ವಾಟರ್ ಪ್ರೂಫ್ ಐಫೋನ್ ಕೋಟಿಂಗ್ ತಂದ ಲಿಕ್ವಿಪೆಲ್

Posted By: Varun
ವಾಟರ್ ಪ್ರೂಫ್ ಐಫೋನ್ ಕೋಟಿಂಗ್ ತಂದ ಲಿಕ್ವಿಪೆಲ್

ಸಾಮಾನ್ಯವಾಗಿ ಮೊಬೈಲ್ ಫೋನ್ ಉಪಯೋಗಿಸುವವರು ಎಲ್ಲಾ ಕಡೆ ಉಪಯೋಗಿಸಲು ಇಷ್ಟ ಪಡುತ್ತಾರೆ. ಅದು ಟಾಯ್ಲೆಟ್ ಇರಬಹುದು, ಸ್ನಾನ ಮಾಡುವಾಗ ಯಾರದ್ರೂ ಫೋನ್ ಮಾಡಿದರೆ ಕಾಲ್ ಮಿಸ್ ಆಗುತ್ತದೆ ಅಂತ ಫೋನ್ ಅನ್ನು ಅಲ್ಲಿಗೂ ತೆಗೆದುಕೊಂಡು ಹೋಗುವ ಜನರೂ ಇದ್ದಾರೆ. ಇನ್ನು ಸ್ಮಾರ್ಟ್ ಫೋನ್ ಇದ್ದರಂತೂ ಮ್ಯೂಸಿಕ್ ಕೇಳಿಕೊಂಡು ಹಾಡು ಹಾಡಿಕೊಂಡು ಸ್ನಾನ ಮಾಡುವ ಜನರು ಇದ್ದರಂತೂ, ನೀರು ಬೀಳದಂತೆ ಹೇಗೋ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡು ಹಾಡು ಕೇಳುತ್ತಾರೆ.

ಆದರೆ ಇಷ್ಟೆಲ್ಲಾ ಸರ್ಕಸ್ ಮಾಡುವ ಅಗತ್ಯ ಬರದ ಹಾಗೆ ಲಿಕ್ವಿಪೆಲ್ ಎಂಬ ಕಂಪನಿ ನ್ಯಾನೊ೦ ಕೋಟಿಂಗ್ ತಂತ್ರಜ್ಞಾನವನ್ನು ಬಳಸಿ ನಿಮ್ಮ ಫೋನ್ ಅನ್ನು ವಾಟರ್ ಪ್ರೋಫ್ಫ್ ಮಾಡಲಿದೆ. ವಿಶೇಷವೇನೆಂದರೆ ಇದು ಯಾವುದೇ ಬಾಹ್ಯ ಕವರಿಂಗ್ ಅನ್ನು ಬಳಸುವುದಿಲ್ಲ. ಮೊಬೈಲ್ ಗೆ ಲ್ಯಾಮಿನೆಶನ್ ಮಾಡುವ ಬದಲು, ಫೋನಿನ ಮೇಲ್ಭಾಗ ಹಾಗು ಒಳಭಾಗಗಳಿಗೂ ನ್ಯಾನೋ ಕೋಟಿಂಗ್ ಮಾಡಿ ಏನೆ ಮಾಡಿದರೂ ಒಂದಿನಿತೂ ನೀರು ಒಳಗೆ ಹೋಗದಂತೆ ಸುರಕ್ಷಿತವಾಗಿಸುತ್ತದೆ.

ಲಿಕ್ವಿಪೆಲ್ ನ ಈ ನ್ಯಾನೋ ಕೋಟಿಂಗ್ ತಂತ್ರಜ್ಞಾನಕ್ಕೆ ಇನ್ನೂ ಪೇಟೆಂಟ್ ಸಿಗಬೇಕಿದ್ದು, ಇದರಿಂದ ಕೇವಲ ಮೊಬೈಲ್ ಅಷ್ಟೇ ಅಲ್ಲದೆ ಟ್ಯಾಬ್ಲೆಟ್ ಹಾಗು ಹೆಡ್ ಫೋನ್ಗಳಿಗೂ ಕವರಿಂಗ್ ಮಾಡಿಸಬಹುದಾಗಿದೆ. ಆಪಲ್ ನ ಐಫೋನ್ ಗೆ ಈ ನ್ಯಾನೋ ಕೋಟಿಂಗ್ ಮಾಡಿ ಪರೀಕ್ಷೆ ಮಾಡಿ ನೋಡಿದಾಗ ಯಾವುದೇ ರೀತಿ ಅಡಚಣೆಯಿಲ್ಲದೆ ನೀರಿನಲ್ಲಿ ಮುಳುಗಿಸಿದರೂ ಸಮರ್ಪಕವಾಗಿ ಕೆಲಸ ಮಾಡಿತು.

ಈ ತಂತ್ರಜ್ಞಾನ ಇನ್ನು ಕೆಲವೇ ತಿಂಗಳುಗಳಲ್ಲಿ ಭಾರತಕ್ಕೆ ಬರಲಿದ್ದು, ಸುಮಾರು 3 ,500 ರೂಪಾಯಿ ಆಗಬಹುದು.

ಇದು ಹೇಗೆ ಕೆಲಸ ಮಾಡುತ್ತೆ ಎಂದು ತಿಳಿದುಕೊಳ್ಳಲು ನೀವು ಈ ವೀಡಿಯೋ ನೋಡಲೇಬೇಕು

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot