ನಿಮ್ಮ ಫೋನ್ ನಂಬರ್ ಬದಲಾಯಿಸುವ ಮುನ್ನ ಈ ಸುದ್ದಿಯನ್ನು ನೀವು ಓದಲೇಬೇಕು?
ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಒಂದೇ ಮೊಬೈಲ್ ನಂಬರ್ ಅನ್ನು ಬಳಸುವುದಿಲ್ಲ. ಟೆಲಿಕಾಂ ಕಂಪೆನಿಗಳು ನೀಡುವ ಹೊಸ ಹೊಸ ಆಫರ್‌ಗಳಿಗೆ ಮಾರು ಹೋಗಿ ಹೊಸ ನಂಬರ್‌ಗಳನ್ನು ಬಳಸಲು ಶುರುಮಾಡುತ್ತಾರೆ. ಇನ್ನು ಕೆಲವರು ಕೆಲವು ವೈಯುಕ್ತಿಕ ಕಾರಣಗಳಿಂದಾಗಿ ಹಳೆ ಮೊಬೈಲ್ ನಂಬರ್ ಬಿಟ್ಟು ಹೊಸ ನಂಬರ್ ಬಳಸುತ್ತಾರೆ. ಆದರೆ ನಿಮ್ಮ ಹಳೆಯ ನಂಬರ್ ಅನ್ನು ಬಳಸದೆ ಹೋದರೆ ಆ ನಂಬರ್‌ನಲ್ಲಿದ್ದ ಡೇಟಾ ಏನಾಗುತ್ತದೆ ಎಂಬುದರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಖಂಡಿತ ಯಾರು ಕೂಡ ಯೋಚಿಸುವುದಿಲ್ಲ.

ಹೌದು, ಹಳೆ ಮೊಬೈಲ್ ನಂಬರ್ ಅನ್ನು ಸ್ಥಗಿತಗೊಳಿಸಿ ಹೊಸ ನಂಬರ್ ಅನ್ನು ಬಳಸುವ ಜನರು ಈ ಸ್ಟೋರಿಯನ್ನು ಓದಲೇ ಬೇಕು. ಹೊಸ ನಂಬರ್ ತೆಗೆದುಕೊಂಡು ಹಳೆಯ ನಂಬರ್‌ನಿಂದ ಏನು ಪ್ರಯೋಜನವಿಲ್ಲ ಎಂದು ಕೊಳ್ಳುವವರು ಈ ಸ್ಟೋರಿಯ ಮೇಲೆ ಕಣ್ಣಾಡಿಸಲೇಬೇಕು. ನೀವು ನಿಮ್ಮ ಹಳೆ ನಂಬರ್ ಅನ್ನು ಬಳಸದೆ ಹೋದರೆ ಕೆಲವು ದಿನಗಳ ನಂತರ ಆ ನಂಬರ್ ಬ್ಲಾಕ್ ಆಗುತ್ತದೆ. ಕೆಲವು ತಿಂಗಳುಗಳ ನಂತರ ಆ ಸಂಖ್ಯೆಯನ್ನು ನಿಮ್ಮ ಟೆಲಿಕಾಂ ಕಂಪೆನಿಗಳು ಮರುಬಳಕೆ ಮಾಡುವ ಮೂಲಕ ಹೊಸ ಬಳಕೆದಾರರಿಗೆ ಒದಗಿಸುತ್ತವೆ. ಹಾಗಾದ್ರೆ ಆ ನಂಬರ್‌ನಲ್ಲಿದ್ದ ನಿಮ್ಮ ಡೇಟಾ ಏನಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನೀವು ಹೊಸ ಸಂಖ್ಯೆಯನ್ನು ಪಡೆದಾಗ ನಿಮ್ಮ ಫೋನ್ ಸಂಖ್ಯೆಗೆ ಸಂಬಂಧಿಸಿದ ಡೇಟಾ ಏನಾಗುತ್ತದೆ ಎಂಬುದರ ಬಗ್ಗೆ ಯಾರು ಕೂಡ ಯೋಚನೆ ಮಾಡುವುದಿಲ್ಲ ಬದಲಿಗೆ ಸ್ನೇಹಿತರು, ಸಂಬಂಧಿಗಳಿಗೆ ಹೊಸ ನಂಬರ್ ಅನ್ನು ಶೇರ್ ಮಾಡಿಕೊಂಡು ಸುಮ್ಮನಾಗಿಬಿಡುತ್ತಾರೆ. ಇತ್ತ ಟೆಲಿಕಾಂ ಕಂಪನಿಗಳು ನಿಮ್ಮ ಹಳೆ ಫೋನ್ ನಂಬರ್ ಅನ್ನು ಮರುಬಳಕೆ ಮಾಡುತ್ತವೆ ಮತ್ತು ಅದನ್ನು ಹೊಸ ಬಳಕೆದಾರರಿಗೆ ಒದಗಿಸುತ್ತವೆ. ಆದರೆ ನಿಮ್ಮ ಈ ಹಳೆಯ ಸಂಖ್ಯೆಯನ್ನು ಬಳಸಿ, ಅದಕ್ಕೆ ಸಂಬಂಧಿಸಿದ ಎಲ್ಲಾ ಡೇಟಾ ಹೊಸ ಬಳಕೆದಾರರಿಗೆ ದೊರೆಯುವ ಸಾದ್ಯತೆ ಕೂಡ ಇದೆ. ಇದು ನಿಮ್ಮ ಪ್ರೈವೆಸಿಗೆ ದಕ್ಕೆ ತರುವ ಅಪಾಯ ಕೂಡ ಇದೆ.

ನಿಮ್ಮ ಫೋನ್ ನಂಬರ್ ನೀವು ಬದಲಾಯಿಸಿದಾಗ, ಸ್ನೇಹಿತರು ಮತ್ತು ಸಂಬಂಧಿಕರಿಗೆ ಹಂಚಿಕೊಳ್ಳಬಹುದು. ನಿಜ ಆದರೆ ನಿಮ್ಮ ಇ-ಕಾಮರ್ಸ್ ಪೋರ್ಟಲ್‌ಗಳು ಅಥವಾ ಡಿಜಿಟಲ್ ಖಾತೆಗಳಲ್ಲಿನ ಎಲ್ಲಾ ಮಾಹಿತಿಯನ್ನು ನೀವು ಯಾವಾಗಲೂ ಆಪ್ಡೇಟ್ ಮಾಡಿರುವುದಿಲ್ಲ. ಇದರಲ್ಲಿ ನಿಮ್ಮ ಹಳೆ ಪೋನ್ ನಂಬರ್ ಇದ್ದು, ಆ ಸಂಖ್ಯೆಯನ್ನು ಬಳಸುವ ಹೊಸ ಬಳಕೆದಾರ ನಿಮ್ಮ ಡಿಜಿಟಲ್ ಖಾತೆಗಳಿಗೆ ಕನ್ನ ಹಾಕಬಹುದು. ಈ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೆ ಅವಕಾಶ ಇರುತ್ತದೆ.

ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ಫೋನ್ ನಂಬರ್‌ಗಳನ್ನು ಮರುಬಳಕೆ ಮಾಡುವ ಮೂಲಕ ಬಳಕೆದಾರರನ್ನು ಸುರಕ್ಷತೆ ಮತ್ತು ಗೌಪ್ಯತೆ ಅಪಾಯಗಳಿಗೆ ಸಿಲುಕಿಸಬಹುದು ಎಂದು ಹೇಳಿದ್ದಾರೆ. ಹೊಸ ಸಂಖ್ಯೆಯನ್ನು ಪಡೆದ ನಂತರ ಪತ್ರಕರ್ತನೊಬ್ಬ ಬ್ಲಡ್ ಟೆಸ್ಟ್ ರಿಪೋರ್ಟ್, ಸ್ಪಾ ಆಪಾಯಿಟ್ಮೆಂಟ್ ಮಾಡಿರುವ ಟೆಕ್ಸ್ಟ್ ಮೆಸೇಜ್ ಅನ್ನು ಸ್ವೀಕರಿಸಿದ್ದಾರೆ. ಇದಲ್ಲದೆ ಸಂಶೋದಕರು ಒಂದು ವಾರಕ್ಕೆ 200ಕ್ಕೂ ಹೆಚ್ಚು ಮರುಬಳಕೆಯ ಫೋನ್ ನಂಬರ್‌ಗಳನ್ನು ಪಡೆದುಕೊಂಡಿದ್ದಾರೆ. ಅವುಗಳಲ್ಲಿ 19 ನಂಬರ್‌ಗಳು ಇನ್ನೂ ಕೂಡ ಹಳೆಯ ಬಳಕೆದಾರರರಿಗೆ ಸಂಬಂಧಿಸಿದ ಪ್ರೈವೆಸಿ ಕಾಲ್ ಮತ್ತು ಮೆಸೇಜ್‌ಗಳನ್ನು ಸ್ವೀಕರಿಸುತ್ತಿವೆ. ಇವುಗಳಲ್ಲಿ ಪಾಸ್‌ಕೋಡ್‌ಗಳು, ಪ್ರಿಸ್ಕ್ರಿಪ್ಷನ್ ರೀಫಿಲ್ ಆಲರ್ಟ್‌ನಂತಹ ಸಂದೇಶಗಳು ಸೇರಿವೆ. ಈ ರೀತಿಯ ಸಂದೇಶಗಳನ್ನು ಹೊಸದಾಗಿ ನಂಬರ್ ಬಳಸುತ್ತಿರುವವರು ದುರುಪಯೋಗಪಡಿಸಿಕೊಳ್ಳಬಹುದು ಎಂದು ಸಂಶೋಧಕರಲ್ಲಿ ಒಬ್ಬರಾದ ಅರವಿಂದ್ ನಾರಾಯಣನ್ ವರದಿಯಲ್ಲಿ ತಿಳಿಸಿದ್ದಾರೆ.

