Home
ಸುದ್ದಿಜಾಲ

4G ಬ್ರೌಸಿಂಗ್ ವೇಗ ಹೆಚ್ಚಿಸಲು ಹೀಗೆ ಮಾಡುದ್ರೆ ಸಾಕು!!

4ಜಿ ಇಂಟರ್ನೆಟ್ ಕನೆಕ್ಷನ್‌ ಇದ್ದರೂ, ದುಬಾರಿ ಸ್ಮಾರ್ಟ್‌ಫೋನ್‌ ಅನ್ನು ಹೊಂದಿದ್ದರೂ, 4ಸ್ಮಾರ್ಟ್‌ಫೋನ್‌ನ ಬ್ರೌಸಿಂಗ ವೇಗ 2ಜಿಗಿಂತ ಕಡಿಮೆ ಇರುತ್ತದೆ ಎಂಬುದು ಬಹುತೇಕರ ದೂರು. ಆದರೆ, ನಿಮಗೆ ಗೊತ್ತಾ? ನೀವು ಎಷ್ಟೇ ದುಬಾರಿ ಸ್ಮಾರ್ಟ್‌ಫೋನ್‌ ಖರೀದಿಸಿದರೂ ಇಂಟರ್ನೆಟ್‌ನ ವೇಗವು ಸ್ಥಳ ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ ಎಂಬುದು ಮಾತ್ರ ಸತ್ಯ.

ಇನ್ನು ಇದರ ಹೊರತಾಗಿಯೂ ಸ್ಮಾರ್ಟ್‌ಫೋನ್‌ ಬಳಸುವ ನಿಮ್ಮ ಅಭ್ಯಾಸ ಹಾಗೂ ಬ್ರೌಸಿಂಗ್ ಮಾಡುವ ಮಾರ್ಗದಲ್ಲಿ ಒಂದಷ್ಟು ಶಿಸ್ತು ರೂಢಿಸಿಕೊಂಡರೆ ನಿಮ್ಮ ಇಂಟರ್ನೆಟ್‌ವೇಗವನ್ನು ಹೆಚ್ಚಿಸಬಹುದು. ಇದಕ್ಕಾಗಿ, ನೀವು ಫೋನಿನಲ್ಲಿ ಯಾವ ಬ್ರೌಸರ್ ಬಳಸುತ್ತಿದ್ದೀರಿ ಎಂಬುದರಿಂದ ಶುರುವಾಗಿ, ಆ ಬ್ರೌಸರ್ ಅನ್ನು ಹೇಗೆ ಬಳಸುತ್ತಿದ್ದೀರಾ ಎಂಬುದು ಕೂಡ ಮುಖ್ಯವಾಗುತ್ತದೆ.

4G ಬ್ರೌಸಿಂಗ್ ವೇಗ ಹೆಚ್ಚಿಸಲು ಹೀಗೆ ಮಾಡುದ್ರೆ ಸಾಕು!!

ಉದಾಹರಣೆಗೆ, ಬಹುತೇಕರು ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ ಕ್ರೋಮ್‌ ಬ್ರೌಸರ್ ಬಳಸುವುದು ಸಾಮಾನ್ಯ. ಈ ಗೂಗಲ್‌ ಕ್ರೋಮ್‌ ಉತ್ತಮ ಬ್ರೌಸರ್ ಆದರೂ ಸಹ ಅದರ ಮೂಲಕ ಬ್ರೌಸ್ ಮಾಡುವಾಗ ಬ್ರೌಸಿಂಗ್ ವೇಗ ತಗ್ಗುವುದೂ ಇದೆ. ಇನ್ನು ನಿಮ್ಮ ಮೊಬೈಲ್‌ನ ಇನ್‌ಬಿಲ್ಟ್‌ ಸ್ಟೋರೇಜ್‌ ಸಾಮರ್ಥ್ಯ ಕಡಿಮೆ ಇದ್ದರೂ ಸಹ ನಿಮಗೆ ಬ್ರೌಸಿಂಗ್ ವೇಗ ಕಡಿಮೆಯಾಗಲಿದೆ.

ನೀವು ಬ್ರೌಸಿಂಗ್ ವೇಳೆ ಬಳಸುವ ಪಾಸ್‌ವರ್ಡ್‌, ಬುಕ್‌ಮಾರ್ಕ್‌ ಹಾಗೂ ಹಿಸ್ಟರಿಯನ್ನು ಕ್ರೋಮ್‌ ನೆನಪಿಟ್ಟುಕೊಳ್ಳುತ್ತದೆ. ಕ್ರೋಮ್‌ನ ಈ ಸ್ಮರಣಗುಣದ ಕಾರಣದಿಂದ ನೀವು ಹಿಸ್ಟರಿ ಕ್ಲಿಯರ್ ಮಾಡದೆ ಬ್ರೌಸಿಂಗ್ ಮಾಡಿದರೆ ವೇಗ ತಗ್ಗುತ್ತದೆ. ಹಾಗಾಗಿ ಪ್ರತಿ ಬಾರಿ ನೀವು ಬ್ರೌಸ್ ಮಾಡುವ ಮುನ್ನ ಬ್ರೌಸಿಂಗ್ ಡೇಟಾ ಕ್ಲಿಯರ್ ಮಾಡಿದರೆ ನಿಮ್ಮ ಅಂತರ್ಜಾಲದ ವೇಗ ಹೆಚ್ಚಾಗುತ್ತದೆ.

4G ಬ್ರೌಸಿಂಗ್ ವೇಗ ಹೆಚ್ಚಿಸಲು ಹೀಗೆ ಮಾಡುದ್ರೆ ಸಾಕು!!

ಇನ್ನು ಮ್ಮ ಮೊಬೈಲ್‌ನ ಇನ್‌ಬಿಲ್ಟ್‌ ಸ್ಟೋರೇಜ್‌ ಸಾಮರ್ಥ್ಯ ಕಡಿಮೆ ಇದ್ದರೂ ಅದು ಬ್ರೌಸರ‌ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚು ಸ್ಪೇಸ್‌ ತೆಗೆದುಕೊಳ್ಳುವ ಅನಗತ್ಯ ಆಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ. ಇದಲ್ಲದೆ ಸ್ಮಾರ್ಟ್‌ಫೋನ್‌ನ ಸೆಟ್ಟಿಂಗ್‌ನಲ್ಲಿ ಕ್ಯಾಚ್‌ ಕ್ಲಿಯರ್ ಆಯ್ಕೆ ಮಾಡಿದರೆ ನಿಮ್ಮ ಫೋನ್‌ನ ವೇಗ ಹೆಚ್ಚಾಗುತ್ತದೆ.

Best Mobiles in India

English summary
Delete all cache memory in your phone.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+