'ಪೆಗಾಸಸ್' ಎಂಬ ಹಾರುವ ಕುದುರೆ ಹೆಸರಿಗೆ ಇಡೀ ಟೆಕ್ ಲೋಕ ಬೆಚ್ಚಿ ಬಿದ್ದಿದೆ!..ಏಕೆ ಗೊತ್ತಾ?

|

ಗ್ರೀಕ್ ಪುರಾಣಗಳಲ್ಲಿ ಪ್ರಚಲಿತವಾಗಿರುವ ಹಾರುವ ಕುದುರೆಗಳಿಗೆ 'ಪೆಗಾಸಸ್' ಎಂಬ ಹೆಸರಿದೆ. ಇದೇ ಹೆಸರು ಇದೀಗ ಟೆಕ್ ಲೋಕದಲ್ಲಿ ತಲ್ಲಣ ಸೃಷ್ಟಿಸಿದೆ. ಹೌದು, ಜಗತ್ತಿನಾದ್ಯಂತ ಪ್ರಭಾವಿ ಹಾಗೂ ಗಣ್ಯರ ಸ್ಮಾರ್ಟ್‌ಫೋನ್‌ಗಳಲ್ಲಿರುವ ಮಾಹಿತಿಯನ್ನು ವಾಟ್ಸ್ಆಪ್ ಮೂಲಕ ಕದಿಯುತ್ತಿರುವ ಕೃತ್ಯ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. 'ಪೆಗಾಸಸ್' ಎಂಬ ಅತ್ಯಾಧುನಿಕ ಸ್ಪೈಯಿಂಗ್ ಟೂಲ್ ಅನ್ನು ಕೆಲವರ ವಾಟ್ಸ್ಆಪ್ ಖಾತೆಯಲ್ಲಿ ಸಕ್ರಿಯಗೊಳಿಸಿ, ಅವರ ಮೇಲೆ ಗೂಢಚರ್ಯ ಮಾಡಲಾಗಿದೆ. ಜತೆಗೆ, ಅವರಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಕದಿಯಲಾಗಿದೆ.

ವಾಟ್ಸ್ಆಪ್

ವಾಟ್ಸ್ಆಪ್ ನೀಡುತ್ತಿರುವ ಕಾಲಿಂಗ್ ಸೇವೆಯಲ್ಲಿರುವ ತಾಂತ್ರಿಕ ದೌರ್ಬಲ್ಯವನ್ನು ಬಳಸಿಕೊಂಡು ಪೆಗಾಸಸ್ ಎಂಬ ಸ್ಪೈಯಿಂಗ್ ಟೂಲ್ ವಾಟ್ಸ್ಆಪ್ ಖಾತೆಗಳಿಗೆ ಕಳ್ಳತನದಿಂದ ನುಗ್ಗಿದೆ. ಇದನ್ನು ವಾಟ್ಸ್ಆಪ್ ಸಂಸ್ಥೆಯೇ ಸ್ಪಷ್ಟಪಡಿಸಿದ್ದು, ಪೆಗಾಸಸ್ ಸ್ಪೈಯಿಂಗ್ ಟೂಲ್ ಅಭಿವೃದ್ಧಿಪಡಿಸಿರುವ ಇಸ್ರೇಲ್ ಮೂಲದ ಎನ್‌ಎಸ್‌ಒ ಗ್ರೂಪ್‌ ಮೇಲೆ ದೂರು ನೀಡಿದೆ. ಹಾಗಾದರೆ, ಏನಿದು ಪೆಗಾಸಸ್ ಎಂಬ ಸ್ಪೈವೇರ್?, ಅದು ಹೇಗೆ ಕಾರ್ಯನಿರ್ವಹಿಸುತ್ತದೆ? ಮತ್ತು ಇದರಿಂದ ಯಾರಿಗೆ ಲಾಭವಾಗುತ್ತಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.

ಏನಿದು ಪೆಗಾಸಸ್?

ಏನಿದು ಪೆಗಾಸಸ್?

