Wayanad Landslides: Airtelನಿಂದ ನೆರವು.. ಉಚಿತ ಕರೆ, 1GB ಡೇಟಾ, 100 SMS ಫ್ರೀ!
Wayanad Landslides: ವಯನಾಡ್ ಭೂಕುಸಿತ ಸಂತ್ರಸ್ತರಿಗೆ ಆಸರೆಯಾದ ಏರ್‌ಟೆಲ್! ಸಂತ್ರಸ್ತರಿಗಾಗಿ ಉಚಿತ ಡೇಟಾ, ಅನ್‌ಲಿಮಿಟೆಡ್ ಕರೆ ಸೇವೆ ಘೋಷಣೆ. ಹೌದು, ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ (Wayanad Landslides) ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಟೆಲಿಕಾಂ ದೈತ್ಯ ಭಾರ್ತಿ ಏರ್‌ಟೆಲ್ (Airtel) ಮೂರು ದಿನಗಳ ಕಾಲ ಉಚಿತ ಸೇವೆ ನೀಡುವುದಾಗಿ ಘೋಷಿಸಿದೆ. ಇದಲ್ಲದೇ, ಬಿಲ್ ಗಡುವನ್ನು ಕೂಡ ವಿಸ್ತರಣೆ ಮಾಡಿದೆ. ವಯನಾಡ್‌ನಲ್ಲಿರುವ ಪ್ರಿಪೇಯ್ಡ್ ಗ್ರಾಹಕರು ಈ ಆಫರ್‌ಗಳನ್ನು ಪಡೆಯಬಹುದು.
ಮಂಗಳವಾರ ಭಾರೀ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 250 ದಾಟಿದೆ. ಅವಶೇಷಗಳ ಅಡಿಯಲ್ಲಿ ಬದುಕುಳಿದವರು ಮತ್ತು ಮೃತದೇಹಗಳಿಗಾಗಿ ಶೋಧ ಕಾರ್ಯ ಮುಂವಯನಾಡ್ ಭೂಕುಸಿತ ಸಂತ್ರಸ್ತರಿಗಾಗಿ ದುವರಿದಿದೆ. 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 220ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತ, ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತಕ್ಕೆ ಪ್ರತಿಕ್ರಿಯೆಯಾಗಿ, ಟೆಲಿಕಾಂ ದೈತ್ಯ ಭಾರ್ತಿ ಏರ್‌ಟೆಲ್ ಪ್ರತಿ ದಿನ ಉಚಿತ 1 ಜಿಬಿ ಡೇಟಾ ನೀಡುವುದಾಗಿ ಹೇಳಿದೆ. ಅವಧಿ ಮುಗಿದಿರುವ ಪ್ರಿಪೇಯ್ಡ್ ಗ್ರಾಹಕರಿಗೆ ಅನ್‌ಲಿಮಿಟೆಡ್ ಕರೆ ಸೇವೆಯನ್ನು ಒದಗಿಸುವುದಾಗಿ ಘೋಷಣೆ ಮಾಡಿದೆ. ಕಂಪನಿಯು ತನ್ನ ಕೊಡುಗೆಯಲ್ಲಿ ಉಚಿತ ಕರೆ, ನಿತ್ಯ 1GB ಡೇಟಾ ಮತ್ತು ಪ್ರಿಪೇಯ್ಡ್ ಬಳಕೆದಾರರಿಗೆ 100 ಉಚಿತ SMS ಅನ್ನು ಸೇರಿಸಿದೆ.
ಬಿಲ್ ಪಾವತಿ ಗಡುವು 30 ದಿನ ವಿಸ್ತರಣೆ
ಪ್ರಸ್ತುತ, ಗ್ರಾಹಕರಿಗೆ ಈ ಸೇವೆಗಳಿಗೆ ಯಾವುದೇ ರೀಚಾರ್ಜ್ ಅಗತ್ಯವಿಲ್ಲ. ಅರ್ಹ ಗ್ರಾಹಕರಿಗೆ ಏರ್‌ಟೆಲ್ ಸ್ವಯಂಚಾಲಿತವಾಗಿ ಈ ಪ್ರಯೋಜನಗಳನ್ನು ನೀಡುತ್ತದೆ. ಏರ್‌ಟೆಲ್ ಭೂಕುಸಿತದಿಂದ ಹಾನಿಗೊಳಗಾದ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಬಿಲ್ ಪಾವತಿ ಗಡುವನ್ನು ಹೆಚ್ಚುವರಿ 30 ದಿನಗಳವರೆಗೆ ವಿಸ್ತರಿಸಿದೆ. ವಿಪತ್ತುಗಳಿಂದ ಸಂತ್ರಸ್ತರ ಮೇಲೆ ಆರ್ಥಿಕ ಹೊರೆ ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.
