ಮತದಾನ ಪ್ರಕ್ರಿಯೆಯಲ್ಲಿ EVM ಪಾತ್ರವೇನು? ಇದರಿಂದ ಏನೆಲ್ಲಾ ಪ್ರಯೋಜನ?
ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಪ್ರಕ್ರಿಯೆ ಇಂದು ಬೆಳಿಗ್ಗೆ 7ಗಂಟೆಯಿಂದಲೇ ರಾಜ್ಯಾದಂತ್ಯ ಪ್ರಾರಂಭವಾಗಿದೆ. ಇವಿಎಂ ನಲ್ಲಿ ತಮ್ಮ ನೆಚ್ಚಿನ ಅಭ್ಯರ್ಥಿಗಳ ಗುರುತಿನ ಮುಂದಿರುವ ಬಟನ್ ಟ್ಯಾಪ್ ಮಾಡುವ ಮೂಲಕ ಮತದಾನ ಮಾಡುತ್ತಿದ್ದಾರೆ. ಆದರೆ ಹೊಸದಾಗಿ ಮತದಾನ ಮಾಡುತ್ತಿರುವವರಿಗೆ ಇವಿಎಂ ಬಗ್ಗೆ ಕುತೂಹಲ ಇದ್ದೆ ಇರುತ್ತದೆ.
ಹೌದು, ನಾವು ಹಾಕುವ ಮತ ಇವಿಎಂ ನಲ್ಲಿ ಎಲ್ಲಿ ಸ್ಟೋರೇಜ್ ಆಗಲಿದೆ. ಇವಿಎಂ ಅಂದರೆ ಏನು? ಇವಿಎಂ ಮೂಲಕ ಮತದಾನ ಪ್ರಕ್ರಿಯೆ ಹೇಗೆ ಎಂಬೆಲ್ಲಾ ಗೊಂದಲ ಇರುತ್ತದೆ. ಹಾಗಂತ ಚಿಂತಿಸಬೇಕಾದ ಅಗತ್ಯವಿಲ್ಲ. ಇವಿಎಂ ಎಂದರೇನು? ಇದರಲ್ಲಿ ನಿಮ್ಮ ಮತದಾನ ಪ್ರಕ್ರಿಯೆ ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

EVM ಎಂದರೆ ಹೆಸರೇ ಸೂಚಿಸುವಂತೆ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ಸ್ ಎಂದು ಹೇಳಬಹುದು. ಈ ಹಿಂದೆ ಬಳಸುತ್ತಿದ್ದ ಬ್ಯಾಲೆಟ್ ಪೇಪರ್ ಮತದಾನದ ಬದಲಿಗೆ ಇವಿಎಂಗಳನ್ನು ಬಳಸಲಾಗುತ್ತಿದೆ. EVM ಮೂಲಕ ನಡೆಸುವ ಮತದಾನ ಹಲವು ಕಾರಣಗಳಿಂದ ಸಹಾಯಕವಾಗಿದೆ. ಬ್ಯಾಲೆಟ್ ಪೇಪರ್ ಮೂಲಕ ನಡೆಸುತ್ತಿದ್ದ ಮತದಾಣ ಪ್ರಕ್ರಿಯೆಯಿಂದ ಮತದಾನ ಎಣಿಕೆ ಕಾರ್ಯ ತುಂಬಾ ನಿದಾನವಾಗುತ್ತಿತ್ತು. ಆದರೆ EVM ಮೂಲಕ ಮತ ಎಣಿಕೆ ಕಾರ್ಯ ತುಂಬಾ ಸುಲಭವಾಗಿದೆ.
EVM ವ್ಯವಸ್ಥೆಯನ್ನು ಈಗಾಗಲೇ ಭಾರತದಲ್ಲಿನ ರಾಜ್ಯ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಬಳಸಲಾಗುತ್ತಿದೆ. EVM ನಲ್ಲಿ ಮತದಾನ ಮಾಡುವುದಕ್ಕೂ ಮೊದಲು ಇದರಲ್ಲಿ ವಿವಿಪ್ಯಾಟ್ ಅನ್ನು ಆಕ್ಟಿವ್ ಮಾಡಬೇಕಾಗುತ್ತದೆ. ವಿವಿ ಪ್ಯಾಟ್ ಆಕ್ಟಿವ್ ಆದ ನಂತರವಷ್ಟೇ ಮತದಾನ ಪ್ರಕ್ರಿಯೆ ನಡೆಸಲಾಗುತ್ತದೆ. ಇನ್ನು ಭಾರತದಲ್ಲಿ 1982ರ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಭಾರಿಗೆ EVM ಮೂಲಕ ವೋಟಿಂಗ್ ನಡೆಸಲಾಗಿತ್ತು ಅನ್ನೊದು ಗಮನಿಸಬೇಕಾದ ವಿಚಾರವಾಗಿದೆ.
EVM ಹೇಗೆ ಕಾರ್ಯನಿರ್ವಹಿಸಲಿದೆ?
EVM ನಲ್ಲಿ ಮತದಾರರಿಗೆ ತಮ್ಮ ಅಭ್ಯರ್ಥಿಗಳ ಪ್ರತಿ ಆಯ್ಕೆಗೆ ಒಂದು ಬಟನ್ ಅನ್ನು ನೀಡಲಾಗಿರುತ್ತದೆ. ಅಲ್ಲದೆ EVM ಅನ್ನು ಕೇಬಲ್ ಮೂಲಕ ಕನೆಕ್ಟಿವಿಟಿ ಮಾಡಲಾಗಿರುತ್ತದೆ. ಅಂದರೆ EVM ಎರಡು ಯೂನಿಟ್‌ಗಳನ್ನು ಒಳಗೊಂಡಿರುತ್ತದೆ. ಒಂದು ಕಂಟ್ರೂಲ್ ಯೂನಿಟ್ ಮತ್ತು ವೋಟಿಂಗ್ ಯೂನಿಟ್ ಈ ಎರಡು ಯೂನಿಟ್‌ಗಳನ್ನು ಕೇಬಲ್ ಮೂಲಕ ಕನೆಕ್ಟ್ ಮಾಡಲಾಗಿರುತ್ತದೆ. ಇದರಿಂದ ಮತದಾರ ತನ್ನ ಮತ ಚಲಾಯಿಸುವಾಗ ಗುಂಡಿಯನ್ನು ಟ್ಯಾಪ್ ಮಾಡಿದರೆ ವೋಟ್ ತಾನೇ ಲಾಕ್ ಆಗಲಿದೆ. ಈ ಮೂಲಕ ಒಬ್ಬ ವ್ಯಕ್ತಿಯು ಒಮ್ಮೆ ಮಾತ್ರ ಮತ ಚಲಾಯಿಸುವುದನ್ನು ಖಚಿತಪಡಿಸಲಿದೆ.

EVM ವೋಟಿಂಗ್ ವ್ಯವಸ್ಥೆಯಿಂದ ಏನೆಲ್ಲಾ ಪ್ರಯೋಜನಗಳು?
* EVM ವೋಟಿಂಗ್ ವ್ಯವಸ್ಥೆ ಮತದಾನ ಪ್ರಕ್ರಿಯೆ ಸಮಯವನ್ನು ಕಡಿಮೆ ಮಾಡಲಿದೆ
* EVM ಗಳ ಮೂಲಕ ವೋಟಿಂಗ್ ಕೌಂಟ್ ಸುಲಭವಾಗಲಿದೆ.
* EVM ವ್ಯವಸ್ಥೆಯನ್ನು ಟ್ಯಾಂಪರ್ ಮಾಡಲು ಸಾಧ್ಯವಿಲ್ಲ.
* ಈ ಯಂತ್ರಗಳು ಬ್ಯಾಟರಿಗಳಿಂದ ಚಾಲಿತವಾಗಿದ್ದು, ವಿದ್ಯುತ್ ಬಳಕೆಯ ಅವಶ್ಯಕತೆಯಿಲ್ಲ
* ಇವಿಎಂಗಳು ಒಂದೇ ಕ್ಷೇತ್ರದಲ್ಲಿ 64 ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುತ್ತವೆ
* EVM ನಲ್ಲಿ ಮತಗಳನ್ನು 10 ವರ್ಷಗಳವರೆಗೆ ಸ್ಟೋರೇಜ್ ಮಾಡಬಹುದು
* EVMಗಳ ಪ್ರೋಗ್ರಾಂ ಅನ್ನು ಬದಲಾಯಿಸಲು ಸಾಧ್ಯವಿಲ್ಲ.
* EVMನ ಬಟನ್ ಟ್ಯಾಪ್ ಮಾಡಿದ ನಂತರ ನಿಮ್ಮ ಮತ ಚಲಾವಣೆಯಾಗಲಿದೆ.
ಇನ್ನು ಭಾರತದಲ್ಲಿ EVMಗಳನ್ನು ತಯಾರಿಸುವುದಕ್ಕೆ ಎರಡು PSUಗಳು ಮಾತ್ರ ಅವಕಾಶ ಪಡೆದಿವೆ. ಇದರಲ್ಲಿ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ (BEL) ಮತ್ತು ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯನ್ ಲಿಮಿಟೆಡ್ (ECIL) ಗಳು ಸೇರಿವೆ. ಇನ್ನು EVMಗಳ ನೀವು ಹೆಚ್ಚಿನ ಮಾಹಿತಿ ಬೇಕಿದ್ದರೆ ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್‌ಗೆ ಬೇಟಿ ನೀಡಿ ನಿಮ್ಮ ಗೊಂದಲಗಳನ್ನು ಬಗೆಹರಿಸಿಕೊಳ್ಳಬಹುದು.


Click it and Unblock the Notifications








