ಕ್ರಿಕೆಟ್‌ನಲ್ಲಿ ಬಳಸುವ ತಂತ್ರಜ್ಞಾನಗಳ ಬಗ್ಗೆ ನಿಮಗೆ ಗೊತ್ತಾ..?

By Avinash
|

ತಂತ್ರಜ್ಞಾನ ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸುತ್ತಿದ್ದು, ಕ್ರೀಡೆಗೂ ತನ್ನ ವ್ಯಾಪ್ತಿಯನ್ನು ಪಸರಿಸಿದೆ. ತಂತ್ರಜ್ಞಾನವಿಲ್ಲದ ಕ್ರೀಡಾ ಕ್ಷೇತ್ರವನ್ನು ಊಹಿಸಿಕೊಳ್ಳುವುದು ಪ್ರಸ್ತುತ ಸಂದರ್ಭದಲ್ಲಿ ಕಷ್ಟವೇ ಸರಿ. ಅಥ್ಲೇಟಿಕ್ಸ್, ಟೆನ್ನಿಸ್, ಬ್ಯಾಡ್ಮಿಂಟನ್, ಫುಟ್ಬಾಲ್, ಕಬಡ್ಡಿ, ಕ್ರಿಕೆಟ್‌ ಸೇರಿ ಗ್ರಾಮೀಣ ಕ್ರೀಡೆಗಳು ಸಹ ತಂತ್ರಜ್ಞಾನದಿಂದ ಹೊರತಾಗಿಲ್ಲ.

ಕ್ರಿಕೆಟ್‌ನಲ್ಲಿ ಬಳಸುವ ತಂತ್ರಜ್ಞಾನಗಳ ಬಗ್ಗೆ ನಿಮಗೆ ಗೊತ್ತಾ..?

ದಿನಕ್ಕೊಂದು ಅಪ್‌ಡೇಟ್‌ ಕಾಣುತ್ತಿರುವ ತಂತ್ರಜ್ಞಾನ ಕ್ರೀಡೆಯನ್ನು ಸರಳವಾಗಿಸಿದೆ. ಎಲ್ಲಿಯೋ ನಡೆಯುವ ಕ್ರೀಡೆಯನ್ನು ಮನೆಯಲ್ಲಿ ಚಂದವಾಗಿ ನೋಡಲು ನೆರವು ನೀಡುತ್ತಿರುವುದು ತಂತ್ರಜ್ಞಾನ. ಇಂತಹ ತಂತ್ರಜ್ಞಾನವನ್ನು ಜನಪ್ರಿಯ ಕ್ರೀಡೆಯಾಗಿರುವ ಕ್ರಿಕೆಟ್‌ನಲ್ಲಿ ಯಾವ ರೀತಿ ಉಪಯೋಗಿಸುತ್ತಿದ್ದಾರೆ ಎಂಬುದು ಯಾರಿಗಾದರೂ ಗೊತ್ತಾ..? ಗೊತ್ತಿದ್ದರೂ ಒಂದು ಎರಡು ಅಷ್ಟೇ, ಅದಕ್ಕಂತಾನೇ ನಾವು ಇಲ್ಲಿ ಕ್ರಿಕೆಟ್‌ನಲ್ಲಿ ಬಳಸುವ ಅನೇಕ ತಂತ್ರಜ್ಞಾನಗಳನ್ನು ಪಟ್ಟಿ ಮಾಡುವ ಪ್ರಯತ್ನ ಮಾಡಿದ್ದೇವೆ.

1. ಕ್ರಿಕೆಟ್ ಅಂಪೈರ್ ಕೌಂಟರ್

1. ಕ್ರಿಕೆಟ್ ಅಂಪೈರ್ ಕೌಂಟರ್

ಈ ಸಾಧನವನ್ನು ಅಂಪೈರ್‌ಗಳು ಬಳಸುತ್ತಾರೆ. ಬಾಲ್, ಒವರ್ ಮತ್ತು ವಿಕೆಟ್‌ಗಳನ್ನು ಕೌಂಟರ್ ಎಣಿಸುತ್ತದೆ. 99 ಒವರ್‌ಗಳವರೆಗೂ ಕೌಂಟ್ ಮಾಡಬಹುದಾದ ಸಾಮರ್ಥ್ಯ ಹೊಂದಿರುವ ಕೌಂಟರ್‌ನ್ನು ಕೈಯಲ್ಲಿ ಹಿಡಿದುಕೊಳ್ಳುವಂತೆ ತಯಾರಿಸಲಾಗಿದೆ. ಕೌಂಟರ್‌ನಲ್ಲಿರುವ ಚಕ್ರಗಳನ್ನು ತಿರುಗಿಸಿದರೆ ಅಲ್ಲಿನ ಡೇಟಾ ಕೂಡ ಬದಲಾಗುತ್ತದೆ.

2. ಸ್ಪೀಡ್‌ಗನ್‌

2. ಸ್ಪೀಡ್‌ಗನ್‌

ಈ ತಂತ್ರಜ್ಞಾನವನ್ನು ವೇಗವಾಗಿ ಚಲಿಸುವ ವಸ್ತುಗಳನ್ನು ಗುರುತಿಸಲು ಅಥವಾ ವೇಗವನ್ನು ಅಳೆಯಲು ಬಳಸಲಾಗುತ್ತದೆ. ಕ್ರಿಕೆಟ್‌ನಲ್ಲಿ ಬೌಲಿಂಗ್‌ ವೇಗವನ್ನು ಕಂಡುಹಿಡಿಯಲು ಬಳಸಲಾಗುತ್ತದೆ. ಕ್ರಿಕೆಟ್‌ ಲೈವ್ ಬ್ರಾಡ್‌ಕಾಸ್ಟಿಂಗ್ ಮಾಡುವಾಗ ಬಹಳಷ್ಟು ಸಹಾಯವಾಗುತ್ತದೆ.

3. ಹಾಕ್ ಐ Hawkeye

3. ಹಾಕ್ ಐ Hawkeye

ಕ್ರಿಕೆಟ್‌ನಲ್ಲಿ ಹಾಕ್ ಐ ತಂತ್ರಜ್ಞಾನವನ್ನು 2001ರಲ್ಲಿ ಬಳಸಲು ಪ್ರಾರಂಭಿಸಲಾಯಿತು. ಚೆಂಡು ಯಾವ ಮಾರ್ಗದಲ್ಲಿ ಸಂಚರಿಸುತ್ತದೆ ಎಂಬುದನ್ನು ಕಂಡು ಹಿಡಿಯಲು ಬಳಸಲಾಗುತ್ತಿದೆ. ಎಲ್‌ಬಿಡಬ್ಲ್ಯೂ ತೀರ್ಪು ಕೊಡುವಾಗ ಹೆಚ್ಚು ಬಳಸಲಾಗುತ್ತದೆ. ಟೆನ್ನಸ್‌ನಲ್ಲೂ ಕೂಡ ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ.

4. ಸ್ನಿಕೋ ಮೀಟರ್ Snick-o-Meter

4. ಸ್ನಿಕೋ ಮೀಟರ್ Snick-o-Meter

ಈ ತಂತ್ರಜ್ಞಾನ ಕ್ರಿಕೆಟ್‌ನಲ್ಲಿ ಬಹಳಷ್ಟು ಪ್ರಸಿದ್ಧಿ ಹೊಂದಿದ್ದು, ಕೀಪರ್‌ ಕ್ಯಾಚ್‌ ತೀರ್ಪು ನೀಡುವಾಗ ಹೆಚ್ಚು ಬಳಕೆಯಾಗುತ್ತದೆ. ವಿಕೆಟ್‌ಗಳ ನಡುವೆ ಅತಿ ಸೂಕ್ಷ್ಮ ಮೈಕ್ರೋಫೋನ್‌ನ್ನು ಇಡಲಾಗಿರುತ್ತದೆ. ಯಾವಾಗ ಚೆಂಡು ಬ್ಯಾಟ್‌ಗೆ ತಗಲುತ್ತದೆಯೋ ಆಗ ಟಿವಿ ಪರದೆಯಲ್ಲಿ ರೇಖೆಗಳು ಮೂಡುತ್ತವೆ. ಟೆಲಿವಿಷನ್ ಅಂಪೈರಿಂಗ್ ಸಮಯದಲ್ಲಿ ನೆರವಾಗುತ್ತದೆ. ಹಾಟ್‌ಸ್ಪಾಟ್ ತಂತ್ರಜ್ಞಾನಕ್ಕೆ ಬದಲಾಗಿ ಈ ತಂತ್ರಜ್ಞಾನವನ್ನು ಸಹ ಬಳಸಲಾಗುತ್ತದೆ.