ಪೆಗಾಸಸ್ ಎಂಬುದು ಸ್ಪೈವೇರ್. ಅಂದರೆ, ಇದನ್ನು ಮಾಹಿತಿ ಕದಿಯುವ ಕುತಂತ್ರಾಶ ಎನ್ನಬಹುದು. ಕುತಂತ್ರದ ಮೂಲಕ ವಾಟ್ಸ್ಆಪ್ ಸಹಾಯದಿಂದ ಫೋನ್‌ ಪ್ರವೇಶಿಸುವ ಈ ಸ್ಪೈವೇರ್ ಅಲ್ಲಿರುವ ಎಲ್ಲಮಾಹಿತಿಯನ್ನು ಕದಿಯುತ್ತದೆ. ಇದು ಒಮ್ಮೆ ಬಳಕೆದಾರರ ಫೋನ್ ಸೇರಿಕೊಂಡರೆ ಕೂಡಲೇ ಬಳಕೆದಾರರ ಕರೆಗಳು, ವಿಡಿಯೊ, ಚಾಟ್‌, ಫೋಟೊ, ಕಾರ್ಯಕ್ರಮಗಳು, ಚಲನವಲನಗಳೆಲ್ಲವೂ ಬೇರೊಂದು ಕಡೆ ದಾಖಲಾಗುತ್ತಾ ಹೋಗುತ್ತವೆ. ಇದು ಇತರೆ ಆಪ್‌ಗಳಿಗೂ ಸಹ ಪ್ರವೇಶ ಪಡೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿದುಬಂದಿದೆ.

ಮಾಹಿತಿ ಕದಿಯುವುದು ಹೇಗೆ?

ಮಾಹಿತಿ ಕದಿಯುವುದು ಹೇಗೆ?

ಪೆಗಾಸಸ್ ಸಕ್ರಿಯಗೊಂಡ ಫೋನ್‌ಗಳಲ್ಲಿರುವ ದಾಖಲೆಗಳು, ಕಾಂಟಾಕ್ಟ್ ಮಾಹಿತಿ, ಕಾಲ್‌ ಹಿಸ್ಟರಿ, ಕ್ಯಾಲೆಂಡರ್‌ ರೆಕಾರ್ಡ್ಸ್, ಇಮೇಲ್‌ಗಳು, ಇನ್ಸ್‌ಟಂಟ್ ಮೆಸೇಜ್ ಮತ್ತು ಬ್ರೌಸಿಂಗ್ ಹಿಸ್ಟರಿ ಮಾಹಿತಿಯನ್ನು ಪಡೆದುಕೊಳ್ಳುತ್ತದೆ. ಈ ಸ್ಪೈವೇರ್ ರಹಸ್ಯವಾಗಿ ಫೋಟೊ ತೆಗೆಯುತ್ತದೆ, ಕಾಲ್‌ಗಳನ್ನು ರೆಕಾರ್ಡ್‌ ಮಾಡಿಕೊಳ್ಳುವುದರ ಜತೆಗೆ ಸುತ್ತಲಿನ ಧ್ವನಿಯನ್ನೂ ದಾಖಲಿಸಿಕೊಳ್ಳುತ್ತದೆ. ಬಳಕೆದಾರರ ಅರಿವಿಗೆ ಬಾರದಂತೆಯೇ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುತ್ತದೆ. ಒಟ್ಟಿನಲ್ಲಿ ಒಂದು ಫೋನ್ ಕಾರ್ಯವನ್ನು ಬಳಕೆದಾರನಿಗೆ ತಿಳಿಯದಂತೆ ಮಾಹಿತಿಯನ್ನು ಕದಿಯುತ್ತದೆ.

ಜಗತ್ತೇ ಬೆಚ್ಚಿಬಿದ್ದಿದ್ದೇಕೆ?

ಜಗತ್ತೇ ಬೆಚ್ಚಿಬಿದ್ದಿದ್ದೇಕೆ?

ಪೆಗಾಸಸ್ ಸ್ಪೈವೇರ್ ಮೂಲಕ ಜಗತ್ತಿನಾದ್ಯಂತ ಪ್ರಭಾವಿ ಹಾಗೂ ಗಣ್ಯರ ಸ್ಮಾರ್ಟ್‌ಫೋನ್‌ಗಳಲ್ಲಿರುವ ಮಾಹಿತಿಯನ್ನು ವಾಟ್ಸ್ಆಪ್ ಮೂಲಕ ಕದ್ದಿರುವ ಕೃತ್ಯ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಪೆಗಾಸಸ್‌ನಿಂದ ಗೂಢಚರ್ಯೆಗೊಳಪಟ್ಟ ಜಗತ್ತಿನಾದ್ಯಂತ ಜನರ ಸಂಖ್ಯೆ 14,000 ಎಂದು ಅಂದಾಜಿಸಲಾಗಿದೆ. ಭಾರತದಲ್ಲೂ ಮಾನವ ಹಕ್ಕುಗಳ ಕಾರ್ಯಕರ್ತ ತೇಲ್ತುಂಬೆ, ವಕೀಲ ನಿಹಾಲ್ ಸಿಂಗ್‌ ರಾಥೋಡ್‌, ವಕೀಲ ಡಿಗ್ರಿ ಪ್ರಸಾದ್‌, ಪತ್ರಕರ್ತ ಸಿದ್ಧಾಂತ್ ಸಿಬಲ್‌ ಅವರು ಸೇರಿದಂತೆ ಹಲವರ ವೈಯಕ್ತಿಕ ಮಾಹಿತಿಗಳನ್ನು ಪೆಗಾಸಸ್ ಮೂಲಕ ಕದಿಯಲಾಗಿದೆ.