ಸಂಶೋದಕರ ಪ್ರಕಾರ ಮರುಬಳಕೆ ಮಾಡುವ ಫೋನ್ ನಂಬರ್‌ಗಳಿಂದ ಉಂಟಾಗಬಹುದಾದ ಸಮಸ್ಯೆಗಳೇನು?
1) ಹೊಸ ಚಂದಾದಾರರಿಗೆ ಒಂದು ಸಂಖ್ಯೆಯನ್ನು ನಿಗದಿಪಡಿಸಿದ ನಂತರ, ಅವರು ಎಸ್‌ಎಂಎಸ್ ಮೂಲಕ ಹಳೆಯ ಚಂದಾದಾರರನ್ನು ಫಿಶ್ ಮಾಡಬಹುದು ಎಂದು ವರದಿ ಹೇಳುತ್ತದೆ. ಸಂದೇಶಗಳು ನಂಬಲರ್ಹವೆಂದು ತೋರಿದಾಗ ಫಿಶಿಂಗ್ ದಾಳಿಗೆ ಚಂದಾದಾರರು ಒಳಗಾಗಿಬಿಡುತ್ತಾರೆ.
2) ಆಕ್ರಮಣಕಾರರು ವಿವಿಧ ಎಚ್ಚರಿಕೆಗಳು, ಸುದ್ದಿಪತ್ರಗಳು, ಪ್ರಚಾರಗಳು ಮತ್ತು ರೋಬೋಕಾಲ್‌ಗಳಿಗಾಗಿ ವೈ ಸೈನ್ ಅಪ್ ಮಾಡಲು ಸೈನ್ ಅಪ್ ಮಾಡಲು ಸಂಖ್ಯೆಯನ್ನು ಬಳಸಬಹುದು.
3) ಎಸ್‌ಎಂಎಸ್-ದೃಡೀಕರಿಸಿದ ಪಾಸ್‌ವರ್ಡ್ ರಿ ಸೆಟ್ ಮಾಡುವ ಮೂಲಕ ಆನ್‌ಲೈನ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾದ ಪ್ರೊಫೈಲ್‌ಗಳಿಗೆ ಮರುಬಳಕೆಯ ಸಂಖ್ಯೆ ಮೂಲಕ ಹ್ಯಾಕರ್‌ಗಳು ದಾಳಿ ನಡೆಸುವ ಸಾಧ್ಯತೆ ಇದೆ.
ಇನ್ನು ವೆರಿ ಜೋನ್ ವಾಯರ್‌ಲೆಸ್ ಮತ್ತು ಟಿ-ಮೊಬೈಲ್ ಎಂಬ ಎರಡು ದೊಡ್ಡ ಯು.ಎಸ್. ವಾಹಕಗಳಲ್ಲಿ ನಾವು ಒಂದು ಪ್ರಿಪೇಯ್ಡ್ ಖಾತೆಗೆ ಸೈನ್ ಅಪ್ ಮಾಡಿದ್ದೇವೆ. ಎರಡೂ ವಾಹಕಗಳು ಚಂದಾದಾರರಿಗೆ ತಮ್ಮ ಫೋನ್ ಸಂಖ್ಯೆಯನ್ನು ಬದಲಾಯಿಸಲು ಆನ್‌ಲೈನ್ ಇಂಟರ್‌ಫೇಸ್ ಅನ್ನು ಒದಗಿಸುತ್ತವೆ ಎಂದು ವರದಿ ಹೇಳುತ್ತದೆ.


Click it and Unblock the Notifications