5. ಬಾಲ್‌ ಸ್ಪಿನ್‌ ಆರ್‌ಪಿಎಂ Ball Spin RPM

5. ಬಾಲ್‌ ಸ್ಪಿನ್‌ ಆರ್‌ಪಿಎಂ Ball Spin RPM

2013ರ ಆಶಸ್ ಸರಣಿಯಲ್ಲಿ ಸ್ಕೈ ಸ್ಪೋರ್ಟ್ಸ್ ಈ ತಂತ್ರಜ್ಞಾನವನ್ನು ಬಳಸಿತು. RPM (revolutions per minute)ನ್ನು ಚೆಂಡು ಬೌಲರ್ ಕೈಯಿಂದ ಬಿಟ್ಟ ಮೇಲೆ ಎಷ್ಟು ವೇಗದಲ್ಲಿ ತಿರುಗುತ್ತದೆ ಎಂಬುದನ್ನು ಕಂಡುಹಿಡಿಯಲು ಬಳಸಲಾಗುತ್ತದೆ.

6. ಹಾಟ್‌ಸ್ಪಾಟ್‌ Hot Spot

6. ಹಾಟ್‌ಸ್ಪಾಟ್‌ Hot Spot

ಹಾಟ್‌ಸ್ಪಾಟ್‌ ಸ್ನಿಕೋ ಮೀಟರ್‌ನಂತೆ ಕಾರ್ಯನಿರ್ವಹಿಸುತ್ತದೆ. ಬ್ಯಾಟ್‌ಗೆ ಚೆಂಡು ತಗುಲಿದೆಯಾ ಇಲ್ಲ ಎಂಬುದನ್ನು ಇಲ್ಲಿ ನೋಡಬಹುದಾಗಿದೆ. ಚೆಂಡು ಎಲ್ಲಿಗಾದರೂ ತಗುಲಿದರೆ ಬಿಳಿ ಬಣ್ಣದ ಗುರುತು ಪರದೆಯ ಮೇಲೆ ಬಿತ್ತರವಾಗುತ್ತದೆ. ಎರಡು ಇನ್ಫ್ರಾ ರೆಡ್ ಕ್ಯಾಮೆರಾಗಳ ನೆರವಿನಿಂದ ಈ ತಂತ್ರಜ್ಞಾನ ಬಳಸಲಾಗುತ್ತದೆ. ಬ್ಯಾಟ್‌ಗೆ ವ್ಯಾಸಲಿನ್‌ನಂತಹ ಪದಾರ್ಥಗಳನ್ನು ಲೇಪಿಸಿ ಹಾಟ್‌ಸ್ಪಾಟ್‌ ತಂತ್ರಜ್ಞಾನವನ್ನು ಯಾಮಾರಿಸಬಹುದು.

7. ಸ್ಟಂಪ್‌ಅಪ್ ಕ್ಯಾಮೆರಾ Stump Camera

7. ಸ್ಟಂಪ್‌ಅಪ್ ಕ್ಯಾಮೆರಾ Stump Camera

ಕ್ರಿಕೆಟ್‌ ಬ್ರಾಡ್‌ಕಾಸ್ಟಿಂಗ್‌ನಲ್ಲಿ ಈ ತಂತ್ರಜ್ಞಾನ ಬಹಳ ದಿನದಿಂದ ಕಾರ್ಯನಿರ್ವಹಿಸುತ್ತಿದ್ದು, ಸ್ಟಂಪ್‌ಗಳಲ್ಲಿ ಸಣ್ಣ ಕ್ಯಾಮೆರಾವನ್ನು ಇಡಲಾಗಿರುತ್ತದೆ. ಇದರಿಂದ ವೀಕ್ಷಕರಿಗೆ ಉನ್ನತ ಮಟ್ಟದ ಬ್ರಾಡ್‌ಕಾಸ್ಟಿಂಗ್ ನೀಡಲಾಗುತ್ತದೆ. ಕ್ಯಾಮೆರಾ ಸಣ್ಣದಾಗಿದ್ದರೂ ಬಹಳ ಮುಮದುವರೆದ ಕ್ಯಾಮೆರಾ ಇದಾಗಿದ್ದು, ತಂತ್ರಜ್ಞಾನದ ಅಳವಡಿಕೆಯಿಂದ ಕ್ರಿಕೆಟ್ ಬದಲಾಗಿರುವುದನ್ನು ಕಾಣಬಹುದು.

8. ಸೂಪರ್ ಸ್ಲೋ ಮೋಷನ್ Super slow motion

8. ಸೂಪರ್ ಸ್ಲೋ ಮೋಷನ್ Super slow motion

ಸೂಪರ್ ಸ್ಲೋ ಮೋಷನ್ ತಂತ್ರಜ್ಞಾನವನ್ನು ರನ್‌ಔಟ್‌ ಮತ್ತಿತರ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಹೈ-ಸ್ಪೀಡ್ ಕ್ಯಾಮೆರಾದಿಂದ ಲೈವ್ ದೃಶ್ಯಗಳನ್ನು ಸೆರೆಹಿಡಿದು ನಂತರ ಅದನ್ನು ಸೂಪರ್ ಸ್ಲೋ ಮೋಷನ್‌ಗೆ ಪರಿವರ್ತಿಸಲಾಗುತ್ತದೆ.

9. ಆಟಗಾರರ ಜತೆ ವೀಕ್ಷಕ ವಿವರಣೆ Real-time commentary by on-field players

9. ಆಟಗಾರರ ಜತೆ ವೀಕ್ಷಕ ವಿವರಣೆ Real-time commentary by on-field players

ಟಿ20 ಕ್ರಿಕೆಟ್ ಹೆಚ್ಚು ಪ್ರಸಿದ್ಧಿಯಾಗುತ್ತಿರುವ ಸಮಯದಲ್ಲಿ ಆಟಗಾರರು ಮತ್ತು ಅಂಪೈರ್‌ಗಳು ಮೈಕ್ರೋಫೋನ್‌ ಧರಿಸಿಕೊಂಡೆ ಮೈದಾನಕ್ಕೆ ಇಳಿಯುತ್ತಾರೆ. ವೀಕ್ಷಕ ವಿವರಣೆಕಾರರು ಆಟಗಾರರನ್ನು ಆಟ ಆಡುತ್ತಿರುವ ಸಮಯದಲ್ಲಿಯೇ ಸಂಪರ್ಕಿಸಿ ಪಂದ್ಯದ ರೋಚಕತೆಯನ್ನು ಹೆಚ್ಚಿಸುತ್ತಾರೆ.

10. ಎಲ್‌ಇಡಿ ಬೇಲ್ಸ್‌ ಮತ್ತು ವಿಕೆಟ್‌ಗಳು LED bails and stumps

10. ಎಲ್‌ಇಡಿ ಬೇಲ್ಸ್‌ ಮತ್ತು ವಿಕೆಟ್‌ಗಳು LED bails and stumps

ಚೆಂಡು ವಿಕೆಟ್‌ಗಳನ್ನು ಬಡಿದ ತಕ್ಷಣ ವಿಕೆಟ್‌ನಲ್ಲಿರುವ ಎಲ್‌ಇಡಿ ದೀಪಗಳು ಸ್ವಯಂಚಾಲಿತವಾಗಿ ಉರಿಯುತ್ತವೆ. ಇದರಿಂದ ಕ್ರಿಕೆಟ್‌ನಲ್ಲಿ ಪಾರದರ್ಶಕತೆ ಹೆಚ್ಚಿದೆ. ಟಿ20 ಕ್ರಿಕೆಟ್‌ನಲ್ಲಿ ಈ ತಂತ್ರಜ್ಞಾನವನ್ನು ಹೆಚ್ಚು ಕಾಣಬಹುದು.

11. ಅಂಪೈರ್ ಲೈಟ್‌ ಮೀಟರ್‌ Umpires Light Meter

11. ಅಂಪೈರ್ ಲೈಟ್‌ ಮೀಟರ್‌ Umpires Light Meter

ಅಂಪೈರ್ ಲೈಟ್ ಮೀಟರ್ (ULM)ನ್ನು ಕ್ರಿಕೆಟ್ ಮೈದಾನದಲ್ಲಿನ ಬೆಳಕಿನ ಪ್ರಖರತೆಯನ್ನು ಅಳೆಯಲು ಬಳಸಲಾಗುತ್ತದೆ. ಇದು ನೇರವಾಗಿ ಬೆಳಕಿನ ಪ್ರಖರತೆಯನ್ನು ಗ್ರಹಿಸುತ್ತದೆ. ಅಥವಾ ಆನ್‌/ಆಫ್ ಸ್ವಿಚ್ ಕೂಡ ಇವೆ. ಮಂದ ಬೆಳಕು 3.5ಕ್ಕಿಂತ ಕಡಿಮೆ ಇದ್ದರೆ ಆಟವನ್ನು ನಿಲ್ಲಿಸಲಾಗುತ್ತದೆ.

12. ಸ್ಪೈಡರ್‌ಕ್ಯಾಮ್‌ Spidercam

12. ಸ್ಪೈಡರ್‌ಕ್ಯಾಮ್‌ Spidercam

ಸ್ಪೈಡರ್‌ಕ್ಯಾಮ್ ಮತ್ತೊಂದು ಬಹುದೊಡ್ಡ ಆವಿಷ್ಕಾರವಾಗಿದ್ದು, ಕ್ರಿಕೆಟ್ ಪಂದ್ಯದ ಪ್ರಸಾರವನ್ನು ಅಭಿವೃದ್ಧಿಗೊಳಿಸಿದೆ. ಈ ಕ್ಯಾಮೆರಾ ವರ್ಟಿಕಲಿ ಮತ್ತು ಹಾರಿಜೋಂಟಾಲ್ ಆಗಿ ಚಲಿಸುತ್ತದೆ. ಈ ಕ್ಯಾಮೆರಾ 4 ಯಾಂತ್ರಕ ವಿಂಚಸ್‌ನಿಂದ ಪ್ರತಿ ಮೂಲೆಯಿಂದ ಕಾರ್ಯನಿರ್ವಹಿಸುತ್ತದೆ.

13. ಮರ್ಲಿನ್ ಬೈ ಬೋಲಾ Merlyn by BOLA

13. ಮರ್ಲಿನ್ ಬೈ ಬೋಲಾ Merlyn by BOLA

ಮರ್ಲಿನ್ ಬೈ ಬೋಲಾ ಬೌಲಿಂಗ್ ಯಂತ್ರವಾಗಿದ್ದು, ಅತ್ಯಾಧುನಿಕ ಹಾಗೂ ನಿಖರ ಸ್ಪಿನ್ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದೆ. 2009ರಲ್ಲಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ 20 ಬೌಲಿಂಗ್ ಯಂತ್ರಗಳನ್ನು ವಿತರಿಸಿದಾಗ ಕೋಚ್ ಮತ್ತು ಆಟಗಾರರು ಸಕಾರಾತ್ಮಕವಾಗಿ ಸ್ಪಂದಿಸಿದರು. ಯಂತ್ರದ ನಿಖರತೆ ಮತ್ತು ಅತ್ಯಾಧುನಿಕ ಎಲೆಕ್ಟ್ರಾನಿಕ್ ನಿಯಂತ್ರಣ ಪ್ಯಾಕೇಜ್ ಹೊಂದಿದ್ದು, ಕೋಚ್‌ ಸಂಪೂರ್ಣವಾಗಿ ನಿಯಂತ್ರಿಸುವಂತೆ ರೂಪಿಸಲಾಗಿದೆ. ಇತ್ತೀಚೆಗೆ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಹಲ್ ಸ್ಪಿನ್ ಬಲೆಯನ್ನು ಇಂಗ್ಲೆಂಡ್ ಭೇದಿಸಿದ್ದು ಇದೇ ಯಂತ್ರಗಳ ಸಹಾಯದಿಂದ ಎಂದರೆ ನಂಬಲೇಬೇಕು.

14. ಅಂಪೈರ್ ಕ್ಯಾಮ್ Umpire cam

14. ಅಂಪೈರ್ ಕ್ಯಾಮ್ Umpire cam

2014ರ ಐಪಿಎಲ್‌ನಲ್ಲಿ ಅಂಪೈರ್‌ ಕ್ಯಾಮ್‌ನ್ನು ಪರಿಚಯಿಸಲಾಯಿತು. ಆನ್‌ಫೀಲ್ಡ್‌ ಅಂಫೈರ್‌ಗಳ ಟೋಪಿಯಲ್ಲಿ ಗೋಪ್ರೋ ಕ್ಯಾಮೆರಾ ಅಳವಡಿಸಲಾಗಿತ್ತು.

Most Read Articles
Best Mobiles in India

English summary
What are the technologies used during cricket matches? To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more