Home
ಸುದ್ದಿಜಾಲ

ಜಿಯೋ-ಏರ್‌ಟೆಲ್ ಅಸ್ತಿತ್ವಕ್ಕೆ ಧಕ್ಕೆ ತಂದಿದೆ ಆಪಲ್ 'ಇ-ಸಿಮ್'!..ಏನಿದು ಭವಿಷ್ಯದ ತಂತ್ರಜ್ಞಾನ?

ಮೊನ್ನೆ ತಾನೆ ಮಾರುಕಟ್ಟೆಗೆ ಕಾಲಿಟ್ಟಿರುವ ಆಪಲ್ ಐಫೋನ್ Xs, ಐಫೋನ್ Xs ಮ್ಯಾಕ್ಸ್ ಹಾಗೂ ಐಫೋನ್ Xr ಸ್ಮಾರ್ಟ್‌ಫೋನ್‌ಗಳಲ್ಲಿ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಹೊಸ ಅವಕಾಶವನ್ನು ಆಪಲ್ ಮಾಡಿಕೊಟ್ಟಿದೆ. ಆಂಡ್ರಾಯ್ಡ್ ಫೋನ್‌ಗಳಲ್ಲಿ ಇರುವುದಕ್ಕಿಂತ ಭಿನ್ನ ಮಾದರಿಯಲ್ಲಿ ಬಂದಿರುವ ಇ-ಸಿಮ್‌ನಿಂದಾಗಿ ಟೆಲಿಕಾಂ ಆಪರೇಟರ್‌ಗಳ ಅಸ್ತಿತ್ವವೇ ಅಲುಗಾಡುತ್ತದೆ ಎಂಬ ಭೀತಿ ಈಗ ಎದುರಾಗಿದೆ.

ಹೌದು, ಇ-ಸಿಮ್‌ನಿಂದ ಒಂದು ನೆಟ್‌ವರ್ಕ್‌ ನಿಂದ ಇನ್ನೊಂದು ನೆಟ್‌ವರ್ಕ್‌ಗೆ ಬದಲಾಗುವುದು ಅತ್ಯಂತ ಸುಲಭವಾಗಿದೆ. ಟೆಲಿಕಾಂ ಕಂಪನಿಗಳ ಕಚೇರಿಗೆ ಹೋಗದೇ, ಕೇವಲ ಫೋನ್‌ನಲ್ಲಿರುವ ಸೆಟ್ಟಿಂಗ್ಸ್ ಬದಲಿಸಿದರೆ ಸಾಕು ನೆಟ್‌ವರ್ಕ್ ಕೂಡ ಬದಲಾಗಲಿದೆ. ಪ್ರಸ್ತುತ ಈ ಅನುಕೂಲ ಗ್ರಾಹಕರಿಗೆ ಆರಾಮದಾಯಕವಾಗಿದ್ದರೇ, ಟೆಲಿಕಾಂ ಕಂಪನಿಗಳಿಗೆ ಸಮಸ್ಯೆ ಎದುರಾಗಿದೆ. ಆದರೆ, ಭವಿಷ್ಯ ಹೇಗಿರುತ್ತದೆ.?

ಜಿಯೋ-ಏರ್‌ಟೆಲ್ ಅಸ್ತಿತ್ವಕ್ಕೆ ಧಕ್ಕೆ ತಂದಿದೆ ಆಪಲ್ 'ಇ-ಸಿಮ್'!!

ಈ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಾ ಹೊರಟರೆ, ಏನಿದು ಇ ಸಿಮ್?, ಇ-ಸಿಮ್ ಕಲ್ಪನೆ ಹೇಗೆ ಮೂಡಿಬಂತು?, ಇ-ಸಿಮ್‌ನಿಂದ ಗ್ರಾಹಕರಿಗೆ ಹೇಗೆ ಲಾಭ?, ಇದು ಸುರಕ್ಷಿತವೋ, ಅನುಕೂಲವೋ ಎಂಬ ಪ್ರಶ್ನೆಗಳಿಗೆ ಉತ್ತರ ಪಡೆಯಬೇಕಾಗುತ್ತದೆ. ಹಾಗಾಗಿ, ಇಂದಿನ ಲೇಖನದಲ್ಲಿ ಇ-ಸಿಮ್‌ ಎಂದರೇನು?, ಇದರ ಅನುಕೂಲಗಳು ಮತ್ತು ಮಿತಿಗಳು ಯಾವುವು ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯೋಣ.

ಏನಿದು ಇ-ಸಿಮ್?

ಏನಿದು ಇ-ಸಿಮ್?

