ಪೈರಸಿ ವೆಬ್ಸೈಟ್ ಬ್ಲಾಕ್ ಮಾಡ್ಬೇಡಿ: ಹೈಕೋರ್ಟ್

Posted By: Varun
ಪೈರಸಿ ವೆಬ್ಸೈಟ್ ಬ್ಲಾಕ್ ಮಾಡ್ಬೇಡಿ: ಹೈಕೋರ್ಟ್

ನಿಮ್ಮ ಇಂಟರ್ನೆಟ್ ಸೇವಾದಾರ ಕಂಪನಿಗಳಿಂದ ಟಾರೆಂಟ್ ವೆಬ್ಸೈಟುಗಳು ಬ್ಲಾಕ್ ಆಗಿದ್ದರೆ ಇನ್ನು ಮುಂದೆ ಯೋಚನೆ ಮಾಡುವ ಅಗತ್ಯವಿಲ್ಲ. ಯಾಕೆಂದರೆ ಮದ್ರಾಸ್ ಹೈಕೋರ್ಟ್, ಪೈರಸಿ ಫಿಲಂ ಇರುವ ವೀಡಿಯೋ ಶೇರಿಂಗ್ ಹಾಗು ಟಾರೆಂಟ್ ವೆಬ್ಸೈಟುಗಳನ್ನು ಪೂರಾ ಬ್ಲಾಕ್ ಮಾಡಬಾರದು, ಕೇವಲ ಕಾನೂನು ಬಾಹಿರವಾಗಿ ಅಪ್ಲೋಡ್ ಮಾಡಿದ ಚಿತ್ರಗಳು ಇರುವ URL (ಯಾವುದೇ ವೆಬ್ಸೈಟ್ ಗೆ ನೇರವಾಗಿ ಹೋಗಲು ಅಥವಾ ಅಲ್ಲಿನ ಮಾಹಿತಿ ಪಡೆಯಲು ಬಳಸುವ ಕೊಂಡಿ) ವೆಬ್ಸೈಟ್ ಅನ್ನು ಮಾತ್ರ ಬ್ಲಾಕ್ ಮಾಡಬೇಕು ಎಂಬ ಮಹತ್ವದ ತೀರ್ಪು ನೀಡಿದೆ.

ಕಳೆದ ವರ್ಷ ರಿಲಯನ್ಸ್ ಎಂಟರ್ಟೈನ್ಮೆಂಟ್, ತಾನು ನಿರ್ಮಿಸಿದ ಹಲವಾರು ಚಿತ್ರಗಳ ಪೈರಸಿ ಆಗಿದ್ದರಿಂದ, ದೆಹಲಿ ಹೈಕೋರ್ಟ್ ನಿಂದ ಜಾನ್ ಡೋ ಆರ್ಡರ್ ತೆಗೆದುಕೊಂಡು ಬಂದು, ಆನಲೈನ್ ನಲ್ಲಿ ಈ ರೀತಿ ಪೈರಸಿ ಹರಡುವ ವೆಬ್ಸೈಟುಗಳನ್ನು ಬ್ಲಾಕ್ ಮಾಡುವಂತೆ ಎಲ್ಲಾ ಇಂಟರ್ನೆಟ್ ಸೇವೆ ಕೊಡುವ ಕಂಪನಿಗಳಿಗೆ ಆಗ್ರಹಿಸಿತ್ತು ಹಾಗು ತನ್ನದೇ ರಿಲಯನ್ಸ್ ಕಮ್ಯೂನಿಕೇಷನ್ ನಿಂದ ಈ ರೀತಿಯ ವೆಬ್ಸೈಟುಗಳನ್ನು ಬ್ಲಾಕ್ ಮಾಡಿತ್ತು.

ಇದರಿಂದಾಗಿ ಹಲವಾರು ಇಂಟರ್ನೆಟ್ ಸೇವಾದಾರರು ಬ್ಲಾಕ್ ಮಾಡಬೇಕಾಗಿ ಬಂದು, ವೀಡಿಯೋ ಶೇರಿಂಗ್ ವೆಬ್ಸೈಟ್ ಆದ vimeo, dailymotion, ಹಾಗು ಪೈರೆಟ್ ವೆಬ್ಸೈಟ್ ಗಳಾದ thepiratebay, sohunt.com, torrentz.eu, kat.ph, torlock.com, kickasstorrents.com, torrentfunk.com, fenopy.eu ಹಾಗು ಟೆಕ್ಸ್ಟ್ ಮತ್ತು ಕೋಡಿಂಗ್ ವೆಬ್ಸೈಟ್ Pastebin, ಬುಕ್ ಮಾರ್ಕ್ ವೆಬ್ಸೈಟ್ ಆದ Xmarks ಗಳನ್ನ ISP ಗಳು ಬ್ಲಾಕ್ ಮಾಡಿದ್ದವು.

ಆದರೆತಮ್ಮ ಗ್ರಾಹಕರಿಂದ ಪ್ರತಿಭಟನೆ ಎದುರಿಸಬೇಕಾಗಿ ಬಂದಿದ್ದರಿಂದ ಇವರುಗಳು ಈ ಆದೇಶದ ವಿರುದ್ಧ ಕೋರ್ಟಿನಲ್ಲಿ ಮನವಿ ಸಲ್ಲಿಸಿದ್ದವು.

ಮನವಿಯನ್ನು ಪುರಸ್ಕರಿಸಿ ಮಡ್ರಾಸ್ ಹೈಕೋರ್ಟ್, ಕೇವಲ ಪೈರಸಿ ಫಿಲಂ ಸಿಗುವ url ಅನ್ನು ಮಾತ್ರ ಬ್ಲಾಕ್ ಮಾಡಬೇಕು ಎಂದು ಆದೇಶ ನೀಡಿರುವುದು ನಿಜಕ್ಕೂ ಇಂಟರ್ನೆಟ್ ಗ್ರಾಹಕರಿಗೆ ಸಂತಸದ ವಿಷಯವಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot