ಆಂಡ್ರಾಯ್ಡ್ ಪ್ರಪಂಚವನ್ನು ಬದಲಿಸಲಿದೆ 'ಸೂಪರ್ ಆಪ್'!..ಹೌದು, ಮಾಮೂಲಿ 'ಆಪ್‌' ಅಲ್ಲ!!

Written By:

ಸೂಪರ್ ಬೈಕ್, ಸೂಪರ್ ಕಾರ್‌ಗಳ ಬಗ್ಗೆ ನೀವು ಕೇಳಿರುತ್ತೀರಾ. ಆದರೆ ಸೂಪರ್ ಆಪ್‌ಗಳು ಬರುತ್ತಿದೆ ಎಂದರೆ ನೀವು ನಂಬಲೇಬೆಕು.! ಹೌದು, ಸಾಮಾನ್ಯ ಆಪ್‌ಗಳ ಬಳಕೆಗಿಂತ ಆರಾಮದಾಯಕವಾಗಿ ಕೆಲಸಗಳನ್ನು ನಿರ್ವಹಿಸಬಹುದಾದ ಹೊಸ ಸೂಪರ್‌ ಆಪ್‌ಗಳ ಕಾಲ ಇನ್ನೆನು ಶುರುವಾಗಲಿದೆ.!!

ಕಡಿಮೆ ಬಜೆಟ್‍ನ ಸ್ಮಾರ್ಟ್‍ಫೋನ್ ಮಾರುಕಟ್ಟೆ ಹಿನ್ನೆಲೆಯಲ್ಲಿ ಭಾರತೀಯ ಸ್ಟಾರ್ಟ್‌ಅಪ್ ಕಂಪನಿಗಳು ಇದೀಗ ಎಲ್ಲ ದೃಷ್ಟಿಕೋನಕ್ಕೂ ಹೊಂದುವ ಆಪ್‌ಗಳನ್ನು ಸಿದ್ಧಪಡಿಸಲು ಪ್ರಯತ್ನಿಸುತ್ತಿವೆ. ಹಾಗಾದರೆ, ಏನಿದು ಸೂಪರ್ ಆಪ್? ಹೇಗೆ ಕಾರ್ಯನಿರ್ವಹಿಸಲಿದೆ? ಮತ್ತು ಅದರಿಂದ ಉಪಯೋಗಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು ಸೂಪರ್ ಆಪ್ ?

ಏನಿದು ಸೂಪರ್ ಆಪ್ ?

ಮೊದಲೆ ಹೇಳಿದಂತೆ ಸಾಮಾನ್ಯ ಆಪ್‌ಗಳ ಬಳಕೆಗಿಂತ ಆರಾಮದಾಯಕವಾಗಿ ಕೆಲಸಗಳನ್ನು ನಿರ್ವಹಿಸಬಹುದಾದ ಹೊಸ ಸೂಪರ್‌ ಆಪ್‌ ಇದು.! ಕ್ಯಾಬ್ ಬುಕ್ಕಿಂಗ್, ಬಿಲ್ ಪಾವತಿ, ಆಹಾರ ಆರ್ಡರ್ ಮಾಡುವುದು, ವಿಮಾನ ಬುಕ್ಕಿಂಗ್ ಹೀಗೆ ಎಲ್ಲಾ ವಿವಿಧ ಸೇವೆಗಳನ್ನು ನೀಡುವ ಏಕೈಕ ಆಪ್ ಇದಾಗಿರುತ್ತದೆ.!!

ಸೂಪರ್ ಆಪ್ ಪ್ರಯೋಜನವೇನು?

ಸೂಪರ್ ಆಪ್ ಪ್ರಯೋಜನವೇನು?

ಕಡಿಮೆ ಇಂಟರ್‍ನೆಟ್ ಬ್ಯಾಂಡ್‍ವಿಡ್ತ್ ಸಂದರ್ಭದಲ್ಲಿಯೂ ಸಾಮಾನ್ಯ ಆಪ್‌ಗಳ ಬಳಕೆಗಿಂತ ಆರಾಮದಾಯಕವಾಗಿ ಕೆಲಸಗಳನ್ನು ನಿರ್ವಹಿಸಬಹುದಾದ ಆಪ್ ಇದಾಗಿರಲಿದೆ. ಇಂಥ ಸೂಪರ್ ಆಪ್‌ಗಳೂ ಮೊಬೈಲ್‌ನ ಮೆಮೊರಿಯನ್ನು ಕಡಿಮೆ ಉಪಯೋಗಿಸುವುದರಿಂದ ಮೆಮೊರಿ ಚಿಂತೆ ಇನ್ನಿರುವುದಿಲ್ಲ.!!

ಆಪ್‌ ಡೌನ್ಲೋಡ್ ಮಾಡುವ ಅಗತ್ಯವಿಲ್ಲ.!!

ಆಪ್‌ ಡೌನ್ಲೋಡ್ ಮಾಡುವ ಅಗತ್ಯವಿಲ್ಲ.!!

ಹೌದು, ತಲೆಕೆಡಿಸಿಕೊಳ್ಳಬೇಡಿ.! ಕೆಲವು ಸೂಪರ್ ಆಪ್‌ಗಳನ್ನು ಡೌನ್‌ಲೋಡ್ ಮಾಡುವ ಅಗತ್ಯವು ಇರುವುದಿಲ್ಲ.! ಏಕೆಂದರೆ, ಲಿಂಕ್ ಮೂಲಕವೇ ಆಪ್‌ ಅನ್ನು ಡಿಸ್‌ಪ್ಲೇ ಮೇಲೆ ಮೂಡಿಸಬಹುದಾದ ಅತ್ಯಂತ ಕಡಿಮೆ ಮೆಮೊರಿ ಆಪ್‌ಗಳಿವು.!! ಕ್ರೋಮ್‌ನಲ್ಲಿ ಬುಕ್ ಮಾಡಿದ ಲಿಂಕ್‌ಗಳಂತೆ ಈ ಆಪ್‌ಗಳು ಇರಲಿವೆ.!!

ಪದೆಪದೆ ಅಪ್‌ಡೇಟ್ ಮಾಡಬೇಕಿಲ್ಲ.!!

ಪದೆಪದೆ ಅಪ್‌ಡೇಟ್ ಮಾಡಬೇಕಿಲ್ಲ.!!

ಪ್ರಸ್ತುತ ಇರುವ ಎಲ್ಲಾ ಆಪ್‌ಗಳು ಹೊಸ ಹೊಸ ಅಪ್‌ಡೇಟ್ ಪಡೆದಾದ ನಾವು ಕೂಡ 5 ಬಳಕೆದಾರರು ಈ ಆಪ್‌ಗಳನ್ನು ಪದೇ ಪದೇ ಪರಿಷ್ಕರಿಸುವ ಅಗತ್ಯವಿಲ್ಲ.!! ಇದೆಲ್ಲಾ ಬಿಡಿ, ಈ ಆಪ್ ಮಾಸಿಕ 100 ಎಂಬಿವರೆಗೂ ನಿಮ್ಮ ಡಾಟಾ ಉಳಿಸಬಲ್ಲದು.!!

ಓದಿರಿ:ಹೆಚ್ಚು ಜಾಹಿರಾತು ಇಲ್ಲದ ಈ 5 ಅತ್ಯುತ್ತಮ ಮತ್ತು ವಿಶಿಷ್ಟ ಆಪ್‌ಗಳು ನಿಮ್ಮ ಫೋನ್‌ನಲ್ಲಿರಲಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
a new class of mobile applications that make you wonder how you ever lived without them..to know more visit to kabbada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot