೌರಮಂಡಲದ ಹೊರಗೆ ನಕ್ಷತ್ರಗಳನ್ನು ಸುತ್ತುವ ಗ್ರಹಗಳಲ್ಲಿ ಕಲ್ಲಿನ ಮೇಲ್ಮೈ ಮತ್ತು ವಾತಾವರಣವನ್ನು ನೀರಿನೊಂದಿಗೆ ಸಂಯೋಜಿಸುವ ಗ್ರಹ ಇದೇ ಮೊದಲಾಗಿದೆ.

''2-18 ಬಿ'' ಗ್ರಹದಲ್ಲಿ ನೀರಿನ ಆವಿಯು ಇರುವುದನ್ನು ಫಲಿತಾಂಶಗಳು ಬಹಿರಂಗಪಡಿಸಿದವು. ಇದು ಗ್ರಹದ ವಾತಾವರಣದಲ್ಲಿ ಹೈಡ್ರೋಜನ್ ಮತ್ತು ಹೀಲಿಯಂ ಇರುವಿಕೆಯನ್ನು ಸೂಚಿಸುತ್ತದೆ. ಮೋಡದ ವ್ಯಾಪ್ತಿ ಮತ್ತು ವಾತಾವರಣದ ನೀರಿನ ಶೇಕಡಾವಾರು ಪ್ರಮಾಣವನ್ನು ಅಂದಾಜು ಮಾಡಲು ಹೆಚ್ಚಿನ ಅಧ್ಯಯನಗಳು ಅಗತ್ಯವಾಗಿವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇನ್ನು ಅಲ್ಲಿ ಸಾರಜನಕ ಮತ್ತು ಮೀಥೇನ್ ಸೇರಿದಂತೆ ಇತರ ಅಣುಗಳು ಸಹ ಇರಬಹುದು ಎಂದು ಅವರು ನಂಬಿದ್ದಾರೆ.

ಕೆ2-18ಬಿ ಪತ್ತೆಯಾಗಿದ್ದು 2015ರಲ್ಲಿ. ಸೂಪರ್ ಅರ್ಥ್ಸ್ ಪ್ಲಾನೆಟ್ ಎಂದು ಕರೆಯಲ್ಪಡುವ ನೂರಾರು ಗ್ರಹಗಳಲ್ಲಿ ಇದು ಕೂಡ ಒಂದು. ಮುಂದಿನ ದಶಕಗಳಲ್ಲಿ ಇಂತಹ ನೂರಾರು ಗ್ರಹಗಳನ್ನು ಬಾಹ್ಯಾಕಾಶ ಯೋಜನೆಯಲ್ಲಿ ವಿಜ್ಞಾನಿಗಳು ಕಂಡುಹಿಡಿಯುವ ಸಾಧ್ಯತೆಯಿದೆ "ಭೂಮಿಯ ಹೊರತಾಗಿ ವಾಸಯೋಗ್ಯ ಜಗತ್ತಿನಲ್ಲಿ ನೀರನ್ನು ಹುಡುಕುವುದು ನಂಬಲಾಗದಷ್ಟು ರೋಮಾಂಚನಕಾರಿಯಾಗಿದೆ" ಎಂದು ಯುಕೆ ಯ ಯೂನಿವರ್ಸಿಟಿ ಕಾಲೇಜ್ ಲಂಡನ್ (ಯುಸಿಎಲ್) ನ ಏಂಜೆಲೋಸ್ ಸಿಯಾರಾಸ್ ಅವರು ಹೇಳಿದ್ದಾರೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470