ಆರೋಗ್ಯ ದಾಖಲಿಸುವ ಮ್ಯಾಜಿಕ್ ಅಪ್ಲಿಕೇಶನ್ ಹೆಲ್ದೀ ಟಾರ್ಗೆಟ್

Written By:

ಆಪಲ್ ಮತ್ತು ಇತರ ಕಂಪೆನಿಗಳು ಫಿಟ್‌ನೆಸ್‌‌ಗೆ ಸಂಬಂಧಿಸಿದಂತೆ ಹಲವಾರು ಅಪ್ಲಿಕೇಶನ್‌ಗಳನ್ನು ಹೊರತಂದಿದ್ದು ಈ ಬಾರಿ ವೆಬ್‌ಎಮ್‌ಡಿ ಕೂಡ ತನ್ನ ಹೊಸದಾದ ಫಿಟ್‌ನೆಸ್ ಅಪ್ಲಿಕೇಶನ್ ಅನ್ನು ಹೊರತಂದಿದ್ದು ಇದರ ಹೆಸರು ಹೆಲ್ತ್ ಟಾರ್ಗೆಟ್ ಎಂದಾಗಿದೆ.

ಫಿಟ್‌ಬಿಟ್ ಮತ್ತು ಜಾಬೋನ್‌ನಂತಹ ಟ್ರಾಕರ್‌ಗಳೊಂದಿಗೆ ಇದು ಕಾರ್ಯನಿರ್ವಹಿಸುತ್ತಿದ್ದು ಗ್ಲುಕೋಮೀಟರ್ಸ್ ಹಾಗೂ ವೈರ್‌ಲೆಸ್ ಸ್ಕೇಲ್‌ನಂತೆ ಇದು ನಿಮ್ಮ ಆರೋಗ್ಯದ ಬಗೆಗೆಎಲ್ಲಾ ಮಾಹಿತಿಯನ್ನು ನೀಡುತ್ತದೆ.

ನಿಮ್ಮ ಆರೋಗ್ಯವನ್ನು ಪರಿಶೀಲಿಸುವ ಹೆಲ್ದೀ ಟಾರ್ಗೆಟ್

ಆಪಲ್ ಇತ್ತೀಚೆಗೆ ಬಿಡುಗಡೆ ಮಾಡಿರುವ ಹೆಲ್ತ್ ಕಿಟ್ ಪ್ಲಾಟ್‌ಫಾರ್ಮ್‌ನಂತೆ, ಹೆಲ್ದೀ ಟಾರ್ಗೆಟ್ ಬಳಕೆದಾರರಿಗೆ ತಮ್ಮ ಆರೋಗ್ಯವನ್ನು ಮತ್ತು ಕ್ರೋನಿಕ್ ಪರಿಸ್ಥಿತಿಗಳನ್ನು ನಿರ್ವಹಿಸಲು ಸಹಾಯಕವಾಗುವಂತೆ ಇದು ಸಹಾಯ ಮಾಡುತ್ತದೆ. ಆದರೆ ಈ ಅಪ್ಲಿಕೇಶನ್ ಕೊಂಚ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಈ ಅಪ್ಲಿಕೇಶನ್ ನೀವು ಎಷ್ಟು

ಮೆಟ್ಟಲುಗಳನ್ನು ಏರಿದ್ದೀರಿ, ಎಷ್ಟು ನಿದ್ದೆ ಮಾಡಿದ್ದೀರಿ ಮೊದಲಾದ ಮಾಹಿತಿಯನ್ನು ಟ್ರ್ಯಾಕ್ ಮಾಡುತ್ತದೆ. ಮತ್ತು ನಿಮ್ಮ ಲೈಫ್ ಸ್ಟೈಲ್‌ಗೆ ಅನುಗುಣವಾಗುವಂತಹ ಆರೋಗ್ಯಕಾರಿ ಅಂಶಗಳನ್ನು ನಿಮಗೆ ತಿಳಿಸಿಕೊಡುತ್ತದೆ.

ಉದಾಹರಣೆಗೆ ನೀವು ಸಾಕಷ್ಟು ನಿದ್ದೆ ಮಾಡಿಲ್ಲವೆಂದರೆ ಈ ಅಪ್ಲಿಕೇಶನ್ ನಿಮಗೆ ನಿದ್ದೆಯ ಮಹತ್ವವವನ್ನು ತಿಳಿಸಿಕೊಡುತ್ತದೆ. ಅಂದರೆ ನಿದ್ದೆಯ ಕೊರತೆ ನಿಮ್ಮ ಹೃದಯಕ್ಕೆ ಎಷ್ಟುತೊಂದರೆಯನ್ನುಂಟು ಮಾಡುತ್ತಿದೆ ಹಾಗೂ ನಿಮ್ಮ ಮಾನಸಿಕ ಸ್ವಸ್ಥತೆಗೆ ಇದು ಹೇಗೆ ಪ್ರಭಾವ ಬೀರುತ್ತದೆ ಮುಂತಾದ ಮಾಹಿತಿಯನ್ನು ನೀಡುತ್ತದೆ. ವೆಬ್‌ಎಮ್‌ಡಿ ವೈದ್ಯಕೀಯಲೇಖನಗಳನ್ನು ಕೂಡ ನಿಮಗೆ ಒದಗಿಸುತ್ತದೆ.

ತೂಕ ಇಳಿಕೆ, ರಕ್ತದ ಸಕ್ಕರೆ ನಿಯಂತ್ರಣ, ಆರೋಗ್ಯ ಮತ್ತು ಉತ್ತಮ ನಿದ್ದೆ, ಮಧುಮೇಹ, ಬೊಜ್ಜು ಇದಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ಮಾಹಿತಿಯನ್ನು ಲೇಖನವನ್ನು ಒದಗಿಸುತ್ತದೆ. ಈ ಆರು ಅಂಶಗಳನ್ನು ನಿಮ್ಮ ಅಪ್ಲಿಕೇಶನ್‌ನಲ್ಲಿ ಹೊಂದಿಸಬಹುದಾಗಿದ್ದು, ಇದರಲ್ಲಿ ಏನಾದರೂ ಏರಿಳಿತವಾದರೆ ಇದು ನಿಮಗೆ ಸಂದೇಶವನ್ನು ರವಾನಿಸುತ್ತದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot