ಭವಿಷ್ಯದ ಸ್ಮಾರ್ಟ್‌ಫೋನ್ ಬ್ಯಾಟರಿ ತಂತ್ರಜ್ಞಾನ ಹೇಗಿರಲಿವೆ ಗೊತ್ತಾ?..ಆಶ್ಚರ್ಯ ಆಗುತ್ತೆ!!
ಭವಿಷ್ಯದಲ್ಲಿ ಬ್ಯಾಟರಿ ಇಲ್ಲದ ಮತ್ತು ಸೋಲಾರ್ ಚಾರ್ಜ್ ಸ್ಮಾರ್ಟ್‌ಫೋನ್‌ಗಳು ಬಳಕೆಗೆ ಬರಲಿವೆ.!!
ಮೊಬೈಲ್ ತಂತ್ರಜ್ಞಾನ ಬೆಳವಣಿಗೆಯಾದ ವೇಗದಲ್ಲಿ ಇನ್ನಾವ ತಂತ್ರಜ್ಞಾನ ಸಹ ಬೆಳವಣಿಗೆಯಾಗಿಲ್ಲ ಎನ್ನಬಹುದು.! ಪ್ರತಿಯೊಂದು ದಿನವೂ ಸಾವಿರಾರು ಮೊಬೈಲ್ ತಂತ್ರಜ್ಞಾನಗಳು ಹುಟ್ಟಿಕೊಂಡು ಕೊನೆಗೆ ಅವುಗಳೇ ಅಗಾಧವಾಗಿ ಬೆಳೆದುನಿಂತುಬಿಡುತ್ತವೆ.!! ಇದಕ್ಕೆ ನೂತನ ಮೊಬೈಲ್ ಬ್ಯಾಟರಿ ತಂತ್ರಜ್ಞಾನಗಳು ಸೇರ್ಪಡೆಯಾಗಿದೆ.!!
ಇದಕ್ಕೆ ಬ್ಯಾಟರಿ ತಂತ್ರಜ್ಞಾನ ಎಂದು ಹೇಳಬೇಕೊ ಅಥವಾ ಬ್ಯಾಟರಿ ಇಲ್ಲದ ತಂತ್ರಜ್ಞಾನ ಎಂದು ಕರೆಯಬೇಕೊ ತಿಳಿಯುತ್ತಿಲ್ಲ. ಏಕೆಂದರೆ ಬ್ಯಾಟರಿ ಇಲ್ಲದೆಯೇ ಕಾರ್ಯ ನಿರ್ವಹಿಸುವ ನೂತನ ಸ್ಮಾರ್ಟ್‌ಫೋನ್ ಆವಿಷ್ಕಾರವಾಗುತ್ತಿದೆ. ಹಾಗಾಗಿ, ಇನ್ನು ಭವಿಷ್ಯದಲ್ಲಿ ಬ್ಯಾಟರಿ ಇಲ್ಲದ ಮತ್ತು ಸೋಲಾರ್ ಚಾರ್ಜ್ ಸ್ಮಾರ್ಟ್‌ಫೋನ್‌ಗಳು ಬಳಕೆಗೆ ಬರಲಿವೆ.!!
ಹಾಗಾದರೆ, ಬ್ಯಾಟರಿ ಇಲ್ಲದ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ಹೇಗಿರಲಿದೆ? ಸೂಲಾರ್ ಚಾರ್ಜ್ ತಂತ್ರಜ್ಞಾನ ಯಾವಾಗ ಅಭಿವೃದ್ಧಿಯಾಗಲಿದೆ.?ಇಂತಹ ಅವಿಷ್ಕಾರಗಳನ್ನು ನಡೆಸುತ್ತಿರುವವರಾರು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ರೇಡಿಯೋ ಸಿಗ್ನಲ್ ಮೂಲಕ ಚಾರ್ಜ್.!!
ಬ್ಯಾಟರಿಯ ಬದಲಾಗಿ ಹತ್ತಿರದಲ್ಲಿರುವ ರೇಡಿಯೋ ಸಿಗ್ನಲ್ ಮೂಲಕ ಕಾರ್ಯನಿರ್ವಹಿಸುವ ತಂತ್ರಜ್ಞಾನ ಅಭಿವೃಧ್ಧಿಯಾಗುತ್ತಿದೆ. ಯುನಿವರ್ಸಿಟಿ ಆಫ್ ವಾಷಿಂಗ್ಟನ್‌ನ ವಿಜ್ಞಾನಿಗಳು ಈ ತಂತ್ರಜ್ಞಾನದಲ್ಲಿ ಯಶಸ್ವಿಯಾಗಿದ್ದು, ಈ ಸಂಶೋಧನೆ ಪ್ರೊಸೀಡಿಂಗ್ ಆಫ್ ದ ಎಸೋಸಿಯೇಶನ್ ಆಫ್ ಕಂಪ್ಯೂಟಿಂಗ್ ಮಶಿನರಿ ಆನ್ ಇಂಟರೆಕ್ಟಿವ್, ಮೊಬೈಲ್, ವೇರೆಬಲ್ ಮತ್ತು ಯೂಬಿಕ್ವಿಟ್ಸ್ ಟೆಕ್ನಾಲಜಿ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಸೂಲಾರ್ ಚಾರ್ಜ್ ತಂತ್ರಜ್ಞಾನ!!
ಫಿನ್‌ಲ್ಯಾಂಡ್‌ನಲ್ಲಿನ ಔಲು ವಿಶ್ವವಿದ್ಯಾಲಯದ ಸಂಶೋಧಕರು ಸ್ಪಟಿಕ ರಚನೆ ಹೊಂದಿರುವ ಖನಿಜವನ್ನು ಪತ್ತೆ ಮಾಡಿದ್ದು, ಈ ಖನೀಜದ ಮೂಲಕ ಸೋಲಾರ್ ತಂತ್ರಜ್ಞಾನದ ಮೂಲಕ ಬಿಸಿಲಿನಲ್ಲಿ ಸ್ಮಾರ್ಟ್‌ಫೋನ್ ಸ್ವಯಂ ಚಾರ್ಜ್ ಆಗುವಂತಹ ತಂತ್ರಜ್ಞಾನವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.!!

ಸ್ಮಾರ್ಟ್‌ಫೋನ್ ಚಾರ್ಜ್ ಕಾರ್ಡ್‌ಗಳು.!!
ಎಲ್ಲೆಡೇ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವ ಪ್ರಮೇಯ ತಪ್ಪಿಸಲು ಸ್ಮಾರ್ಟ್‌ಫೋನ್ ಚಾರ್ಜ್ ಕಾರ್ಡ್‌ಗಳನ್ನು ತಯಾರಿಸುವ ತಂತ್ರಜ್ಞಾನ ಅಭಿವೃಧ್ಧಿ ಹಂತದಲ್ಲಿದೆ.!! ಚಾರ್ಜ್ ಮಾಡಿದ ಚಾರ್ಜ್ ಕಾರ್ಡ್‌ಗಳನ್ನು ಅಂಗಡಿಯಲ್ಲಿ ಖರೀದಿಸಿ ನಮಗೆ ಬೇಕಾದಲ್ಲಿ ಬಳಕೆ ಮಾಡುವ ತಂತ್ರಜ್ಞಾನವು ಬೆಳವಣಿಗೆ ಆಗುತ್ತಿದೆ ಎಂದರೆ ನೀವು ನಂಬಲೇಬೇಕು.!!

ಝೀರೋ ಶಕ್ತಿಯಲ್ಲಿ ಕೆಲಸ ನಿರ್ವಹಿಸುವ ಸ್ಮಾರ್ಟ್‌ಫೋನ್!!
ಸ್ಮಾರ್ಟ್‌ಫೋನ್ ಝೀರೋ ಶಕ್ತಿಯಲ್ಲಿ ಕೆಲಸ ಮಾಡುತ್ತದೆ ಎಂದು ನಿಮಗೆ ಅನಿಸುತ್ತದೆಯಾ? ಹೌದು, ಬ್ಯಾಟರಿಯ ಸಹಾಯವಿಲ್ಲದೇ ಕೇವಲ ಝೀರೋ ಶಕ್ತಿಯಲ್ಲಿ ಕೆಲಸ ನಿರ್ವಹಿಸುವ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರಲು ತಯಾರಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ.!!

ಸೂಪರ್ ಬ್ಯಾಟರಿ.!!
ಒಮ್ಮೆ ಚಾರ್ಜ್ ಮಾಡಿದರೆ ತಿಂಗಳುಗಟ್ಟಲೇ ಉಪಯೋಗಿಸಬಹುದಾದ ಬ್ಯಾಟರಿ ತಂತ್ರಜ್ಞಾನದ ಅಭಿವೃದ್ದಿಗೆ ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ, ಭವಿಷ್ಯದ ಬ್ಯಾಟರಿ ತಂತ್ರಜ್ಞಾನ ನಾವು ಊಹೆ ಮಾಡಿದ್ದಕ್ಕಿಂತ ಹೆಚ್ಚು ಚಾರ್ಜ್ ತಂತ್ರಜ್ಞಾನ ಬರುವ ದಿವಸಗಳು ದೂರವಿಲ್ಲಾ.!!


Click it and Unblock the Notifications