ಇದು ಅತ್ಯಂತ ದುಬಾರಿ!

ಇದು ಅತ್ಯಂತ ದುಬಾರಿ!

ಪೆಗಾಸಸ್ ಸ್ಪೈವೇರ್ ಮೂಲಕ ನಿಮ್ಮ ಮಾಹಿತಿಯನ್ನು ಸಹ ಕದಿಯಬಹುದು ಎಂಬ ಭಯಬೇಡ. ಏಕೆಂದರೆ, ಪೆಗಾಸಸ್ ದುಬಾರಿ ಟೂಲ್.! ಹೌದು, ಟೆಕ್ನಾಲಜಿಯಲ್ಲಿ ಪ್ರಾವೀಣ್ಯತೆ ಸಾಧಿಸುವ ತಂತ್ರಜ್ಞಾನ ಇದಾಗಿದ್ದು, ಕೇವಲ ಹತ್ತು ಜನರ ಮೇಲೆ ಗೂಢಚರ್ಯೆ ಮಾಡಲು ಎನ್‌ಎಸ್‌ಒ ಗ್ರೂಪ್‌ ಕನಿಷ್ಠ 8.15 ಕೋಟಿ ರೂ. ಶುಲ್ಕವನ್ನು ವಿಧಿಸುತ್ತದೆ.! ಇದಕ್ಕೆ ಹೆಚ್ಚುವರಿಯಾಗಿ ಇನ್ಸ್‌ಟಾಲೇಷನ್‌ಗೆ ಮತ್ತೆ 3.5 ಕೋಟಿ ರೂ. ಕೊಡಬೇಕಂತೆ. ಈ ಮಾಹಿತಿಯನ್ನು ಅಮೆರಿಕನ್‌ ಬಿಸಿನೆಸ್‌ ಮ್ಯಾಗಜಿನ್ ಫಾಸ್ಟ್‌ ಕಂಪನಿ ವರದಿ ಮಾಡಿರುವುದನ್ನು ನಾವು ನೋಡಬಹುದು.

ಇದು ಸರ್ಕಾರಗಳ ಕೆಲಸವೇ?

ಇದು ಸರ್ಕಾರಗಳ ಕೆಲಸವೇ?

ಪೆಗಾಸಸ್ ಕೃತ್ಯ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಲು ಮತ್ತೊಂದು ಕಾರಣವಿದೆ. ಎನ್‌ಎಸ್‌ಒ ಗ್ರೂಪ್‌ ಹೇಳುವಂತೆ ಅದು ಕೇವಲ ಸರಕಾರಗಳಿಗಾಗಿ ಮಾತ್ರವೇ ಈ ಗೂಡಚರ್ಯ ಕೆಲಸವನ್ನು ಮಾಡುವುದಾಗಿ ಹೇಳಿಕೊಂಡಿದೆ. ಪೆಗಾಸಸ್ ಕುತಂತ್ರಾಂಶವನ್ನು ಪನಾಮಾ ಮತ್ತು ಮೆಕ್ಸಿಕೊ ಸರಕಾಗಳು ಬಳಸುತ್ತಿರುವುದು ತೀರಾ ರಹಸ್ಯವಾಗಿಯೇನೂ ಉಳಿದಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಹಾಗಾದರೆ, ಭಾರತದಲ್ಲಿ ಇಂತಹ ಕೆಲಸ ಮಾಡಿರುವುದು ಯಾರು?, ಸರ್ಕಾರವೇ ಇಂತಹ ಕೆಲಸ ಮಾಡಿದೆಯೇ ಎಂಬ ಪ್ರಶ್ನೆಗಳು ಮೂಡಿವೆ. ಆದರೆ, ಉತ್ತರವಿಲ್ಲ.!

Most Read Articles
Best Mobiles in India

English summary
WhatsApp spyware: What is Pegasus? How many people have been targeted by the Pegasus hack?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X