ಇ-ಸಿಮ್ ಎಂದರೆ ಎಲೆಕ್ಟ್ರಾನಿಕ್‌ ಸಿಮ್ ಅಲ್ಲ. ಬದಲಿಗೆ ಇದು ಎಂಬೆಡೆಡ್‌ ಸಿಮ್ ಆಗಿದೆ. ಈ ಇ-ಸಿಮ್‌ ಕಲ್ಪನೆ ಹೊಸದೇನೂ ಅಲ್ಲ. ಕಳೆದ ಆರೇಳು ವರ್ಷಗಳಿಂದಲೂ ಈ ವ್ಯವಸ್ಥೆ ಚಾಲ್ತಿಯಲ್ಲಿದೆ. ನಾವು ಕೊಂಡು ತರುವಂಥದ್ದೇ ಸಿಮ್ ಅನ್ನು ಫೋನ್‌ನ ಮದರ್‌ಬೋರ್ಡ್‌ನಲ್ಲೇ ಅಳವಡಿಸಲಾಗಿರುವುದನ್ನು ಇ-ಸಿಮ್ ಎಂದು ಕರೆಯಲಾಗಿದೆ. ಈಗಾಗಲೇ ಇದನ್ನು ಕೆಲವೇ ಕಂಪನಿಗಳು ತಮ್ಮ ಪ್ರಾಡಕ್ಟ್ಗಳಲ್ಲಿ ಅಳವಡಿಸಿರುವದನ್ನು ನೀವು ನೋಡಬಹುದು.

ಇ-ಸಿಮ್ ಕಾರ್ಯ ನಿರ್ವಹಣೆ ಹೇಗೆ?

ಇ-ಸಿಮ್ ಕಾರ್ಯ ನಿರ್ವಹಣೆ ಹೇಗೆ?

ನಮಗೆ ಒಂದು ಟೆಲಿಕಾಂ ಕಂಪನಿಯ ಸೇವೆ ಬೇಡವೆಂದರೆ ಇನ್ಮುಂದೆ ಆ ಸಿಮ್ ತೆಗೆಯುವ ಅಗತ್ಯವಿಲ್ಲ. ಬದಲಾಗಿ, ಬೇರೆ ನೆಟ್‌ವರ್ಕ್‌ ಜೊತೆಗೆ ಸುಲಭವಾಗಿ ಕನೆಕ್ಟ್ ಮಾಡಿಕೊಳ್ಳಬಹುದು. ಅಂದರೆ ಇದು ರೀರೈಟಬಲ್ ಚಿಪ್‌! ಇತ್ತೀಚಿನ ಕೆಲವು ಮೊಬೈಲ್‌ಗ‌ಳಲ್ಲಿರುವ ಎನ್‌ಎಫ್ಸಿ ಚಿಪ್‌ ರೀತಿಯಲ್ಲೇ ಇದು ಕೆಲಸ ಮಾಡುತ್ತದೆ. ಇದಕ್ಕಾಗಿ, ನಾವು ಟೆಲಿಕಾಂ ಕಂಪನಿಯ ಕಚೇರಿಗೆ ತೆರಳಿ ನಮ್ಮ ದಾಖಲೆಗಳನ್ನು ಕೊಡುವ ಅವಶ್ಯಕತೆ ಇರುವುದಿಲ್ಲ.

Get 1GB free Jio 4G data with Cadbury Dairy Milk - KANNADA
 ಭಾರತದಲ್ಲಿ ಅನುಮತಿ ಇದೆ.

ಭಾರತದಲ್ಲಿ ಅನುಮತಿ ಇದೆ.

ಇ-ಸಿಮ್ ಹೊಂದಿರುವ ಆಪಲ್‌ ಸ್ಮಾರ್ಟ್‌ ವಾಚ್‌ಗಳನ್ನು ಏರ್‌ಟೆಲ್‌ ಹಾಗೂ ಜಿಯೋ ಮಾರಾಟ ಮಾಡಲು ಆರಂಭಿಸುತ್ತಿದ್ದಂತೆಯೇ ಕಳೆದ ಮೇನಲ್ಲಿಯೇ ಟೆಲಿಕಾಂ ಇಲಾಖೆ ಭಾರತದಲ್ಲಿ ಇ-ಸಿಮ್‌ಗೆ ಅನುಮತಿ ನೀಡಿದೆ.ಟೆಲಿಕಾಂ ನಿಯಮದ ಪ್ರಕಾರ ಸ್ಮಾರ್ಟ್‌ಫೋನ್‌ ತಯಾರಕರು ಸ್ಮಾರ್ಟ್‌ಫೋನ್‌ ಮಾರುವಾಗಲೇ ಸಿಮ್ ವಿತರಣೆಗೆ ಅಗತ್ಯವಿರುವ ಕೆವೈಸಿ ದಾಖಲೆಯನ್ನು ಖಚಿತಪಡಿಸಿಕೊಳ್ಳಬೇಕಿದೆ. ಹಾಗಾಗಿ, ಇನ್ನು ಬಯೋಮೆಟ್ರಿಕ್ ದೃಢೀಕರಣ ಸೌಲಭ್ಯದ ಮೂಲಕ ಸ್ಮಾರ್ಟ್‌ಫೋನ್‌ ಖರೀದಿ ಮಾಡಬೇಕಾಗುತ್ತದೆ

