Home
ಸುದ್ದಿಜಾಲ

'ಕ್ಲೌಡ್ ಸ್ಟೋರೇಜ್' ಎಂದರೆ ಏನು ಗೊತ್ತಾ?..ಇಲ್ಲಿದೆ ಸರಳ ಮಾಹಿತಿ!

ತಮಗೇ ತಿಳಿಯದಂತೆ ಕ್ಲೌಡ್ ಸ್ಟೋರೇಜ್ ಬಳಸುತ್ತಿರುವ ಹಲವರು ಏನಿದು ಕ್ಲೌಡ್ ಸ್ಟೋರೇಜ್ ಎಂಬುದನ್ನು ತಿಳಿಸಿಕೊಡಿ ಎಂದು ಕೇಳುತ್ತಾರೆ. ಇದಕ್ಕೆ ನಾವು ಸುಲಭವಾಗಿ ನಮ್ಮೆಲ್ಲಾ ಮಾಹಿತಿಯನ್ನು ಕ್ಲೌಡ್​ನಲ್ಲಿ ಸಂಗ್ರಹಿಸಿಡುವ ವ್ಯವಸ್ಥೆಯನ್ನು ಒಟ್ಟಾರೆಯಾಗಿ 'ಕ್ಲೌಡ್ ಸ್ಟೋರೇಜ್' ಎಂದು ಕರೆಯುತ್ತಾರೆ ಎಂದು ಹೇಳಬಹುದಾದರೂ ಸಹ ಅದು ಅವರಿಗೆ ಸುಲಭವಾಗಿ ಅರ್ಥವಾಗುವುದಿಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ 'ಕ್ಲೌಡ್ ಸ್ಟೋರೇಜ್' ಎಂಬುದನ್ನು ಸರಳವಾಗಿ ಪರಿಚಯಿಸಿಕೊಡುವ ಪ್ರಯತ್ನವನ್ನು ಮಾಡುತ್ತೇನೆ.

ನಾವು 'ಕ್ಲೌಡ್ ಸ್ಟೋರೇಜ್' ಎಂಬುದನ್ನು ನಾವು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಾಗಿದ್ದು, ನಾವು ಮೊಬೈಲ್, ಲ್ಯಾಪ್‌ಟಾಪ್ ಅಥವಾ ಮತ್ಯಾವುದೋ ಗ್ಯಾಜೆಟ್‌ಗಳಲ್ಲಿ ಬಳಕೆಯಾಗುವ ಶೇಖರಣ ಮಾಧ್ಯಮಕ್ಕೂ ನಾವು ಸಾಮಾನ್ಯವಾಗಿ ಬಳಸುವ ಶೇಖರಣಾ ಮಾಧ್ಯಮಗಳಿಗೂ ಹೆಚ್ಚು ವ್ಯತ್ಯಾಸವೇನೂ ಇರುವುದಿಲ್ಲ; ಆದರೆ ಇಲ್ಲಿ ಮಾಹಿತಿ ಶೇಖರವಾಗುವ ವಿಧಾನಕ್ಕೂ ನಮ್ಮ ಕಂಪ್ಯೂಟರ್​ನಲ್ಲಿ ಮಾಹಿತಿ ಉಳಿಸಿಡುವ ವಿಧಾನಕ್ಕೂ ನಡುವೆ ಅಜಗಜಾಂತರ ವ್ಯತ್ಯಾಸವಿದೆ.!

'ಕ್ಲೌಡ್ ಸ್ಟೋರೇಜ್' ಎಂದರೆ ಏನು ಗೊತ್ತಾ?..ಇಲ್ಲಿದೆ ಸರಳ ಮಾಹಿತಿ!

