ಬಿಟ್‌ಕಾಯಿನ್ ಅಂದರೆ ಏನು?.ಅದರ ಕಾರ್ಯ ಹೇಗೆ?.ಬೆಲೆ ಎಷ್ಟು?..ಇಲ್ಲಿದೆ ಸಂಪೂರ್ಣ ಡೀಟೆಲ್ಸ್!!

ಅಂತರ್ಜಾಲದ ಹಣ ಬಿಟ್‌ಕಾಯಿನ್ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿಯಿರಿ.!!

|

ಬಿಟ್‌ಕಾಯಿನ್ ಬಗ್ಗೆ ವರದಿಗಳು ಹೆಚ್ಚಾದಂತೆ ಈ ಬಿಟ್‌ಕಾಯಿನ್ ಎನ್ನುವ ಅಂತರ್ಜಾಲದ ಹಣದ ಬಗ್ಗೆ ಎಲ್ಲರಿಗೂ ಕುತಹೋಹಲ ಏರ್ಪಟ್ಟಿದೆ. ಹಾಗಾಗಿಯೇ, ಎಲ್ಲರಿಗೂ ಏನಿದು ಬಿಟ್‌ಕಾಯಿನ್? ನೋಡಲು ಹೇಗಿರುತ್ತದೆ? ಅದರ ಬೆಲೆ ಎಷ್ಟು? ಅದನ್ನು ಬಳಸುವುದು ಹೇಗೆ ಎಂಬೆಲ್ಲಾ ಪ್ರಶ್ನೆಗಳು ಅವರನ್ನು ಕಾಡುತ್ತಿದ್ದು, ಉತ್ತರ ಸಹ ಸಿಗದೆ ಹಲವರಿದ್ದಾರೆ.!!

ಬಿಟ್‌ಕಾಯಿನ್ ಎನ್ನುವುದು ಅಂತರ್‌ಜಾಲ ಲೋಕದಲ್ಲಿ ಬಳಕೆಗೆ ಬರುತ್ತಿರುವ ಗೂಚರಿಸದ ಹಣವಾಗಿದ್ದು ( ವರ್ಚುಯಲ್ ಕರೆನ್ಸಿ) ಈ ಹಣದ ಸ್ವಾಯುತ್ತತೆಯೇ ಒಂದು ಕುತೋಹಲಭರಿತ ವಿಷಯವಾಗಿದೆ.! ಹಾಗಾಗಿ, ಇಂದಿನ ಲೇಖನದಲ್ಲಿ ಬಿಟ್‌ಕಾಯಿನ್ ಹಣದ ಬಗ್ಗೆ ನಾವು ಸಂಪೂರ್ಣವಾಗಿ ನಿಮಗೆ ತಿಳಿಸಿಕೊಡುತ್ತೇವೆ. ಅಂತರ್ಜಾಲದ ಹಣ ಬಿಟ್‌ಕಾಯಿನ್ ಬಗ್ಗೆ ಸಂಪೂರ್ಣ ವಿವರಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಕಂಪ್ಯೂಟರ್‌ ಪ್ರಪಂಚಕ್ಕೆ ಸೀಮಿತ!!

ಕಂಪ್ಯೂಟರ್‌ ಪ್ರಪಂಚಕ್ಕೆ ಸೀಮಿತ!!

ಅಂತರಜಾಲ ಲೋಕದಲ್ಲಿ ಬಳಕೆಗೆ ಬರುತ್ತಿರುವ ಗೂಚರಿಸದ ಹಣ ಈ ಬಿಟ್‌ಕಾಯಿನ್. ಭಾರತದಲ್ಲಿ ರೂಪಾಯಿ, ಅಮೆರಿಕದಲ್ಲಿ ಡಾಲರುಗಳೆಲ್ಲ ಇದ್ದ ಹಾಗೆ ಅಂತರಜಾಲದ ಹಣ ಬಿಟ್‌ಕಾಯಿನ್ ಅಂತರಜಾಲದಲ್ಲಿ ಚಲಾವಣೆಯಾಗುವ ಈ ಬಿಟ್‌ಕಾಯಿನ್ ಅಸ್ತಿತ್ವ ಕಂಪ್ಯೂಟರ್‌ ಪ್ರಪಂಚಕ್ಕೆ ಸೀಮಿತ.!!

ಬಿಟ್‌ಕಾಯಿನ್ ಪೂರ್ತಿ ಡಿಜಿಟಲ್!!

ಬಿಟ್‌ಕಾಯಿನ್ ಪೂರ್ತಿ ಡಿಜಿಟಲ್!!

ಬಿಟ್‌ಕಾಯಿನ್ ಗೂಚರಿಸದ ಹಣವಾಗಿರುವುದರಿಂದ ಬಿಟ್‌ಕಾಯಿನ್‌ಗಳನ್ನು ಕಂಪ್ಯೂಟರಿನಲ್ಲಿರುವ ಡಿಜಿಟಲ್‌ ವ್ಯಾಲೆಟ್‌ಗಳಲ್ಲಷ್ಟೆ ಇಟ್ಟುಕೊಳ್ಳುವುದು ಸಾಧ್ಯ.!! ಶೇರುಗಳು ನಮ್ಮ ಕಣ್ಣಿಗೆ ಕಾಣದಂತೆ ಡಿಮ್ಯಾಟ್‌ ರೂಪದಲ್ಲಿರುತ್ತವಲ್ಲ ಹಾಗೆ. ಇದು ಕೂಡ ಅಂತರ್ಜಾಲ ಹಣವಾಗಿ ನಮ್ಮ ಬಳಿಇದ್ದರೂ ಪೂರ್ತಿ ಡಿಜಿಟಲ್!!

ಬಿಟ್‌ಕಾಯಿನ್ ಹುಟ್ಟಿದ್ದು ಹೇಗೆ?

ಬಿಟ್‌ಕಾಯಿನ್ ಹುಟ್ಟಿದ್ದು ಹೇಗೆ?

2009ರಲ್ಲಿ ಈ ಬಿಟ್‌ಕಾಯಿನ್ ವ್ಯವಸ್ಥೆ ಪರಿಚಯವಾದದ್ದು, ಸಟೋಶಿ ನಕಾಮೋಟೋ ಎಂಬ ಹೆಸರಿನ ಅಜ್ಞಾತ ವ್ಯಕ್ತಿ ಬಿಟ್‌ಕಾಯಿನ್‌ ಸೃಷ್ಟಿಕರ್ತ ಎಂದು ಗುರುತಿಸಲಾಗುತ್ತದೆ. ಆದರೆ, ಬಿಟ್‌ಕಾಯಿನ್ ಸೃಷ್ಟಿಯ ಹಿಂದೆ ದೊಡ್ಡದೊಂದು ತಂಡವೇ ಇರುವ ಸಂಶಯ ಕೂಡ ಇದೆ.!!

ಬಿಟ್‌ಕಾಯಿನ್ ಬೆಲೆ ಎಷ್ಟು?

ಬಿಟ್‌ಕಾಯಿನ್ ಬೆಲೆ ಎಷ್ಟು?

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ. ಒಂದು ಬಿಟ್‌ಕಾಯಿನ ಬೆಲೆ ಪ್ರಸ್ತುತ 3,74,044.49 ರೂಪಾಯಿಗಳು.!! ಅಂದರೆ ಒಂದು ಬಿಟ್‌ಕಾಯಿನ್ ಖರೀದಿಸಲು ಮೂರು ಲಕ್ಷದ ಎಪ್ಪತ್ತೇಳು ಸಾವಿರ ರುಪಾಯಿಗಳನ್ನು ನೀವು ಖರ್ಚು ಮಾಡಬೇಕು.!! ಆದರೆ, ಉಚಿತವಾಗಿ ಸಿಕ್ಕರೆ?

ಬಿಟ್‌ಕಾಯಿನ್ ಸಂಪಾದಿಸುವುದು ಹೇಗೆ?

ಬಿಟ್‌ಕಾಯಿನ್ ಸಂಪಾದಿಸುವುದು ಹೇಗೆ?