ಭಾರತದಲ್ಲಿ ಎರಡು ಕಂಪನಿಗಳಲ್ಲಿದೆ ಸೌಲಭ್ಯ

ಭಾರತದಲ್ಲಿ ಎರಡು ಕಂಪನಿಗಳಲ್ಲಿದೆ ಸೌಲಭ್ಯ

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ e-SIM ಕಾರ್ಡ್ ನೀಡುವ ಟೆಲಿಕಾಂ ಕಂಪನಿಗಳೇಂದರೆ ಜಿಯೋ ಮತ್ತು ಏರ್ಟೆಲ್ ಮಾತ್ರವೇ. ಐಫೋನ್ ಮಾರುಕಟ್ಟೆಗೆ ಬರುತ್ತಿದ್ದಂತೆಯೇ ಏರ್‌ಟೆಲ್‌ ಮತ್ತು ರಿಲಾಯನ್ಸ್ ಜಿಯೋ ಇ-ಸಿಮ್‌ಗೆ ಕನೆಕ್ಟಿವಿಟಿ ಒದಗಿಸಲಿವೆ. ಒಂದು ಖುಷಿಯ ಸಂಗತಿಯೆಂದರೆ ಐಫೋನ್ ಇ-ಸಿಮ್‌ ಒಂದನ್ನೇ ಹೊಂದಿರುವುದಿಲ್ಲ. ಒಂದು ಮೈಕ್ರೋಸಿಮ್ ಸ್ಲಾಟ್‌ ಕೂಡ ಇರುತ್ತದೆ. ಇದು ಗ್ರಾಹಕರಿಗೆ ಮತ್ತು ಟೆಲಿಕಾಂ ಕಂಪೆನಿಗಳಿಗೆ ಸಹಾಯವಾಗಲಿದೆ.

ಟೆಲಿಕಾಂ ಕಂಪೆನಿಗಳಿಗೆ ಟೆನ್ಷನ್!

ಟೆಲಿಕಾಂ ಕಂಪೆನಿಗಳಿಗೆ ಟೆನ್ಷನ್!

ಈ ಬಾರಿಯ ಐಫೋನ್‌ನಲ್ಲಿ ಇ-ಸಿಮ್ ಸೌಲಭ್ಯ ಟೆಲಿಕಾಂ ಆಪರೇಟರ್‌ಗಳ ನಿದ್ದೆ ಕೆಡಿಸಿದೆ. ಇ-ಸಿಮ್‌ನಿಂದಾಗಿ ಟೆಲಿಕಾಂ ಆಪರೇಟರ್‌ಗಳ ಅಸ್ತಿತ್ವವೇ ಅಲುಗಾಡುತ್ತದೆ ಎಂಬ ಭೀತಿ ಈಗ ಎದುರಾಗಿದೆ. ಒಂದು ನೆಟ್‌ವರ್ಕ್‌ನಿಂದ ಇನ್ನೊಂದು ನೆಟ್‌ವರ್ಕ್‌ಗೆ ಬದಲಾಗುವುದು ಇದರಲ್ಲಿ ಅತ್ಯಂತ ಸುಲಭವಾಗಿರುವುದು ಇದಕ್ಕೆ ಕಾರಣವಾಗಿದೆ. ಇದರಿಂದಾಗಿಯೇ, ಅಮೆರಿಕದ ವೆರಿಜಾನ್‌ ಕಮ್ಯೂನಿಕೇಶನ್ಸ್ ಮತ್ತು ಎಟಿ ಆಂಡ್‌ ಟಿ ಕಂಪನಿಗಳ ಜೊತೆಗೆ ಆಪಲ್‌ ಕಾನೂನು ಸಮರ ನಡೆಸಬೇಕಾಗಿ ಬಂದಿತ್ತು.

