ನಿಮ್ಮ ಮುಂದಿನ ಮೊಬೈಲ್‌ನಲ್ಲಿ '5G' ಹೇಗೆ ಕೆಲಸ ಮಾಡಲಿದೆ ಗೊತ್ತಾ?

|

ಭಾರತದಲ್ಲಿ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನ ಈಗ ಮೊಬೈಲ್‌ ಫೋನ್ ಬಳಸುತ್ತಿದ್ದಾರೆ. ಇವರಲ್ಲಿ ಮೂರನೇ ಒಂದು ಭಾಗದಷ್ಟು ಜನ ಮೊಬೈಲ್‌ ಮೂಲಕ ಮಾಹಿತಿ ಸೇವೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ ಸುಮಾರು 80% ಜನ 4ಜಿ ಬಳಸುತ್ತಿದ್ದರೆ, ಮುಂದಿನ ಪೀಳಿಗೆಯಾದ 5ಜಿ ಮೊಬೈಲ್‌ ಕುರಿತು ಈಗಾಗಲೇ ಭರದಿಂದ ಸಿದ್ಧತೆಗಳು

3ಜಿ, 4ಜಿ ನೆಟ್‌ವರ್ಕ್‌ಗಳ ಸಂಪರ್ಕ ಪಡೆದ ಮೊಬೈಲ್ ಫೋನ್‌ಗಳಲ್ಲಿ ಹೆಚ್‌ಡಿ ವಿಡಿಯೋ ಸ್ಟ್ರೀಮ್ ಸೇರಿದಂತೆ ವಿಡಿಯೋ ಕಾಲ್‌ ಮಾಡುವುದು ಸಹ ಸರಾಗವಾಗಿದೆ. ಹಣ ವರ್ಗಾವಣೆ, ಕ್ಯಾಬ್ ಬುಕ್ಕಿಂಗ್‌ನಂತಹ ಸೌಲಭ್ಯಗಳು ನಮ್ಮ ಬೆರಳ ತುದಿಯಲ್ಲೇ ಸಾಧ್ಯವಾಗಿವೆ. ಆದರೂ ಸಹ, ಕೆಲವೇ ತಿಂಗಳಲ್ಲಿ ಕಾಲಿಡುವ '5G' ಬಗ್ಗೆ ಮಾತ್ರ ಇಡೀ ವಿಶ್ವವೇ ಕುತೋಹಲದಿಂದ ನೋಡುತ್ತಿದೆ.

ನಿಮ್ಮ ಮುಂದಿನ ಮೊಬೈಲ್‌ನಲ್ಲಿ '5G' ಹೇಗೆ ಕೆಲಸ ಮಾಡಲಿದೆ ಗೊತ್ತಾ?

ವಿಶ್ವದಲ್ಲೇ ಅತಿ ವೇಗದ ವೈರ್‌ಲೆಸ್ ಇಂಟರ್‌ನೆಟ್ ಸೇವೆ ಒದಗಿಸುತ್ತಿರುವ ದಕ್ಷಿಣ ಕೊರಿಯಾ ಈಗಾಗಲೇ 5ಜಿ ದೂರ ಸಂಪರ್ಕ ಪರೀಕ್ಷಾ ಸಿಗ್ನಲ್‌ಗಳನ್ನು ನೀಡುತ್ತಿದೆ. ದೂರ ಸಂಪರ್ಕ ರಂಗದಲ್ಲಿ ಈ 5ಜಿ ಹೊಸಕ್ರಾಂತಿಯನ್ನೇ ಮಾಡುವ ನಿರೀಕ್ಷೆಯನ್ನು ಹೊಂದಲಾಗಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ವಿಶ್ವವೇ ಎದುರು ನೊಡುತ್ತಿರುವ 5G ಬಗ್ಗೆ ಒಮ್ಮೆ ಕಣ್ಣಾಡಿಸಿಸೋಣ.

ಏನಿದು 5G ತಂತ್ರಜ್ಞಾನ?

ಏನಿದು 5G ತಂತ್ರಜ್ಞಾನ?

ಟೆಲೆಕಮ್ಯೂನಿಕೇಷನ್‌ನಲ್ಲಿ ಹಲವಾರು ವರ್ಷಗಳಿಂದ ನಿಯಮಿತವಾಗಿ ನೆಟ್‌ವರ್ಕ್ ಅಪ್ ಗ್ರೇಡ್ ನಡೆಯುತ್ತಲೇ ಇದೆ. ಅಂದರೆ ಪ್ರತೀ ಸಾರಿಯೂ ಒಂದು ಹೊಸ ತಲೆಮಾರು ನಿಗದಿಯಾಗುತ್ತದೆ. ಈಗ ಬಳಕೆಯಲ್ಲಿರುವ 4G ಯ ಮುಂದುವರೆದ ತಂತ್ರಜ್ಞಾನವನ್ನು 5G ಎಂದು ಕರೆಯಲಾಗಿದೆ. ಈ 5G ಸೇವೆಯಿಂದ ನಮ್ಮ ಜೀವನ ಇನ್ನಷ್ಟು ಸ್ಮಾರ್ಟ್ ಆಗಲಿದೆ! ಅಡುಗೆ ಮಾಡುವುದರಿಂದ ಹಿಡಿದು ಸೆಕ್ಯುರಿಟಿ ಸಿಸ್ಟಮ್‌ವರೆಗೆ ಎಲ್ಲವೂ ಬೆರಳ ಕಾರ್ಯನಿರ್ವಹಿಸಿ, ನಿಯಂತ್ರಿಸುವಂತೆ ಆಗಲಿದೆ.

ಫ್ರೀಕ್ವೆನ್ಸಿಯನ್ನು ಗದಿಪಡಿಸಲಾಗಿದೆ.

ಫ್ರೀಕ್ವೆನ್ಸಿಯನ್ನು ಗದಿಪಡಿಸಲಾಗಿದೆ.

ಸಾಮಾನ್ಯವಾಗಿ ಪ್ರತಿ ಜನರೇಶನ್ ಟೆಕ್ನಾಲಜಿಗೂ ಒಂದೊಂದು ಫ್ರೀಕ್ವೆನ್ಸಿಯನ್ನು ನಿಗದಿಪಡಿಸಲಾಗಿದೆ. ಈಗಾಗಲೇ 4ಜಿಗೆ 300 ಮೆಗಾಹರ್ಟ್ಸ್ನಿಂದ 3 ಗಿಗಾಹರ್ಟ್ಸ್ ತನಕದ ಫ್ರೀಕ್ವೆನ್ಸಿ ನಿಗದಿಪಡಿಸಲಾಗಿದೆ. ಇದೇ ರೀತಿ 5ಜಿಗೆ 30 ಗಿಗಾಹರ್ಟ್ಸ್ನಿಂದ 300 ಗಿಗಾಹರ್ಟ್ಸ್ ವರೆಗಿನ ತರಂಗಾಂತರ ನಿಗದಿಸಲಾಗಿದೆ. ಇದರ ಮೇಲೆ ಸಂಶೋಧನೆಗಳು ನಡೆಯುತ್ತಿವೆ. 5G ತಂತ್ರಜ್ಞಾನ ಅಭಿವೃದ್ದಿಯಾದರೆ, ಈಗಿರುವ ನೆಟ್‌ವರ್ಕ್‌ಗಳಿಗಿಂತ ಹೆಚ್ಚು ಗೋಪುರಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎನ್ನುವುದು ಸಹ ಖಚಿತವಾಗಿದೆ.

4ಜಿಗಿಂತ ನೂರು ಪಟ್ಟು ವೇಗ

4ಜಿಗಿಂತ ನೂರು ಪಟ್ಟು ವೇಗ

5ನೇ ಜನರೇಷನ್ ಮೊಬೈಲ್ ನೆಟ್‌ವರ್ಕ್ ಅಥವಾ 5ನೇ ಜನರೇಷನ್ ವೈರ್‌ಲೆಸ್. ಸರಳವಾಗಿ ಹೇಳುವುದಾದರೆ 5ಜಿ, ಈಗಿನ 4ಜಿ ಎಲ್‌ಟಿಇಗಿಂತ ನೂರುಪಟ್ಟು ವೇಗ ಹೊಂದಲಿದೆ ಎಂದು ಹೇಳಲಾಗಿದೆ. ಒಂದು ಹೈ ಡೆಫಿನೇಶನ್ ಸಿನಿಮಾವೊಂದನ್ನು ಕೆಲವೇ ಸೆಕೆಂಡ್‌ಗಳಲ್ಲಿ ಡೌನ್‌ಲೋಡ್ ಮಾಡಬಹುದಾದ ಸಾಮರ್ಥ್ಯವನ್ನು ಈ 5G ತಂತ್ರಜ್ಞಾನ ಹೊಂದಿದೆ. 5ಎಯಿಂದ ನೆಟ್‌ವರ್ಕ್ ಪ್ರತಿಕ್ರಿಯೆಯ ವೇಗ ಕಡಿಮೆ ವಿದ್ಯುತ್ ಬಳಕೆ ಆಗುವುದರಿಂದ ಮೊಬೈಲ್ ಬ್ಯಾಟರಿ ಹೆಚ್ಚು ಸಮಯ ಬಾಳಿಕೆ ಬರಲಿದೆ. ಬೃಹತ್ ಡೆಟಾವನ್ನೂ ಸಹ ಸೆಕೆಂಡ್‌ಗಳೊಳಗೆ ವರ್ಗಾವಣೆ ಮಾಡಲು ಅನುಕೂಲವಾಗಲಿದೆ.

5ಜಿಯಿಂದ ನಮಗೇನು ಲಾಭ?

5ಜಿಯಿಂದ ನಮಗೇನು ಲಾಭ?

ಜಿಯಿಂದ 4ಜಿಗೆ ಆದ ಬದಲಾವಣೆ ಬಹುತೇಕರ ಅರಿವಿಗೆ ಬಂದೇ ಇಲ್ಲ. ಆದರೆ, 5ಜಿ ಹಾಗಲ್ಲ. ಜಾಗತಿಕ ರಂಗದಲ್ಲಿ ದೊಡ್ಡ ಕ್ರಾಂತಿಯನ್ನೇ ಉಂಟು ಮಾಡಲಿದೆ. ಕೋಟ್ಯಂತರ ಜನರಿಗೆ ಉದ್ಯೋಗ ದೊರಕಲಿದೆ. ಹಲವು ದೇಶಗಳ ಜಿಡಿಪಿಗೆ 5ಜಿ ದೊಡ್ಡ ಕೊಡುಗೆ ನೀಡಲಿದೆ. ಸ್ಯಾಟ್‌ಲೈಟ್ ವರ್ಚುಯಲ್ ರಿಯಾಲಿಟಿ, ಸೆಲ್ಫ್ ಡ್ರೈವಿಂಗ್ ವಾಹನಗಳು ಟೆಲಿ ಹೆಲ್ತ್, ಟೆಲಿ ಎಜುಕೇಷನ್ ಮಾತ್ರವಲ್ಲದೇ ಇಂಟರ್‌ನೆಟ್ ಆಫ್ ಥಿಂಗ್ಸ್, ರೋಬೋಟಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ, ಮಷಿನ್ ಟು ಮಷಿನ್ ಕಮ್ಯೂನಿಕೇಷನ್ ತಂತ್ರಜ್ಞಾನ ಕ್ಷೇತ್ರ 5ಜಿ ಇಲ್ಲದೇ ಕಾರ್ಯಗತವಾಗಲಾರದು.

5G ಫೋನ್‌ಗಳ ಹಿಂದೆ ಮೊಬೈಲ್ ಕಂಪೆನಿಗಳು!

5G ಫೋನ್‌ಗಳ ಹಿಂದೆ ಮೊಬೈಲ್ ಕಂಪೆನಿಗಳು!

ಝಡ್‌ಟಿಇ ಗಿಗಾಬೈಟ್ ಫೋನ್ ಜಗತ್ತಿನ ಮೊದಲ 5ಜಿ ಆಧಾರಿತ ಫೋನ್ ಎಂದು ಘೋಷಿಸಲಾಗಿದೆ. ಈ ವರ್ಷದ ಬಾರ್ಸಿಲೋನ ವರ್ಲ್ಡ್ ಮೊಬೈಲ್ ಕಾಂಗ್ರೆಸ್‌ನಲ್ಲಿ ಈ ಫೋನ್‌ ಅನ್ನು ಪ್ರದರ್ಶಿಸಲಾಗಿದೆ. ಹುವಾವೆ ಕೂಡ ಜಿ ಆಧಾರಿತ ಸ್ಮಾರ್ಟ್‌ ಫೋನ್ ಅನ್ನು ಪರಿಚಯಿಸಿದೆ. ಸ್ಯಾಮ್‌ಸಂಗ್, ಆಪಲ್, ನೋಕಿಯಾ ಮೊಬೈಲ್ ಕಂಪೆನಿಗಳು 5G ಮೊಬೈಲ್ ತಯಾರಿಕೆಯ ಹಿಂದೆ ಬಿದ್ದಿವೆ ಆಲ್ಕಟೆಲ್-ಲೂಸೆಂಟ್, ಎರಿಕ್ಸನ್, ಹುವಾಯಿ ಟೆಕ್ನಾಲಜಿಸ್, ನೋಕಿಯಾ ಸಲ್ಯೂಷನ್ಸ್ ಆ್ಯಂಡ್ ನೆಟ್‌ವರ್ಕ್ಸ್, ಮೋಟೊರೋಲಾ ಸಲ್ಯೂಷನ್ಸ್, ಎನ್‌ಟಿಟಿ ಡೊಕೊಮೋ ಇಂಕ್, ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್, ಚೀನಾ ಮೊಬೈಲ್ಸ್, ವೆರಿರೆನ್ ಕಮ್ಯುನಿಕೇಷನ್ಸ್ 5ಜಿ ತಂತ್ರಜ್ಞಾನದ ಶೋಧನೆಯಲ್ಲಿ ತೊಡಗಿವೆ.

3G, 4G ಗಿಂತ 5G ಅಪಾಯಕಾರಿ.!

3G, 4G ಗಿಂತ 5G ಅಪಾಯಕಾರಿ.!

ಎಲ್ಲಾ ಮೊಬೈಲ್‌ ನೆಟ್‌ವರ್ಕ್‌ಗಳು ಅಪಾಯಕಾರಿಯೇ ಆಗಿವೆ. ನೆಟ್‌ವರ್ಕ್‌ಗಳು ರೇಡಿಯೇಶನ್‌ನಿಂದ ನಮ್ಮ ತಲೆಯೇ ತಿರುಗುತ್ತದೆ. ತರಂಗಾಂತರಗಳಿಂದಾಗಿ ಹಲವರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಈಗಾಗಲೇ ಇಂತಹ ಅಪಾಯಕಾರಿ ಸಮಸ್ಯೆಗಳಿಗೆ ಸಿಲುಕಿರುವ ಜನರಿಗೆ 5G ಎಂಬ ಪೆಡಂಭೂತ ಕೂಡ ಎದುರಾಗುತ್ತಿದೆ. ಈ ರೇಡಿಯೇಶನ್‌ನಿಂದಾಗಿ ಆರೋಗ್ಯದ ಮೇಲೆ ದೀರ್ಘ‌ಕಾಲೀನ ಪರಿಣಾಮ ಉಂಟಾಗುತ್ತದೆ ಎಂದು ಹಲವು ವಿಜ್ಞಾನಿಗಳು ದಾಖಲಿಸಿದ್ದಾರೆ. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ ಕೂಡ.

