ಒನ್ ಇಂಡಿಯಾದ ತಾಜಾ ಸುದ್ದಿಗಳು ಇನ್ನು ವಿಚಾಟ್‌ನಲ್ಲೂ

Posted By:

ಅಂತರ್ಜಾಲದಲ್ಲಿ ಸುದ್ದಿ ಪ್ರಸಾರಣದಂತಹ ಜವಾಬ್ದಾರಿ ಕಾರ್ಯವನ್ನು ಒನ್ ಇಂಡಿಯಾ ಕನ್ನಡ ಕಳೆದ 15 ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಕನ್ನಡಿಗರ ಸುದ್ದಿ ದಾಹವನ್ನು ತೀರಿಸುವ ಕಳಕಳಿಯ ಕೆಲಸವನ್ನು ನಮ್ಮ ಪೋರ್ಟಲ್ ಒನ್ ಇಂಡಿಯಾ ನ್ಯೂಸ್ ಮಾಡುತ್ತಿದ್ದು ಸುದ್ದಿಯ ರಸಗವಳವನ್ನೇ ವೈವಿಧ್ಯಮಯವಾಗಿ ಉಣಬಡಿಸುವ ಕಾರ್ಯವನ್ನು ಮಾಡುತ್ತಿದೆ.

ಈ ಕೈಂಕರ್ಯವನ್ನು ಇಲ್ಲಿಗೆ ನಿಲ್ಲಿಸದೇ ಮೊಬೈಲ್‌ನಲ್ಲೂ ಸುದ್ದಿಯನ್ನು ಕನ್ನಡಿಗರಿಗೆ ಉಣಬಡಿಸುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ. ವಾಟ್ಸಾಪ್‌ನಂತೆಯೇ ವಿಚಾಟ್ ಅಪ್ಲಿಕೇಶನ್ ಕೂಡ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದು ಯುವಜನಾಂಗದ ಮೆಚ್ಚಿನ ತಾಣ ಇದಾಗಿದೆ. ಉದಾರಿ ಕನ್ನಡಿಗರು ಇದನ್ನು ಆದರದಿಂದ ಸ್ವೀಕರಿಸುತ್ತಾರೆ ಎಂಬ ನಂಬಿಕೆ ನಮ್ಮದಾಗಿದೆ.

ಒನ್ ಇಂಡಿಯಾದ ತಾಜಾ ಸುದ್ದಿಗಳು ಇನ್ನು ವಿಚಾಟ್‌ನಲ್ಲೂ

ಪ್ರತಿದಿನದ ಉಚಿತ ನ್ಯೂಸ್‌ಲೆಟರ್(ಸುದ್ದಿಸಾರಂಗಿ)ಯಂತೆ ವಿಚಾಟ್ ನಲ್ಲಿ ಮೊಬೈಲ್ ಬಳಕೆದಾರರು ಸಂಜೆ ಹೊತ್ತಿನಲ್ಲಿ ಪ್ರಮುಖ ಸುದ್ದಿಗಳತ್ತ ಕಣ್ಣಾಡಿಸಬಹುದಾಗಿದೆ. ಇದರಲ್ಲಿ ತಾಜಾ ಸುದ್ದಿಗಳ ಜೊತೆಗೆ ಮನರಂಜನೆಗಾಗಿ ಸಿನೆಮಾ ಸುದ್ದಿ, ಆಟೋಮೊಬೈಲ್, ಲೈಫ್ ಸ್ಟೈಲ್, ತಂತ್ರಜ್ಞಾನ ಕುರಿತ ಸ್ವಾರಸ್ಯಕರ ಸುದ್ದಿಗಳು ಕೂಡ ಸುದ್ದಿದಾಹವನ್ನು ಇಂಗಿಸಲಿವೆ.