ಬಿಟ್‌ಕಾಯಿನ್ ಸಂಪಾದಿಸಬೇಕು ಎನ್ನುವವರು ತಮ್ಮ ಕಂಪ್ಯೂಟರುಗಳಲ್ಲಿ ಒಂದು ವಿಶೇಷ ತಂತ್ರಾಂಶವನ್ನು ಅನುಸ್ಥಾಪಿಸಿಕೊಳ್ಳಬೇಕು. ಅನೇಕ ಜನರು ಹೀಗೆ ಸೇರಿದಾಗ ದೊರಕುವ ಸಂಸ್ಕರಣಾ ಸಾಮರ್ಥಯವನ್ನು ಬಳಸಿಕೊಂಡು ಬಳಕೆದಾರರು ನಡೆಸುವ ವಹಿವಾಟನ್ನೆಲ್ಲ ಸಂಸ್ಕರಿಸುವ ಕೆಲಸ ನಡೆಯುತ್ತದೆ. ಈ ಪ್ರಕ್ರಿಯೆ ಮುಂದುವರಿಯುತ್ತ ಹೋದಂತೆ ಅದರಲ್ಲಿ ನೆರವಾದವರಿಗೆ ಬಿಟ್‌ಕಾಯಿನ್ ರೂಪದ ಹಣ ದೊರಕುತ್ತ ಹೋಗುತ್ತದೆ.!!

ಬಿಟ್‌ಕಾಯಿನ್ ಮೋಸ ಸಾಧ್ಯವೇ?

ಬಿಟ್‌ಕಾಯಿನ್ ಮೋಸ ಸಾಧ್ಯವೇ?

ಬಿಟ್‌ಕಾಯಿನ್‌ಗಳು ಕಂಪ್ಯೂಟರಿನಲ್ಲಿ ಶೇಖರವಾಗಿರುತ್ತವೆ ಎಂದಾಕ್ಷಣ ಬೇರೆಲ್ಲ ಕಡತಗಳಂತೆ ಅವನ್ನೂ ಕಾಪಿ ಮಾಡಿಕೊಂಡು ಬಳಸಬಹುದೇ ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ, ಬಿಟ್‌ಕಾಯಿನ್‌ ಅನ್ನು ಖರ್ಚುಮಾಡಿದೆವೆಂದರೆ ಆ ವ್ಯವಹಾರವನ್ನು ರದ್ದುಪಡಿಸುವುದು ಅಸಾಧ್ಯ. ಅಲ್ಲದೆ ಬಿಟ್‌ಕಾಯಿನ್‌ ಬಳಸಿ ನಡೆದ ವಹಿವಾಟಿನ ಬಗ್ಗೆ ಮಾಹಿತಿಯನ್ನು ಅಂತರಜಾಲದಲ್ಲಿ ಉಳಿಸಿಡಲಾಗುತ್ತದೆ.!!

ಬಿಟ್‌ಕಾಯಿನ್ ಸುರಕ್ಷಿತವೇ?

ಬಿಟ್‌ಕಾಯಿನ್ ಸುರಕ್ಷಿತವೇ?

ಸದ್ಯ ಬಿಟ್‌ಕಾಯಿನ್‌ ಮೇಲೆ ಯಾವುದೇ ಸರಕಾರ ಅಥವಾ ಕೇಂದ್ರೀಯ ಪ್ರಾಧಿಕಾರದ ನಿಯಂತ್ರಣ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ವಿವಿಧ ಸರಕಾರಗಳು ಬಿಟ್‌ಕಾಯಿನ್‌ ಮೇಲೆ ನಿರ್ಬಂಧ ಹೇರಲು ಪ್ರಯತ್ನಿಸಬಹುದು ಎಂಬ ಊಹೆ ಇದೆ.ಬಿಟ್‌ಕಾಯಿನ್‌ ಮೌಲ್ಯದಲ್ಲಿ ಬಹಳ ಕ್ಷಿಪ್ರವಾಗಿ ಸಂಭವಿಸುವ ಏರಿಳಿತಗಳಿಂದ ಅವುಗಳ ಸ್ಥಿರತೆಯ ಬಗೆಗೂ ಅನುಮಾನ ಮೂಡಿದೆ.

'ಪ್ರೈವೇಟ್ ವಿಂಡೋ' ಬಳಸಿದರೆ ಇಂಟರ್‌ನೆಟ್ ಪ್ರಪಂಚದಲ್ಲಿ ಸೇಫ್‌!..ಆದರಿದು ಯಾರಿಗೂ ಗೊತ್ತಿಲ್ಲಾ!!'ಪ್ರೈವೇಟ್ ವಿಂಡೋ' ಬಳಸಿದರೆ ಇಂಟರ್‌ನೆಟ್ ಪ್ರಪಂಚದಲ್ಲಿ ಸೇಫ್‌!..ಆದರಿದು ಯಾರಿಗೂ ಗೊತ್ತಿಲ್ಲಾ!!

Best Mobiles in India

Read more about:
English summary
What is bitcoin, how does it work and what affects its price?.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X