Home
ಸುದ್ದಿಜಾಲ

ಸ್ಮಾರ್ಟ್‌ಫೋನ್‌ಗಳಲ್ಲಿರುವ ಐಪಿ ರೇಟಿಂಗ್‌ ಬಗ್ಗೆ ನಿಮಗೆಷ್ಟು ಗೊತ್ತು? ಇದರಿಂದಾಗುವ ಲಾಭಗಳೇನು?

ಪ್ರಿಯ ಓದುಗರೇ ಸ್ಮಾರ್ಟ್‌ಫೋನ್‌ ಖರೀದಿಸುವಾಗ ಅದರ ಐಪಿ ರೇಟಿಂಗ್‌ ಕೂಡ ಪ್ರಮುಖ ವಿಚಾರವಾಗುತ್ತದೆ. ಐಪಿ ರೇಟಿಂಗ್‌ ಕೂಡ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಹೈಲೈಟ್‌ ಮಾಡುವ ಪ್ರಮುಖ ವಿಶೇಷತೆಗಳಲ್ಲಿ ಒಂದಾಗಿದೆ. ಆದರೆ ಐಪಿ ರೇಟಿಂಗ್‌ ಯಾಕೆ ಮುಖ್ಯ? ಇದರಿಂದ ಸ್ಮಾರ್ಟ್‌ಫೋನ್‌ಗಳಿಗೆ ಏನು ಲಾಭ ಅನ್ನೊದು ಕೆಲವರಿಗೆ ತಿಳಿದಿರುವುದೇ ಇಲ್ಲ.

ಹೌದು, ಸ್ಮಾರ್ಟ್‌ಫೋನ್‌ಗಳಲ್ಲಿ ಕೇಳಿ ಬರುವ ಐಪಿ ರೇಟಿಂಗ್‌ ಬಗ್ಗೆ ಕೆಲವರಿಗೆ ಮಾಹಿತಿಯೇ ಇಲ್ಲ. ಐಪಿ ರೇಟಿಂಗ್‌ನಿಂದ ನಮಗೇನು ಲಾಭ ಎಂಬ ವಿಚಾರದ ಬಗ್ಗೆ ಕೂಡ ಅರಿವಿರುವುದಿಲ್ಲ. ಹಾಗಾದ್ರೆ ಐಪಿ ರೇಟಿಂಗ್‌ ಅಂದರೆ ಏನು? ಎಷ್ಟು ರೀತಿಯ ಐಪಿ ರೇಟಿಂಗ್‌ಗಳನ್ನು ನಾವು ಗಮನಿಸಬಹುದು? ಇದೆಲ್ಲದರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಫೋನ್‌ಗಳಲ್ಲಿರುವ ಐಪಿ ರೇಟಿಂಗ್‌ ಬಗ್ಗೆ ನಿಮಗೆಷ್ಟು ಗೊತ್ತು? ಲಾಭಗಳೇನು?

ಐಪಿ ರೇಟಿಂಗ್ ಎಂದರೇನು?

IP ರೇಟಿಂಗ್ ಎಂದರೆ ಸಂಕ್ಷಿಪ್ತವಾಗಿ ಇನ್‌ಗ್ರೆಸ್ ಪ್ರೊಟೆಕ್ಷನ್ ರೇಟಿಂಗ್ ಎಂದು ಹೆಸರಿಸಲಾಗಿದೆ. ಅಂದರೆ ನಿಮ್ಮ ಡಿವೈಸ್‌ ಅನ್ನು ದೂಳು, ನೀರು ಮತ್ತು ಇತರೆ ಘನವಸ್ತುಗಳಿಂದ ಹೇಗೆ ರಕ್ಷಿಸಲಾಗಿದೆ ಅನ್ನೊದನ್ನು ಐಪಿ ರೇಟಿಂಗ್ ತಿಳಿಸಿಕೊಡಲಿದೆ. ನಿಮ್ಮ ಮೊಬೈಲ್‌ ಹೊಂದಿರುವ ಐಪಿ ರೇಟಿಂಗ್ ಆದಾರದ ಮೇಲೆ ನಿಮ್ಮ ಮೊಬೈಲ್‌ನ ರಕ್ಷಣೆ ಯಾವ ಪ್ರಮಾಣದಲ್ಲಿ ಅನ್ನೊದನ್ನ ಅರಿತುಹೊಳ್ಳಬಹುದಾಗಿದೆ. ಹೆಚ್ಚಿನ ಅಂಕಿ ಸಂಖ್ಯೆಯ ಐಪಿ ರೇಟಿಂಗ್‌ ಹೊಂದಿದ್ದಷ್ಟು ನಿಮ್ಮ ಫೋನ್‌ ಡಿವೈಸ್‌ ರಕ್ಷಣೆ ಉತ್ತಮವಾಗಿರಲಿದೆ.

ಸ್ಮಾರ್ಟ್‌ಫೋನ್‌ಗಳಲ್ಲಿರುವ ಐಪಿ ರೇಟಿಂಗ್‌ ಬಗ್ಗೆ ನಿಮಗೆಷ್ಟು ಗೊತ್ತು? ಲಾಭಗಳೇನು?

ಐಪಿ ರೇಟಿಂಗ್ ರಕ್ಷಣೆ ಮಟ್ಟ ಹೇಗಿರಲಿದೆ?

ಸ್ಮಾರ್ಟ್‌ಫೋನ್‌ನಲ್ಲಿ IP ರೇಟಿಂಗ್‌ ಮೊದಲ ಅಂಕಿಯು 0 ರಿಂದ 6 ರವರೆಗೆ ಇರುತ್ತದೆ. ಇದು ನಿಮ್ಮ ಡಿವೈಸ್‌ ಅನ್ನು ಘನ ವಸ್ತುಗಳ ವಿರುದ್ಧ ರಕ್ಷಣೆ ಮಾಡುವ ಮಟ್ಟವನ್ನು ಸೂಚಿಸುತ್ತದೆ. ಎರಡನೇ ಅಂಕಿಯು 0 ರಿಂದ 9 ರವರೆಗೆ ಇರಲಿದ್ದು, ದ್ರವ ಅಂಥವಾ ನೀರಿನ ವಿರುದ್ದ ಹೊಂದಿರುವ ಸೆಕ್ಯುರ್‌ ಲೆವೆಲ್‌ ಅನ್ನು ಸೂಚಿಸಲಿದೆ. ಅಂದರೆ ನಿಮ್ಮ ಫೋನ್‌ IP67 ರೇಟಿಂಗ್ ಹೊಂದಿದೆ ಎಂದರೆ ಹೆಚ್ಚಿನ ಧೂಳು ಮತ್ತು ನೀರಿನಲ್ಲಿ ಒಂದು ಮೀಟರ್‌ವರೆಗೆ 30 ನಿಮಿಷಗಳ ಕಾಲ ಇದ್ದರೂ ಪ್ರೊಟೆಕ್ಷನ್‌ ನೀಡಲಿದೆ.

ಸ್ಮಾರ್ಟ್‌ಫೋನ್‌ಗಳಲ್ಲಿರುವ ಐಪಿ ರೇಟಿಂಗ್‌ ಬಗ್ಗೆ ನಿಮಗೆಷ್ಟು ಗೊತ್ತು? ಲಾಭಗಳೇನು?

ಐಪಿ ರೇಟಿಂಗ್‌ನಲ್ಲಿ ಸಂಖ್ಯೆಗಳ ಪ್ರಾಮುಖ್ಯತೆ ಏನು?

'IPXY' ಸಂಖ್ಯೆಗಳು ಘನ ಮತ್ತು ದ್ರವ ಎರಡಕ್ಕೂ ವಿಭಿನ್ನ ಮಾನದಂಡಗಳನ್ನು ಅರ್ಥೈಸುತ್ತವೆ. ಘನ ಕಣಗಳ ಸಂರಕ್ಷಣೆ ರೇಟಿಂಗ್‌ಗಾಗಿ ನೀಡುವ ರೇಟಿಂಗ್‌ಗಳ ಅರ್ಥ ಇಲ್ಲಿದೆ.
1 - 50mm ಗಿಂತ ಹೆಚ್ಚಿನ ಗಾತ್ರದ ಕಣಗಳಿಂದ ರಕ್ಷಿಸಲಾಗಿದೆ.
2 -12.5mm ಗಿಂತ ಹೆಚ್ಚಿನ ಗಾತ್ರದ ಕಣಗಳಿಂದ ರಕ್ಷಿಸಲಾಗಿದೆ (ಬೆರಳಿನ ಗಾತ್ರದ ವಸ್ತುಗಳು).
3 - 2.5mm ಗಿಂತ ಹೆಚ್ಚಿನ ಗಾತ್ರದ ಕಣಗಳಿಂದ ರಕ್ಷಿಸಲಾಗಿದೆ (ದಪ್ಪ ತಂತಿಗಳು).
4 - 1mm ಗಿಂತ ಹೆಚ್ಚಿನ ಕಣಗಳಿಂದ ರಕ್ಷಿಸಲಾಗಿದೆ (ತೆಳುವಾದ ತಂತಿಗಳು, ತಿರುಪುಮೊಳೆಗಳು).
5 - ಒಂದು ಮಟ್ಟಕ್ಕೆ ಧೂಳಿನ ಕಣಗಳ ವಿರುದ್ಧ ರಕ್ಷಣೆ. ಕಣಗಳು ಇನ್ನೂ ಪ್ರವೇಶಿಸಬಹುದು ಆದರೆ ತ್ವರಿತವಾಗಿ ಗಮನಾರ್ಹ ಹಾನಿಯನ್ನು ಉಂಟುಮಾಡುವಷ್ಟು ಪ್ರಮಾಣದಲ್ಲಿಲ್ಲ.
6 - ಧೂಳಿನ ಕಣಗಳ ವಿರುದ್ಧ ಸಂಪೂರ್ಣವಾಗಿ ರಕ್ಷಿಸುತ್ತದೆ.

ಸ್ಮಾರ್ಟ್‌ಫೋನ್‌ಗಳಲ್ಲಿರುವ ಐಪಿ ರೇಟಿಂಗ್‌ ಬಗ್ಗೆ ನಿಮಗೆಷ್ಟು ಗೊತ್ತು? ಲಾಭಗಳೇನು?

IP ರೇಟಿಂಗ್‌ಗಳ ವಿಧಗಳು ಯಾವುವು?

ನಿಮ್ಮ ಡಿವೈಸ್‌ಗಳನ್ನು ದೂಳು ಮತ್ತು ನೀರಿನಿಂದ ರಕ್ಷಿಸಬಲ್ಲ ಐಪಿ ರೇಟಿಂಗ್‌ಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ವಿವಿಧ ರೀತಿಯಲ್ಲಿ ವಿಭಾಗಿಸಲಾಗಿದೆ. ಒಂದೊಂದು ಐಪಿ ರೇಟಿಂಗ್‌ ಕೂಡ ವಿಭಿನ್ನ ಮಟ್ಟದ ರಕ್ಷಣೆಯನ್ನು ಒದಗಿಸಲಿದೆ. ಪ್ರಸ್ತುತ ನೀವು ತಿಳಿದುಕೊಳ್ಳಬೇಕಾದ ವಿವಿಧ ಐಪಿ ರೇಟಿಂಗ್‌ಗಳ ವಿವರಗಳನ್ನು ಕೆಳಗಿನ ಹಂತಗಳಲ್ಲಿ ತಿಳಿಸಲಾಗಿದೆ.

* IP20: ಇದು 12.5mm ಗಾತ್ರಕ್ಕಿಂತ ಹೆಚ್ಚಿನ ಘನ ವಸ್ತುಗಳ ವಿರುದ್ಧ ರಕ್ಷಣೆ ನೀಡುತ್ತದೆ, ಆದರೆ ನೀರಿನಲ್ಲಿ ಯಾವುದೇ ರೀತಿಯ ರಕ್ಷಣೆ ನೀಡವುದಿಲ್ಲ.
* IP44: ಇದರಲ್ಲಿ 1mm ಗಿಂತ ಹೆಚ್ಚಿನ ಗಾತ್ರದ ಘನ ವಸ್ತುಗಳು ಮತ್ತು ನೀರಿನ ಸ್ಪ್ಲಾಶ್‌ಗಳ ವಿರುದ್ಧ ಪ್ರೊಟೆಕ್ಷನ್‌ ನೀಡಲಿದೆ.
* IP54: ಇದು 1mm ಗಿಂತ ಹೆಚ್ಚಿನ ಗಾತ್ರದ ಘನ ವಸ್ತುಗಳು ಮತ್ತು ವಾಟರ್‌ ಪ್ರೊಟೆಕ್ಷನ್‌ ನೀಡಲಿದೆ.
* IP67: ಇದು ಧೂಳು ಮತ್ತು ನೀರಿನಲ್ಲಿ 30 ನಿಮಿಷಗಳ ಪ್ರೊಟೆಕ್ಷನ್‌ ನೀಡಲಿದೆ. ಇದು ಸ್ಮಾರ್ಟ್‌ಫೋನ್‌ ಮತ್ತು ಸ್ಮಾರ್ಟ್‌ವಾಚ್‌ಗಳಲ್ಲಿ ಕಂಡುಬರಲಿದೆ.
* IP68: ಈ ರೇಟಿಂಗ್ ಧೂಳಿನ ವಿರುದ್ಧ ಸಂಪೂರ್ಣ ರಕ್ಷಣೆ ನೀಡುತ್ತದೆ. ಅಲ್ಲದೆ ಒಂದು ನಿರ್ಧಿಷ್ಟ ಅವಧಿಯವರೆಗೆ 1 ಮೀಟರ್‌ಗಿಂತಲೂ ಹೆಚ್ಚಿನ ಆಳದ ನೀರಿನಲ್ಲಿಯೂ ಪ್ರೊಟೆಕ್ಷನ್‌ ನೀಡಲಿದೆ. ಇದನ್ನು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದು

Best Mobiles in India

English summary
IP rating, also known as Ingress Protection rating, is a measure of a device's resistance to environmental factors such as dust, water, and other foreign objects.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+