ಸ್ಯಾನ್ ಡಿಸ್ಕ್ ನಿಂದ ಮೊಬೈಲ್ ಬಳಕೆದಾರರಿಗೆ ಡ್ಯುಯಲ್ ಡ್ರೈವ್: ವಿಶೇಷತೆ ಏನು?
ಈ ಹೊಸ ಮಾದರಿಯ ಪೆನ್ ಡ್ರೈವ್ ಗಳನ್ನು ಕಂಪ್ಯೂಟರ್ ಮತ್ತು ಮೊಬೈಲ್ ನಲ್ಲಿ ಬಳಕೆ ಮಾಡಿಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ. ಆಂಡ್ರಾಯ್ಡ್ ಬಳಕೆದಾರಿಗೆ OTG ಮಾದರಿಯಯಲ್ಲಿ ಕಾರ್ಯನಿರ್ವಹಿಸಲಿದೆ.
ಜಾಗತಿಕವಾಗಿ ಸ್ಟೋರೆಜ್ ಡಿವೈಸ್ ನಿರ್ಮಾಣದಲ್ಲಿ ಖ್ಯಾತಿಯನ್ನು ಗಳಿಸಿಕೊಂಡಿರುವ ವೆಸ್ಟನ್ ಡಿಜಿಟಲ್ ಕಾರ್ಪೋರೆಷನ್ ಮೊಬೈಲ್ ಗಳಿಗೆ ನೇರವಾಗಿ ಕನೆಟ್ಟ ಮಾಡಿಕೊಳ್ಳುವಂತಹ ಸ್ಯಾನ್ ಡಿಸ್ಕ್ ಡ್ಯುಯಲ್ ಡ್ರೈವ್ ಗಳನ್ನು ಬಿಡುಗಡೆ ಮಾಡಿದೆ. ಆಂಡ್ರಾಯ್ಡ್ ಡಿವೈಸ್ ಗಳಿಗೆ ಇವು ನೇರವಾಗಿ ಸಂಪರ್ಕವನ್ನು ಸಾಧಸಲು ಶಕ್ತವಾಗಿದೆ.

ಈ ಹೊಸ ಮಾದರಿಯ ಪೆನ್ ಡ್ರೈವ್ ಗಳನ್ನು ಕಂಪ್ಯೂಟರ್ ಮತ್ತು ಮೊಬೈಲ್ ನಲ್ಲಿ ಬಳಕೆ ಮಾಡಿಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ. ಆಂಡ್ರಾಯ್ಡ್ ಬಳಕೆದಾರಿಗೆ OTG ಮಾದರಿಯಯಲ್ಲಿ ಕಾರ್ಯನಿರ್ವಹಿಸಲಿದೆ.
ಇದರಲ್ಲಿ ಮೈಕ್ರೋ USB ಮತ್ತು USB ಎರಡು ಫೋರ್ಟ್ ಗಳು ಸಹ ಇದ್ದು, ಆಂಡ್ರಾಯ್ಡ್ ಫೋನಿನೊಂದಿಗೆ ಸರಾಗವಾಗಿ ಸಂಪರ್ಕಿಸಬಹುದಾಗಿದೆ. ಮೊಬೈಲ್ ನಲ್ಲಿ ಈ ಡ್ಯುಯಲ್ ಡ್ರೈವ್ ಗಳನ್ನು ಬಳಕೆ ಮಾಡಿಕೊಳ್ಳುವುದಲ್ಲದೇ ನಿರ್ವಹಣೆಯನ್ನು ಮಾಡಬಹುದಾಗಿದೆ.
ಈ ಡ್ಯುಯಲ್ ಡ್ರೈವ್ ಅನ್ನು ಭಾರತೀಯ ಮಾರುಕಟ್ಟೆಗಾಗಿಯೇ ನಿರ್ಮಿಸಲಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳ ಹಾವಳಿಯು ಅಧಿಕವಾಗಿದೆ. ಈ ಹಿನ್ನಲೆಯಲ್ಲಿ ಮೊಬೈಲ್ ಬಳಕೆದಾರರ ಹಿತ ಕಾಪಡುವ ನಿಟ್ಟಿನಲ್ಲಿ ಈ ಪ್ರಯತ್ನವನ್ನು ಮಾಡಲಾಗಿದೆ.


Click it and Unblock the Notifications