ಸುಲಭವಾಗಿ ಹೇಳಬೇಕೆಂದರೆ, ನಮ್ಮ ವೈಯಕ್ತಿಕ ಕಂಪ್ಯೂಟರ್​ನಲ್ಲಿ ಅಥವಾ ಮೊಬೈಲ್‌ನಲ್ಲಿ ನಾವು ಸಂಗ್ರಹಿಸಿದ ಮಾಹಿತಿ ನಮ್ಮ ಹಾರ್ಡ್ ಡಿಸ್ಕ್​ನಲ್ಲಿ ಮಾತ್ರವೇ ಇರುತ್ತದೆ. ಆ ಹಾರ್ಡ್ ಡಿಸ್ಕ್ ಅನ್ನು ಯಾವ ಕಂಪ್ಯೂಟರಿಗೆ ಸಂರ್ಪಸುತ್ತೇವೋ ನಮ್ಮ ಮಾಹಿತಿಯನ್ನು ಆ ಕಂಪ್ಯೂಟರ್​ನಲ್ಲಿ ಮಾತ್ರ ತೆರೆಯುವುದು ಸಾಧ್ಯ. ಆದರೆ ಕ್ಲೌಡ್ ಸ್ಟೋರೇಜ್​ನಲ್ಲಿ ಹಾಗಲ್ಲ. ಅಲ್ಲಿ ಸಂಗ್ರಹಿಸಿಟ್ಟ ನಮ್ಮ ಮಾಹಿತಿಯನ್ನು ಅಂತರ್ಜಾಲ ಸಂಪರ್ಕ ಬಳಸಿ ನಾವು ಯಾವ ಕಂಪ್ಯೂಟರನ್ನೇ ಬಳಸುತ್ತಿದ್ದರೂ ಮತ್ತೆ ಪಡೆದುಕೊಳ್ಳಬಹುದು.

ಇದನ್ನೇ ಮೊಬೈಲ್‌ನಲ್ಲೂ ಸಹ ಮಾಡಬಹುದಾಗಿದೆ. ಹೀಗೆ ಮಾಡುವುದರಿಂದ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಮೆಮೊರಿ ಮುಗಿಯುವ ಚಿಂತೆ ಇರುವುದಿಲ್ಲ. ನಿಮ್ಮ ಯಾವುದೇ ಗ್ಯಾಜೆಟ್‌ನ ಹಾರ್ಡ್ ಡಿಸ್ಕ್​ನಲ್ಲಿ ಜಾಗ ಮುಗಿಯುವ ಚಿಂತೆಯೇ ಇಲ್ಲದಂತೆ ಎಷ್ಟು ಬೇಕಾದರೂ ಮಾಹಿತಿಯನ್ನು ಆನ್‌ಲೈನ್ ಕ್ಲೌಡ್ ಸ್ಟೋರೇಜಿನಲ್ಲಿ ಉಳಿಸಿಡುತ್ತಲೇ ಇರಬಹುದು. ಕೆಲ ಕ್ಲೌಡ್ ಸ್ಟೋರೇಜ್ ಕಂಪೆನಿಗಳು ಇದಕ್ಕಾಗಿ ಸ್ವಲ್ಪ ಉಚಿತ ಜಾಗವನ್ನು ನೀಡುತ್ತವೆ. ಇಲ್ಲಿ ನಿಮಗೆ ಮೊಬೈಲ್‌ ಸ್ಟೋರೇಜ್‌ ಸಮಸ್ಯೆಯೂ ಕೂಡ ಪರಿಹಾರವಾಗುತ್ತದೆ. ಯಾವುದೇ ಭಯವಿಲ್ಲದೇ ನಿಮ್ಮ ಮೊಬೈಲ್‌ನ್ನು ಯಾರಿಗಾದರೂ ಕೊಡಬಹುದು. ಆಗಿದ್ರೇ ಕ್ಲೌಡ್ ಸ್ಟೋರೆಜ್‌ ಬಗ್ಗೆ ಒಂದಿಷ್ಟು ಮಾಹಿತಿ ನೋಡ್ಕೊಂಡು ಬಂದ್ಬೀಡಿ..

ಕ್ಲೌಡ್‌ ಸ್ಟೋರೇಜ್ ಬಳಕೆ ಹೇಗೆ..?

ಕ್ಲೌಡ್‌ ಸ್ಟೋರೇಜ್ ಬಳಕೆ ಹೇಗೆ..?

ಇಂಟರ್‌ನೆಟ್‌ ಸಂಪರ್ಕವಿದ್ದರೆ ಕ್ಲೌಡ್‌ ಸ್ಟೋರೆಜ್‌ ಫೀಚರ್ ಬಳಸಬಹುದಾಗಿದೆ. ಇಲ್ಲಿ ನಿಮಗೆ ಹಾರ್ಡ್‌ಡಿಸ್ಕ್‌, ಹಾರ್ಡ್‌ಡ್ರೈವ್‌ನ ತೊಂದರೆಯೇ ಇರುವುದಿಲ್ಲ. ನಿಮ್ಮ ಡಾಕ್ಯುಮೆಂಟ್‌ಗಳಿಗೆ ಹೆಚ್ಚಿನ ಭದ್ರತೆಯನ್ನು ಇಲ್ಲಿ ನಿರೀಕ್ಷಿಸಬಹುದಾಗಿದೆ. ಕ್ಲೌಡ್‌ ಸ್ಟೋರೆಜ್‌ನಲ್ಲಿ ನಿಮ್ಮದೇ ಆದ ಅಕೌಂಟ್‌ ತೆರೆಯಬೇಕಾಗಿದ್ದು, ಪಾಸ್‌ವರ್ಡ್‌ ಭದ್ರತೆ ಇದ್ದೇ ಇರುತ್ತದೆ. ಪಾಸ್‌ವರ್ಡ್‌ ಇದ್ದರೆ ಮಾತ್ರ ಪ್ರವೇಶ ಸಾಧ್ಯ. ಅದಲ್ಲದೇ ಖಾಸಗಿ ವೆಬ್‌ ಲಿಂಕ್‌ ಸೃಷ್ಟಿಸಿಕೊಂಡು ಬೇಕಾದವರಿಗೆ ಮಾತ್ರ ಅಕ್ಸೆಸ್ ನೀಡುವ ಆಯ್ಕೆಯನ್ನು ಕ್ಲೌಡ್‌ ಸ್ಟೋರೆಜ್ ಹೊಂದಿದ್ದು, ಜನರ ಸ್ನೇಹಿತನಾಗಿ ಬದಲಾಗುತ್ತಿದೆ.

ಕ್ಲೌಡ್‌ ಸ್ಟೋರೇಜ್ ಸುರಕ್ಷಿತವೇ?

ಕ್ಲೌಡ್‌ ಸ್ಟೋರೇಜ್ ಸುರಕ್ಷಿತವೇ?

ಗೂಗಲ್ ಸೇರಿದಂತೆ ತಂತ್ರಜ್ಞಾನ ಕ್ಷೇತ್ರದ ಹಲವು ದಿಗ್ಗಜ ಸಂಸ್ಥೆಗಳು ಕ್ಲೌಡ್ ಸ್ಟೋರೇಜ್ ಸೇವೆ ಒದಗಿಸುತ್ತಿವೆ. ಗೂಗಲ್ ಡ್ರೈವ್ ಸಹ ಇದಕ್ಕೆ ಒಂದು ಉದಾರಹರಣೆಯಾಗಿದ್ದು, ಅಂತರ್ಜಾಲದ ಮೂಲಕ ಯಾವುದೇ ಅಡಚಣೆಗಳಿಲ್ಲದೆ ಒದಗಿಸಲು ಕ್ಲೌಡ್ ಸ್ಟೋರೇಜ್ ಸಹಾಯಕವಾಗಿದೆ. ಕ್ಲೌಡ್​ನಲ್ಲಿ ಉಳಿಸಿಟ್ಟ ನಮ್ಮ ಮಾಹಿತಿ ಒಂದು ಡೇಟಾಸೆಂಟರಿನಲ್ಲಿ ಶೇಖರವಾಗಿರುತ್ತದೆ.ಇಂತಹ ಕಡೆಗಳಲ್ಲಿ ಉಳಿಸಿಟ್ಟ ಮಾಹಿತಿಯ ಸುರಕ್ಷತೆಗಾಗಿ ಕ್ಲೌಡ್ ಸ್ಟೋರೇಜ್ ಸಂಸ್ಥೆಗಳು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂಬುದನ್ನು ತಿಳಿದಿರಿ.

ಪ್ರಮುಖ ಕ್ಲೌಡ್‌ ಸ್ಟೋರೆಜ್‌ ಸೈಟ್‌ಗಳು

ಪ್ರಮುಖ ಕ್ಲೌಡ್‌ ಸ್ಟೋರೆಜ್‌ ಸೈಟ್‌ಗಳು

ಕ್ಲೌಡ್‌ ಸ್ಟೋರೆಜ್‌ನಲ್ಲಿ ಫ್ಲಿಕರ್‌ನಂತಹ ವೆಬ್‌ಸೈಟ್‌ಗಳು ಫೋಟೋ ಹಂಚಿಕೊಳ್ಳುವ ಆಯ್ಕೆಯನ್ನು ನೀಡುತ್ತವೆ. ಇಲ್ಲಿಂದ ಜಗತ್ತಿನ ಎದುರು ಆಯ್ದ ಫೋಟೋಗಳನ್ನು ತೆರೆದಿಡುವ ಆಯ್ಕೆ ನಿಮ್ಮದಾಗಿರುತ್ತದೆ. ಅದಲ್ಲದೇ ಕಮೇಂಟ್ ಮಾಡುವ ಅವಕಾಶವು ಇಲ್ಲಿದೆ. ಬೇರೆ ಬೇರೆ ವೆಬ್‌ ತಾಣಗಳಲ್ಲೂ ಫೋಟೋ ಶೇರ್ ಮಾಡುವ ಮತ್ತೀತರ ಫೀಚರ್‌ಗಳು ಲಭ್ಯವಿವೆ ಕ್ಲೌಡ್‌ ಸ್ಟೋರೆಜ್‌ ಆಯ್ಕೆಯನ್ನು ಇಂಟರ್‌ನೆಟ್‌ ಬಳಕೆದಾರರಿಗೆ ಹಲವು ವೆಬ್‌ ತಾಣಗಳು ನೀಡುತ್ತಿವೆ. ಅದರಲ್ಲಿ ಪ್ರಮುಖವಾಗಿ ಡ್ರಾಪ್‌ ಬಾಕ್ಸ್‌, ಗೂಗಲ್‌ ಡ್ರೈವ್‌, ಮೈಕ್ರೋಸಾಫ್ಟ್‌ ಒನ್‌ಡ್ರೈವ್‌, ಫ್ಲಿಕ್ಕರ್, ಅಡೋಬ್ ಕ್ರಿಯೆಟಿವ್ ಕ್ಲೌಡ್, ಕೆನಾನ್ ಇರಿಸ್ಟಾದಂತಹ ತಾಣಗಳು ಉತ್ತಮ ಸೇವೆಯನ್ನು ನೀಡುತ್ತಿವೆ.

1. ಡ್ರಾಪ್‌ಬಾಕ್ಸ್‌

1. ಡ್ರಾಪ್‌ಬಾಕ್ಸ್‌

ಇಂಟರ್‌ನೆಟ್‌ನಲ್ಲಿ ಹೆಚ್ಚು ಕಾಲ ಕಳೆಯುವವರಿಗೆ ಡ್ರಾಪ್‌ಬಾಕ್ಸ್‌ ಹೆಸರು ಪರಿಚಿತವಾಗಿರುತ್ತದೆ. ಯಾವುದೇ ಮಾದರಿಯ ಡಿಜಿಟಲ್ ಫೈಲ್‌ಗಳನ್ನು ಡ್ರಾಪ್‌ಬಾಕ್ಸ್‌ನಲ್ಲಿ ಸಂಗ್ರಹಿಸಿಡಬಹುದಾಗಿದೆ. ಅತ್ಯುತ್ತಮ ಫೋಲ್ಡರ್‌ ವ್ಯವಸ್ಥೆ ಲಭ್ಯವಿದ್ದು, ಬಳಕೆದಾರ ಸ್ನೇಹಿಯಾಗಿದೆ. ಆಂಡ್ರಾಯ್ಡ್ ಮತ್ತು iOSನಲ್ಲಿ ಆಪ್‌ ಬಳಸಿಕೊಂಡು ನಿಮ್ಮ ಫೈಲ್‌ಗಳನ್ನು ಅಕ್ಸೆಸ್‌ ಮಾಡಬಹುದು.

2GB ವರೆಗಿನ ಸಂಗ್ರಹಣೆ ಬೇಸಿಕ್‌ ಖಾತೆಯಲ್ಲಿ ಉಚಿತವಾಗಿದೆ. (ಸ್ನೇಹಿತರಿಗೆ 16GB ವರೆಗೆ ಬಳಸಲು ರೆಫರ್ ಮಾಡಿ ಹೆಚ್ಚುವರಿ 500MB ಮೆಮೊರಿಯನ್ನು ಪಡೆಯಬಹುದು) ಡ್ರಾಪ್‌ಬಾಕ್ಸ್‌ ಪ್ಲಸ್‌ ಅಕೌಂಟ್‌ 1TB ವರೆಗೂ ಮೆಮೊರಿ ಸಾಮರ್ಥ್ಯವನ್ನು ನೀಡುತ್ತಿದ್ದು, ಬೆಲೆ ತಿಂಗಳಿಗೆ 9.99 ಡಾಲರ್ ಅಥವಾ ವರ್ಷಕ್ಕೆ 99 ಡಾಲರ್ ಆಗಿದೆ. ಅದಲ್ಲದೇ ಪ್ರತಿ ರೆಫರ್‌ಗೆ ಹೆಚ್ಚುವರಿ 1GB ಮೆಮೊರಿಯನ್ನು (32GB ವರೆಗೆ) ಪಡೆಯಬಹುದು.

2. ಗೂಗಲ್‌ ಡ್ರೈವ್‌

2. ಗೂಗಲ್‌ ಡ್ರೈವ್‌

ಗೂಗಲ್‌ ಡ್ರೈವ್ ಕೇವಲ ಕ್ಲೌಡ್ ಸ್ಟೋರೆಜ್‌ ತಾಣವಾಗಿಲ್ಲ. ಬದಲಿಗೆ ಹಲವು ಆಫೀಸ್ ಆಪ್‌ಗಳಿಗೆ ನೆಲೆಯಾಗಿದೆ. ಭಾಗಶಃ ಎಲ್ಲಾ ಕಚೇರಿಗಳಲ್ಲೂ ಗೂಗಲ್‌ ಡ್ರೈವ್‌ ಬಳಸುತ್ತಾರೆ. ಡ್ರಾಪ್‌ಬಾಕ್ಸ್‌ನಂತೆ ಇಲ್ಲಿಯೂ ಫೈಲ್‌ಗಳನ್ನು ಹಲವು ಬಳಕೆದಾರರೊಂದಿಗೆ ಹಂಚಿಕೊಳ್ಳಬಹುದು, ಮಾರ್ಪಡಿಸಬಹುದಾಗಿದೆ. ಇಲ್ಲಿ ಫೋಟೋಗಳನ್ನು ಸಂಗ್ರಹಿಸಬಹುದು, ಆದರೆ, ಇದು ಹೆಚ್ಚು ಫೋಟೋಗ್ರಾಫಿ ಕೇಂದ್ರಿತ ಕ್ಲೌಡ್ ಸ್ಟೋರೆಜ್ ತಾಣಗಳಂತೆ ಆಕರ್ಷಕವಾಗಿಲ್ಲ ಎನ್ನುವುದು ಸಮಸ್ಯೆ. ಆದ್ದರಿಂದ 16MP ಹೈ ರೆಸಲೂಷನ್‌ ಫೋಟೋಗಳನ್ನು ಸಂಗ್ರಹಿಸಿಡಬಹುದಾದ ಗೂಗಲ್‌ ಫೋಟೋಸ್ ಬಳಸಿ, ಇದು ಅನ್‌ಲಿಮಿಟೆಟಡ್ ಸ್ಟೋರೆಜ್‌ ನೀಡುತ್ತದೆ.

ಗೂಗಲ್‌ ಡ್ರೈವ್‌ನಲ್ಲಿ 15GBವರೆಗೆ ಉಚಿತ ಸಂಗ್ರಹಣೆ ಇದೆ. ಈ ಸ್ಟೋರೆಜ್‌ Gmailನಂತಹ ಇತರ Google ಆಪ್‌ಗಳೊಂದಿಗೆ ಹಂಚಿಕೆಯಾಗಿ ಮೆಮೊರಿ ಕುಂಠಿತಗೊಳ್ಳುತ್ತದೆ. ಫೋಟೋಗಳನ್ನು ಹುಡುಕಲು ಸುಲಭವಾಗುವಂತೆ ಗೂಗಲ್ AI ಬಳಕೆಯ ಆಯ್ಕೆಯನ್ನು ನೀಡಲಾಗಿದೆ. ಗೂಗಲ್‌ ಡ್ರೈವ್‌ನ ಮೆಮೊರಿಯನ್ನು 100GB ವರೆಗೆ ತಿಂಗಳಿಗೆ 1.99 ಡಾಲರ್, 200GB ವರೆಗೆ ತಿಂಗಳಿಗೆ 2.99 ಡಾಲರ್, 2TB ವರೆಗೆ ತಿಂಗಳಿಗೆ 9.99 ಡಾಲರ್, 10TB ವರೆಗೆ ತಿಂಗಳಿಗೆ 99.99 ಡಾಲರ್‌ನ್ನು ನೀಡಿ ವಿಸ್ತರಿಸಿಕೊಳ್ಳಬಹುದು.

