Just In
Don't Miss
- News
ಫೆಬ್ರವರಿ 6ರಂದು 280 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Movies
Super Queen:ರಜಿನಿಯ ಕಲ್ಪನಾ ಪರ್ಫಾಮೆನ್ಸ್ಗೆ ಫುಲ್ ಫಿದಾ : ರಿಪ್ಲೆ ಮಾಡೋಕಾಗದೆ ನಟಿ ಸುಸ್ತು..!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿಮ್ಮ ಆನ್‌ಲೈನ್ ಖಾತೆ ಹ್ಯಾಕ್ ಆಗುವುದೇಕೆ ಗೊತ್ತಾ?..ಎಚ್ಚರ ಕಣ್ರೀ!!
ಓರ್ವ ವ್ಯಕ್ತಿಯನ್ನು ಕೊಳ್ಳೆ ಹೊಡೆಯುವುದು ಒಂದೇ ಅಥವಾ ಆನ್‌ಲೈನ್ ಮೂಲಕ ಆತನನ್ನು ಹ್ಯಾಕ್ ಮಾಡುವುದು ಸಹ ಒಂದೇ ಎನ್ನುವ ಮಾತು 'ಹ್ಯಾಕ್' ಎಂಬ ಪದದ ಸಾಮರ್ಥ್ಯ ಎಷ್ಟು ಎಂಬುದನ್ನು ತಿಳಿಸುತ್ತದೆ. ಆನ್‌ಲೈನ್ ಖಾತೆ ಹ್ಯಾಕ್ ಆಗುವುದು ಕೇವವೊಮ್ಮೆ ನಿಮ್ಮನ್ನು ಮುಜುಗರಕ್ಕೀಡು ಮಾಡಿದರೆ, ಒಮ್ಮೊಮ್ಮೆ ನಿಮ್ಮ ಮನೆಯನ್ನೇ ಹಾಳುಮಾಡಿಬಿಡುತ್ತದೆ.
ಉದಾಹರಣೆಗೆ ನಿಮ್ಮ ಸೋಶಿಯಲ್ ಮೀಡಿಯಾ ಖಾತೆ ಹ್ಯಾಕ್ ಆದರೆ ಅವು ನಿಮ್ಮನ್ನು ತೇಜೋವದೆ ಮಾಡಬಹುದು. ಹಾಗೆಯೇ ನಿಮ್ಮ ಬ್ಯಾಂಕ್ ಖಾತೆ ಹ್ಯಾಕ್ ಆದರೆ ನಿಮ್ಮ ಬ್ಯಾಂಕ್ ಹಣವನ್ನೆಲ್ಲಾ ಲೂಟಿ ಮಾಡಬಹುದು. ಹಾಗಾಗಿ, ಆನ್‌ಲೈನ್ ಪ್ರಪಂಚದಲ್ಲಿ ಯಾವುದೇ ಖಾತೆಗಳ ಸುರಕ್ಷತೆ ಬಹಳ ಮುಖ್ಯ. ಇಲ್ಲವಾದಲ್ಲಿ ನೀವು ಕಳ್ಳರ ಕೈಗೆ ಸಿಕ್ಕಿ ಒದ್ದಾಡಬೇಕಾಗುತ್ತದೆ.

ಅಷ್ಟಕ್ಕೂ ಈ ಖಾತೆಗಳು ಏಕೆ ಮತ್ತು ಹೇಗೆ ಹ್ಯಾಕ್ ಆಗುತ್ತವೆ ಎನ್ನುವುದಕ್ಕೆ ಬಹುತೇಕ ಪ್ರಕರಣಗಳಲ್ಲಿ ಇದಕ್ಕೆ ಪ್ರಮುಖ ಕಾರಣ 'ದುರ್ಬಲ ಪಾಸ್‌ವರ್ಡ್'ಗಳು ಹಾಗೂ ಖಾತೆದಾರರ ನಿರ್ಲಕ್ಷ್ಯವೇ ಆಗಿರುತ್ತದೆ. ಹಾಗಾಗಿ, ಇಂದಿನ ಲೇಖನದಲ್ಲಿ ಹ್ಯಾಕರ್ ದಾಳಿ ಮಾಡಿದಾಗ ಮತ್ತು ಹ್ಯಾಕರ್ ಹಾಳಿ ಮಾಡುವುದಕ್ಕಿಂತ ಮುನ್ನ ನಾವೇನು ಮಾಡಬೇಕು ಎಂಬುದನ್ನು ತಿಳಿಯೋಣ.

ಯಾವ್ಯಾವ ರೀತಿ ಹ್ಯಾಕ್ ಆಗುತ್ತವೆ.!
ಹ್ಯಾಕರ್‌ಗಳು ಯಾವುದೇ ಆನ್‌ಲೈನ್ ಖಾತೆಯನ್ನು ಹ್ಯಾಕ್ ಮಾಡಲು ಬಳಸುವ ಕೆಲವು ಸಾಮಾನ್ಯ ಪ್ರಕಾರಗಳೆಂದರೆ, ಸಿಸ್ಟಮ್ ಮಾನಿಟರ್, ಡಿಕ್ಷನರಿ ದಾಳಿಗಳು ಮತ್ತು ಫಿಶಿಂಗ್ ದಾಳಿಗಳು. ಈ ರೀತಿಯ ದಾಳಿಗಳು ಹೆಚ್ಚು ಕಂಡು ಬರುತ್ತಿದ್ದು, ಹಾಗಾಗಿ, ಈ ಲೇಖನದಲ್ಲಿ ನಾನು ನಿಮಗೆ ಈ ಆನ್‌ಲೈನ್ ಹ್ಯಾಕ್ ಬಗ್ಗೆ ನಾವು ಸಂಪೂರ್ಣ ಮಾಹಿತಿ ನೀಡುತ್ತಿದ್ದೇನೆ.

ಫಿಶಿಂಗ್ ದಾಳಿಗಳು
ಹ್ಯಾಕಿಂಗ್ ವಲಯದಲ್ಲಿ ಸದ್ಯ ಅತ್ಯಂತ ಪ್ರಚಲಿತದಲ್ಲಿರುವ ದಾಳಿ ಇದು. ಇಲ್ಲಿ ದಾಳಿಕೋರ ನಿಮ್ಮ ಖಾತೆಗೆ ಹೋಲುವ ಮತ್ತೊಂದು ನಕಲಿ ಖಾತೆಯನ್ನು ಸೃಷ್ಟಿಸಿ ನಕಲಿ ಇಮೇಲ್ ಮೂಲಕ ನಿಮ್ಮನ್ನು ಸಂಪರ್ಕಿಸುತ್ತಾನೆ. ಈ ತರದಹ ಮೇಲ್‌ಗಳು ಬಂದಾಗ ಅತ್ಯಂತ ಜಾಗರೂಕತೆ ಮತ್ತು ಚಾಣಾಕ್ಷತನದಿಂದ ಅವುಗಳನ್ನು ನೀವು ನಿರ್ಲಕ್ಷಿಸುವುದು ಒಳ್ಳೆಯದು.

ಡಿಕ್ಷನರಿ ದಾಳಿಗಳು
ಈ ರೀತಿಯ ಹ್ಯಾಕ್ ಅನ್ನು ಅತ್ಯಂತ ಸುಲಭವಾದ ಹ್ಯಾಕ್ ಎಂದು ಹೇಳಬಹುದು. ಇಲ್ಲಿ ಹ್ಯಾಕರ್ ನಿಮ್ಮ ಖಾತೆಗೆ ದಾಳಿ ಮಾಡುವ ಮುನ್ನ ಡಿಕ್ಷನರಿಯ ಸಹಾಯ ಪಡೆಯುತ್ತಾನೆ. ಸಾಮಾನ್ಯವಾಗಿ ಬಳಸುವ ಪದಗಳು, ವಾಕ್ಯಗಳು, ಹೆಸರುಗಳನ್ನು ಹೊಂದಿರುವ ಪಾಸ್‌ವರ್ಡ್‌ಗಳು ಅತಿ ಸುಲಭವಾಗಿ ಇಲ್ಲಿ ಕಂಡುಹಿಡಿಯಲಾಗುತ್ತದೆ. ಇದರ ಬಗ್ಗೆ ಎಚ್ಚರವಿರಬೇಕು.

ಸಿಸ್ಟಮ್ ಮಾನಿಟರ್
ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಹ್ಯಾಕರ್ ತನ್ನದೇ ಆದ ತಂತ್ರಾಂಶದ ಮೂಲಕ ನಮ್ಮ ಎಲ್ಲ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುತ್ತಾರೆ. ಕೀ ಒತ್ತಿದಾಗ ಮಾನಿಟರ್ ಮೇಲೆ ಮೂಡುವ ಪ್ರತಿಯೊಂದು ಮಾಹಿತಿಯೂ ಹ್ಯಾಕರ್ ಕೈ ಸೇರುತ್ತದೆ. ಹಾಗಾಗಿ, ಯಾವುದೇ ಒಮದು ಆಪ್ ಡೌನ್‌ಲೋಡ್ ಮಾಡುವ ಮುನ್ನ ಆ ಆಪ್‌ನ ಪೂರ್ವಾಪರ ಮಾಹಿತಿ ತಿಳಿಯುವುದು ಒಳ್ಳೆಯದು.

ದುರ್ಬಲ ಪಾಸ್‌ವರ್ಡ್‌ಗಳು
ಬಹುತೇಕರು ಈ ತರಹದ ದಾಳಿಗೆ ತುತ್ತಾಗಲು ಪ್ರಮುಖ ಕಾರಣವೆಂದರೆ ‘ದುರ್ಬಲ ಪಾಸ್‌ವರ್ಡ್‌ಗಳು. ಸುಲಭವಾಗಿ ಊಹಿಸಬಹುದಾದ ಯೂಸರ್ ನೇಮ್ ಮತ್ತು ಪಾಸ್‌ವರ್ಡ್‌ಗಳನ್ನು ಹೊಂದಿರುವವರು ದಾಳಿಗೆ ಸುಲಭವಾಗಿ ತುತ್ತಾಗುತ್ತಾರೆ. ನಾನಾ ರೀತಿಯ ಸಾಮಾನ್ಯ ಹೆಸರು ಮತ್ತು ಪಾಸ್ವರ್ಡ್‌ಗಳನ್ನು ದಾಳಿಕೋರರು ಊಹಿಸುವುದು ಕಷ್ಟವೇನಲ್ಲ.

ಸುರಕ್ಷಿತವಾಗಿರುವುದು ಹೇಗೆ?
ಯಾವುದೇ ಆನ್‌ಲೈನ್ ಖಾತೆಗಳಿಗೆ ದುರ್ಬಲ ಪಾಸ್‌ವರ್ಡ್‌ಗಳನ್ನು ನೀಡಬೇಡಿ. ಕಡಿಮೆ ಎಂದರೂ 12 ಪದಗಳಿರು ಪಾಸ್‌ವರ್ಡ್ ನೀಡಿದರೆ ಉತ್ತಮ.ತಿಂಗಳಿಗೆ ಒಮ್ಮೆಯಾದರೆ ಪಾಸ್‌ವರ್ಡ್ ಬದಲಿಸಿ. ಒಮ್ಮೆ ಬಳಸಿದ ಪಾಸ್‌ವರ್ಡ್ ಮತ್ತೆ ಬಳಸಬೇಡಿ. ಟು ಫ್ಯಾಕ್ಟರ್ ಅಥೆಂಟಿಕೇಷನ್ ಬಳಸಿಕೊಳ್ಳಿ. ಆಂಟಿ ಸಾಫ್ಟ್‌ವೇರ್ ಬಳಸಿಕೊಳ್ಳಿ. ಫೇಕ್ ಆಪ್‌ಗಳ ಬಗ್ಗೆ ಎಚ್ಚರವಿರಲಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470