Home
ಸುದ್ದಿಜಾಲ

ಬಳಕೆದಾರರ ಅಪಾರ ಮಾಹಿತಿ ಸಂಗ್ರಹಿಸುತ್ತಿದೆ ವಾಟ್ಸಾಪ್‌!

ಪೇಸ್‌ಬುಕ್‌ ಒಡೆತನದ ಇನ್ಸಟಂಟ್‌ ಮೆಸೆಂಜಿಗ್‌ ಆಪ್‌ ವಾಟ್ಸಾಪ್‌ ತನ್ನ ಹೊಸ ಸೇವಾ ನಿಯಮಗಳನ್ನು ಬದಲಾಯಿಸುತ್ತಿದೆ. ಅಲ್ಲದೆ ಈ ಹೊಸ ಗೌಪ್ಯತೆ ಮತ್ತು ಸೇವಾ ನಿಯಮಗಳನ್ನು ಬಳಕೆದಾರರು ಒಪ್ಪಿಕೊಳ್ಳಲೇಬೇಕು ಎಂದು ಸಹ ಬಳಕೆದಾರರಿಗೆ ತಿಳಿಸಿದೆ. ಇದೇ ಸಂದರ್ಭದಲ್ಲಿ ವಾಟ್ಸಾಪ್‌ ಬಳಕೆದಾರರು ಬೆಚ್ಚಿ ಬೀಳುವ ಸುದ್ದಿಯೊಂದು ಹೊರ ಬಿದ್ದಿದೆ. ಸಿಗ್ನಲ್ ಮತ್ತು ಟೆಲಿಗ್ರಾಮ್ ಸೇರಿದಂತೆ ಇತರ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳಿಗೆ ಹೋಲಿಸಿದರೆ ವಾಟ್ಸಾಪ್ ಮತ್ತು ಫೇಸ್‌ಬುಕ್ ಮೆಸೆಂಜರ್ ಅಪಾರ ಪ್ರಮಾಣದ ಬಳಕೆದಾರರ ಮಾಹಿತಿ ಮತ್ತು ಡೇಟಾವನ್ನು ಸಂಗ್ರಹಿಸುತ್ತವೆ ಎಂಬ ಮಾಹಿತಿ ಹೊರ ಬಿದ್ದಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಹಾಗೂ ಫೇಸ್‌ಬುಕ್‌ ಮೆಸೆಂಜರ್‌ ಬಳಕೆದಾರರ ಮಾಹಿತಿ ಹಾಗೂ ಡೇಟಾವನ್ನು ಸಂಗ್ರಹಿಸುತ್ತಿದೆ ಎಂದು ಆಪಲ್‌ನ ಪ್ರೈವೆಸಿ ಲೇಬಲ್ಸ್‌ ಅಪ್ಡೇಟ್ಸ್‌ ಬಹಿರಂಗಪಡಿಸಿದೆ. ಫೇಸ್‌ಬುಕ್ ಒಡೆತನದ ಎರಡೂ ಅಪ್ಲಿಕೇಶನ್‌ಗಳು ಇತರ ಅಪ್ಲಿಕೇಶನ್‌ಗಳ ಬಳಕೆಯ ಡೇಟಾ ಮತ್ತು ಸ್ಥಳ ವಿವರಗಳನ್ನು ಸಂಗ್ರಹಿಸುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ಆಪ್ ಸ್ಟೋರ್‌ನಲ್ಲಿ ಹೈಲೈಟ್ ಮಾಡಲಾದ ಗೌಪ್ಯತೆ ವಿವರಗಳ ಪ್ರಕಾರ ಯಾವುದೇ ಬಳಕೆದಾರ ಡೇಟಾವನ್ನು ಸಂಗ್ರಹಿಸದ ಅತ್ಯಂತ ಖಾಸಗಿ ಮೆಸೇಜಿಂಗ್ ಅಪ್ಲಿಕೇಶನ್‌ನಂತೆ ಸಿಗ್ನಲ್ ಬರುತ್ತದೆ. ಇನ್ನು ಈ ಡೇಟಾ ಸಂಗ್ರಹಣೆಯಲ್ಲಿ ವಾಟ್ಸಾಪ್‌, ಮೆಸೆಂಜರ್‌ ಏನೆಲ್ಲಾ ಮಾಡುತ್ತಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್

ಆಪ್ ಸ್ಟೋರ್‌ನಲ್ಲಿ ಲಭ್ಯವಿರುವ ವಿವರಗಳು ಬಳಕೆದಾರರ ಡೇಟಾ ಸಂಗ್ರಹಣೆಗೆ ಬಂದಾಗ ಫೇಸ್‌ಬುಕ್ ಮೆಸೆಂಜರ್ ಹೆಚ್ಚಿನ ಡೇಟಾ ಸಂಗ್ರಹಿಸುತ್ತಿದೆ. ನಂತರದ ಸ್ಥಾನದಲ್ಲಿ ವಾಟ್ಸಾಪ್ ಕೂಡ ಸೇರಿವೆ. ಈ ಎರಡೂ ಅಪ್ಲಿಕೇಶನ್‌ಗಳು ಸಂಗ್ರಹಿಸುವ ಡೇಟಾದ ಪಟ್ಟಿಯಲ್ಲಿ ಬಳಕೆದಾರರ ಖರೀದಿ ಇತಿಹಾಸ, ಹಣಕಾಸಿನ ಮಾಹಿತಿ, ಸ್ಥಳ ವಿವರಗಳು, ಸಂಪರ್ಕಗಳು, ಫೋನ್ ಸಂಖ್ಯೆ, ಇಮೇಲ್ ವಿಳಾಸ ಮತ್ತು ಬಳಕೆಯ ಡೇಟಾ ಕೂಡ ಸೇರಿವೆ. ಸದ್ಯ ವಾಟ್ಸಾಪ್‌ ಹೊಸ ಗೌಪ್ಯತೆ ನೀತಿ ಬದಲಾವಣೆಗಳ ಬಗ್ಗೆ ಜನರು ಕಳವಳ ವ್ಯಕ್ತಪಡಿಸುತ್ತಿರುವ ಸಮಯದಲ್ಲಿ, ವಾಟ್ಸಾಪ್‌ ಅಪ್ಲಿಕೇಶನ್ ಸಂಗ್ರಹಿಸುತ್ತಿರುವ ಎಲ್ಲ ಡೇಟಾ ಮಾಹಿತಿ ಬಹಿರಂಗ ಗೊಂಡಿರುವುದು ಆಂತಕಕಾರಿ ಎನಿಸಿದೆ.

ವಾಟ್ಸಾಪ್

ಇನ್ನು ಐಮೆಸೇಜ್, ಸಿಗ್ನಲ್ ಮತ್ತು ಟೆಲಿಗ್ರಾಮ್‌ಗೆ ಹೋಲಿಸಿದರೆ ವಾಟ್ಸಾಪ್ ಮತ್ತು ಫೇಸ್‌ಬುಕ್ ಮೆಸೆಂಜರ್ ಸಂಗ್ರಹಿಸುವ ಮಾಹಿತಿ ಹೆಚ್ಚಿನ ಪ್ರಮಾಣದಲ್ಲಿದೆ. ನೀವು ಐಫೋನ್ ಹೊಂದಿದ್ದರೆ ಈ ವಿವರಗಳನ್ನು ಆಪ್ ಸ್ಟೋರ್‌ನಲ್ಲಿ ನೀವೇ ನೋಡಬಹುದು. ಸದ್ಯ ವಾಟ್ಸಾಪ್‌, ಪೇಸ್‌ಬುಕ್‌ ಮೆಸೆಂಜರ್‌ ಯಾವೆಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಅನ್ನೊದನ್ನ ಗಮನಿಸುವುದಾದರೆ. ಡಿವೈಸ್‌ ID, ಯೂಸರ್‌ ಐಡಿ, ಖರೀದಿ ಇತಿಹಾಸ, ಮೊಬೈಲ್‌ ನಂಬರ್‌, ಇಮೇಲ್ ವಿಳಾಸ, ಕಂಟ್ಯಾಕ್ಟ್ಸ್‌, ಕಾರ್ಯಕ್ಷಮತೆ ಡೇಟಾ, ಪಾವತಿ ಮಾಹಿತಿ, ಇತರ ಬಳಕೆದಾರರ ವಿಷಯ, ಇತರ ಹಣಕಾಸು ಮಾಹಿತಿ, ಫೋಟೋಗಳು ಅಥವಾ ವೀಡಿಯೊಗಳು, ಸರ್ಚಿಂಗ್‌ ಹಿಸ್ಟರಿ, ಜಾಹೀರಾತು ಡೇಟಾ, ಇತರೆ ಸೂಕ್ಷ್ಮ ಮಾಹಿತಿಯನ್ನು ವಾಟ್ಸಾಪ್‌ ಹಾಗೂ ಮೆಸೆಂಜರ್‌ ಸಂಗ್ರಹಿಸುತ್ತಿವೆ ಎನ್ನಲಾಗಿದೆ.

ಫೇಸ್‌ಬುಕ್

ಸದ್ಯ ಕಳೆದ ತಿಂಗಳು ಆಪ್ ಸ್ಟೋರ್‌ನಲ್ಲಿ ಈ ಎಲ್ಲಾ ಮಾಹಿತಿ ಬಹಿರಂಗವಾದ ನಂತರ ಕೆಲವೇ ದಿನಗಳಲ್ಲಿ ಆಪಲ್‌ನ ಗೌಪ್ಯತೆ ಲೇಬಲ್‌ಗಳನ್ನು ಪತ್ರಿಕೆ ಜಾಹೀರಾತುಗಳಲ್ಲಿ ಫೇಸ್‌ಬುಕ್ ಟೀಕಿಸಿತು. ಇತ್ತೀಚಿನ ಅಪ್‌ಡೇಟ್‌ನಲ್ಲಿ ಆಪಲ್ ಸ್ಪರ್ಧಾತ್ಮಕ-ವಿರೋಧಿ ನೀತಿಗಳನ್ನು ಜಾರಿಗೆ ತಂದಿದೆ ಎಂದು ವಾಟ್ಸಾಪ್ ಪ್ರತ್ಯೇಕವಾಗಿ ಆರೋಪಿಸಿದೆ. ಎಫ್ಎಕ್ಯೂ ಮೂಲಕ ಅಪ್ಲಿಕೇಶನ್ ತನ್ನ ಬಳಕೆದಾರರ ಡೇಟಾ ಸಂಗ್ರಹಣೆಯ ಬಗ್ಗೆ ಕೆಲವು ಸ್ಪಷ್ಟೀಕರಣವನ್ನು ಸಹ ಒದಗಿಸಿದೆ. ಆದಾಗ್ಯೂ, ವಾಟ್ಸಾಪ್‌, ಮೆಸೆಂಜರ್‌ನ ಈ ನಡೆ ಬಳಕೆದಾರರಿಗೆ ಬಿಗ್‌ ಶಾಕ್‌ ನೀಡಿರೊದ್ರಲ್ಲಿ ಅನುಮಾನವೇ ಇಲ್ಲ.

Best Mobiles in India

English summary
Privacy labels on the App Store shows Facebook Messenger as the app collecting the most user data compared to Telegram, Signal, and iMessage.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+