ಸತ್ರಸ್ಥರಿಗೆ ಸಹಾಯ ಮಾಡುವ ಉದ್ದೇಶ
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಏರ್‌ಟೆಲ್, ಕೇರಳದ ವಯನಾಡಿನಲ್ಲಿ ಭೂಕುಸಿತದಿಂದ ಸಂತ್ರಸ್ತ ಜನರೊಂದಿಗೆ ಏರ್‌ಟೆಲ್ ಬೆಂಬಲವಾಗಿ ನಿಲ್ಲಲಿದೆ. ಸಂಕಷ್ಟದಲ್ಲಿರುವ ಸಂತ್ರಸ್ಥರನ್ನು ಬೆಂಬಲಿಸುವ ಸಣ್ಣ ಸೂಚಕವಾಗಿ, ನಾವು ಈ ಕೆಳಗಿನ ಕ್ರಮಗಳನ್ನು ಘೋಷಿಸುತ್ತಿದ್ದೇವೆ. ಭೂ ಕುಸಿತ ಪೀಡಿತ ಸತ್ರಸ್ಥರಿಗೆ ಸಹಾಯ ಮಾಡುವ ಉದ್ದೇಶದಿಂದ ಪರಿಹಾರ ಕ್ರಮಗಳನ್ನು ಘೋಷಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಏರ್‌ಟೆಲ್ ಕಂಪನಿಯ ಈ ನಿರ್ಧಾರವು ಭೂಕುಸಿತದಿಂದ ಪ್ರಭಾವಿತರಾದವರಿಗೆ ಅಗತ್ಯ ಸಂವಹನ ಸೇವೆಗಳನ್ನು ಒದಗಿಸುತ್ತದೆ. ಪರಿಹಾರ ಸಾಮಗ್ರಿಗಳ ಸಂಗ್ರಹಣೆ ಮತ್ತು ವಿತರಣೆಯನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ಹೇಳಿದೆ.
52 ಪರಿಹಾರ ಸಾಮಗ್ರಿ ಕೇಂದ್ರ ಸ್ಥಾಪನೆ
ಕೇರಳದಲ್ಲಿರುವ ಏರ್‌ಟೆಲ್‌ನ 52 ಚಿಲ್ಲರೆ ಅಂಗಡಿಗಳನ್ನು ಪರಿಹಾರ ಸಂಗ್ರಹಣಾ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ. ಈ ಮಳಿಗೆಗಳು ಸಾರ್ವಜನಿಕರಿಂದ ಪರಿಹಾರ ಸಾಮಗ್ರಿಗಳನ್ನು ಸ್ವೀಕರಿಸುತ್ತವೆ. ವಯನಾಡಿನ ಪೀಡಿತ ಸಮುದಾಯಗಳಿಗೆ ವಿತರಿಸಲು ಸ್ಥಳೀಯ ಆಡಳಿತಕ್ಕೆ ಹಸ್ತಾಂತರಿಸಲಾಗುವುದು.
ಏರ್‌ಟೆಲ್‌ನಿಂದ ಪರಿಹಾರ ಕ್ರಮಗಳು
ಪ್ರಿಪೇಯ್ಡ್ ಗ್ರಾಹಕರಿಗೆ: ವ್ಯಾಲಿಡಿಟಿ ಮುಗಿದು ರೀಚಾರ್ಜ್ ಮಾಡಲು ಸಾಧ್ಯವಾಗದ ಗ್ರಾಹಕರಿಗೆ ದಿನಕ್ಕೆ 1 GB ನಂತೆ ಮೂರು ದಿನಗಳ ಕಾಲ ಉಚಿತ ಮೊಬೈಲ್ ಡೇಟಾ, ಅನ್‌ಲಿಮಿಟೆಡ್ ಧ್ವನಿ ಕರೆ ಮತ್ತು ದಿನಕ್ಕೆ 100 SMS ಸೇವೆ ನೀಡಲಾಗುತ್ತದೆ.
ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ: ಮೊಬೈಲ್ ಸೇವೆಗಳಿಗೆ ತಡೆರಹಿತ ಸೇವೆ ಖಚಿತಪಡಿಸಿಕೊಳ್ಳಲು ಎಲ್ಲಾ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಬಿಲ್ ಪಾವತಿ ದಿನಾಂಕಗಳನ್ನು 30 ದಿನಗಳವರೆಗೆ ವಿಸ್ತರಿಸಲಾಗಿದೆ.
ಒಟ್ಟಾರೆಯಾಗಿ, ಭಾರ್ತಿ ಏರ್‌ಟೆಲ್‌ನ ಈ ನಿರ್ಧಾರ ವಯನಾಡ್ ಭೂಕುಸಿತ ಸಂತ್ರಸ್ತರಿಗೆ ತುಂಬಾ ಸಹಾಯವಾಗಿದೆ. ಕಂಪನಿಯ ಉಪಕ್ರಮವು ಸಂತ್ರಸ್ತ ಗ್ರಾಹಕರು ಸೇವೆಯ ಸಮಸ್ಯೆಗಳು ಅಥವಾ ಹೆಚ್ಚುವರಿ ವೆಚ್ಚಗಳ ಬಗ್ಗೆ ಚಿಂತಿಸದೆ ಸಂಪರ್ಕದಲ್ಲಿರಬಹುದು ಎಂದು ಖಚಿತಪಡಿಸಿದೆ.


Click it and Unblock the Notifications