ವಿಚಾಟ್ ಆಪ್ಲಿಕೇಶನ್‌ಲ್ಲಿ ಒನ್ಇಂಡಿಯಾ ಕನ್ನಡ (Oneindia Kannada) ಅತ್ಯಂತ ಸುಲಭವಾಗಿ ಸೇರಿಸಿಕೊಳ್ಳಬಹುದು. ಇದಕ್ಕೆ ಎರಡು ವಿಧಾನಗಳಿವೆ. ಅವುಗಳ ವಿವರಣೆ ಕೆಳಗಿದೆ ಓದಿ, ವಿಚಾಟ್ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಿ ಮತ್ತು ಒನ್ಇಂಡಿಯಾ ಕನ್ನಡ ಸುದ್ದಿಗಳನ್ನು ಓದಲು ಆರಂಭಿಸಿ.

ವಿಚಾಟ್‌ನಲ್ಲಿ ಒನ್ಇಂಡಿಯಾ ಕನ್ನಡ ಸೇರಿಸುವುದು ಹೀಗೆ...
ವಿಧಾನ 1

ಒನ್ ಇಂಡಿಯಾದ ತಾಜಾ ಸುದ್ದಿಗಳು ಇನ್ನು ವಿಚಾಟ್‌ನಲ್ಲೂ


1. ಬಲಭಾಗದ ಮೂಲೆಯಲ್ಲಿರುವ "+" ಐಕಾನನ್ನು ಕ್ಲಿಕ್ಕಿಸಿ.
2. Add contacts ಕ್ಲಿಕ್ಕಿಸಿ.
3. Official Accounts ಮೇಲೆ ಮತ್ತೆ ಕ್ಲಿಕ್ಕಿಸಿ.

ಒನ್ ಇಂಡಿಯಾದ ತಾಜಾ ಸುದ್ದಿಗಳು ಇನ್ನು ವಿಚಾಟ್‌ನಲ್ಲೂ


4. Oneindia Kannada ಅಂತ ಟೈಪಿಸಿ ಸರ್ಚ್ ಮಾಡಿರಿ.
5. ಒನ್ಇಂಡಿಯಾ ಕನ್ನಡ ಮೇಲೆ ಕ್ಲಿಕ್ಕಿಸಿ Follow ಮಾಡಿರಿ.

ವಿಧಾನ 2

ಈ ಲೇಖನದೊಂದಿಗೆ QR (Quick Response) Code ಇರುವ ಚಿತ್ರವನ್ನು ನೀಡಲಾಗಿದೆ. ಇದನ್ನು ಬಳಸಿ ಕೂಡ ಒನ್ಇಂಡಿಯಾ ಕನ್ನಡವನ್ನು WeChatಗೆ ಸೇರಿಸಬಹುದಾಗಿದೆ. ಅದರ ವಿಧಾನ ಕೆಳಗಿನಂತಿದೆ.

ಒನ್ ಇಂಡಿಯಾದ ತಾಜಾ ಸುದ್ದಿಗಳು ಇನ್ನು ವಿಚಾಟ್‌ನಲ್ಲೂ

1. ಬಲಭಾಗದ ಮೂಲೆಯಲ್ಲಿರುವ "+" ಐಕಾನನ್ನು ಕ್ಲಿಕ್ಕಿಸಿ.
2. Add contacts ಕ್ಲಿಕ್ಕಿಸಿ.

ಒನ್ ಇಂಡಿಯಾದ ತಾಜಾ ಸುದ್ದಿಗಳು ಇನ್ನು ವಿಚಾಟ್‌ನಲ್ಲೂ


3. Scan QR code ಮೇಲೆ ಕ್ಲಿಕ್ಕಿಸಿ.
4. QR Code ಮೇಲೆ ಹಿಡಿದು ಸ್ಕ್ಯಾನ್ ಮಾಡಿರಿ.
5. ಒನ್ಇಂಡಿಯಾ ಕನ್ನಡ ಮೇಲೆ ಕ್ಲಿಕ್ಕಿಸಿ Follow ಮಾಡಿರಿ.

English summary
Welcome to Official WeChat Account of Oneindia Kannada portal. Get LIVE updates in Kannada on News, Movies, Automobile, Lifestyle, Money, Mobile etc. Simple instructions are given here to add official account of Oneindia Kannada on WeChat. Have a wonderful journey on mobile.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot