Home
ಸುದ್ದಿಜಾಲ

ಹ್ಯಾಕರ್ಸ್ ಎಂದರೆ ಹ್ಯಾಕರ್ಸ್ ಅಲ್ಲ!..ಏಕೆಂದರೆ ನೀವು ಇದನ್ನು ತಿಳಿದಿಲ್ಲ!!

By Bhaskar N J

ಹ್ಯಾಕರ್ಸ್ ಎಂಬ ಪದ ಕಿವಿಗೆ ಬಿದ್ದರೆ ಸಾಕು ಮೊಬೈಲ್ ಮತ್ತು ಕಂಪ್ಯೂಟರ್ ಬಳಕೆದಾರರಲ್ಲಿ ಒಂದು ಸಣ್ಣ ಭಯ ಶುರುವಾಗಿಬಿಡುತ್ತದೆ. ಅಂದರೆ, ಹ್ಯಾಕಿಂಗ್ ಎಂದರೆ ಕೆಟ್ಟದ್ದು, ಕಾನೂನು ಬಾಹಿರ ಚಟುವಟಿಕೆ ಎಂಬ ಭಾವನೆ ನಮ್ಮ ಮನದಲ್ಲಿ ಬೇರೂರಿಬಿಟ್ಟಿದೆ. ನಮ್ಮ ಹಣವನ್ನು ದೋಚುವವರು ಮಾತ್ರ ಹ್ಯಾಕರ್ಸ್ ಎಂಬ ತೀರ್ಮಾನಕ್ಕೆ ಬರಲಾಗಿದೆ.

ಆದರೆ, ನಿಮಗೆ ಗೊತ್ತಾ? ಹಾಗೆ ನೊಡಿದರೆ, ಕಂಪ್ಯೂಟರ್, ಮೊಬೈಲ್ ಬಳಸುತ್ತಿರುವವರೆಲ್ಲರೂ ಒಂದಲ್ಲಾ ಒಂದು ರೀತಿ ಹ್ಯಾಕರ್ಸ್‌ಗಳೇ! ಒಂದು ಅರ್ಥದಲ್ಲಿ ಹೇಳುವುದಾದರೆ ಕಂಪ್ಯೂಟರ್ ಬಗ್ಗೆ ಅಪಾರ ಜ್ಞಾನ ಹೊಂದಿರುವವರೆಲ್ಲರೂ ಹ್ಯಾಕರ್ಸ್‌ಗಳೇ. ಆದರೆ ಆ ಜ್ಞಾನದ ಬಳಕೆ ಕೆಟ್ಟದ್ದಕ್ಕೋ ಅಥವಾ ಒಳ್ಳೆಯದ್ದೋ ಎಂಬುದನ್ನು ಇಲ್ಲಿ ನಿರ್ಧರಿಸಬೇಕಾಗುತ್ತದೆ.

ಹ್ಯಾಕರ್ಸ್ ಎಂದರೆ ಹ್ಯಾಕರ್ಸ್ ಅಲ್ಲ!..ಏಕೆಂದರೆ ನೀವು ಇದನ್ನು ತಿಳಿದಿಲ್ಲ!!

ನಿಜವಾಗಿಯೂ ಹ್ಯಾಕಿಂಗ್ ಅಥವಾ ಹ್ಯಾಕರ್ಸ್ ಎಂದರೆ ಹಾಗಿಲ್ಲ. ಒಂದು ಕಂಪ್ಯೂಟರಿನಲ್ಲಿ ಅಸಾಂಪ್ರದಾಯಿಕ ಕ್ರಮದಿಂದ ಬದಲಾವಣೆ ತರುವುದನ್ನು ಹ್ಯಾಕಿಂಗ್ ಎನ್ನಬಹುದು. ಹಾಗಾಗಿ, ಇಂದಿನ ಲೇಖನದಲ್ಲಿ ಹ್ಯಾಕರ್ಸ್ ಎಂದಾಕ್ಷಣ ನಮ್ಮ ಮುಂದೆ ನಿಲ್ಲುವ ಚಿತ್ರಣದ ಬದಲಾಗಿ, ನೈಜ ಚಿತ್ರಣಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.!!

ಕಂಪ್ಯೂಟರ್ ಬಳಸುವವರೆಲ್ಲಾ ಹ್ಯಾಕರ್ಸ್‌ಗಳೇ!

ಕಂಪ್ಯೂಟರ್ ಬಳಸುವವರೆಲ್ಲಾ ಹ್ಯಾಕರ್ಸ್‌ಗಳೇ!

ಇತ್ತೀಚಿಗೆ ಕನ್ನಡ ಬೆಂಬಲಿತ ಸ್ಮಾರ್ಟ್‌ಫೋನ್ ಬರುವವರೆಗೂ ಕನ್ನಡ ಓದಲು ಮೊಬೈಲಿಗೆ ರೂಟ್ ಮಾಡಬೇಕಾಗಿತ್ತು ಅಲ್ಲವೇ ಇದು ಕೂಡ ಹ್ಯಾಕಿಂಗ್. ಇನ್ನು ವಿಡಿಯೊ ಗೇಮ್ಸ್‌ನಲ್ಲಿ ಬಳಸುವ ಚೀಟ್ ಕೋಡ್ ಕೂಡ ಒಂದು ರೀತಿಯ ಹ್ಯಾಕಿಂಗ್ ಆಗಿರುತ್ತದೆ. ಹಾಗಾಗಿ, ಕಂಪ್ಯೂಟರ್ ಬಳಸುವವರೆಲ್ಲಾ ಹ್ಯಾಕರ್ಸ್‌ಗಳೇ ಆಗಿರುತ್ತಾರೆ.

ವೈಟ್ ಹ್ಯಾಕರ್ಸ್

ವೈಟ್ ಹ್ಯಾಕರ್ಸ್

ಪ್ರತಿಷ್ಠಿತ ಕಂಪನಿಯಾದ ಗೂಗಲ್ ಸೇರಿದಂತೆ ಇನ್ನೂ ಪ್ರಮುಖ ಕಂಪನಿಗಳು ಪ್ರತಿ ವರ್ಷವೂ ಹ್ಯಾಕರ್ಸ್ ಸ್ಪರ್ಧೆ ಏರ್ಪಡಿಸುತ್ತಿವೆ. ಸ್ಪರ್ಧೆಯಲ್ಲಿ ಅತಿ ಕ್ಲಿಷ್ಟವಾದ ಸವಾಲುಗಳನ್ನು ಒಡ್ಡಲಾಗುತ್ತದೆ. ಗೆದ್ದವರಿಗೆ ಬಹುಮಾನ ನೀಡುವ ಜತೆಗೆ ತಮ್ಮ ಕಂಪನಿಯಲ್ಲಿ ಕೆಲಸವನ್ನೂ ನೀಡುತ್ತವೆ. ಇವರನ್ನು ವೈಟ್ ಹ್ಯಾಕರ್ಸ್ ಎಂದು ಕರೆಯುತ್ತಾರೆ.

ಬ್ಲ್ಯಾಕ್ ಹ್ಯಾಕರ್ಸ್ (Black Hackers )

ಬ್ಲ್ಯಾಕ್ ಹ್ಯಾಕರ್ಸ್ (Black Hackers )

ಆನ್‌ಲೈನ್ ಯುಗದಲ್ಲಿ ದುರ್ಬಳಕೆಯೇ ಹೆಚ್ಚುತ್ತಿರುವುದರಿಂದ ಹ್ಯಾಕರ್ಸ್ ಎಂದಾಕ್ಷಣ ವಂಚಕರು ಎಂದುಕೊಂಡುಬಿಡುತ್ತೇವೆ. ಆದರೆ, ಕಂಪ್ಯೂಟರ್ ಮತ್ತು ಅದರ ಜಾಲವನ್ನು ತಮ್ಮ ನಿಯಂತ್ರಣಕ್ಕೆ ಪಡೆದು ಅದರಲ್ಲಿನ ಗೌಪ್ಯ ಮಾಹಿತಿಗಳನ್ನು ದೋಚುವವರನ್ನು ಬ್ಲ್ಯಾಕ್ ಹ್ಯಾಕರ್ಸ್ Black Hackers ಎನ್ನಲಾಗುತ್ತದೆ.

ಕ್ರಾಕರ್ಸ್ ಎಂದು ಕರೆಯಬೇಕು?

ಕ್ರಾಕರ್ಸ್ ಎಂದು ಕರೆಯಬೇಕು?

ಭೂಗತವಾಗಿ, ಕೆಟ್ಟ ಉದ್ದೇಶಗಳಿಗೆ ಹ್ಯಾಕಿಂಗ್ ಕೆಲಸ ಮಾಡುವವರನ್ನು ಕ್ರಾಕರ್ಸ್ ಎಂದು ಕರೆಯಬೇಕು ಎಂದು ಹಲವು ಕಂಪ್ಯೂಟರ್ ತಜ್ಞರು ವಾದಿಸುತ್ತಾರೆ. ಮಾಹಿತಿ ಕದಿಯಲು, ಹಣ ದೋಚುವಂತಹ ಕೆಟ್ಟ ಉದ್ದೇಶಗಳಿಗೆ ಸಂಬಂಧಿಸಿದಂತೆ ಹ್ಯಾಕಿಂಗ್‌ನ ಒಳ್ಳೆಯ ಮುಖ ಕಾಣದಂತಾಗಿದೆ ಎಂದು ಇವರು ಅಭಿಪ್ರಾಯಪಡುತ್ತಾರೆ.

How to use WhatsApp in Kannada - GIZBOT KANNADA
ಹ್ಯಾಕರ್ಸ್ ಎಂದರೆ ಹ್ಯಾಕರ್ಸ್ ಅಲ್ಲ!

ಹ್ಯಾಕರ್ಸ್ ಎಂದರೆ ಹ್ಯಾಕರ್ಸ್ ಅಲ್ಲ!

ಕಂಪ್ಯೂಟರಿಗೆ ಭದ್ರತೆ ಒದಗಿಸುವ ತಜ್ಞರು ಕೂಡ ಹ್ಯಾಕರ್‌ಗಳೇ ಆಗಿರುತ್ತಾರೆ. ಆದರೆ, ಅವರನ್ನು ವೈಟ್ ಹ್ಯಾಕರ್ಸ್ ಎನ್ನಲಾಗುತ್ತದೆ. ಇವರು ಕಂಪ್ಯೂಟರಿಗೆ ನೀಡುವ ಭದ್ರತೆ ಪ್ರಮಾಣ ಪರೀಕ್ಷಿಸಲು ಭದ್ರತಾ ವ್ಯವಸ್ಥೆಯನ್ನು ನಾನಾ ರೀತಿಯಲ್ಲಿ ಹ್ಯಾಕ್ ಮಾಡಿ ಪರಿಶೀಲಿಸುತ್ತಾರೆ.

Best Mobiles in India

English summary
Hacking generally refers to unauthorized intrusion into a computer or a network.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+