'ಕಂಪ್ಯೂಟರ್ ವಿಷನ್ ಸಿಂಡ್ರೊಮ್' ತೊಂದರೆ ನಿಮಗೂ ಇರಬಹುದು!

|

ದಿನನಿತ್ಯ ಗಂಟೆಗಟ್ಟಲೆ ಕಂಪ್ಯೂಟರ್, ಮೊಬೈಲ್ ನಲ್ಲಿ ಸಮಯ ಕಳೆಯುವ ನಿಮಗೆ 'ಕಂಪ್ಯೂಟರ್ ವಿಷನ್ ಸಿಂಡ್ರೊಮ್' ತೊಂದರೆ ಇದ್ದರೂ ಇರಬಹುದು. ಏಕೆಂದರೆ, ಗಂಟೆಗಟ್ಟಲೆ ಕಂಪ್ಯೂಟರ್ ಪರದೆ ಮುಂದೆ ಅಥವಾ ಮೊಬೈಲ್ ಸೇರಿದಂತೆ ಯಾವುದೇ ಡಿಜಿಟಲ್ ಸ್ಕ್ರೀನ್ ಅನ್ನೇ ನೋಡುತ್ತಾ ಕುಳಿತವರಿಗೆ ತಲೆನೋವು ಬರುವುದು, ಕಣ್ಣು ಮಂಜಾಗುವುದು, ಕಣ್ಣಿನಲ್ಲಿ ನೀರು ಬರುವುದು, ಅರ್ಧ ತಲೆ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗುತ್ತಿದೆ ಎಂದು ಹಲವು ಸಂಶೋಧನೆಗಳು ತಿಳಿಸಿವೆ.

ಕಂಪ್ಯೂಟರ್ ವಿಷನ್ ಸಿಂಡ್ರೋಮ್

ಹೌದು, ಕಂಪ್ಯೂಟರ್ ಬಳಕೆಯಿಂದ ಉಂಟಾಗುವ ಕಣ್ಣಿನ ತೊಂದರೆಗಳನ್ನು ಕಂಪ್ಯೂಟರ್ ವಿಷನ್ ಸಿಂಡ್ರೋಮ್ (ಸಿವಿಎಸ್) ಎಂಬ ಹೆಸರಿನಲ್ಲಿ ಒಟ್ಟಾಗಿ ಕರೆಯಲಾಗುತ್ತದೆ. ಇದು ಕೇವಲ ಒಂದು ನಿರ್ದಿಷ್ಟ ಸಮಸ್ಯೆ ಮಾತ್ರ ಅಲ್ಲ. ಬದಲಾಗಿ, ಇದು ಕಣ್ಣಿನ ಒತ್ತಡ ಮತ್ತು ಅಸ್ವಸ್ಥತೆಯ ಸಂಪೂರ್ಣ ಶ್ರೇಣಿಯನ್ನು ಒಳಗೊಂಡಿದೆ. ಕಂಪ್ಯೂಟರ್ ಪರದೆಯಲ್ಲಿ ಕೆಲಸ ಮಾಡುವ 50% ರಿಂದ 90% ಜನರು ಕನಿಷ್ಠ ಕೆಲವು ರೋಗಲಕ್ಷಣಗಳನ್ನು ಹೊಂದಿದ್ದಾರೆ ಎಂದು ವಿಶ್ವದಾದ್ಯಂತ ಹಲವಾರು ಸಂಶೋಧನೆಗಳು ಹೇಳಿರುವುದು ವರದಿಯಾಗಿದೆ.

ಕಣ್ಣಿನ ಸ್ನಾಯುಗಳಿಂದ ಸಾಕಷ್ಟು ಶ್ರಮ

ನೀವು ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಾಗ, ನಿಮ್ಮ ಕಣ್ಣುಗಳು ಸಾರ್ವಕಾಲಿಕ ಗಮನಹರಿಸಬೇಕು ಮತ್ತು ಕೇಂದ್ರೀಕರಿಸಬೇಕು. ಇಂತಹ ಸಮಯದಲ್ಲಿ ನಿಮ್ಮ ಕಣ್ಣುಗಳು ನಿರಂತರವಾಗಿ ಚಲಿಸುವ ಮತ್ತು ಬದಲಾಗುತ್ತಿರುವ ಚಿತ್ರಗಳಿಗೆ ಪ್ರತಿಕ್ರಿಯಿಸುತ್ತವೆ ಮತ್ತು ಗಮನವನ್ನು ಬದಲಾಯಿಸುತ್ತವೆ. ಇದರಿಂದ ವೇಗವಾಗಿ ವಿಭಿನ್ನ ಚಿತ್ರಗಳನ್ನು ಮೆದುಳಿಗೆ ಕಳುಹಿಸುತ್ತವೆ. ಈ ಎಲ್ಲಾ ಕೆಲಸಗಳಿಗೆ ನಿಮ್ಮ ಕಣ್ಣಿನ ಸ್ನಾಯುಗಳಿಂದ ಸಾಕಷ್ಟು ಶ್ರಮ ಬೇಕಾಗುವುರಿಂದ ಕಣ್ಣಿನ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ಎಂದು ಹೇಳಲಾಗಿದೆ.

ಮ್ಮ ಕಣ್ಣನ್ನು ಬೇರೆಡೆ ಹಾಯಿಸಬೇಕು.

ಇದಕ್ಕಿಂತ ಹೆಚ್ಚಾಗಿ, ಕಂಪ್ಯೂಟರ್ ಬಳಸುವಾಗ ನಾವು ಕಡಿಮೆ ಬಾರಿ ಮಿಟುಕಿಸುತ್ತೇವೆ ಎಂಬುದು ಸಾಬೀತಾಗಿದೆ. ಇದು ಕೆಲಸ ಮಾಡುವಾಗ ಕಣ್ಣುಗಳು ಒಣಗಲು ಮತ್ತು ನಿಯತಕಾಲಿಕವಾಗಿ ದೃಷ್ಟಿಯನ್ನು ಮಸುಕಾಗಿಸುತ್ತದೆ. ಕನಿಷ್ಟ 20 ನಿಮಿಷಗಳಿಗೆ ಬ್ರೇಕ್ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಾದರೆ ಕಣ್ಣುಗಳ ಮೇಲೆ ಹೆಚ್ಚು ಒತ್ತಡ ಉಂಟಾಗುತ್ತದೆ ಎಂದು ಸಂಶೋಧನೆಗಳು ಹೇಳಿವೆ. ಹಾಗಾಗಿ, ಪ್ರತಿ 20 ನಿಮಿಷಗಳಿಗೊಮ್ಮೆಯಾದರೂ ನಿಮ್ಮ ಕಣ್ಣನ್ನು ಬೇರೆಡೆ ಹಾಯಿಸಬೇಕು. ಇಲ್ಲದಿದ್ದರೆ ನಿಮ್ಮ ಕಣ್ಣುಗಳು ಸಮಸ್ಯೆ ಎದುರಿಸಬಹುದು.

ಎಲ್ಲರೂ ಅನುಸರಿಸಬೇಕಾದ ಸಲಹೆಗಳು

ಕಣ್ಣಿನ ರಕ್ಷಣೆಗಾಗಿ ಸಾಮಾನ್ಯವಾಗಿ ಎಲ್ಲರೂ ಅನುಸರಿಸಬೇಕಾದ ಸಲಹೆಗಳು ಹೀಗಿವೆ. ನಿಮ್ಮ ಕಂಪ್ಯೂಟರ್ ಪರದೆ ಕಣ್ಣಿಗೆ ಹೊಡೆಯುವಂತೆ ತೀಕ್ಷ್ಣವಾಗಿರಬಾರದು ಎಂಬುದನ್ನು ತಿಳಿದುಕೊಳ್ಳಿ. ಕಂಪ್ಯೂಟರ್ ಕುಳಿತುಕೊಳ್ಳುವ ಕುರ್ಚಿಯ ಎತ್ತರ ಕೂಡ ಮುಖ್ಯವಾಗುತ್ತದೆ ಎಂಬುದು ತಿಳಿದಿರಲಿ. ಮೊಬೈಲನ್ನು ಬಳಸುವಾಗ ಮುಖಕ್ಕೆ ಹತ್ತಿರವಾಗಿ ಹೆಚ್ಚು ಬಳಸಬಾರದು. ಯಾವುದೇ ಪರದೆಯ ಮೇಲಿನ ಅಕ್ಷರದ ಗಾತ್ರವನ್ನು ಹೆಚ್ಚಿಸಿ ಬಳಸುವುದು ಉತ್ತಮ. ನಿಮ್ಮ ಕಣ್ಣಿಗೆ ಸರಿಯಾಗುವ ರೀತಿಯಲ್ಲಿ ಮೊಬೈಲ್ ಸ್ಕ್ರೀನ್ ಬೆಳಕಿನ ಪ್ರಕಾಶವನ್ನು ಹೊಂದಿಸಿಕೊಳ್ಳಿ.

Best Mobiles in India

English summary
Eye problems caused by computer use fall under the heading computer vision syndrome (CVS).Research shows that between 50% and 90% of people who work at a computer screen have at least some symptoms. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X