3. ಮೈಕ್ರೋಸಾಫ್ಟ್‌ ಒನ್‌ಡ್ರೈವ್‌

3. ಮೈಕ್ರೋಸಾಫ್ಟ್‌ ಒನ್‌ಡ್ರೈವ್‌

ಮೈಕ್ರೋಸಾಫ್ಟ್‌ ಒನ್‌ಡ್ರೈವ್‌ ತನ್ನ ಪ್ರತಿಸ್ಪರ್ಧಿ ಗೂಗಲ್ ಡ್ರೈವ್‌ನಂತೆ ವಿನ್ಯಾಸವನ್ನು ಹೊಂದಿದೆ. ಒನ್‌ಡ್ರೈವ್‌ ವಿಂಡೋಸ್ 10 ಲುಕ್ ಹೊಂದಿದ್ದು, ಬಳಕೆದಾರರಿಗೆ ಅದೇ ಅನುಭವವನ್ನು ನೀಡಲಿದೆ. ಆದ್ದರಿಂದ ನ್ಯಾವಿಗೇಟ್ ಮಾಡುವುದು ಸುಲಭ. ಆದರೂ, ಇದು ಫೋಟೋಗ್ರಾಫರ್‌ಗಳ ಅಭಿರುಚಿಗೆ ತಕ್ಕಂತೆ ವಿನ್ಯಾಸ ಹೊಂದಿಲ್ಲ. ಇಲ್ಲಿ 5GB ವರೆಗೂ ಉಚಿತ ಸ್ಟೋರೆಜ್ ಲಭ್ಯವಿದೆ. ಹೆಚ್ಚುವರಿ 50GB ಮೆಮೊರಿ ಪಡೆಯಲು ತಿಂಗಳಿಗೆ 1.99 ಡಾಲರ್ ವ್ಯಯಿಸಬೇಕು.

1TB ಆಯ್ಕೆ ತಿಂಗಳಿಗೆ 6.99 ಡಾಲರ್ ಅಥವಾ ವಾರ್ಷಿಕ 69.99 ಡಾಲರ್ ಮೌಲ್ಯ ಹೊಂದಿದೆ. ಈ ಪ್ಲಾನ್ ಆಫೀಸ್ 365 ಪ್ಯಾಕೇಜ್ ಒಳಗೊಂಡಿದೆ. ಅದಲ್ಲದೇ ನೀವು 3 ಡಾಲರ್‌ನ್ನು ತಿಂಗಳಿಗೆ ಹೆಚ್ಚುವರಿಯಾಗಿ ಸೇರಿಸಿದರೆ ನಿಮ್ಮ ಆಫೀಸ್ ಲೈಸೆನ್ಸ್‌ 5 ರಿಂದ 10 ಡಿವೈಸ್‌ಗಳಿಗೆ ವಿಸ್ತರಿಸಿಕೊಳ್ಳಬಹುದು ಮತ್ತು ಒಂದು ಗಂಟೆ ಸ್ಕೈಪ್‌ ಉಚಿತದಂತಹ ಅನೇಕ ಆಫರ್‌ಗಳನ್ನು ಪಡೆಯಬಹುದು.

4. ಫ್ಲಿಕ್ಕರ್‌

4. ಫ್ಲಿಕ್ಕರ್‌

ಹೆಚ್ಚಿನ ಕ್ಲೌಡ್ ಸ್ಟೋರೆಜ್‌ ತಾಣಗಳು ಕನಿಷ್ಟ ಉಚಿತ ಮೆಮೊರಿ ಆಯ್ಕೆಗಳನ್ನು ನೀಡುತ್ತಿವೆ. ಆದರೆ, ವೆರಿಝೋನ್‌ ಒಡೆತನದಲ್ಲಿರುವ ಫ್ಲಿಕರ್ ಉಚಿತವಾಗಿ 1TB ಮೆಮೊರಿ ಆಯ್ಕೆಯನ್ನು ನೀಡುತ್ತಿದೆ. ನಿಮಗೆ ಜಾಹೀರಾತು ಮುಕ್ತ ವೇದಿಕೆ ಬೇಕು ಎಂದರೆ ಫ್ಲಿಕ್ಕರ್ ಪ್ರೋ +ಗೆ ಬದಲಾಗಬೇಕು. ಇದಕ್ಕೆ ಮಾಸಿಕ 6 ಡಾಲರ್ ಅಥವಾ ವಾರ್ಷಿಕ 50 ಡಾಲರ್ ವ್ಯಯಿಸಬೇಕು. ಅಲ್ಲದೇ 45 ದಿನಗಳ ಉಚಿತ ಟ್ರಯಲ್‌ ಕೂಡ ನೀವು ಪ್ರಯತ್ನಿಸಬಹುದು.

ನಿಮ್ಮ ಫೋಟೋಗಳನ್ನು ಆಕರ್ಷಕ ಫೋಟೋಸ್ಟ್ರೀಮ್‌ಲ್ಲಿ ಪ್ರದರ್ಶಿಸುವ ಫೀಚರ್‌ ಇಲ್ಲಿದೆ. ಇತರ ಬಳಕೆದಾರರು ನಿಮ್ಮ ಆಕ್ಟಿವಿಟಿಯನ್ನು ಅನುಸರಿಸಬಹುದು ಮತ್ತು ನಿಮ್ಮ ಫೋಟೋಗಳಿಗೆ ಕಮೆಂಟ್ ಮಾಡಬಹುದು. ಅಥವಾ ನಿಮ್ಮ ಫೋಟೋಗಳನ್ನು ಖಾಸಗಿಯಾಗಿಯೂ ಇಡಬಹುದಾಗಿದೆ. ಇದರಿಂದ ಹವ್ಯಾಸಿ ಮತ್ತು ವೃತ್ತಿಪರ ಛಾಯಾಗ್ರಾಹಕರಿಗೆ ಒಂದು ಸಾಮಾಜಿಕ ನೆಟ್‌ವರ್ಕ್ ಸಿಗುತ್ತದೆ. ಫ್ಲಿಕ್ಕರ್‌ನ್ನು ಕೇವಲ ಶೇಖರಣೆಯ ಆಯ್ಕೆ ಮಾಡದೇ ನಿಮ್ಮ ಫೋಟೋಗಳನ್ನು ಆಕರ್ಷಕವಾಗಿ ಪ್ರದರ್ಶಿಸುವಂತೆ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ, ಇಲ್ಲಿ ಕೇವಲ JPEG, GIF ಮತ್ತು PNG ಚಿತ್ರಗಳನ್ನು ಅಪ್‌ಲೋಡ್ ಮಾಡಿ. RAW ಫೈಲ್‌ಗಳನ್ನು ಅಪ್‌ಲೋಡ್‌ ಮಾಡಲು ಬಯಸಿದರೆ ಡ್ರಾಪ್‌ಬಾಕ್ಸ್‌ ಉತ್ತಮ ಆಯ್ಕೆ.

5. ಅಡೋಬ್‌ ಕ್ರಿಯೆಟಿವ್ ಕ್ಲೌಡ್‌

5. ಅಡೋಬ್‌ ಕ್ರಿಯೆಟಿವ್ ಕ್ಲೌಡ್‌

ಅಡೋಬ್‌ ಕ್ರಿಯೆಟಿವ್ ಕ್ಲೌಡ್‌ ಅನೇಕ ಕ್ಲೌಡ್ ಆಧಾರಿತ ಸೇವೆಗಳನ್ನು ಫೋಟೋಗ್ರಾಫರ್‌ಗಳಿಗಾಗಿಯೇ ನೀಡುತ್ತಿದೆ. ಆಕರ್ಷಕ ಫೋಟೋ ಗ್ಯಾಲರಿಗಳೊಂದಿಗೆ ಛಾಯಾಗ್ರಹಣ-ಆಧಾರಿತ ಸಂಗ್ರಹವನ್ನು ಒದಗಿಸುತ್ತದೆ. ಗ್ರೂಪ್‌ ಲೈಬ್ರರಿ ಫೀಚರ್ ಲಭ್ಯವಿದ್ದು, ಶೇರ್ ಮಾಡಿದ ಫೋಲ್ಡರ್‌ಗೆ ಸ್ನೇಹಿತರು ಫೋಟೋಗಳನ್ನು ಸೇರಿಸಬಹುದು. ಮತ್ತು ಯಾವುದೇ ಫೋಟೋವನ್ನು ಖಾಸಗಿಯಾಗಿಯೂ ಮಾಡಬಹುದು. ಲೈಟ್‌ರೂಮ್ ಮತ್ತು ಎಲಿಮೆಂಟ್ಸ್‌ಗಳನ್ನು ಒಳಗೊಂಡಿದೆ. ಅಗತ್ಯವಿದ್ದಾಗ ಫೋಟೋಗಳನ್ನು ಎಡಿಟ್ ಮಾಡಬಹುದು.

ವಿಂಡೋಸ್, ಮ್ಯಾಕ್, iOS ಮತ್ತು ಆಂಡ್ರಾಯ್ಡ್‌ ಆಪ್‌ಗಳೊಂದಿಗೆ ಅಪ್‌ಲೋಡ್ ಮಾಡುವುದು ಸುಲಭವಾಗಿದೆ. RAW ಫೈಲ್‌ಗಳಿಗೂ ಬೆಂಬಲಿಸುತ್ತದೆ.
ಅಡೋಬ್‌ ಕ್ರಿಯೆಟಿವ್‌ ಕ್ಲೌಡ್‌ನಲ್ಲಿ 1TB ಸ್ಟೋರೆಜ್ ಪಡೆಯಲು ವರ್ಷಕ್ಕೆ 119.88 ಡಾಲರ್‌ ನೀಡಬೇಕು. ಇದರಲ್ಲಿ ನೀವು ಲೈಟ್‌ರೂಮ್‌ ಸಿಸಿಯನ್ನು ಪಡೆಯುತ್ತಿರಿ. ನೀವು ಕಡಿಮೆ ಸ್ಟೋರೆಜ್ ಸಾಮರ್ಥ್ಯ ಆಯ್ಕೆ ಮಾಡಿಕೊಂಡು (20GB)ಫೋಟೋಶಾಪ್ ಸಿಸಿಯನ್ನು ಉಚಿತವಾಗಿ ಪಡೆಯಬಹುದು.

6. ಕೆನಾನ್‌ ಐರಿಸ್ಟಾ

6. ಕೆನಾನ್‌ ಐರಿಸ್ಟಾ

ಫ್ಲಿಕ್ಕರ್ ಮತ್ತು ಅಡೋಬ್ ಕ್ರಿಯೆಟಿವ್ ಕ್ಲೌಡ್‌ಗೆ ಎದುರಾಳಿಯಾಗಿ ಐರಿಸ್ಟಾವನ್ನು ವಿನ್ಯಾಸಗೊಳಿಸಲಾಗಿದೆ. ಇದು ನಿಮ್ಮ ಫೋಟೋಗಳನ್ನು ಪ್ರದರ್ಶಿಸಬೇಕಾದರೆ ನಿಮಗೆ ಗ್ಯಾಲರಿ ಚಾಲಿತ ಇಂಟರ್‌ಫೇಸ್ ನೀಡುತ್ತದೆ. JPEG ಮತ್ತು ಸಾಮಾನ್ಯ RAW ಫೈಲ್ ಫಾರ್ಮ್ಯಾಟ್‌ಗಳನ್ನು ಸ್ವೀಕರಿಸುತ್ತದೆ. ಕ್ಯಾಮೆರಾ, ಲೆನ್ಸ್‌, ವರ್ಷ, ಟ್ಯಾಗ್ಸ್‌, EXIF ಡಾಟಾದನ್ವಯ ನಿಮ್ಮ ಫೋಟೋಗಳನ್ನು ಫಿಲ್ಟರ್ ಮಾಡುವ ಆಯ್ಕೆ ಇದೆ.

ಸೋಷಿಯಲ್ ಮೀಡಿಯಾವನ್ನು ಅದ್ಭುತವಾಗಿ ಅನುಷ್ಟಾನಗೊಳಿಸಿದ್ದು, ಇದರಿಂದ ನೀವು ಫೇಸ್‌ಬುಕ್‌ ಅಥವಾ ಬೇರೆ ಸಾಮಾಜಿಕ ಮಾಧ್ಯಮಗಳಿಗೆ ಶೇರ್ ಮಾಡಿ, ಲೈಕ್ಸ್‌ ಮತ್ತು ಕಮೇಂಟ್‌ಗಳನ್ನು ಶೇರ್ ಮಾಡಬಹುದು. ಐರಿಸ್ಟಾದ ಉಚಿತ 15GB ಸಂಗ್ರಹವನ್ನು 100GB, 500GB, 1TB, 2TB, 5TB ಅಥವಾ 10TBಗೆ ವಿಸ್ತರಿಸಬಹುದಾಗಿದ್ದು, ತಿಂಗಳಿಗೆ 2.25 ಡಾಲರ್‌ನಿಂದ 129.99 ಡಾಲರ್ ಪಾವತಿಸಬೇಕಾಗುತ್ತದೆ.

Best Mobiles in India

English summary
Cloud storage is a service model in which data is maintained, managed, backed up remotely and made available to users over a network (typically the Internet). to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+