ಭಾರಿ ತಲೆನೋವಿನ ಸಂಗತಿ

ಭಾರಿ ತಲೆನೋವಿನ ಸಂಗತಿ

ಹಿಂದೆ ಮೊಬೈಲ್‌ ಸಂಖ್ಯೆ ಪೋರ್ಟ್‌ ಸೌಲಭ್ಯ ಬಂದಾಗ ಜನರು ಮಾಡಿದ ಕೆಲಸವನ್ನೇ ಈಗ ಬಂದಿರುವ ಇ-ಸಿಮ್ ಮಾಡಲಿದೆ. ಇದು ಟೆಲಿಕಾಂ ಕಂಪನಿಗಳಿಗೆ ಭಾರಿ ತಲೆನೋವಿನ ಸಂಗತಿಯಾಗಿದ್ದು, ಟೆಲಿಕಾಂ ಕಂಪೆನಿಗಳಿಗೆ ಭಯ ಮೂಡಿಸಿದೆ. ಒಂದು ಟೆಲಿಕಾಂ ಕಂಪನಿಯಿಂದ ಮತ್ತೊಂದು ಟೆಲಿಕಾಂ ಕಂಪೆನಿಗೆ ಪೋರ್ಟ್ ಮಾಡಿಸಿಕೊಳ್ಳಲು ಈ ಮೊದಲು ಇದ್ದ ಪೋರ್ಟ್ ಆಯ್ಕೆಗಿಂತಲೂ ಇ-ಸಿಮ್‌ ಸೌಲಭ್ಯ ಸುಲಭವಾಗಿದೆ. ಇದರಿಂದ ಇ-ಸಿಮ್ ಟೆಲಿಕಾಂ ಕಂಪನಿಗಳಿಗೆ ಭಾರಿ ತಲೆನೋವಾಗಿದೆ.

ಪ್ರತಿಬಾರಿ ದಾಖಲೆ ನೀಡಬೇಕಿಲ್ಲ.

ಪ್ರತಿಬಾರಿ ದಾಖಲೆ ನೀಡಬೇಕಿಲ್ಲ.

ಸ್ಮಾರ್ಟ್‌ಫೋನ್‌ ಮಾರುವಾಗಲೇ ಸಿಮ್ ವಿತರಣೆಗೆ ಅಗತ್ಯವಿರುವ ಕೆವೈಸಿ ದಾಖಲೆಯನ್ನು ಖಚಿತಪಡಿಸಿಕೊಳ್ಳುವುದರಿಂದ ಮೊಬೈಲ್‌ ತೆಗೆದುಕೊಳ್ಳುವ ರೀತಿಯಲ್ಲಿ ನಮ್ಮ ಹೆಸರಿನಲ್ಲಿ ಬಿಲ್‌ ಮಾಡಿಸಿಕೊಂಡು ಬಂದರೆ ಸಾಲದು. ವಿಳಾಸ ಹಾಗೂ ಗುರುತಿನ ದಾಖಲೆಗಳನ್ನೂ ನೀಡಬೇಕಿರುತ್ತದೆ. ಈಗ ಸ್ಮಾರ್ಟ್‌ಫೋನ್ ಖರೀದಿಗೆ ಆಧಾರ್ ನೀಡಬೇಕಿರುವುದರಿಂದ, ಪ್ರತಿ ಬಾರಿ ನೆಟ್‌ವರ್ಕ್‌ ಬದಲಾವಣೆ ಮಾಡುವಾಗಲೂ ದಾಖಲೆಗಳನ್ನು ಕೊಡಬೇಕಿಲ್ಲ. ಇದು ಗ್ರಾಹಕರಿಗೆ ವರದಾನವಾಗಲಿದೆ.

ಮೊಬೈಲ್ ಕಂಪೆನಿಗಳೇ ದಿಗ್ಗಜರು!

ಮೊಬೈಲ್ ಕಂಪೆನಿಗಳೇ ದಿಗ್ಗಜರು!

ಈಗ ಹೆಸರುಮಾಡುತ್ತಿರುವ ಇ ಸಿಮ್ ಅನುಕೂಲಗಳು ಹಲವಾರಿದ್ದರೂ ಮುಂದೊಂದು ದಿನ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಕೂಡ ಇವೆ. ಸ್ಮಾರ್ಟ್‌ಫೋನ್‌ ತಯಾರಿಕೆ ಕಂಪನಿಗಳೇ ನೆಟ್‌ವರ್ಕ್‌ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ತಾನೇ ಡೇಟಾ ಹಾಗೂ ಕರೆಗಳ ಟ್ಯಾರಿಫ್ ಬಿಡುಗಡೆ ಮಾಡಬಹುದಾದ ಭಯ ಕಾಡುತ್ತಿದೆ. ಯಾವ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಬಾರದು ಎಂಬುದನ್ನು ಸ್ಮಾರ್ಟ್‌ಫೋನ್‌ ತಯಾರಿಕೆ ಕಂಪನಿಗಳು ನಿರ್ಧರಿಸಿದರೆ ಕಷ್ಟ ಕಷ್ಟ.!

Best Mobiles in India

English summary
What is e-SIM on the iPhone XS? How to get an e-SIM in India from Jio and Airtel. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+