ವಿಶ್ವದ ಜೊತೆ ಭಾರತದ ಹೆಜ್ಜೆ

ವಿಶ್ವದ ಜೊತೆ ಭಾರತದ ಹೆಜ್ಜೆ

ಅಮೆರಿಕ, ಚೀನಾ, ಜಪಾನ್ ಈಗಾಗಲೇ 5ಜಿ ಸೇವೆ ಕೊಡುವ ಸಿದ್ಧತೆಯಲ್ಲಿ ನಿರತವಾಗಿವೆ. ಭಾರತ ಕೂಡ ಮೊನ್ನೆಯಷ್ಟೇ ಈ ಸಂಬಂಧ ಉನ್ನತ ಸಮಿತಿಯೊಂದನ್ನು ರಚಿಸಿದ್ದು 2020ಕ್ಕೆ ದೇಶದಲ್ಲಿ 5ಜಿ ಸೇವೆ ನೀಡುವ ಗುರಿ ಹೊಂದಿದರ ಜತೆಗೆ ದೇಶಗಳ ಆರ್ಥಿಕ ಅಭಿವೃದ್ಧಿ ದರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ. ಟೆಲಿಕಾಂ ತಜ್ಞರು ಅಂದಾಜಿಸಿದಂತೆ, ಇದೆ ಮೊದಲ ಬಾರಿಗೆ ಭಾರತ ಕೂಡ ವಿಶ್ವದ ಜೊತೆಯಲ್ಲಿಯೇ ಭವಿಷ್ಯದ 5G ತಂತ್ರಜ್ಞಾನವನ್ನು ಹೊಂದಲಿದೆ.

ಬೆಂಗಳೂರಲ್ಲೇ ಮೊದಲು 5ಜಿ

ಬೆಂಗಳೂರಲ್ಲೇ ಮೊದಲು 5ಜಿ

ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಲ್ಲಿ 5ಜಿ ಸೇವೆ ನೀಡುವುದಾಗಿ ಭಾರ್ತಿ ಏರ್‌ಟೆಲ್ ಈ ವರ್ಷದ ಮೊದಲಾರಂಭದಲ್ಲೇ ಘೋಷಿಸಿದೆ. ಮೊಬೈಲ್ ತರಂಗಾಂತರ ದಕ್ಷತೆ ಹೆಚ್ಚಿಸುವ ‘ಮ್ಯಾಸಿವ್‌ ಎಂಐಎಂಒ' ತಂತ್ರಜ್ಞಾನ ಬಳಸಿಕೊಂಡು 5ಜಿ ಸೇವೆ ಜಾರಿಗೆ ತರಲು ಮುಂದಾಗಿದೆ. ಮೊದಲು 4G ಸೇವೆಯನ್ನು ನೀಡಲು ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಂಡಿರು ಏರ್‌ಟೆಲ್‌ನ 5ಜಿ ತಂತ್ರಜ್ಞಾನ 4Gಗಿಂರ 5ರಿಂದ 7 ಪಟ್ಟು ವೇಗವನ್ನು ಮಾತ್ರ ಹೊಂದಿರಲಿದೆ ಎನ್ನಲಾಗಿದೆ. ಬೃಹತ್ ಮಲ್ಟಿಪಲ್ ಇನ್‌ಪುಟ್ ಮತ್ತು ಮಲ್ಟಿಪಲ್ ಔಟ್‌ಪುಟ್ ತಂತ್ರಜ್ಞಾನವನ್ನು ಏರ್‌ಟೆಲ್ ಬಳಸಿಕೊಳ್ಳಲಿರುವ ಬಗ್ಗೆಯೂ ಮಾಹಿತಿ ಇದೆ.

Best Mobiles in India

English summary
What is 5G? How 5G Works with Your Next Phone Everything you need to know. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X